ಸೇವೆ ಅಥವಾ ನಾಮಜಪ ಮಾಡುವಾಗ ನಿರಂತರ ನಿದ್ದೆಯ ಮಂಪರು ಬರುತ್ತಿದ್ದರೆ ಸನಾತನದ ಭೀಮಸೇನಿ
ಕರ್ಪೂರವನ್ನು ಆಧ್ಯಾತ್ಮಿಕ ಸ್ತರದಲ್ಲಿ ಉಪಯೋಗಿಸಿ ನೋಡಿ!
ಸದ್ಯ ಸಾಧಕರಿಗೆ ಸೇವೆಯನ್ನು ಮಾಡು ವಾಗ ನಿರಂತರ ನಿದ್ದೆಯ ಮಂಪರು ಬರು ವುದು ಹಾಗೂ ನಾಮಜಪಕ್ಕೆ ಕುಳಿತಾಗ ನಿದ್ದೆ ಬರುವುದು ಇಂತಹ ಆಧ್ಯಾತ್ಮಿಕ ತೊಂದರೆ ಗಳಾಗುತ್ತಿವೆ. ಈ ತೊಂದರೆಗಳನ್ನು ನಿವಾರಿಸಲು ಸನಾತನದ ಭೀಮಸೇನಿ ಕರ್ಪೂರವನ್ನು ಉಪಯೋಗಿಸಬಹುದು. ಅದಕ್ಕಾಗಿ ಮುಂದಿನ ಪ್ರಯೋಗವನ್ನು ಮಾಡಿ ನೋಡಿ.ಕರ್ಪೂರವನ್ನು ಆಧ್ಯಾತ್ಮಿಕ ಸ್ತರದಲ್ಲಿ ಉಪಯೋಗಿಸಿ ನೋಡಿ!
೧. ಕೈಯಲ್ಲಿ ಕರ್ಪೂರದ ಚಿಕ್ಕ ತುಂಡ ನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಪುಡಿ ಮಾಡಬೇಕು. ಈ ಪುಡಿಯನ್ನು ಕಣ್ಣುಗ ಳನ್ನು ಮುಚ್ಚಿಕೊಂಡು ಕಣ್ಣುಗಳಿಗೆ ಹಾಗೂ ಸಂಪೂರ್ಣ ಮುಖಕ್ಕೆ ಹಚ್ಚಬೇಕು
೨. ಆಜ್ಞಾಚಕ್ರದ ಮೇಲೆ ಸ್ವಲ್ಪ ಹೆಚ್ಚು ತಿಕ್ಕಬೇಕು. ಅದರಿಂದ ಆಜ್ಞಾಚಕ್ರವು ಜಾಗೃತ ವಾಗಲು ಸಹಾಯವಾಗುತ್ತದೆ.
೩. ಅನಂತರ ಉಳಿದ ಪುಡಿಯನ್ನು ಸಂಪೂರ್ಣ ಅಂಗೈಗೆ ತಿಕ್ಕಿ ಕೈಯನ್ನು ಬೊಗಸೆ ಮಾಡಿ ಈ ಟೊಳ್ಳು ಬೊಗಸೆಯಿಂದ ಮುಖವನ್ನು ಮುಚ್ಚಬೇಕು. ಮೂಗಿನ ಭಾಗವನ್ನು ಬೊಗಸೆಯ ಒಳಗಿಡಬೇಕು.
೪. ಅನಂತರ ಕಣ್ಣುಗಳನ್ನು ತೆರೆದು ರೆಪ್ಪೆಯನ್ನು ೪-೫ ಸಲ ಬೊಗಸೆಯಲ್ಲಿಯೇ ಮಿಟುಕಿಸಬೇಕು ಮತ್ತು ನಾಮಜಪ, ಪ್ರಾರ್ಥನೆ ಮಾಡುತ್ತ ಅಥವಾ ಶ್ರೀಕೃಷ್ಣನ ಮುಖವನ್ನು ನೆನಪಿಸುತ್ತ ಬೊಗಸೆಯ ಟೊಳ್ಳಿನಿಂದ ದೀರ್ಘ ಶ್ವಾಸವನ್ನು ದೇಹದ ಟೊಳ್ಳಿನಲ್ಲಿ ತುಂಬಬೇಕು. ಹೀಗೆ ಒಂದೇ ಸಮಯದಲ್ಲಿ ಮೂರು-ನಾಲ್ಕು ಸಲವಾ ದರೂ ಮಾಡಬೇಕು.
