ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ!

ಇಂದು ಎಲ್ಲೆಡೆ ಹಿಂದೂಗಳ ಮೇಲೆ ವಿವಿಧ ರೀತಿಯ ಹಲ್ಲೆಗಳಾಗುತ್ತಿವೆ. ಹಿಂದುತ್ವಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಹಿಂದೂಗಳನ್ನು ಜಾಗೃತಗೊಳಿಸುವುದು ಅತೀ ಅವಶ್ಯಕವಾಗಿದೆ. ಆದುದರಿಂದ ಹಿಂದೂಗಳೇ, ಈ ಕೆಳಗಿನ ವಿಷಯಗಳನ್ನು ದೇವಸ್ಥಾನಗಳಲ್ಲಿ, ಮನೆಯ ಹೊರಗೆ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಫಲಕದ ಮೇಲೆ ಬರೆದು ಧರ್ಮರಕ್ಷಣೆಯ ಕಾರ್ಯವನ್ನು ಮಾಡಿ!
ಸೂಚನೆ: ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
೧.ಹಿಂದೂಗಳೇ, ಆಕಳುಗಳ ಮೇಲೆ ಆಮ್ಲ (ಆಸಿಡ್) ಎರಚುವ ಹಿಂದೂದ್ವೇಷಿಗಳ ದುಷ್ಕೃತ್ಯವನ್ನು ಅರಿತುಕೊಳ್ಳಿರಿ!
ಮಹಾರಾಷ್ಟ್ರದ ಸೋಲಾಪುರದಲ್ಲಿ ಕೆಲವು ಹಿಂದೂದ್ವೇಷಿಗಳು ಆಕಳುಗಳ ಮೇಲೆ ಆಸಿಡ್ ಎರಚಿ ಅದಕ್ಕೆ ನೋವುಂಟು ಮಾಡುತ್ತಿದ್ದಾರೆ. ಗಾಯಗೊಂಡ ಆಕಳುಗಳನ್ನು ಅದರ ಮಾಲೀಕರು ಬಿಟ್ಟುಬಿಡುತ್ತಾರೆ.
ನಂತರ ಹಿಂದೂದ್ವೇಷಿಗಳು ಆ ಆಕಳುಗಳನ್ನು ಹತ್ಯೆ ಮಾಡಲು ತೆಗೆದುಕೊಂಡು ಹೋಗುತ್ತಾರೆ ಎಂದು ಶ್ರೀರಾಮ ಸೇನೆಯ ಪದಾಧಿಕಾರಿಗಳು ಹೇಳಿದ್ದಾರೆ.
೨.ಹಿಂದೂಗಳೇ, ಭಾಜಪ ರಾಜ್ಯದಲ್ಲಿನ ಅಸುರಕ್ಷಿತ ದೇವಸ್ಥಾನಗಳನ್ನು ಅರಿತುಕೊಳ್ಳಿರಿ!
ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನಲ್ಲಿರುವ, ಕಣ್ವ ಋಷಿಗಳು ಕಟ್ಟಿದ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿರುವ ದೇವತೆಗಳ ಮೂರ್ತಿಗಳನ್ನು ಅಜ್ಞಾತ ಹಿಂದೂದ್ವೇಷಿಗಳು ಧ್ವಂಸಮಾಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಿಲ್ಲ.
೩.ಹಿಂದುತ್ವವಾದಿಗಳ ಬಾಯಿ ಮುಚ್ಚುವ ಹಿಂದೂದ್ರೋಹಿ ‘ಐಬಿಎನ್ ಲೋಕಮತ’ ದೂರದರ್ಶನ!
