‘ಭಕ್ತರು ತತ್ತ್ವಭಕ್ತಿಯ ಆದರ್ಶವನ್ನಿಟ್ಟು ಸುತ್ತಮುತ್ತಲಿನ ಪ್ರತಿಯೊಂದು ವಿಷಯದಲ್ಲಿ ಪರಮೇಶ್ವರನನ್ನು....

ಪ.ಪೂ. ಡಾಕ್ಟರರ ‘ರಾಜಕೀಯ ನೇತಾರರ ಬಂದಿಗೃಹದಲ್ಲಿರುವ ಹಿಂದೂಗಳ ದೇವಸ್ಥಾನಗಳು !’ ಎಂಬ ಈ 
 ಲೇಖನದ ಬಗ್ಗೆ ‘ಓರ್ವ ವಿದ್ವಾಂಸರ’ ಭಾಷ್ಯೆ

‘ಭಕ್ತರು ತತ್ತ್ವಭಕ್ತಿಯ ಆದರ್ಶವನ್ನಿಟ್ಟು ಸುತ್ತಮುತ್ತಲಿನ ಪ್ರತಿಯೊಂದು ವಿಷಯದಲ್ಲಿ ಪರಮೇಶ್ವರನನ್ನು 
ನೋಡುವ ಅಭ್ಯಾಸವನ್ನು ಈಗಿನಿಂದಲೇ ಮಾಡಿಕೊಂಡರೆ ಮುಂದೆ ದೇವಸ್ಥಾನಗಳು 
ನಾಶವಾಗುವುದನ್ನು ತೆರೆದ ಕಣ್ಣುಗಳಿಂದ ನೋಡಲು ಸಾಧ್ಯವಾಗಬಹುದು’, ಎಂಬ ಆಶಯವನ್ನು 
ಸ್ಪಷ್ಟಪಡಿಸಿ ಮುಂಬರುವ  ಆಪತ್ಕಾಲದ ಬಗ್ಗೆ ಪುಷ್ಟಿ ನೀಡುವ ಪ.ಪೂ. ಡಾಕ್ಟರರ ಉದ್ಗಾರ!

೧. ಡಾ. ಆಠವಲೆ : ರಾಜಕೀಯ ನೇತಾರರ ಬಿಗಿಮುಷ್ಠಿಯಲ್ಲಿರುವ ಹಿಂದೂಗಳ ದೇವಸ್ಥಾನಗಳು ! : ದೇವಸ್ಥಾನ ಹಾಗೂ ದೇವರ ಮೇಲೆ ಮೊದಲು ಭಕ್ತರ ಅಧಿಕಾರವಿರುತ್ತದೆ, ಎಂಬುದು ಎಂದೋ ಇತಿಹಾಸದಲ್ಲಿ ಜಮೆಯಾಗಿದೆ. ಗ್ರಾಮದ ದೇವಸ್ಥಾನದ ಮೇಲೆ ಪಂಚಾಯತ ಸದಸ್ಯರ, ಜಿಲ್ಲೆಯ ದೇವಸ್ಥಾನಗಳ ಮೇಲೆ ಜಿಲ್ಲಾಪರಿಷತ್ತಿನ ಸದಸ್ಯರ,
ರಾಜ್ಯದ ದೇವಸ್ಥಾನಗಳ ಮೇಲೆ ವಿಧಾನಸಭಾ ಸದಸ್ಯರ ಮತ್ತು ಸಂಸದರ ಹಾಗೂ ಭಾರತದಲ್ಲಿನ ದೊಡ್ಡ ದೊಡ್ಡ ದೇವಸ್ಥಾನಗಳ ಮೇಲೆ ಸಂಸದರು ಹಾಗೂ ಕೇಂದ್ರಸರಕಾರದ ಮಂತ್ರಿಗಳ ಅಧಿಕಾರವಿರುತ್ತವೆ. ರಜ-ತಮಪ್ರಧಾನ ರಾಜಕಾರಣಿಗಳ ಅಧಿಕಾರದಡಿಯಲ್ಲಿರುವ ಇಂತಹ ದೇವಸ್ಥಾನಗಳಲ್ಲಿ ಚೈತನ್ಯವಿರುವುದೇ ? (ಕಾರ್ತಿಕ ಶು. ೧೨, ಕಲಿಯುಗ ವರ್ಷ ೫೧೧೨ (೧೮.೧೧.೨೦೧೦))
