ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ ಉಪಚಾರಗಳಲ್ಲಿ ೯. ಗಂಧವನ್ನು ಹಚ್ಚುವುದು, ೧೦. ಹೂವುಗಳನ್ನು ಅರ್ಪಿಸುವುದು, ೧೧. ಧೂಪವನ್ನು ತೋರಿಸುವುದು, ೧೨. ದೀಪವನ್ನು ಬೆಳಗುವುದು, ೧೩. ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ.
ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ. (ಮುಂದುವರಿದ ಭಾಗ) ೫. ಕೆಲವು ದೇವತೆಗಳ ಪೂಜೆಯ ವೈಶಿಷ್ಟ ಗಳು ಮತ್ತು ಅವುಗಳ ಹಿಂದಿನ ಕಾರಣಗಳು
ಆ. ಸೂರ್ಯ : ಸೂರ್ಯನಲ್ಲಿ ಶೇ. ೭೦ ರಷ್ಟು ತೇಜದ ಪ್ರಕಟತ್ವವಿದೆ, ಅಂದರೆ ಸಗುಣತ್ವವಿದೆ. ಆದುದರಿಂದ ಅವನ ತೇಜಸ್ವೀ ಚರಣಗಳಿಗೆ ನಮಸ್ಕರಿಸಿ ಅವನ ತೇಜಕ್ಕೆ ಶರಣಾಗಬೇಕು. ಇದರಿಂದ ಸಗುಣಸ್ತರ ದಲ್ಲಿನ ತೇಜದ ಲಾಭವನ್ನು ಪಡೆದುಕೊಳ್ಳಲು ಮತ್ತು ಅವನ ಶಕ್ತಿಯನ್ನು ಪ್ರಾಪ್ತಮಾಡಿ ಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದಲೇ ‘ಸೂರ್ಯ ನಮಸ್ಕಾರ’ಗಳನ್ನು ಹಾಕುವ ಪದ್ಧತಿಯಿದೆ.
ಇ. ಶ್ರೀವಿಷ್ಣು : ಇವನು ತಾರಕ, ನಿರ್ಗುಣ ಮತ್ತು ಅಪ್ರಕಟ ಶಕ್ತಿಯ ಪ್ರತೀಕ ವಾಗಿರುವುದರಿಂದ, ಅವನನ್ನು ಸ್ತುತಿಸಿ ಅವನಲ್ಲಿನ ದೈವತ್ತ್ವವನ್ನು ಸಗುಣದಲ್ಲಿ ರೂಪಾಂತರಿಸಲಾಗುತ್ತದೆ.
ಈ. ಶ್ರೀ ಗಣೇಶ : ಇವನು ಇಚ್ಛಾ ಶಕ್ತಿಯ ಪ್ರತೀಕನಾಗಿದ್ದಾನೆ. ಇಚ್ಛೆಯು ಕನಿಷ್ಠ ಸ್ತರದಲ್ಲಿನ ಭೂಕಂಪನಕ್ಕೆ ಸಂಬಂಧಿಸಿರು ವುದರಿಂದ ಭೂಮಿಗೆ ಸಂಬಂಧಿಸಿದ ‘ತರ್ಪಣ’ದಿಂದ ಗಣೇಶತತ್ತ್ವವನ್ನು ಜಾಗೃತ ಗೊಳಿಸಿ ಸಕಾಮ ಫಲಪ್ರಾಪ್ತಿಯನ್ನು ಮಾಡಿ ಕೊಳ್ಳಲಾಗುತ್ತದೆ.
ಉ. ಶ್ರೀ ದುರ್ಗಾದೇವಿ : ಮೇಲಿನಿಂದ ಬರುವ ಪ್ರಕಟ ಶಕ್ತಿಯ ಪ್ರವಾಹದಿಂದ ಪ್ರಕಟವಾಗುವ ಶಕ್ತಿರೂಪೀ ದೇವತೆಯನ್ನು ಪ್ರಕಟಗೊಳಿಸಲು ‘ಅರ್ಚನೆ’ಯನ್ನು ಆಯೋಜಿ ಸಲಾಗಿದೆ. ಇದರಿಂದ ಶ್ರೀ ದುರ್ಗಾದೇವಿಯ ಮೂರ್ತಿಯ ಸುತ್ತಲಿನ ತೇಜೋಮಂಡಲವು ಕಾರ್ಯನಿರತವಾಗುತ್ತದೆ.
ಊ. ಶಿವ : ಶಿವನು ಲಯದ ಅಧಿ ಪತಿ, ಅಂದರೆ ಎಲ್ಲರನ್ನೂ ತನ್ನಲ್ಲಿ ಸಮಾ ವೇಶ ಮಾಡಿಕೊಳ್ಳುವ ದೇವನಾಗಿದ್ದಾನೆ. ಅವನಲ್ಲಿರುವ ನಿರ್ಗುಣ ಜ್ಞಾನಶಕ್ತಿಯನ್ನು ಪ್ರಕಟಗೊಳಿಸಲು ಶಿವಲಿಂಗದ ಮೇಲೆ ಅಭಿಷೇಕದ ಸ್ಮರ್ಶಾತ್ಮಕ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ.
