ಸಾಧಕರೇ ನನ್ನ ಮೃತ್ಯುವಿನಿಂದ ಈಶ್ವರೀರಾಜ್ಯದ ಸ್ಥಾಪನೆಗೆ
ಚಾಲನೆಯೇ ಸಿಗುವುದು ಎಂಬುದನ್ನು ಗಮನದಲ್ಲಿಡಿ - ಡಾ. ಆಠವಲೆ
ನನ್ನ ಮಹಾಮೃತ್ಯುಯೋಗದಿಂದ ಕೆಲವು ಸಾಧಕರಿಗೆ ನಿರಾಶೆ ಬಂದಿದೆ, ಕೆಲವರಿಗೆ ಕಾಳಜಿಯೆನಿಸುತ್ತಿದೆ. ಅವರು ಮುಂದಿನ ಅಂಶಗಳನ್ನು ಗಮನದಲ್ಲಿ ಇಟ್ಟು ಕೊಂಡರೆ ಅವರಿಗೆ ಹಾಗನಿಸಲಾರದು.ವ್ಯಷ್ಟಿ ಜೀವನದಲ್ಲಿ ಈಶ್ವರ ಪ್ರಾಪ್ತಿ ಮತ್ತು ಸಮಷ್ಟಿ ಜೀವನದಲ್ಲಿ ಈಶ್ವರೀ ರಾಜ್ಯದ ಸ್ಥಾಪನೆಯು ನಮ್ಮ ಧ್ಯೇಯ ವಾಗಿದೆ. ಈಗಿನ ಆಪತ್ಕಾಲದಲ್ಲಿ ಇವೆ ರಡೂ ಧ್ಯೇಯಗಳು ಸಾಧಿಸಬೇಕಾದರೆ ಸಗುಣದ ಬದಲು ನಿರ್ಗುಣ ಸ್ತರದ ತತ್ತ್ವವು ಆವಶ್ಯಕವಾಗಿದೆ. ನನ್ನ ಮೃತ್ಯು ವಿನ ನಂತರ ನನ್ನ ಸಗುಣ ದೇಹವು ಇರದಿರುವುದರಿಂದ ನನಗೆ ನಿರ್ಗುಣ ಸ್ತರದಲ್ಲಿ ಕಾರ್ಯ ಮಾಡಲು ಸಾಧ್ಯವಾಗು ತ್ತದೆ. ಇದರಿಂದ ನಮ್ಮ ಧ್ಯೇಯವನ್ನು ಸಾಧಿಸಲು ಸುಲಭವಾಗುವುದು.’
No comments:
Post a Comment