೨. ‘ಓರ್ವ ವಿದ್ವಾಂಸರ’ ವಿಶ್ಲೇಷಣೆ
೨ ಅ. ಕಲಿಯುಗದಲ್ಲಿ ದೇವಸ್ಥಾನಗಳ ದುರವಸ್ಥೆ ಮತ್ತು ಈ ದುರವಸ್ಥೆಗೆ ರಾಜಕಾರಣಿಗಳೇ ಜವಾಬ್ದಾರ ರಾಗಿರಲು ಕಾರಣಗಳು
೨ ಅ ೧. ಕಲಿಯುಗದಲ್ಲಿ ಭಕ್ತಿಯು ಕ್ಷೀಣಿಸುವುದು : ಕಲಿಯುಗದಲ್ಲಿ ಭಕ್ತಿಯು ಕ್ಷೀಣಿಸಿದೆ. ಅಲ್ಪಸ್ವಲ್ಪ ಭಾವದ ಸ್ತರದಲ್ಲಿ ಸಾಧನೆಯನ್ನು ಮಾಡುವ ಸಾಧಕರು ಈಗ ಜನರ ಉದ್ಧಾರಕ್ಕಾಗಿ ನಡೆಯುತ್ತಿರುವ ಧರ್ಮಪ್ರಸಾರದ ಕಾರ್ಯದಲ್ಲಿ ಸಮಷ್ಟಿ ಸಾಧನೆಯೆಂದು ಪಾಲ್ಗೊಂಡಿದ್ದಾರೆ.
೨ ಅ ೨. ರಾಜ್ಯಾಡಳಿತದಲ್ಲಿನ ಅಸತ್ಯ ತೆಯಿಂದ ಯಾರಿಗೂ ನ್ಯಾಯ ನೀಡಲು ಸಾಧ್ಯವಿಲ್ಲ : ಕಲಿಯುಗದಲ್ಲಿ ಎಲ್ಲೆಡೆ ಢಾಂಭಿ ಕತೆಯಿರುವುದರಿಂದ ಎಲ್ಲೆಡೆ ಅಸತ್ಯದ ಬಿರುಗಾಳಿ ಬೀಸುತ್ತಿದೆ. ರಾಜಕಾರಣಿಗಳ ಪ್ರತಿ ಹಂತದಲ್ಲಿರುವ ರಾಜ್ಯಾಡಳಿತದಲ್ಲಿನ ಅಸತ್ಯ ತೆಯಿಂದ ಯಾರಿಗೂ ನ್ಯಾಯ ನೀಡಲು ಸಾಧ್ಯವಿಲ್ಲ.
೨ ಅ ೩. ಸ್ವಾರ್ಥಕ್ಕಾಗಿ ಜನರ ಹಣ ಕೀಳುವುದರಲ್ಲಿ ಮಗ್ನವಾಗಿರುವ ರಾಜ್ಯ ವ್ಯವಸ್ಥೆಯು ಜನಹಿತದೆಡೆಗೆ ಗಮನ ಹರಿ ಸಲು ಸಾಧ್ಯವಿದೆಯೇನು ?
೨ ಅ ೪. ದೇವಸ್ಥಾನಗಳ ವಿಷಯದಲ್ಲಿ ರಾಜಕಾರಣಿಗಳಿಂದಾಗುವ ಪಾಪಕೃತ್ಯಗಳು :
೨ ಅ ೪ ಅ. ಜೂಜಿನಿಂದಲೂ ಚಂದಾ ವಸೂಲು ಮಾಡುವುದು : ದೇವ ಸ್ಥಾನಗಳ ಪರಿಸರದಲ್ಲಿ ನಡೆಯುವ ಜೂಜಿ ನತ್ತ ಗಮನಹರಿಸದೇ, ಅದರಿಂದಲೂ ಚಂದಾ ಪಡೆದುಕೊಳ್ಳುವಂತಹ ಕುಕೃತ್ಯವನ್ನು ಮಾಡಲು ರಾಜಕಾರಣಿಗಳು ಹಿಂಜರಿಯುವುದಿಲ್ಲ.
