ಪೂ.ಸತ್ಯವಾನದಾದಾ ಮತ್ತು ಪೂ. ರಾಜೇಂದ್ರದಾದಾರವರಿಂದ ಆಧ್ಯಾತ್ಮಿಕ ಸ್ತರದಲ್ಲಿ ...

ಪೂ.ಸತ್ಯವಾನದಾದಾ ಮತ್ತು ಪೂ. ರಾಜೇಂದ್ರದಾದಾರವರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭ ಪಡೆಯಲು ಮಾಡಬೇಕಾದ ಪ್ರಯತ್ನಗಳು!

ಸದ್ಯ ಪೂ. ಸತ್ಯವಾನದಾದಾ ಮತ್ತು ಪೂ. ರಾಜೇಂದ್ರ ದಾದಾರವರು ಬೇರೆ ಬೇರೆ ಜಿಲ್ಲೆಯ ಸಾಧಕರನ್ನು ಭೇಟಿಯಾಗುತ್ತಿದ್ದಾರೆ. ಅವರಿಂದ  ಅಧ್ಯಾತ್ಮಿಕ ಸ್ತರದಲ್ಲಿ ಹೆಚ್ಚೆಚ್ಚು ಲಾಭವನ್ನು ಪಡೆಯಲು ನಾವು ಮುಂದಿನಂತೆ ಪ್ರಯತ್ನಗಳನ್ನು ಮಾಡಬಹುದು. ಈ ಪ್ರಯತ್ನಗಳಲ್ಲಿ ನಮಗೆ ಸುಲಭವಿರುವ ಅಥವಾ ‘ನಮ್ಮ ಸಾಧನೆಗೆ ಪ್ರಯತ್ನಗಳು ಒಳ್ಳೆಯದಾಗಿ ಆಗುವುದೋ’ ಅಂತಹ ಪ್ರಯತ್ನಗಳನ್ನು ನಾವು ಮೊದಲು ಮಾಡಬೇಕು.

೧. ಉಪಾಯಗಳು
ಅ. ನಮಗೆ ಉಪಾಯದ ಸಮಯದಲ್ಲಿ ಹೆಚ್ಚು ಲಾಭ ದೊರೆಯಲು ನಮಗೆ ಅವರ ಚೈತನ್ಯ ಗ್ರಹಿಸಲ್ಪಡಬೇಕೆಂದು ಮತ್ತು ಅದರಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿ ಬರುವ ವಿಘ್ನ ಮತ್ತು ತೊಂದರೆಗಳು ಕಡಿಮೆಯಾಗಬೇಕೆಂಬ ದೃಷ್ಟಿಯಿಂದ ಬೇರೆ ಬೇರೆ ಪ್ರಾರ್ಥನೆಗಳನ್ನು ಮಾಡಬೇಕು.
ಆ. ನಾಮಜಪ ಮಾಡುವಾಗ ಪ್ರತಿ ೧೦ ರಿಂದ ೧೫ ನಿಮಿಷಗಳಿಗೆ ಬೇರೆ ಬೇರೆ ಸಂಗತಿಗಳ ಆಲಂಬನೆ ಮಾಡಿ ಭಾವಪೂರ್ಣ ನಾಮಜಪವಾಗಲು ಪ್ರಯತ್ನಿಸಬೇಕು.
ಆ.೧. ಉಪಾಯವನ್ನು ಮಾಡಲು ಕುಳಿತುಕೊಂಡ ಸಂತರ ಚರಣಗಳತ್ತ ನೋಡಿ ನಾಮವನ್ನು ಜಪಿಸಬೇಕು. ಅದೂ ಸಾಧ್ಯ ವಿಲ್ಲದಿದ್ದರೆ ಅವರ ಕೈಗಳತ್ತ ಅಥವಾ ಮುಚ್ಚಿರುವ ಕಣ್ಣುಗಳತ್ತ ನೋಡಿ ನಾಮವನ್ನು ಜಪಿಸಬೇಕು.
ಆ.೨. ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರ ಕೈಯಲ್ಲಿಟ್ಟುಕೊಂಡು ಆ ಚಿತ್ರಗಳತ್ತ ನೋಡುತ್ತಾ ನಾಮಜಪಿಸಬೇಕು. ಕೆಲವೊಮ್ಮೆ ಶ್ರೀಕೃಷ್ಣನ ಚರಣಗಳತ್ತ ನೋಡಿ ಮತ್ತು ಕೆಲವೊಮ್ಮೆ ಶ್ರೀಕೃಷ್ಣನ ನವಿಲುಗರಿಯತ್ತ ನೋಡಿ, ಕೆಲವೊಮ್ಮೆ ಸುದರ್ಶನ ಚಕ್ರದತ್ತ ನೋಡಿ ಮತ್ತು ಕೆಲವೊಮ್ಮೆ ಶ್ರೀಕೃಷ್ಣನ ನೇತ್ರಗಳತ್ತ ನೋಡಿ ನಾಮಜಪ ಮಾಡಬೇಕು.
ಇ. ಸಪ್ತಚಕ್ರಗಳ ಪೈಕಿ ಯಾವ ಚಕ್ರದಲ್ಲಿ ಹೆಚ್ಚು ತೊಂದರೆಯಾಗುತ್ತದೆಯೋ ಆ ಚಕ್ರದ ಮೇಲೆ ನ್ಯಾಸ ಮಾಡಿ ನಾಮಜಪ ಮಾಡಬೇಕು.
ಈ. ಉಪಾಯಗಳ ಸತ್ರದಲ್ಲಿ ಅಧಿಕ ಲಾಭವಾಗುವ ದೃಷ್ಟಿಯಿಂದ ಪ್ರತಿ ೧೦ ರಿಂದ ೧೫ ನಿಮಿಷಕ್ಕೊಮ್ಮೆ ‘ನಮ್ಮ ಮೇಲೆ ಉಪಾಯ ಮಾಡಲು ಸಂತರನ್ನು ನೀಡಿದ್ದಾರೆ’, ಎಂಬುದಕ್ಕಾಗಿ ಶ್ರೀಕೃಷ್ಣ ಮತ್ತು ಪ.ಪೂ.ಡಾಕ್ಟರರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸಬೇಕು.

