ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ....

ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ಉಪಚಾರಗಳಲ್ಲಿ ೯.ಗಂಧವನ್ನು ಹಚ್ಚುವುದು, ೧೦.ಹೂವುಗಳನ್ನು ಅರ್ಪಿಸುವುದು, ೧೧.ಧೂಪವನ್ನು ತೋರಿಸುವುದು, ೧೨.ದೀಪವನ್ನು ಬೆಳಗುವುದು, ೧೩.ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ. (ಮುಂದುವರಿದ ಭಾಗ)
ಎ.ದೇವರಿಗೆ ನೈವೇದ್ಯವನ್ನು ತೋರಿಸುವ ಕೃತಿ
ಎ೨.ಪದ್ಧತಿ೨-ಭಾವದ ಸ್ತರದ ಲ್ಲಿನ ಕೃತಿ: ನೈವೇದ್ಯದ ಮೇಲೆ ತುಳಸಿಯ ಎರಡು ದಳಗಳಿಂದ ನೀರನ್ನು ಸಿಂಪಡಿಸಿ ಒಂದು ದಳವನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದನ್ನು ದೇವರ ಚರಣಗಳಲ್ಲಿಡ ಬೇಕು. ‘ಓಂ ಪ್ರಾಣಾಯ ಸ್ವಾಹಾ| ಓಂ ಅಪಾನಾಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ|ಓಂ ಉದಾನಾಯ ಸ್ವಾಹಾ| ಓಂ ಸಮಾನಾಯ ಸ್ವಾಹಾ| ಓಂ ಬ್ರಹ್ಮಣೇ ಸ್ವಾಹಾ||’ ಎಂಬ ಪಂಚಪ್ರಾಣಗಳಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸುತ್ತಾ ಕೈಜೋಡಿಸಿ ದೇವರಿಗೆ ನೈವೇದ್ಯವನ್ನು ಅರ್ಪಿಸಬೇಕು.
ಏ.ಅನಂತರ ‘ನೈವೇದ್ಯಮಧ್ಯೆ ಪಾನೀಯಂ ಸಮರ್ಪಯಾಮಿ|’ ಎನ್ನುತ್ತಾ ಬಲಗೈಯಿಂದ ಹರಿವಾಣದಲ್ಲಿ ಸ್ವಲ್ಪ ನೀರನ್ನು ಬಿಡಬೇಕು. ಮತ್ತೊಮ್ಮೆ ‘ಓಂ ಪ್ರಾಣಾಯ...’ ಎಂಬ ಪಂಚಪ್ರಾಣಗಳಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸಬೇಕು. ಅನಂತರ ‘ನೈವೇದ್ಯಮ್ ಸಮರ್ಪಯಾಮಿ, ಉತ್ತರಾ ಪೋಶನಮ್ ಸಮರ್ಪಯಾಮಿ, ಹಸ್ತ ಪ್ರಕ್ಷಾಲನಮ್ ಸಮರ್ಪಯಾಮಿ, ಮುಖ ಪ್ರಕ್ಷಾಲನಮ್ ಸಮರ್ಪಯಾಮಿ’, ಎನ್ನುತ್ತಾ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.
ಐ.ನೈವೇದ್ಯವನ್ನು ಅರ್ಪಿಸುವಾಗ ‘ನಾವು ಅರ್ಪಿಸುತ್ತಿರುವ ನೈವೇದ್ಯವು ದೇವ ರಿಗೆ ತಲುಪುತ್ತಿದೆ ಮತ್ತು ದೇವರು ಅದನ್ನು ಸ್ವೀಕರಿಸುತ್ತಿದ್ದಾರೆ’ ಎಂಬ ಭಾವವಿರಬೇಕು.