೨ ಅ ೪ ಆ. ಭಕ್ತರು ದೇವರಿಗೆ ಅರ್ಪಿಸಿದ ಹಣವನ್ನು ಕೂಡ ನುಂಗಲು ಪ್ರಯತ್ನಿಸುವುದು : ಭಕ್ತರು ದೇವಸ್ಥಾನಗ ಳಲ್ಲಿ ದೇವರಿಗೆ ಶ್ರದ್ಧೆಯಿಂದ ಅರ್ಪಿಸಿದ ಹಣದ ಮೇಲೆ ಸರಕಾರದ ಕಣ್ಣಿರುವುದ ರಿಂದ ಈಗ ದೇವಸ್ಥಾನಗಳ ಸರಕಾರೀಕರ ಣದ ಕಾಯಿದೆಯ ಹೆಸರಿನಲ್ಲಿ ರಾಜಕಾರ ಣಿಗಳು ಹಿಂದೂಗಳ ದೇವಸ್ಥಾನಗಳನ್ನು ನುಂಗುವ ಷಡ್ಯಂತ್ರ ರಚಿಸುತ್ತಿದ್ದಾರೆ. 
೨ ಅ ೪ ಇ. ದೇವಸ್ಥಾನಗಳಲ್ಲಿ ರಾಜ ಕಾರಣಿಗಳು ಸೇರಿಕೊಂಡಿರುವುದರಿಂದ ಆ ಭೂಮಿಯು ಭ್ರಷ್ಟವಾಗುವುದು : ‘ಈಗ ರಾಜಕಾರಣಿಗಳು ದೇವಸ್ಥಾನಗಳ ಸರ್ವಾಧಿಕಾರಿಯಾಗಿರುವುದರಿಂದ ಅಲ್ಲಿ ಚೈತನ್ಯವಿರಲು ಹೇಗೆ ಸಾಧ್ಯ’ ಎಂದು ಪ.ಪೂ. ಡಾಕ್ಟರರು ತಮ್ಮ ಲೇಖನದ ಮೂಲಕ ಪ್ರಶ್ನಿಸಿದ್ದಾರೆ. ದೇವಸ್ಥಾನದಲ್ಲಿ ರಾಜಕಾರಣಿ ಗಳು ಸೇರಿಕೊಂಡಿರುವುದರಿಂದ ಆ ಪವಿತ್ರ ಭೂಮಿಯು ಭ್ರಷ್ಟವಾಗುವ ಮಾರ್ಗದಲ್ಲಿದೆ.
೨ ಅ ೪ ಈ. ಭ್ರಷ್ಟ ಪಾತಕವನ್ನು ಮೆತ್ತಿ ಕೊಂಡ ಕೈಗಳಿಂದ ದೇವತೆಯ ಮೂರ್ತಿ ಯನ್ನು ಪೂಜಿಸಿದ್ದರಿಂದ ಮೂರ್ತಿಯಲ್ಲಿ ಅಳಿದುಳಿದ ಚೈತನ್ಯವೂ ಲೋಪವಾ ಗುವುದು : ಭ್ರಷ್ಟ ಕೈಗಳಿಂದ ಕುಕೃತ್ಯಗಳನ್ನು ಮಾಡಿ ಪಾಪದ ಹಕ್ಕುದಾರನಾಗಿರುವುದ ರಿಂದ ಸಂಪೂರ್ಣ ದೇಹವು ರಜ-ತಮ ಗಳಿಂದ ತುಂಬಿರುತ್ತದೆ ಮತ್ತು ಇಂತಹ ರಾಜಕಾರಣಿಗಳ ಕೈಗಳಿಂದ ದೇವತೆಗಳ ಮಹಾಪೂಜೆ ಮಾಡುವುದರಿಂದ ದೇವತೆಯ ಮೂರ್ತಿಯಲ್ಲಿ ಅಳಿದುಳಿದ ಚೈತನ್ಯವೂ ಲೋಪವಾಗುತ್ತದೆ.