೨. ಸಭೆ
ಅ. ಸಭೆಯ ದೃಷ್ಟಿಯಿಂದ ಅಧಿಕ ಲಾಭ ವಾಗುವುದಕ್ಕಾಗಿ ಮನಸ್ಸಿನಲ್ಲಿರುವ ಸಂದೇಹ, ಅಡಚಣೆ, ಪ್ರಶ್ನೆಗಳೇನಾದರೂ ಇದ್ದರೆ ಅವುಗಳನ್ನು ಕೇಳಿ ಮಾರ್ಗದರ್ಶನ ಪಡೆಯಬೇಕು.
ಆ. ಸಂತರು ಸತತವಾಗಿ ಅಧ್ಯಾತ್ಮಿಕ ಸ್ತರದಲ್ಲಿ ಹೇಗಿರುತ್ತಾರೆ ಎಂಬುದನ್ನು ನಿರೀಕ್ಷಿಸುತ್ತಿರಬೇಕು.
ಇ. ಯಾವ ಅಂಶಗಳನ್ನು ನಾವು ತಕ್ಷಣ ಕೃತಿಯ ಸ್ತರದಲ್ಲಿ ಪ್ರಯತ್ನವೆಂದು ಆರಂಭಿಸ ಬಲ್ಲೆವು ಮತ್ತು ಯಾವ ಅಂಶಗಳನ್ನು ಅಧ್ಯಯನ ಮಾಡಿ ಪ್ರಯತ್ನಿಸಬೇಕಾಗುವುದು ಎಂಬುದನ್ನು ನೋಡಬೇಕು.
ಈ. ಸಂತರಿಗೆ ಒಂದೇ ವಿಷಯದ ಕುರಿತು ಕೇಳುತ್ತೇವೆ. ಅದರ ಬದಲು ಪ್ರಯತ್ನಿಸುವಾಗ ಯಾವ ಅಡಚಣೆಗಳು ಬರುವವು, ಅದನ್ನು ಅವರಿಗೆ ಕೇಳಿ ಅವರ ಸಹಾಯವನ್ನು ಪಡೆದುಕೊಳ್ಳಬೇಕು. ‘ಕೇವಲ ಕೇಳಬೇಕೆಂದು ಕೇಳುವುದು’, ಹೀಗೆ ಮಾಡದೇ ‘ನಾವು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ’ ಎಂಬುದನ್ನು ಹೇಳಿ ‘ಅದರಲ್ಲಿ ಏನು ಬದಲಾವಣೆಗಳನ್ನು ಮಾಡಬೇಕು’ ಎಂಬುದನ್ನು ಕೇಳಿದರೆ ಮಾತ್ರ ನಾವು ಸಂತರ ಲಾಭ ಪಡೆದುಕೊಳ್ಳಬಹುದು.
ಉ. ‘ವ್ಯಷ್ಟಿ ಸಾಧನೆಯಲ್ಲಿ ನಾವು ಎಲ್ಲಿ ಕಡಿಮೆ ಬೀಳುತ್ತೇವೆ’, ಎಂದು ಗಮನಕ್ಕೆ ಬರಲಿ ಹೀಗೆ ಸಂತರ ಚರಣಗಳಲ್ಲಿ ಪ್ರಾರ್ಥಿಸಬೇಕು ಮತ್ತು ‘ಪ್ರಕ್ರಿಯೆಯಲ್ಲಿ ನಾವೆಲ್ಲಿ ಸಿಲುಕಿಕೊಂಡೆವು’ ಎಂಬುದನ್ನು ಕಂಡು ಹಿಡಿಯಲು ಪ್ರಯತ್ನಿಸಬೇಕು.

