ಸಾಧಕರೇ, ಶ್ರೀಕೃಷ್ಣಪರಮಾತ್ಮನನ್ನು ಕರೆಯಲು ತಡಮಾಡಬೇಡಿ ಪ್ರತಿಕ್ಷಣ ಅವನಿಗೆ ಪ್ರಾರ್ಥನೆ ...

ಸಾಧಕರೇ ಶ್ರೀಕೃಷ್ಣಪರಮಾತ್ಮನನ್ನು ಕರೆಯಲು ತಡಮಾಡಬೇಡಿ ಪ್ರತಿಕ್ಷಣ ಅವನಿಗೆ ಪ್ರಾರ್ಥನೆ ಮಾಡಿರಿ ಸದ್ಯದ ನಿರ್ಬಂಧವೆಂಬ ಸಂಕಟದಿಂದ ಅವನೇ ನಮ್ಮನ್ನು ಸಾಧಕರೇ, ಶ್ರೀಕೃಷ್ಣ ಪರಮಾತ್ಮನನ್ನು ಕರೆಯಲು ತಡ ಮಾಡಬೇಡಿ, ಪ್ರತಿ ಕ್ಷಣ ಅವನಿಗೆ ಪ್ರಾರ್ಥನೆ ಮಾಡಿರಿ, ಸದ್ಯದ ನಿರ್ಬಂಧವೆಂಬ ಸಂಕಟದಿಂದ ಅವನೇ ನಮ್ಮನ್ನು ಕಾಪಾಡಲು ಸಾಧ್ಯ!
ದ್ರೌಪದಿಯ ವಸ್ತ್ರಾಪ ಹರಣದ ಘಟನೆಯ ನಂತರ ರುಕ್ಮಿಣಿಯು ಭಗವಾನ ಶ್ರೀಕೃಷ್ಣನಿಗೆ ಕೇಳುತ್ತಾಳೆ, “ಪರಮಾತ್ಮ  ಇಷ್ಟು ದುಃಖಕರ ಘಟನೆ ನಡೆಯುತ್ತಿರುವಾಗ ನೀವೇಕೆ ತಡ ಮಾಡಿದಿರಿ? ತಕ್ಷಣ ಏಕೆ ಹೋಗಲಿಲ್ಲ?" ಆಗ ಕೃಷ್ಣ ಪರಮಾತ್ಮ ಹೇಳುತ್ತಾನೆ, “ದ್ರೌಪದಿ ಎಷ್ಟರ ತನಕ ಪಿತಾಮಹ ಭೀಷ್ಮ, ಗುರುದ್ರೋಣ, ಕೃಪಾಚಾರ್ಯ ಮುಂತಾದವರಲ್ಲಿ ಹಾಗೂ ಇನ್ನಿತರರಲ್ಲಿ ಸಹಾಯ ಕೇಳುತ್ತಿದ್ದಳೋ, ಅಲ್ಲಿಯ ವರೆಗೆ ನಾನು ಹೇಗೆ ಸಹಾಯಕ್ಕಾಗಿ ಹೋಗಲಿ? ಅವರೆಲ್ಲರೂ ಅವಳಿಗೆ ಸಹಾಯ ಮಾಡುವರೆಂದು ಅವಳಿಗನಿಸುತ್ತಿತ್ತು. ಕೊನೆಗೆ ಅವಳು ತನ್ನ ಕೈಗಳಿಂದ
ಸೀರೆಯನ್ನು ಹಿಡಿದಿ ಟ್ಟಳು. ಅವಳ ಕೈಗಳು ಅವಳಿಗೆ ಸಹಾಯ ಮಾಡಬಹುದೆಂದು ಅವಳಿಗನಿಸಿತ್ತು. ಕೊನೆಯ ಪ್ರಯತ್ನವೆಂದು ಅವಳು ಸೀರೆಯ ಸೆರಗನ್ನು ತನ್ನ ಹಲ್ಲುಗಳಲ್ಲಿ ಕಚ್ಚಿ ಹಿಡಿದುಕೊಂಡಳು. ಅವಳಿಗೆ ತನ್ನ ಹಲ್ಲುಗಳ ಮೇಲೆ ವಿಶ್ವಾಸ ವಿತ್ತು. ಹಲ್ಲುಗಳಿಂದಲೂ ಸೀರೆ ಜಾರುತ್ತಿರು