೨ ಅ ೪ ಉ. ಮಾಂತ್ರಿಕರು ದೇವ ಸ್ಥಾನಗಳಲ್ಲಿಯೂ ಭಕ್ತರ ದೇಹವನ್ನು ದೂಷಿತಗೊಳಿಸುವ ಷಡ್ಯಂತ್ರವನ್ನು ರಚಿಸುವುದು : ಈ ಪ್ರಕ್ರಿಯೆಯಲ್ಲಿ ದೇವ ತೆಯ ಮೂರ್ತಿಯ ಮೇಲೆಯೇ ತೊಂದರೆ ದಾಯಕ ಆವರಣ ಬಂದು ಈ ಆವರಣ ವನ್ನು ಸ್ಪರ್ಶ ಮಾಡಿದರೆ ಭಕ್ತರ ದೇಹವು ದೇವಸ್ಥಾನ ದಲ್ಲಿ ಪವಿತ್ರವಾಗುವ ಬದಲು ಅಪವಿತ್ರವಾಗುವಂತಹ ಷಡ್ಯಂತ್ರವನ್ನು ಮಾಂತ್ರಿಕರು ಈ ಮೂಲಕ ರಚಿಸಿರುವುದು ಕಂಡು ಬರುತ್ತಿದೆ.
೨ ಆ. ದೇವಸ್ಥಾನಗಳನ್ನು ಸರಕಾರೀಕರಣದ ಪ್ರಕ್ರಿಯೆ ಯಿಂದ ತಪ್ಪಿಸುವುದು ಪ್ರತಿ ಯೊಬ್ಬ ಹಿಂದೂವಿನ ಆದ್ಯ ಕರ್ತವ್ಯವಾಗಿದೆ ಹಾಗೂ ಅದರ ಹಿಂದಿನ ಕಾರಣಗಳು :
೨ ಆ ೧. ಧರ್ಮವು ಕ್ಷೀಣಿಸುತ್ತಿರುವು ದರಿಂದ ಸರಕಾರದ ವಿರುದ್ಧ ಬಂಡಾಯ ಹೂಡುವ ಆವಶ್ಯಕತೆಯಿರುವುದು : ವಂಶ ಪಾರಂಪರ್ಯವೆಂಬಂತೆ ಈಗ ದೇವಸ್ಥಾನ ಗಳು ಕ್ರಮಬದ್ಧವಾಗಿ ಕೇಂದ್ರ ಸರಕಾರದ ವಶವಾಗುತ್ತಿವೆ, ಅದರ ಕಡೆಗೆ ಕಾಳಜಿಯಿಂದ ಯಿಂದ ಗಮನ ಹರಿಸಿ ಹಾಗಾಗದಿರಲು ಈಗ ಸತರ್ಕತೆಯಿಂದ ಸರಕಾರದ ವಿರುದ್ಧ ಬಂಡಾಯ ಹೂಡುವ ಅವಶ್ಯಕತೆಯಿದೆ, ಇಲ್ಲದಿದ್ದರೆ ಧರ್ಮದ ನಾಶವು ಖಚಿತವಿದೆ.
೨ ಆ ೨. ದೇವಸ್ಥಾನಗಳಲ್ಲಿ ಅಳಿದುಳಿದ ಸಾತ್ತ್ವಿಕತೆಯು ಈ ರಾಜಕಾರಣಿಗಳಿಂದಾಗಿ ಲೋಪವಾದರೆ ಆಪತ್ಕಾಲದಲ್ಲಿ ಭಕ್ತರು ಬದುಕುವುದೂ ಅಸಾಧ್ಯವಾಗುವುದು.
೨ ಆ ೩. ಸಕಾಮ ಭಕ್ತಿ ಮಾಡುವ ವರ ಸಾಧನೆಗೆ ಹಾನಿಯುಂಟಾಗುವುದು : ‘ದೇವಸ್ಥಾನಗಳಲ್ಲಿನ ದೇವತತ್ತ್ವ ಲೋಪ ವಾದರೆ ಭಕ್ತರು ಯಾರ ಭಕ್ತಿ ಮಾಡು ವರು ?’ ಎನ್ನುವ ಪ್ರಶ್ನೆಯು ಸಕಾಮ ಭಕ್ತಿ ಮಾಡುವವರಿಗೆ ಉದ್ಭವಿಸುವುದು ಹಾಗೂ ಇದರಿಂದ ಅವರಿಗೆ ನಿರಾಶೆಯುಂಟಾಗಿ ಅವರ ಸಾಧನೆಗೆ ಹಾನಿಯಾಗುವುದು.