೩. ಮಾರ್ಗದರ್ಶನ
ಅ. ಮನಸ್ಸು ಮತ್ತು ಬುದ್ಧಿಯ ಮೇಲಿನ ಕಪ್ಪು ಶಕ್ತಿಯ ಆವರಣವು ನಾಶವಾಗಲಿ. ವಿಷಯವು ಪೂರ್ಣ ಮನವರಿಕೆಯಾಗಲಿ. ಸಂತರ ಮಾರ್ಗದರ್ಶನದ ಅಂಶಗಳು ಚೈತನ್ಯದ ಸ್ತರದಲ್ಲಿ ಗ್ರಹಿಸಲ್ಪಡಲಿ. ಈ ಚೈತನ್ಯದಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿಯ ಮನಸ್ಸಿನ ಸ್ತರದಲ್ಲಿರುವ ತೊಂದರೆಗಳು ದೂರವಾಗಲಿ. ಹೀಗೆ ಸಾಧನೆಯ ದೃಷ್ಟಿಯಿಂದ ವಿವಿಧ ಪ್ರಾರ್ಥನೆ ಮಾಡಬೇಕು.
ಆ. ಮಾರ್ಗದರ್ಶನದಲ್ಲಿ ಉಪಾಯವಾಗುತ್ತಿರುವುದರಿಂದ ತೊಂದರೆಯಾಗಲು ಪ್ರಾರಂಭವಾದರೆ ಯಾವ ಚಕ್ರಕ್ಕೆ ಸಂಬಂಧಿಸಿದ ತೊಂದರೆಯೆನಿಸುತ್ತದೆಯೋ, ಆ ಚಕ್ರದ ಮೇಲೆ ನ್ಯಾಸ ಮಾಡಿ ನಾಮಜಪಿಸಬೇಕು.
ಇ. ಮಾರ್ಗದರ್ಶನದಲ್ಲಿ ಕೇಳಿರುವ ಅಂಶಗಳ ಪೈಕಿ ಯಾವ ಅಂಶಗಳನ್ನು ನಾವು ಸಾಧನೆಯ ದೃಷ್ಟಿಯಿಂದ ಪ್ರಯತ್ನಿಸುವೆವು, ಎಂಬುದನ್ನು ನಿಶ್ಚಯಿಸಿ ಅದರ ಬಗ್ಗೆ ನಿಯಮಿತ ವರದಿ ತನ್ನಲ್ಲಿಯೇ ತೆಗೆದುಕೊಳ್ಳಬೇಕು. ಆಗ ಮಾತ್ರ ‘ನಾವು ಸಂತರ ನಿಜವಾದ ಮಾರ್ಗದರ್ಶನದ ಲಾಭ ಪಡೆದು ಕೊಂಡೆವು’ ಎಂದು ಹೇಳಬಹುದು.
ಈ. ಯಾವುದೆಲ್ಲ ಅಂಶಗಳನ್ನು ನಾವು ಮಾರ್ಗದರ್ಶನದಲ್ಲಿ ಕೇಳಿಕೊಂಡೆವೋ ಅವುಗಳನ್ನು ಒಮ್ಮೆ ಕೇಳಿದ ನಂತರ ಅವುಗಳ ಪರಿಣಾಮವು ನಮ್ಮ ಮನಸ್ಸಿನ ಮೇಲೆ ಕೆಲವು ಗಂಟೆ ಉಳಿಯುತ್ತದೆ. ಸ್ವಲ್ಪ ಸಮಯದ ನಂತರ ಅವನ್ನು ಮರೆತು ಹೋಗು ವೆವು, ಅದಕ್ಕಾಗಿ ನಾವು ಪುನಃ ಪುನಃ ಆ ಅಂಶಗಳನ್ನು ಓದುತ್ತಿರಬೇಕು, ಮೆಲುಕು ಹಾಕುತ್ತಿರಬೇಕು. ಅದರಿಂದ ನಮಗೆ ‘ಏನೆಲ್ಲ ಪ್ರಯತ್ನಗಳನ್ನು ಮಾಡಬೇಕು’ ಎಂಬುದರ ನೆನಪು ಸತತವಾಗಿರುತ್ತದೆ ಮತ್ತು ಪ್ರಯತ್ನ ಮಾಡಲು ಸುಲಭವಾಗುತ್ತದೆ. - ಸೌ. ಶ್ರದ್ಧಾ

No comments:

Post a Comment