ವಾಗ, ಅವಳಿಗೆ ಶ್ರೀಕೃಷ್ಣ ಪರಮಾತ್ಮನ ಹೊರತು ಇನ್ಯಾರೂ ತನ್ನನ್ನು ರಕ್ಷಿಸುವವರಿಲ್ಲ ವೆಂದು ಅರಿವಾಯಿತು, ಅಷ್ಟರಲ್ಲಿ ಹಲ್ಲು ಗಳಿಂದ ಅವಳ ಸೀರೆಯ ಸೆರಗು ಜಾರಿತು. ಅವಳು ತಕ್ಷಣ ಕಳಕಳಿಯಿಂದ ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿದಳು ಹಾಗೂ ನಾನು ತತ್ಪರತೆ ಯಿಂದ ಅವಳ ಸಹಾಯಕ್ಕಾಗಿ ತಲುಪಿದೆ. ಮಾನವ ತನ್ನ ಪ್ರಯತ್ನದಿಂದಲೇ ಎಲ್ಲ ವನ್ನೂ ಮಾಡಲು ಪ್ರಯತ್ನಿ ಸುತ್ತಾನೆ, ಯಾವಾಗ ಅವನಿಗೆ ತನ್ನ ಮೇಲೆ ಸಂಪೂರ್ಣ ವಿಶ್ವಾಸವಿರುತ್ತದೋ, ಆಗ ನಾನು ಅವನ ಸಹಾಯಕ್ಕೆ ಹೇಗೆ ಹೋಗಲಿ? ಯಾವಾಗ ಅವನ ಎಲ್ಲ ಪ್ರಯತ್ನಗಳು ನಿಷ್ಫಲವಾಗುತ್ತವೆಯೋ ಹಾಗೂ ಅವನು ಆರ್ತನಾಗಿ, ತಳಮಳದಿಂದ ನನಗೆ ಶರಣಾಗುತ್ತಾನೋ, ಆಗ ನಾನು ಅವನ ಕಷ್ಟ ನನ್ನ ಕಷ್ಟವೆಂದು ತಿಳಿದು ತತ್ಪರತೆ ಯಿಂದ ಅದನ್ನು ದೂರ ಮಾಡುತ್ತೇನೆ." ಮೇಲಿನ ಪ್ರಸಂಗದಿಂದ ಶ್ರೀಕೃಷ್ಣ ಪರಮಾತ್ಮ  ತನ್ನ ಭಕ್ತರ ಮೇಲಿನ ಪ್ರೀತಿಯಿಂದಾಗಿ ಅವರ ಸಹಾಯಕ್ಕಾಗಿ ತತ್ಪರನಿರುತ್ತಾನೆ ಎಂಬುದು ಅರಿವಾಗುತ್ತದೆ. ನಾವು ಕೂಡಾ ಅತ್ಯಂತ ಭಾವಭಕ್ತಿಯಿಂದ ಅವನ ಚರಣ ಗಳಲ್ಲಿ ಹಾಗೂ ಪ.ಪೂ.ಡಾಕ್ಟರರ ಚರಣಗಳಲ್ಲಿ ಶರಣಾಗತರಾಗಿ ಸನಾತನಕ್ಕೆ ಬಂದಿ ರುವ ನಿರ್ಬಂಧವೆಂಬ ಸಂಕಟವನ್ನು ದೂರ ಮಾಡುವಂತೆ ಪ್ರಾರ್ಥಿಸೋಣ. -ಕು.ಪ್ರಿಯಾಂಕ ಲೋಟಲೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಶ್ರಾವಣ ಶು. ೧೨, ಕಲಿಯುಗ ವರ್ಷ ೫೧೧೨ (೧೯.೯.೨೦೧೦)

No comments:

Post a Comment