ಸಾಧಕರೇ, ‘ಸೇವೆ ಮಾಡುವುದು ಬೇಡ’, ಎಂಬಂತಹ ವಿಚಾರ ಬರುತ್ತಿದ್ದರೆ,
ಉಪಾಯ ಹೆಚ್ಚಿಸಿ ಸೇವೆಗೆ ಪ್ರಾಧಾನ್ಯತೆ ನೀಡಬೇಕು!
‘ಸದ್ಯದ ಕಾಲದಲ್ಲಿ ಮಾಂತ್ರಿಕರ ಹಲ್ಲೆ ಹೆಚ್ಚಾಗಿರುವುದರಿಂದ ಸಾಧಕರಿಗೆ ‘ಸೇವೆ ಮಾಡುವುದು ಬೇಡ’, ಎಂಬ ವಿಚಾರ ಬರುತ್ತಿವೆ ಹಾಗೂ ಒಮ್ಮೆಲೆ ಸೇವೆಯಲ್ಲಿ ಬದಲಾವಣೆಯಾದರೆ ‘ಆ ಸೇವೆ ನನ್ನಿಂದ ಆಗಲಾರದು’, ಎಂಬ ನಕಾರಾತ್ಮಕ ವಿಚಾರಗಳೂ ಸಾಧಕರ ಮನಸ್ಸಿಗೆ ಬರುತ್ತವೆ. ಸೇವೆ ಮಾಡುವಾಗ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಗ್ರಹಣವಾಗುತ್ತಿರುವುದರಿಂದ ಮಾಂತ್ರಿಕರಿಗೆ ಅದರಿಂದ ಬಹಳ ತೊಂದರೆಯಾಗುತ್ತದೆ; ಆದುದರಿಂದ ಅವರು ಇಂತಹ ವಿಚಾರಗಳನ್ನು ಸಾಧಕರ ಮನಸ್ಸಿನಲ್ಲಿ ಹಾಕುತ್ತಾರೆ.
ಶಾರೀರಿಕ ಅನಾರೋಗ್ಯ ಇತ್ಯಾದಿಗಳಿಲ್ಲದಿರುವಾಗ ಸುಮ್ಮನೇ ‘ಸೇವೆ ಮಾಡುವುದು ಬೇಡ’, ಎಂಬ ವಿಚಾರ ಮನಸ್ಸಿನಲ್ಲಿ ಬರುತ್ತಿದ್ದರೆ, ಸಾಧಕರು ಉಪಾಯವನ್ನು ಹೆಚ್ಚಿಸಿ ಕೂಡಲೇ ಸೇವೆ ಯನ್ನು ಆರಂಭಿಸಬೇಕು. ಸೇವೆ ಮಾಡುತ್ತಿರುವಾಗ ಶ್ರೀಕೃಷ್ಣನೇ ನಮ್ಮನ್ನು ನಿಯಂತ್ರಿಸು ವುದರಿಂದ ಅವನು ನಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ವಿಚಾರವನ್ನು ನಾಶ ಮಾಡಿ ಸೇವೆ ಮಾಡಲು ಪುನಃ ಉತ್ಸಾಹ ನಿರ್ಮಾಣವಾಗುತ್ತದೆ.’ - ಸೌ. ರಾಜಶ್ರೀ ಖೊಲ್ಲಂ (ಕಾರ್ತಿಕ ಶುಕ್ಲ ಏಕಾದಶಿ, ಕಲಿಯುಗ ವರ್ಷ ೫೧೧೨ (೧೭.೧೧.೨೦೧೦))
No comments:
Post a Comment