೫. ಹೀಗೆ ಮಾಡುವುದರಿಂದ ದೇಹ ದಲ್ಲಿರುವ ಕಲುಷಿತ ವಾಯು ನಾಶವಾಗಲು ಮತ್ತು ಮನಸ್ಸು, ಮುಖ, ಕಣ್ಣುಗಳಿಗೆ ಪ್ರಸನ್ನತೆ ಬರಲು ಸಹಾಯವಾಗುತ್ತದೆ.
೬. ಇದರಿಂದ ಮನಸ್ಸಿನ ನಿರಾಶೆ ದೂರ ವಾಗುವುದು, ಕಣ್ಣು ನೋವು ನಿಲ್ಲುವುದು, ಕಣ್ಣುಗಳು ಮಂದವಾಗಿ ಕಾಣುತ್ತಿದ್ದರೆ ದೃಷ್ಟಿ ಸ್ವಚ್ಛವಾಗುವುದು, ನಿದ್ದೆಯ ಮಂಪರು ದೂರ ವಾಗುವುದು ಇಂತಹ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಲು ಸಹಾಯವಾಗುತ್ತದೆ.
೭. ದೊಡ್ಡ ಕರ್ಪೂರದ ಡಬ್ಬಿಯಲ್ಲಿ ಮೂರು-ನಾಲ್ಕು ಕರ್ಪೂರದ ತುಂಡುಗಳನ್ನು ಹಾಕಿ ನಡುನಡುವೆ ಆ ಡಬ್ಬಿಯ ಟೊಳ್ಳಿನ ವಾಸನೆಯನ್ನು ತೆಗೆದುಕೊಂಡರೂ ದೇಹದ ಮೇಲಿನ ಆವರಣವು ನಿರಂತರ ದೂರವಾಗು ವುದು. ಏಕೆಂದರೆ ದೊಡ್ಡ ಡಬ್ಬಿಯನ್ನು ಉಪಯೋಗಿಸುವುದರಿಂದ ಕರ್ಪೂರದ ಗಂಧದ ನಿರ್ಗುಣ ಟೊಳ್ಳನ್ನು ಹೆಚ್ಚು ಉಪ ಯೋಗಿಸಲು ಸಾಧ್ಯವಾಗುತ್ತದೆ.
೮. ಮೆಟ್ಟಿಲಿನಿಂದ ಹತ್ತಿ ಇಳಿಯು ವಾಗ, ನಡೆದಾಡುವಾಗ ಅಥವಾ ಸಭೆಯ ಲ್ಲಿಯೂ ಈ ಡಬ್ಬಿಯ ಟೊಳ್ಳಿನಿಂದ ಶ್ವಾಸ ತೆಗೆದುಕೊಂಡು ನಿರಂತರ ಬರುವ ಆವರಣ ದೊಂದಿಗೆ ಹೋರಾಡಬಹುದು.
ಪ.ಪೂ ಡಾಕ್ಟರರು ನಮಗೆ ಸಾತ್ತ್ವಿಕ ಕರ್ಪೂರವನ್ನು ಒದಗಿಸಿಕೊಟ್ಟಿದ್ದಾರೆ. ಅದನ್ನು ಆಧ್ಯಾತ್ಮಿಕ ಉಪಾಯಕ್ಕಾಗಿ ಲಾಭ ಪಡೆಯೋಣ ! - ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಕಾರ್ತಿಕ ಕೃಷ್ಣ ೪, ಕಲಿಯುಗ ವರ್ಷ ೫೧೧೨ (೨೫.೧೧.೨೦೧೦))
ತಮೋಗುಣಿ ನಿದ್ದೆಯನ್ನು ಸತ್ತ್ವಗುಣಿ ನಿದ್ದೆಯಲ್ಲಿ ರೂಪಾಂತರಿಸಲು ಹಾಗೂ ರಾತ್ರಿ ನಡೆಯುವ ಕೆಟ್ಟ ಶಕ್ತಿಗಳ ಆಕ್ರಮಣವನ್ನು ಎದುರಿಸಲು ಆಧ್ಯಾತ್ಮಿಕ ಸ್ತರದಲ್ಲಿ ದೀಪದ ಸಾತ್ತ್ವಿಕ ಜ್ಯೋತಿಯ ಲಾಭ ಪಡೆಯೋಣ!