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೯.೬. ೨೦೦೭, ಬೆಳಗ್ಗೆ ೧೧.೧೯)
ಊ ೧. ‘ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ, ಅದರಂತೆಯೇ ಶಿವನಿಗೆ ಶಂಖದ ನೀರಿನಿಂದ ಅಭಿಷೇಕ ವನ್ನು ಹಾಕುವುದಿಲ್ಲ. ದೇವರ ಮೂರ್ತಿ ಯಲ್ಲಿ ಪಂಚಾಯತನದ ಸ್ಥಾಪನೆಯಿದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದ ಕವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕ ದಿಂದ ಅಭಿಷೇಕವನ್ನು ಮಾಡಬಾರದು.’
ಶಾಸ್ತ್ರ : ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀ ತತ್ತ್ವವಿರುವುದರಿಂದ, ಸ್ತ್ರೀ ತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣ ಲಿಂಗದ ಜೊತೆಗೆ ಪಾಣಿಪೀಠವು ಇಲ್ಲದಿರು ವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ.
ಊ ೨. ‘ದೇವಸ್ಥಾನದಲ್ಲಿ ಮಹಾ ದೇವನ ಪೂಜೆಯನ್ನು ಮಾಡುವಾಗ ಶಂಖ ಪೂಜೆಯನ್ನು ಮಾಡುವುದು ಉಚಿತವಾಗಿಲ್ಲ; ಆದರೆ ಆರತಿಯ ಮೊದಲು ಶಂಖನಾದ ವನ್ನು ಮಾಡುವುದು ಯೋಗ್ಯವಾಗಿದೆ ಮತ್ತು ಅದನ್ನು ಅವಶ್ಯವಾಗಿ ಮಾಡಬೇಕು.’
ಶಾಸ್ತ್ರ : ಶಂಖನಾದವು ಎಲ್ಲಿಯವರೆಗೆ ಕೇಳಿಸುತ್ತದೆಯೋ, ಅಲ್ಲಿಯವರೆಗಿನ ಪರಿಸರದಲ್ಲಿ ಭೂತ, ಮಾಟ ಇತ್ಯಾದಿ ದುಷ್ಟಶಕ್ತಿಗಳ ತೊಂದರೆಯಾಗುವುದಿಲ್ಲ, ಅಷ್ಟೇ ಅಲ್ಲದೇ ಶಂಖನಾದದಿಂದ ಪ್ರಾಣಾ ಯಾಮದ ಅಭ್ಯಾಸವಾಗುತ್ತದೆ.
೬. ದೇವರ ಪೂಜೆಯನ್ನು ದಿನದಲ್ಲಿ ಎಷ್ಟು ಸಲ ಮಾಡಬೇಕು ಮತ್ತು ಯಾವ ಸಮಯದಲ್ಲಿ ಮಾಡಬೇಕು ?
ದೇವತೆಗಳ ಪೂಜೆಯು ನಿತ್ಯಕರ್ಮ ವಾಗಿದೆ. ಪ್ರತಿದಿನ ತ್ರಿಕಾಲ (ಪ್ರಾತಃಕಾಲ, ಅಪರಾಹ್ನ ಅಂದರೆ ಮಧ್ಯಾಹ್ನ ಹಾಗೂ ಸೂರ್ಯಾಸ್ತದ ನಂತರ) ಷೋಡಶೋಪ ಚಾರ (ಹದಿನಾರು ಉಪಚಾರಗಳಿಂದ) ಪೂಜೆ ಯನ್ನು ಮಾಡಬೇಕು. ಇಂತಹ ತ್ರಿಕಾಲ ಪೂಜೆಯನ್ನು ಮಾಡಲು ಸಾಧ್ಯವಾಗದಿದ್ದರೆ ಬೆಳಗ್ಗೆ ಷೋಡಶೋಪಚಾರ ಪೂಜೆಯನ್ನು ಮಾಡಿ ಮಧ್ಯಾಹ್ನ ಹಾಗೂ ಸೂರ್ಯಾಸ್ತದ ನಂತರ ಪಂಚೋಪಚಾರ (ಐದು ಉಪಚಾರ ಗಳಿಂದ) ಪೂಜೆಯನ್ನು ಮಾಡಬೇಕು. ತ್ರಿಕಾಲ ಪೂಜೆಯನ್ನು ಮಾಡಲು ಸಾಧ್ಯವಾಗ ದಿದ್ದರೆ ಕಡಿಮೆ ಪಕ್ಷ ಬೆಳಗ್ಗೆ ಒಂದು ಸಾರಿ ಯಾದರೂ ಪೂಜೆಯನ್ನು ಮಾಡಬೇಕು. ಷೋಡಶೋಪಚಾರ ಮತ್ತು ಪಂಚೋಪ ಚಾರ ಪೂಜೆಯನ್ನು ಮಾಡಲು ಸಾಧ್ಯವಾಗ ದಿದ್ದರೆ ಗಂಧ ಮತ್ತು ಪುಷ್ಪ ಈ ಎರಡು ಉಪಚಾರಗಳಿಂದಾದರೂ ಪೂಜೆಯನ್ನು ಮಾಡಬೇಕು. ಯಾವ ಅಡಚಣೆಗಳಿದ್ದರೂ ಉಪಾಸಕರಿಂದ ದೇವತೆಗಳ ಪೂಜೆಯಾಗ ಬೇಕೆಂದು ಈ ರೀತಿಯ ಪರ್ಯಾಯ ಗಳನ್ನು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.