೨.ಪಂಚೋಪಚಾರ ಪೂಜೆಯ ಕೃತಿಗಳ ಹಿಂದಿನ ಶಾಸ್ತ್ರ
೨ಅ.ಮೊದಲನೆಯ ಉಪಚಾರ: ಗಂಧವನ್ನು (ಚಂದನ) ಹಚ್ಚುವುದು
೨ಅ೧.ದೇವರಿಗೆ ಗಂಧದೊಂದಿಗೆ ಅರಿಶಿನ-ಕುಂಕುಮವನ್ನು ಅರ್ಪಿಸಬೇಕೋ ಅಥವಾ ಕೇವಲ ಅರಿಶಿನ-ಕುಂಕುಮವನ್ನು ಅರ್ಪಿಸಬೇಕೋ?
ಓರ್ವ ವಿದ್ವಾಂಸ:
ದೇವರಿಗೆ ಕೇವಲ ಅರಿಶಿನ-ಕುಂಕುಮವನ್ನು ಅರ್ಪಿಸಬೇಕು. ಅರಿಶಿನ-ಕುಂಕುಮಗಳಲ್ಲಿ ಶಕ್ತಿತತ್ತ್ವದ ಪ್ರಮಾಣವು ಗಂಧದ ತುಲನೆಯಲ್ಲಿ ಹೆಚ್ಚಿರು ತ್ತದೆ; ಇದರಿಂದ ಅವುಗಳನ್ನು ಗಂಧ ದೊಂದಿಗೆ ಅರ್ಪಿಸಿದರೆ ಗಂಧದಿಂದ ಪ್ರಕ್ಷೇಪಿತ ವಾಗುವ ಲಹರಿಗಳಿಗೆ ಜಡತ್ವವು ಪ್ರಾಪ್ತ ವಾಗಿ ವಾಯುಮಂಡಲದಲ್ಲಿ ಚೈತನ್ಯವನ್ನು ಪ್ರಕ್ಷೇಪಿತಗೊಳಿಸುವ ವೇಗವು ಕಡಿಮೆ ಯಾಗುತ್ತದೆ. ಆದುದರಿಂದ ಗಂಧದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಜೀವಕ್ಕೆ ಅಪೇಕ್ಷಿತ ಲಾಭವು ಸಿಗುವುದಿಲ್ಲ.
ಸಂಕಲನಕಾರರು: ಪೂಜಕರ ದೃಷ್ಟಿಯಿಂದ ಗಂಧದಿಂದ ಪ್ರಕ್ಷೇಪಿತವಾಗುವ ಲಹರಿಗಳು ಮಹತ್ವದ್ದಾಗಿವೆಯೋ ಅಥವಾ ಅರಿಶಿನ-ಕುಂಕುಮಗಳಲ್ಲಿರುವ ಶಕ್ತಿತತ್ತ್ವವು ಮಹತ್ವದ್ದಾಗಿದೆಯೋ?
ಓರ್ವ ವಿದ್ವಾಂಸ: ಎರಡೂ ಮಹತ್ವ ದ್ದಾಗಿವೆ; ಆದರೆ ದೇವರಿಗೆ ಅರ್ಪಿಸುವಾಗ ಅವುಗಳನ್ನು ಒಟ್ಟಿಗೆ ಅರ್ಪಿಸದೇ ಬೇರೆ- ಬೇರೆ ಅರ್ಪಿಸಬೇಕು. ಪೂಜೆಯ ಆರಂಭ ದಲ್ಲಿ ದೇವರ ಸ್ನಾನದ ನಂತರ ಮತ್ತು ಗಂಧ ವನ್ನು ಹಚ್ಚಿದ ನಂತರ ಅರಿಶಿನ- ಕುಂಕುಮ ವನ್ನು ಅರ್ಪಿಸುತ್ತಾರೆ, ಅಂದರೆ ಗಂಧದ ಸಹಾಯದಿಂದ ನಿರ್ಗುಣ ಚೈತನ್ಯದ ಬಲದಿಂದ ಈಶ್ವರನ ಚೈತನ್ಯವನ್ನು ಪ್ರಕಟ ಗೊಳಿಸಿ ಅದನ್ನು ಅರಿಸಿನ-ಕುಂಕುಮದ ಮಾಧ್ಯಮದಿಂದ ಪೃಥ್ವಿತತ್ತ್ವದ ಸ್ತರಕ್ಕೆ ತಂದು ಪೂಜಕರಿಗೆ ಗ್ರಹಣವಾಗಲು ಯೋಗ್ಯ ಮಾಡುತ್ತಾರೆ.