ಸದ್ಯ ಆಪತ್ಕಾಲದ ತೀವ್ರತೆ ಹೆಚ್ಚಾಗು ತ್ತಿರುವುದರಿಂದ ಸಾಧಕರ ಮೇಲೆ ರಾತ್ರಿಯ ಹೊತ್ತಿನಲ್ಲಿ ಕೆಟ್ಟ ಶಕ್ತಿಗಳಿಂದಾಗುವ ಆಕ್ರಮಣ ಗಳು ಹೆಚ್ಚುತ್ತಿವೆ. ಇದರಲ್ಲಿ ಸಾಧಕರಿಗೆ ‘ಕೆಟ್ಟ ಕನಸು ಬೀಳುವುದು, ದೇಹದ ಮೇಲೆ ಅತ್ಯಾಚಾರವಾಗುತ್ತಿರುವಂತೆ ಅನಿಸುವುದು, ದೇಹವು ನಿಷ್ಕಿ ಯವಾಗುವುದು, ಮಲಗಿ ದಾಗ ಉಸಿರಾಡಲು ಕಷ್ಟವಾಗುವುದು ಮತ್ತು ಶರೀರ ಭಾರವಾಗಿ ಬೆಳಗ್ಗೆ ಬೇಗನೇ ಎದ್ದು ಸೇವೆ ಮಾಡಲು ಅಸಾಧ್ಯವಾಗುವುದು, ನಿದ್ದೆಯಾದರೂ ನಿರಂತರ ನಿದ್ದೆಯ ಮಂಪರಿ ನಿಂದ ಏಳಲು ಆಗದಿರುವುದು, ಮಲಗಿದ ನಂತರ ಭೂಮಿಗೆ ಅಂಟಿಕೊಂಡಂತೆ ಅನಿಸುವುದು, ಎಲುಬುಗಳಿಗೆ ನೋವಾಗು ವುದು ಮುಂತಾದ ತೊಂದರೆಗಳಾಗುತ್ತಿವೆ. ಈ ತೊಂದರೆಗಳನ್ನು ಕಡಿಮೆಗೊಳಿಸಲು ಮುಂದಿನ ಪ್ರಯೋಗವನ್ನು ಮಾಡಿ ನೋಡಿ.೧. ದೀಪದ ಜ್ಯೋತಿಯು ತೇಜತತ್ತ್ವಕ್ಕೆ ಸಂಬಂಧಿಸಿರುವುದರಿಂದ ಅದು ಕೆಟ್ಟ ಶಕ್ತಿ ಯೊಂದಿಗೆ ಹೋರಾಡಬಲ್ಲದು. ರಾತ್ರಿ ಮಲಗುವಾಗ ತಲೆಯ ಪಕ್ಕಕ್ಕೆ ತುಪ್ಪದ, ಎಳ್ಳೆಣ್ಣೆ ಅಥವಾ ಸಾದಾ ಎಣ್ಣೆಯ ದೀಪ ವನ್ನು ಉರಿಸಿಡುವುದರಿಂದ ವಾತಾವರಣವು ಸತ್ತ್ವಗುಣಿಯಾಗಿ ಕೆಟ್ಟ ಶಕ್ತಿಗಳ ಆಕ್ರಮಣ ದಿಂದ ನಮ್ಮ ರಕ್ಷಣೆಯಾಗುತ್ತದೆ.
೨. ಎಳ್ಳೆಣ್ಣೆ ಹಾಗೂ ತುಪ್ಪ ದುಬಾರಿಯಾ ಗಿರುವುದರಿಂದ ಸಾದಾ ಎಣ್ಣೆಯ ದೀಪ ವನ್ನೂ ಹಚ್ಚಿಡಬಹುದು. ಆದರೆ ಇದರಿಂದ ಅಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಲಾಭವಾಗಲು ದೀಪಕ್ಕೆ ಶ್ರೀಕೃಷ್ಣನ ನಾಮಜಪದ ಪಟ್ಟಿಗಳ ಮಂಡಲವನ್ನು ಹಾಕಬೇಕು. ಇದರಿಂದ ಚೈತನ್ಯ ಪ್ರಕ್ಷೇಪಿತವಾಗಲು ಹೆಚ್ಚು ಸಹಾಯವಾಗುತ್ತದೆ.