೨ ಆ ೪. ತತ್ತ್ವಭಕ್ತಿಯನ್ನೇ ಆದರ್ಶವ ನ್ನಾಗಿಟ್ಟುಕೊಂಡು ಸುತ್ತಮುತ್ತಲಿನ ಪ್ರತಿ ಯೊಂದು ವಿಷಯಗಳಲ್ಲಿ ಪರಮೇಶ್ವರ ನನ್ನು ಕಾಣುವ ಅಭ್ಯಾಸವನ್ನು ಈಗಿನಿಂದಲೇ ಆರಂಭಿಸಿದರೆ ಮುಂದೆ ದೇವಸ್ಥಾನಗಳ ವಿನಾಶವನ್ನು ತೆರೆದ ಕಣ್ಣುಗಳಿಂದ ನೋಡಲು ಸಾಧ್ಯವಾಗುವುದು : ಈಗಿ ನಿಂದಲೇ ಆಪತ್ಕಾಲವನ್ನು ಎದುರಿಸಲು ತಯಾರಿ ಮಾಡಿಕೊಂಡು ತತ್ತ್ವಭಕ್ತಿಯ ಆದರ್ಶವನ್ನು ಮುಂದಿಟ್ಟುಕೊಂಡು ಸುತ್ತ ಮುತ್ತಲಿನ ಪ್ರತಿಯೊಂದು ವಿಷಯಗಳಲ್ಲಿ ಪರಮೇಶ್ವರನನ್ನು ಕಾಣುವ ಅಭ್ಯಾಸ ಮಾಡಿ ಕೊಂಡರೆ ಮಾತ್ರ ದೇವಸ್ಥಾನಗಳಲ್ಲಿನ ದೇವ ತತ್ತ್ವವು ನಾಮಾವಶೇಷವಾಗುವಾಗ ಅದನ್ನು ತೆರೆದ ಕಣ್ಣುಗಳಿಂದ ನೋಡಲು ಭಕ್ತರಿಗೆ ಸಾಧ್ಯವಾಗಬಹುದು. ‘ಈಗ ಎಲ್ಲಿ ನೋಡಿ ದರೂ ದೇವಸ್ಥಾನಗಳನ್ನು  ಕಣ್ಣುಗಳಿಂದ ನೋಡಲು ಭಕ್ತರಿಗೆ ಸಾಧ್ಯವಾಗಬಹುದು. ‘ಈಗ ಎಲ್ಲಿ ನೋಡಿದರೂ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವ ಕೇಂದ್ರಸರಕಾರದ ಪ್ರಕ್ರಿಯೆಯಿಂದ ಇದೇ ಚಿಹ್ನೆ ಕಾಣುತ್ತಿದೆ.
೨ ಇ. ನಿಷ್ಕರ್ಷ : ‘ಭಾರತದ ಸಾತ್ತ್ವಿಕತೆಯನ್ನು ನಾಶ ಮಾಡಲು ಇದು ೫ ನೇ ಪಾತಾಳದ ಮಾಂತ್ರಿಕರ ಸಂಚಾಗಿದ್ದರೂ ಇದರ ವಿರುದ್ಧದ ಹೋರಾಟಕ್ಕೆ ಇಳಿಯಲೇ ಬೇಕು. ಆಗ ಮಾತ್ರ ಧರ್ಮದ ಸಿಂಹಾಸನವು ಅಸ್ಥಿರವಾಗುವು ದಿಲ್ಲ’, ಎಂದು ಪ.ಪೂ. ಡಾಕ್ಟರರು ಮೇಲಿನ ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ. (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ಕಾರ್ತಿಕ ಶು. ೧೨, ಕಲಿಯುಗ ವರ್ಷ ೫೧೧೨ (೧೮.೧೧.೨೦೧೦), ಸಾಂ. ೭.೫೮)

No comments:

Post a Comment