೨ಅ೨.ದೇವಿಯ (ಸ್ತ್ರೀದೇವತೆ) ಪೂಜೆಯು ಕೇವಲ ಒಂದೇ ಉಪಚಾರ ದಿಂದ, ಅಂದರೆ ಕೇವಲ ಕುಂಕುಮದಿಂದ ಮಾತ್ರ ಆಗುತ್ತದೆ, ಇದರ ಹಿಂದಿನ ಶಾಸ್ತ್ರವೇನು?
ಮೂಲ ಕಾರ್ಯನಿರತ ಶಕ್ತಿತತ್ತ್ವದ ನಿರ್ಮಿತಿಯು ಕೆಂಪು ಬಣ್ಣದ ಪ್ರಕಾಶದಿಂದಾಗಿ ರುವುದರಿಂದ ಶಕ್ತಿತತ್ತ್ವದ ಪ್ರತೀಕವೆಂದು ದೇವಿಯ ಪೂಜೆಯನ್ನು ಕುಂಕುಮದಿಂದ ಮಾಡುತ್ತಾರೆ. ಕುಂಕುಮದಿಂದ ಪ್ರಕ್ಷೇಪಿತ ವಾಗುವ ಸುಗಂಧಲಹರಿಗಳ ಪರಿಮಳವು ಬ್ರಹ್ಮಾಂಡದಲ್ಲಿನ ಶಕ್ತಿತತ್ತ್ವದ ಲಹರಿಗಳನ್ನು ಕಡಿಮೆ ಕಾಲಾವಧಿಯಲ್ಲಿ ಆಕರ್ಷಿಸುತ್ತದೆ, ಆದುದರಿಂದ ದೇವಿಯ ಮೂರ್ತಿಯಲ್ಲಿ ರುವ ಸಗುಣ ತತ್ತ್ವವನ್ನು ಜಾಗೃತಗೊಳಿಸಲು ಕೆಂಪು ಬಣ್ಣದ ಪ್ರತೀಕವೆಂದು ಹಾಗೂ ದೇವಿತತ್ತ್ವವನ್ನು ಪ್ರಸನ್ನಗೊಳಿಸುವ ಸುಗಂಧ ಲಹರಿಗಳ ಪ್ರತೀಕವೆಂದು ಕುಂಕುಮದ ಉಪಚಾರಕ್ಕೆ ಪ್ರಮುಖ ಸ್ಥಾನವನ್ನು ನೀಡಲಾ ಗಿದೆ. ಮೂಲ ಶಕ್ತಿತತ್ತ್ವದ ಬೀಜದ ಸುಗಂಧವೂ ಕುಂಕುಮದ ಪರಿಮಳಕ್ಕೆ ಹೋಲುತ್ತದೆ. ಆದುದರಿಂದ ದೇವಿಯನ್ನು ಜಾಗೃತಗೊಳಿ ಸಲು ಕುಂಕುಮದ ಪ್ರಭಾವೀ ಮಾಧ್ಯಮ ವನ್ನು ಉಪಯೋಗಿಸಲಾಗುತ್ತದೆ.-ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೦.೧೦.೨೦೦೫, ರಾತ್ರಿ ೯.೫೩)
೨ಅ೩.ದೇವತೆಗಳಿಗೆ ಮಾಡ ಬೇಕಾದ ಉಪಚಾರಗಳಲ್ಲಿ ಅನಾಮಿಕಾದ ಮಹತ್ವವೇನು?