೩. ಹೆಚ್ಚು ತೊಂದರೆಯಾಗುವ ದಿನ ದಂದು ಈ ಪ್ರಯೋಗವನ್ನು ಮಾಡಿ ನೋಡ ಬಹುದು. ದೀಪವನ್ನು ಹಚ್ಚಿದ ನಂತರ ದೀಪದ ಜ್ಯೋತಿಯನ್ನು ಮಂದವಾಗಿಡ ಬೇಕು. ಇದರಿಂದ ಅದರ ಕಾರ್ಯ ಮಾಡುವ ಕ್ಷಮತೆ ಹೆಚ್ಚಾಗುತ್ತದೆ. ಏಕೆಂದರೆ ಅದರ ಲ್ಲಿಯ ರಜೋಗುಣವು ಕಡಿಮೆಯಾಗುತ್ತದೆ.
೪. ದೀಪದ ಮೇಲೆ ಗಾಜನ್ನು ಮುಚ್ಚಿಟ್ಟರೆ ಪಂಖ ಹಚ್ಚಿ ಮಲಗಬಹುದು. ದೀಪದಲ್ಲಿ ಹತ್ತಿಯ ಬತ್ತಿಯನ್ನು ಹಾಕುವಾಗ ಅದಕ್ಕೆ ವಿಭೂತಿ ಹಚ್ಚಿಯೇ ದೀಪಕ್ಕೆ ಹಾಕಬೇಕು. ಅದರಿಂದ ಜ್ಯೋತಿಯ ಕಾರ್ಯ ಕ್ಷಮತೆಯು ಹೆಚ್ಚಾಗುತ್ತದೆ.
೫. ಮಲಗುವಾಗ ದೀಪದ ಜ್ಯೋತಿಗೆ ಮುಂದಿನಂತೆ ಭಾವಪೂರ್ಣ ಪ್ರಾರ್ಥನೆ ಮಾಡಬೇಕು.
‘ಹೇ ಜ್ಯೋತಿ, ನಿನ್ನ ಅಸ್ತಿತ್ವದಿಂದ ನಮ್ಮ ಮೇಲೆ ರಾತ್ರಿಯಿಡಿ ಆಧ್ಯಾತ್ಮಿಕ ಉಪಾಯ ವಾಗುತ್ತಿರಲಿ ಹಾಗೂ ನಿನ್ನ ಜ್ಯೋತಿಯ ಕಡೆಗೆ ಆಕರ್ಷಿತವಾಗುವ ಚೈತನ್ಯದ ಲಹರಿ ಗಳಿಂದ ನನ್ನ ಆಧ್ಯಾತ್ಮಿಕ ಉನ್ನತಿಗೆ ಲಾಭ ವಾಗಲಿ. ಇದೇ ನಿನ್ನ ಚರಣಗಳಲ್ಲಿ ಕಳ ಕಳಿಯ ಪ್ರಾರ್ಥನೆ.’
೬. ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಯಿರುವ ಮತ್ತು ರಾತ್ರಿ ಆಕ್ರಮಣಕಾರಿಯಾ ಗುವ ಸಾಧಕರ ಹತ್ತಿರ ತುಪ್ಪದ ದೀಪ ವನ್ನು ಹಚ್ಚಿಡಬಾರದು. ಧ್ಯಾನಮಂದಿರ ದಲ್ಲಿ ಅಥವಾ ದೇವರ ಕೋಣೆಯಲ್ಲಿ ಹಚ್ಚಿಡ ಬೇಕು ಮತ್ತು ಅಲ್ಲಿಂದ ಚೈತನ್ಯ ಸಿಗಲು ಜ್ಯೋತಿಗೆ ಪ್ರಾರ್ಥನೆ ಮಾಡಬೇಕು. - ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಕಾರ್ತಿಕ ಕೃಷ್ಣ ೭, ಕಲಿಯುಗ ವರ್ಷ ೫೧೧೨ (೨೮.೧೧.೨೦೧೦))
No comments:
Post a Comment