‘ಐಬಿಎನ್ ಲೋಕಮತ’ ಎಂಬ ವಾಹಿನಿಯಲ್ಲಿನ ಒಂದು ವಿಶೇಷ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ.ಅಭಯ ವರ್ತಕ ಇವರು ಗೋವಾದಲ್ಲಿನ ದೇವಸ್ಥಾನಗಳಲ್ಲಿ ಮೂರ್ತಿಗಳ ಭಗ್ನದ ಘಟನೆಗಳ ಬಗ್ಗೆ ಪುರಾವೆ ನೀಡಿಯೂ ವಾರ್ತೆಯನ್ನು ಪ್ರಸಿದ್ಧಿ ಮಾಡದ ಬಗ್ಗೆ ವಿಚಾರಿಸಿದಾಗ ಸಂಪಾದಕ ನಿಖಿಲ ವಾಗಳೆಯವರು ಅದನ್ನು ಸುಳ್ಳು ಎಂದು ನಿರ್ಧರಿಸಿ ಶ್ರೀ.ವರ್ತಕರ ಬಾಯಿ ಮುಚ್ಚಲು ಪ್ರಯತ್ನಿಸಿದರು.
೪.ನಾಗರಿಕರೇ, ರಾಜಕಾರಣಿಗಳ ನಿಷ್ಕ್ರಿಯತೆಯ ಪ್ರತಿಫಲವನ್ನು ಅರಿತುಕೊಳ್ಳಿರಿ!
ಚೀನಾವು ತನ್ನ ನಕಾಶೆಯನ್ನು ಆಧರಿಸಿ ಆರಂಭಿಸಿರುವ ಹೊಸ ಸಂಕೇತಸ್ಥಳದಲ್ಲಿ ಭಾರತದ ಪೂರ್ವದ ರಾಜ್ಯ ಅರುಣಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರ ರಾಜ್ಯದ ಅಕ್ಸಾಯಿ ಚೀನಾದ ಭಾಗವೆಂದು ತೋರಿಸಿದೆ.
೫.ಹಿಂದೂಗಳೇ, ಧರ್ಮಾಂಧರ ಹಿಂದೂದ್ವೇಷವನ್ನರಿತುಕೊಳ್ಳಿರಿ!
ಉಳ್ಳಾಲ ಮೊಗವೀರ ಪಟ್ಟಣ ಎಂಬಲ್ಲಿನ ಶ್ರೀ ಬಂಟಜ್ಜ ದೇವಸ್ಥಾನದ ಮೂರ್ತಿಯ ಕೈಯನ್ನು ಕತ್ತರಿಸಿ ಮತ್ತು ಭಗವಾಧ್ವಜವನ್ನು ಕಿತ್ತೆಸೆದ ಪ್ರಕರಣದಲ್ಲಿ ಬಿ.ಸಿ.ರೋಡ್ ಎಂಬಲ್ಲಿ ವಾಸಿಸುವ ಅಬ್ದುಲ್ ಲತಿಫ್ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
೬. ಭಾರತೀಯರೇ, ಪಾಕ್ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಂದ ವ್ಯಾಪಿಸಿದ ಭಾರತ ದೇಶದ ದುಃಸ್ಥಿತಿಯನ್ನು ಅರಿತುಕೊಳ್ಳಿರಿ!
ಬಂಗಾಲ ಮಾರ್ಗದಿಂದ ಭಾರತದೊಳಗೆ ನುಸುಳಿರುವ ಬಾಂಗ್ಲಾದೇಶಿ ನುಸುಳುಕೋರರಿಗೆ ಬೆಂಗಳೂರು ಒಂದು ಆಶ್ರಯತಾಣವಾಗಿದೆ. ಈ ನಗರದಲ್ಲಿ ನುಸುಳಿದ ಸಾವಿರಾರು ಬಾಂಗ್ಲಾದೇಶಿ ನಾಗರಿಕರಲ್ಲಿ ಅನೇಕರು ಕಾನೂನುಬಾಹಿರ ವ್ಯವಹಾರದಲ್ಲಿ ತೊಡಗಿದ್ದಾರೆ.
೭.ಹಿಂದೂಗಳೇ, ಜಮ್ಮು-ಕಾಶ್ಮೀರ ಸರಕಾರದ ಹಿಂದೂದ್ರೋಹವನ್ನು ಅರಿತುಕೊಳ್ಳಿರಿ!
ಜಮ್ಮು-ಕಾಶ್ಮೀರ ಸರಕಾರವು ಕಾಶ್ಮೀರ ಕಣಿವೆಯಲ್ಲಿನ ಹಿಂದೂಗಳ ಪುನರ್ವಸತಿ ಕುರಿತಾದ ಅಂಶದಲ್ಲಿನ ಜನಮತವನ್ನು ತಪ್ಪುದಿಶೆಗೆ ತಿರುಗಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ಸುಳ್ಳು ಪ್ರತಿಜ್ಞಾಪತ್ರ ಸಾದರ ಪಡಿಸಿ ಕಾಶ್ಮೀರಿ ಹಿಂದೂಗಳು ಕಾಶ್ಮೀರ ಕಣಿವೆಗೆ ಹಿಂತಿರುಗಲು ಇಚ್ಛಿಸುವುದಿಲ್ಲ ಎಂದು ಹೇಳಿದೆ.

No comments:

Post a Comment