ಅ.ಸಾಮಾನ್ಯ ಉಪಾಸಕರು ದೇವರಿಗೆ ಗಂಧವನ್ನು ಅನಾಮಿಕಾದಿಂದ ಮತ್ತು ಗಾಯತ್ರಿ ಮಂತ್ರದ ಉಪಾಸಕರು ಮಧ್ಯದ ಬೆರಳಿನಿಂದ ಏಕೆ ಹಚ್ಚಬೇಕು?
೧.ಸಾಮಾನ್ಯ ಉಪಾಸಕ:
ಅನಾಮಿಕೆ ಯಿಂದ ಪ್ರಕ್ಷೇಪಿತವಾಗುವ (ಆಪತತ್ತ್ವಕ್ಕೆ ಸಂಬಂಧಿಸಿದ) ಲಹರಿಗಳಿಂದ ದೇವತೆಗ ಳಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿ ಗಳು ಕಾರ್ಯನಿರತವಾಗುತ್ತವೆ, ಅಲ್ಲದೇ ಅವುಗಳ ವೇಗವೂ ಹೆಚ್ಚಾಗುತ್ತವೆ. ಈ ಕಾರ್ಯನಿರತ ಲಹರಿಗಳ ಪ್ರಾಬಲ್ಯದಿಂದ ಜೀವದ ಆತ್ಮಶಕ್ತಿಯು ಜಾಗೃತವಾಗುತ್ತದೆ. ಜಾಗೃತವಾಗಿರುವ ಆತ್ಮಶಕ್ತಿಯ ಬಲದ ಮೇಲೆ ಈ ಲಹರಿಗಳು ಅವಶ್ಯಕತೆಗನುಸಾರ ಪ್ರಾಣಮಯಕೋಶದಲ್ಲಿ ಮತ್ತು ಮನೋಮಯ ಕೋಶದಲ್ಲಿ ಸಂಗ್ರಹವಾಗಿ ಜೀವದ ಸೂಕ್ಷ್ಮ ದೇಹಗಳನ್ನು ಮತ್ತು ಕೋಶಗಳನ್ನು ಶುದ್ಧಗೊಳಿಸುತ್ತವೆ.
ದೇವತೆಗಳಿಂದ ಪ್ರಕ್ಷೇಪಿತವಾಗುವ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ಸಾತ್ತ್ವಿಕ ಲಹರಿಗಳು ಅನಾಮಿಕಾದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಸೆಳೆಯಲ್ಪಡುತ್ತವೆ. ಜೀವದ ದೇಹವೂ ಪೃಥ್ವಿ ಮತ್ತು ಆಪತತ್ತ್ವ ಗಳಿಗೆ ಸಂಬಂಧಿಸಿರುವುದರಿಂದ ಈ ಲಹರಿಗ ಳಿಂದ ಜೀವಕ್ಕೆ ತೊಂದರೆಯೂ ಆಗುವುದಿಲ್ಲ.
೨.ಗಾಯತ್ರಿ ಮಂತ್ರದ ಉಪಾಸ ಕರು: ಇವರು ತೇಜತತ್ವದ ಪ್ರತೀಕವೆಂದು ತೇಜತತ್ತ್ವಕ್ಕೆ ಸಂಬಂಧಿಸಿದ ಮಧ್ಯದ ಬೆರಳಿನಿಂದ ದೇವತೆಗಳಿಗೆ ಗಂಧವನ್ನು ಹಚ್ಚಿ ದೇವತೆಗಳಿಂದ ಬರುವ ತೇಜತತ್ತ್ವದ ಲಹರಿ ಗಳ ಲಾಭವನ್ನು ಪಡೆದುಕೊಳ್ಳುತ್ತಾರೆ. ತೇಜತತ್ತ್ವದ ಸಾಧನೆಯನ್ನು ಮಾಡುವು ದರಿಂದ ಅವರಿಗೆ ಈ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ.-ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೭.೧೨.೨೦೦೪, ಮಧ್ಯಾಹ್ನ ೧೨.೦೨)

No comments:

Post a Comment