೭. ಯಾವಾಗ ದೇವರ ಪೂಜೆಯನ್ನು ಮಾಡಬಾರದು ?
ಅ. ವ್ಯಸನಾಧೀನರಾಗಿ ಮತ್ತು ಸ್ನಾನ ವನ್ನು ಮಾಡದೇ ದೇವರ ಪೂಜೆಯನ್ನು ಮಾಡಬಾರದು.
ಆ. ಮೈಲಿಗೆ ಅಥವಾ ಸೂತಕವು ಪ್ರಾರಂಭವಾದಾಗ ಹತ್ತು ದಿನಗಳವರೆಗೆ ಪೂಜೆಯನ್ನು ಮಾಡಬಾರದು. (ಮೈಲಿಗೆ ಅಥವಾ ಸೂತಕವು ಪ್ರಾರಂಭವಾದಾಗ ಹತ್ತು ದಿನಗಳವರೆಗಿನ ಕಾಲವು ಅಶೌಚವಾಗಿರು ತ್ತದೆ. ಹನ್ನೊಂದನೆಯ ದಿನ ಶುದ್ಧಿಯನ್ನು ಮಾಡಿ ಪೂಜೆಯನ್ನು ಮಾಡಬಹುದು. ಕರ್ತನು ಮಾತ್ರ ೧೨ ನೆಯ ದಿನದ ನಂತರವೇ ಪೂಜೆಯನ್ನು ಮಾಡಬೇಕು.)
ಇ. ಮನೆಯಲ್ಲಿ ಸ್ತ್ರೀಯರು ರಜಸ್ವಲೆ ಯಾಗಿದ್ದರೆ ಮತ್ತು ಅವರ ಚಲನವಲನ ವಿಲ್ಲದ ಕೋಣೆಯಲ್ಲಿ ದೇವರನ್ನು ಇಟ್ಟಿದ್ದರೆ ಮನೆಯಲ್ಲಿರುವ ಹಿರಿಯ ಪುರುಷರು ಸ್ನಾನ ವನ್ನು ಮಾಡಿ ಪೂಜೆಯನ್ನು ಮಾಡಬಹುದು. ಸ್ಥಳದ ಅಭಾವದಿಂದಾಗಿ ದೇವರನ್ನು ಬೇರೆ ಕೋಣೆಯಲ್ಲಿಡಲು ಸಾಧ್ಯವಿಲ್ಲದಿದ್ದರೆ ನಾಲ್ಕು ದಿನ (ಸ್ತ್ರೀಯ ರಜೋಕಾಲ ಮುಗಿಯುವ ವರೆಗೆ) ದೇವರ ಕೋಣೆಯನ್ನು ಪರದೆಯಿಂದ ಮುಚ್ಚಿಡಬೇಕು. ವಿಶಿಷ್ಟ ಕಾರಣಗಳಿಗಾಗಿ ಈ ರೀತಿ ದೇವರನ್ನು ಮುಚ್ಚಿಡುವುದರಲ್ಲಿ ತಪ್ಪೇನಿಲ್ಲ. ವೈಷ್ಣವ ಸಂಪ್ರದಾಯದ ದೇವ ಸ್ಥಾನಗಳಲ್ಲಿಯೂ ‘ದೇವರು ಸ್ನಾನ ಮಾಡುತ್ತಿ ದ್ದಾರೆ’, ‘ದೇವರು ಮಲಗಿದ್ದಾರೆ’ ಎಂಬಂತಹ ಕಾರಣಗಳಿಗಾಗಿ ದೇವರ ಮೂರ್ತಿಯನ್ನು ಪರದೆಯಿಂದ ಮುಚ್ಚಿಡುವ ಪದ್ಧತಿಯಿದೆ. ಇದು ಒಂದು ರೀತಿಯಲ್ಲಿ ದೇವರಿಗೆ ಪ್ರತ್ಯೇಕ ಕೋಣೆಯನ್ನು ಮಾಡಿದಂತಾಗಿದೆ.
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪ ಚಾರ ಪೂಜೆಯ ಹಿಂದಿನ ಶಾಸ್ತ್ರ’)
(ಮುಂದುವರಿಯುವುದು)

No comments:
Post a Comment