ಸಾಧಕರೇ, ನನ್ನ ಬಂಧನದ ಸಂದರ್ಭದಲ್ಲಿ ಭಾವನೆಯಿಂದ ವಿಚಾರ ಮಾಡದೇ ಈ ಘಟನೆಯತ್ತ ಈಶ್ವರೀರಾಜ್ಯದ ಸ್ಥಾಪನೆಯಲ್ಲಿ ಒಂದು ಅನಿವಾರ್ಯ ಘಟನೆಯೆಂದು ನೋಡಿರಿ! - ಪ.ಪೂ. ಡಾಕ್ಟರ ಆಠವಲೆ
೧. ಸಾಧಕರೇ, ಧರ್ಮಸಂಸ್ಥಾಪನೆಗಾಗಿ ಶ್ರೀಕೃಷ್ಣ ನಿಗೆ ಸೆರೆಮನೆವಾಸ ಮತ್ತು ಶ್ರೀರಾಮನಿಗೆ ವನವಾಸ ವನ್ನು ಭೋಗಿಸಬೇಕಾಯಿತು. ಸಂತ ಜ್ಞಾನೇಶ್ವರ, ಸಂತ ತುಕಾರಾಮ ಮಹಾರಾಜರಂತಹ ಶ್ರೇಷ್ಠ ಸಂತರ ಹಾಗೂ ಇತ್ತೀಚೆಗೆ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿಯವರನ್ನೂ ಪೀಡಿಸಲಾ ಯಿತು. ಹೀಗಿರುವಾಗ ನನ್ನನ್ನು ಪೀಡಿಸುವುದು ಸಹಜ ವಿದೆ. ನನ್ನ ಬಂಧನವು ಭಗವಂತನ ಲೀಲೆಯೇ ಆಗಿದೆ. ಹಾಗಾಗಿ ನನಗೇನಾದರೂ ಆದರೆ ಭಾವನೆಯ ಸ್ತರದಲ್ಲಿ ಯಾವುದೇ ಕೃತಿಯನ್ನು ಮಾಡದೇ ಅದರತ್ತ ‘ಈಶ್ವರೀರಾಜ್ಯದ ಸ್ಥಾಪನೆಯಲ್ಲಿನ ಒಂದು ಅನಿವಾರ್ಯ ಘಟನೆ’ ಎಂಬ ದೃಷ್ಟಿ ಯಿಂದ ನೋಡಿರಿ ಮತ್ತು ಕೃತಜ್ಞತೆ, ಪ್ರಾರ್ಥನೆ ಹಾಗೂ ನಾಮಜಪಗಳತ್ತ ಗಮನ ನೀಡಿರಿ !೨. ‘ಭಕ್ತಿಯೇ ನಮ್ಮ ಶಕ್ತಿಯಾಗಿದೆ’ ಎಂಬ ಸನಾತನದ ಬೋಧನೆಯನ್ನು ಮರೆಯ ದಿರಿ. ‘ಯಾರಾದರೂ ನನ್ನ ಕೊಲೆ ಮಾಡಿದರೂ ಯಾರಿಗೆ ಕೆಡುಕೆನಿಸುವುದಿಲ್ಲವೋ ಅವನೇ ನನ್ನ ನಿಜವಾದ ಶಿಷ್ಯ’ ಎಂಬುದು ಪ.ಪೂ. ಭಕ್ತರಾಜ ಮಹಾರಾಜರ ಬೋಧನೆ ಯಾಗಿದೆ. ಅದನ್ನು ಆಚರಣೆಯಲ್ಲಿ ತನ್ನಿರಿ !
೨೦೧೨ ರ ತನಕ ಕಾಲವು ಪ್ರತಿಕೂಲವಿದೆ. ಅಲ್ಲಿಯ ವರೆಗೆ ಇಂತಹ ಅನಿಷ್ಟ ಘಟನೆಗಳೇ ಘಟಿಸಲಿವೆ. ಇಂತಹ ಘಟನೆಗಳಿಂದ ನಾವು ಕಷ್ಟನಷ್ಟಗಳನ್ನು ಸಹಿಸಿ ಗೆದ್ದ ನಂತರ ನಮ್ಮ ವೈಯಕ್ತಿಕ ಆಧ್ಯಾತ್ಮಿಕ ಪ್ರಗತಿ ಹಾಗೂ ಈಶ್ವರೀ ರಾಜ್ಯದ ಸ್ಥಾಪನೆಯ ಮಾರ್ಗಕ್ರಮಣವು ಶೀಘ್ರಗತಿಯಲ್ಲಿ ಮುನ್ನಡೆಯುವುದು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!
೩. ಶಿಶುಪಾಲನ ನೂರು ಅಪರಾಧಗಳು ತುಂಬಿದ ನಂತರ ಶ್ರೀಕೃಷ್ಣನು ಅವನನ್ನು ವಧಿಸಿದಂತೆ ಸಾಧಕರಿಗೆ ಹಾಗೂ ಉನ್ನತರಿಗೆ ತೊಂದರೆ ನೀಡುವವರ ಅಪರಾಧಗಳು ತುಂಬಿದ ನಂತರ ಈಶ್ವರನು ಅವರಿಗೆ ಖಂಡಿತವಾಗಿಯೂ ಶಿಕ್ಷೆ ನೀಡುವನು ಮತ್ತು ಈಶ್ವರೀ ರಾಜ್ಯದ ಸ್ಥಾಪನೇ ಆಗಲಿದೆ ಎಂಬುದನ್ನು ಖಚಿತವಾಗಿ ಗಮನದಲ್ಲಿಟ್ಟುಕೊಂಡು ಇದ್ದಲ್ಲಿಯೇ ಸಾಧನೆ ಮಾಡಲು ಪ್ರಯತ್ನಿಸಿರಿ ! - ಡಾ. ಆಠವಲೆ (ಆಶ್ವಯುಜ ಶುಕ್ಲ ೧೨, ಕಲಿಯುಗ ವರ್ಷ ೫೧೧೨)
No comments:
Post a Comment