ಸಾಧಕರೇ ‘ಭೀಕರ ಆಪತ್ಕಾಲದಲ್ಲಿ ಭಗವಾನ ಶ್ರೀಕೃಷ್ಣನೇ ನಮ್ಮ
ರಕ್ಷಣೆಯನ್ನು ಮಾಡುವವನಿದ್ದಾನೆ’, ಎಂಬ ದೃಢ ಶ್ರದ್ಧೆ ಇಡಿರಿ!
‘ಸದ್ಯ ಭೀಕರ ಆಪತ್ಕಾಲವು ಆರಂಭ ವಾಗಿದೆ. ಆದುದರಿಂದ ಕೆಟ್ಟ ಶಕ್ತಿಗಳು ಸೂಕ್ಷ್ಮ ದಿಂದ ಮತ್ತು ಹಿಂದೂದ್ರೋಹಿಗಳ ಮಾಧ್ಯ ಮದಿಂದ ಸಾಧಕರ ಮನಸ್ಸಿನಲ್ಲಿ ‘ಸನಾತನ ಸಂಸ್ಥೆ ಮತ್ತು ಸಾಧನೆ’ ಎಂಬ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಹಾಕಿ ಸಾಧಕರ ಶ್ರದ್ಧೆಯನ್ನು ಅಸ್ಥಿರವಾಗಿ ಮಾಡುವ ಪ್ರಯತ್ನ ಮಾಡುತ್ತಿವೆ. ಅವರಿಗೆ ತಮ್ಮ ಮನಸ್ಸಿನ ಮೇಲೆ ನಿಯಂತ್ರಣವಿಡಲು ಸಾಧ್ಯವಾಗದಿದ್ದರೆ ಅವನ ಶ್ರದ್ಧೆಯು ಅಸ್ಥಿರವಾಗಿ ತಾವು ಧರ್ಮದ ಅಂದರೆ ಶ್ರೀಕೃಷ್ಣ ಪರಮಾತ್ಮನ ಪಕ್ಷದಿಂದ ಅರಿವಿಲ್ಲದೇ ಹೊರಗೆ ಬಂದು ಅಧರ್ಮರೂಪಿ ಅಸುರರ ಪಕ್ಷಕ್ಕೆ ಸೆಳೆಯ ಲ್ಪಡಬಹುದು. ಇಂತಹ ಸಮಯದಲ್ಲಿ ‘ನಮ್ಮ ಶ್ರದ್ಧೆ ಅಸ್ಥಿರವಾಗಬಾರದು’ ಎಂಬುದ ಕ್ಕಾಗಿ ಮುಂದಿನ ಪ್ರಯತ್ನ ಮಾಡೋಣ!ಪೂರ್ಣಾವತಾರ, ಸರ್ವವ್ಯಾಪಿ ಮತ್ತು ಎಲ್ಲ ಲೀಲೆಯನ್ನು ಮಾಡುವ ಶ್ರೀಕೃಷ್ಣ ಪರ ಮಾತ್ಮನು ತನ್ನ ಸಂಪೂರ್ಣ ಜೀವನದಲ್ಲಿ ಕೇವಲ ಇಬ್ಬರಿಗೆ ಮಾತ್ರ ‘ವಿಶ್ವರೂಪ ದರ್ಶನ’ ಮಾಡಿಸಿದನು. ಅದರಲ್ಲಿ ಮೊದಲ ನೇಯದಾಗಿ ಎಂದರೆ ಮಥುರೆಯಲ್ಲಿರು ವಾಗ ಸಂಪೂರ್ಣವಾಗಿ ವಾತ್ಸಲ್ಯ ಭಾವ ದಿಂದ ತುಂಬಿದ ಯಶೋಧಾಮಾತೆಗೆ ಒಮ್ಮೆ ಬಾಲಕೃಷ್ಣನು, ‘ತಾಯಿಯೇ, ನಾನು ಬೆಣ್ಣೆ ಯನ್ನು ತಿನ್ನಲಿಲ್ಲ’ ಎಂದು ಹೇಳಿದರೂ ಯಶೋದೆಗೆ ಬಾಲಕೃಷ್ಣನ ಮೇಲೆ ವಿಶ್ವಾಸ ಬರುತ್ತಿರಲಿಲ್ಲ. ಕೊನೆಗೆ ಬಾಲಕೃಷ್ಣನು ‘ಆ’ ಎಂದು ಬಾಯಿ ತೆರೆದು ತನ್ನ ಮುಖಕಮಲ ದಲ್ಲಿ ಅವಳಿಗೆ ‘ಕೃಷ್ಣ, ಯಶೋದೆಮಾತೆ ಸಹಿತ ಅಖಿಲ ಬ್ರಹ್ಮಾಂಡದಲ್ಲಿ ವ್ಯಾಪಿಸಿ ರುವ’ ‘ವಿಶ್ವ ರೂಪ-ದರ್ಶನ’ ಮಾಡಿಸಿ ದನು. ಅನಂತರ ಇನ್ನೊಂದು ಪ್ರಸಂಗದಲ್ಲಿ ಮಹಾಭಾರತದಲ್ಲಿಯ ಧರ್ಮ-ಅಧರ್ಮದ ಹೋರಾಟದಲ್ಲಿ ಅರ್ಜುನನು ರಣಾಂಗಣ ದಲ್ಲಿ ಶತ್ರುಗಳ ರೂಪದಲ್ಲಿ ಎಲ್ಲ ಆಪ್ತೇಷ್ಟ ರನ್ನು ನೋಡಿದನು. ಆಗ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಶ್ರೀಮದ್ಭಗವದ್ಗೀತೆ ಯನ್ನು ಹೇಳಿ ‘ವಿಶ್ವರೂಪದರ್ಶನ’ ಮಾಡಿಸಿ ದನು ಹಾಗೂ ಭಗವಂತನ ಈ ಲೀಲೆಯಲ್ಲಿ ‘ಅವನು ಕೇವಲ ನಿಮಿತ್ತ ಮಾತ್ರನಾಗಿದ್ದು ಧರ್ಮ ಸಂಸ್ಥಾಪನೆ ಮಾಡಲು ಎಲ್ಲ ಅಧರ್ಮೀಯರನ್ನು ತಾನು ಮೊದಲೇ ಕೊಂದಿದ್ದೇನೆ’, ಎಂದು ಸ್ಪಷ್ಟವಾಗಿ ತೋರಿಸಿ ದ್ದಾನೆ. ಆದುದರಿಂದ ಭ್ರಮೆ ದೂರ ವಾಯಿತು ಮತ್ತು ಅವ ರನ್ನು ಕೊಂದು ‘ಧರ್ಮರಾಜ್ಯದ ಸ್ಥಾಪನೆ’ ಮಾಡಲು ಅವನ ಮನಸ್ಸು ಸಜ್ಜಾಯಿತು. ಸಾಧಕರೇ, ನಮ್ಮ ಶ್ರದ್ಧೆಯು ಎಂದಾದರೂ ಅಸ್ಥಿರವಾಗಲು ಪ್ರಾರಂಭಿಸಿದರೆ ಶ್ರೀಕೃಷ್ಣನ ಮಾನಸಪೂಜೆ ಮಾಡಿ ಮೇಲಿನ ಯಾವುದೇ ಪ್ರಸಂಗವನ್ನು ನೆನಪಿಸೋಣ ಮತ್ತು ‘ಆ ಜಗತ್ತನ್ನು ನಿಯಂತ್ರಿಸುವ ಭಗವಂತನು ನಮಗೂ ವಿಶ್ವ ರೂಪ-ದರ್ಶನ’ ಮಾಡಿಸುತ್ತಿದ್ದಾನೆ’ ಎಂಬ ಭಾವವಿಡೋಣ. ಅದರಿಂದ ನಿಶ್ಚಿತವಾಗಿ ನಮಗೂ ಶ್ರೀಕೃಷ್ಣನ ಮೇಲಿರುವ ಶ್ರದ್ಧೆಯು ಧೃಢವಾಗಿ ನಾವು ಭಗವಂತನ ಭಕ್ತ (ವಿಭಕ್ತನವಿಲ್ಲದ) ರಾಗೋಣ ಮತ್ತು ಭಗವಂತನು ಅವನ ‘ನ ಮೇ ಭಕ್ತಃ ಪ್ರಣಶ್ಯತಿ’ ಅಂದರೆ ‘ಎಂದಿಗೂ ನನ್ನ ಭಕ್ತರ ನಾಶವಾಗುವು ದಿಲ್ಲ’, ಎಂಬ ವಚನ ಸಿದ್ಧವಾಗುತ್ತದೆ.’
ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ಮೇಲಿನ ಅಂಶಗಳು ಹೊಳೆಯುವ ಬಗ್ಗೆ ಬಂದ ಅನುಭೂತಿ
ಪ್ರತಿದಿನ ಶ್ರೀಕೃಷ್ಣನ ಮಾನಸಪೂಜೆ ಮಾಡುತ್ತೇನೆ. ಇತ್ತೀಚೆಗೆ ಕೆಲವು ದಿನಗಳಿಂದ ಮಾನಸಪೂಜೆಯಲ್ಲಿ ನೈವೇದ್ಯವೆಂದು ಬೆಣ್ಣೆ ಯನ್ನು ತಿನ್ನಿಸುವಾಗ ‘ನನಗೂ ಅವನು ‘ವಿಶ್ವ ರೂಪ-ದರ್ಶನ’ ಮಾಡಿಸುತ್ತಿದ್ದಾನೆ’, ಎಂಬ ಭಾವವು ಮನಸ್ಸಿನಲ್ಲಿ ನಿರ್ಮಾಣವಾಯಿತು. ಆಗ ನನ್ನ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಉಪಾಯವಾಗುತ್ತಿತ್ತು. ನಂತರ ಮುಂದೆ ಕೆಲವು ದಿನಗಳಲ್ಲಿ ಆಪತ್ಕಾಲದ ತೀವ್ರತೆ ಹೆಚ್ಚಾದಾಗ ಒಮ್ಮೆ ಮನಸ್ಸು ಚಂಚಲವಾಗಿ ಶ್ರದ್ಧೆಯು ಅಸ್ಥಿರವಾಗುವಂತಹ ಪರಿಸ್ಥಿತಿ ಉದ್ಭವಿಸಿತು. ಆಗ ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿದಾಗ ವಿಶ್ವರೂಪ ದರ್ಶನದ ಪ್ರಸಂಗ ನೆನಪಿಸುವ ಮೇಲಿನ ಅಂಶಗಳು ತೋಚಿದವು’.
-ಶ್ರೀ.ಗಿರಿಧರ ಭಾರ್ಗವ ವರೆs, ಸನಾತನ ಆಶ್ರಮ, ರಾಮನಾಥಿ, ಗೋವಾ.
No comments:
Post a Comment