‘ಒಮ್ಮೆ ನಾನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಸತ್ಸಂಗದ ಅಧ್ಯಯನ ಮಾಡಲು ಕುಳಿತಿದ್ದೆನು. ನಾನು ‘ಈ ಸತ್ಸಂಗದಲ್ಲಿ ಯಾವ ವಿಷಯ ತೆಗೆದುಕೊಳ್ಳೋಣ?’ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆನು. ಅನಂತರ ತಕ್ಷಣ ನನಗೆ ಕೆಲವು ವಿಷಯಗಳು ಹೊಳೆಯುತ್ತಾ ಹೋದವು. ಅವುಗಳನ್ನು ಮುಂದೆ ಕೊಡುತ್ತಿದ್ದೇನೆ.
೧.ಅಹಂನ ಸೂಕ್ಷ್ಮ ಅಂಶಗಳು ಮಹತ್ವವಾಗಿರುವುದು
ಅಹಂ ಎಂದು ಹೇಳಿದ ತಕ್ಷಣ ನಾವು ಅದರಲ್ಲಿನ ಸ್ಥೂಲ ಅಂಶವನ್ನು ನೋಡುತ್ತೇವೆ; ಆದರೆ ಅದರ ಸೂಕ್ಷ್ಮ ಅಂಶಗಳು ಅಂದರೆ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ಹೆಚ್ಚು ಹಾನಿಕರವಾಗಿರುತ್ತವೆ, ಅವುಗಳು ಹೆಚ್ಚು ಮಹತ್ವದ್ದಾಗಿರುತ್ತವೆ. ನಾವು ಅವುಗಳನ್ನು ದುರ್ಲಕ್ಷಿಸುತ್ತೇವೆ. ಇತರರ ಮನನೋಯಿಸುವುದು, ಮಾತನಾಡುವಾಗ ಹೀಯಾಳಿಸಿ ಮಾತನಾಡುವುದು, ಇವೆಲ್ಲ ‘ಅಹಂ’ನ ಸ್ಥೂಲ ಅಂಶಗಳಾಗಿವೆ.೨. ಸೂಕ್ಷ್ಮ ಅಹಂನ ಬಗ್ಗೆ ಪ್ರಯತ್ನಿಸಿದರೆ ಅಹಂ ಕಡಿಮೆಯಾಗುವುದು
ಪ್ರತಿದಿನ ಇತರ ವ್ಯಕ್ತಿಯ ಮೇಲಿನ ಕೋಪವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ಆ ವ್ಯಕ್ತಿಯೊಂದಿಗೆ ಮಾತನಾಡದಿರುವುದು, ಇವೆಲ್ಲ ‘ಅಹಂ’ನ ಸೂಕ್ಷ್ಮ ಅಂಶಗಳಾಗಿವೆ. ನಾವು ‘ಅಹಂ’ನ ಸ್ಥೂಲ ಅಂಶಗಳ ಬಗ್ಗೆ ಎಷ್ಟೇ ಪ್ರಯತ್ನಿಸಿದರೂ, ಸೂಕ್ಷ್ಮ ಅಂಶಗಳ ವಿಷಯದಲ್ಲಿ ಪ್ರಯತ್ನಿಸದಿದ್ದರೆ, ನಾವು ಇಚ್ಛಿಸಿದಷ್ಟು ಅಹಂ ಕಡಿಮೆಯಾಗುವುದಿಲ್ಲ. ೩.ಸೂಕ್ಷ್ಮ ಅಂಶಗಳ ಬಗ್ಗೆ ಪ್ರಯತ್ನಿಸುವುದರ ಮಹತ್ವ
‘ಅಹಂ’ನ ಸೂಕ್ಷ್ಮ ಅಂಶಗಳು ನಮ್ಮ ಸಾಧನೆಗೆ ಹೆಚ್ಚು ಹಾನಿಕಾರಿಯಾಗಿರುತ್ತವೆ. ಅಹಂ ಎನ್ನುವುದು ಒಂದು ವಿಷಯುಕ್ತ ವೃಕ್ಷವಾಗಿದೆ. ಸ್ಥೂಲ ಅಂಶವೆಂದರೆ ಅದರ ಎಲೆಗಳು ಹಾಗೂ ಹೂವುಗಳಾಗಿವೆ. ಸೂಕ್ಷ್ಮ ಅಂಶವೆಂದರೆ ಅದರ ಬೇರುಗಳೆಂದು ತಿಳಿದುಕೊಳ್ಳಬೇಕು. ವಿಷಯುಕ್ತ ವೃಕ್ಷವನ್ನು ಹೇಗೆ ಬುಡದಿಂದಲೇ ಕಿತ್ತು ಹಾಕಬೇಕಾಗುತ್ತದೆಯೋ ಹಾಗೆಯೇ ಅಹಂನ್ನು ನಾಶ ಗೊಳಿಸಲು ಮೊದಲು ನಾವು ಅದರ ಸೂಕ್ಷ್ಮ ಅಂಶವನ್ನು ನಾಶಗೊಳಿಸುವತ್ತ ಪ್ರಯತ್ನಿಸಬೇಕು. ಸಾಧಕರು ನಿರಂತರ ಅಹಂ ನಿರ್ಮೂಲನೆಗಾಗಿ ಪ್ರಯತ್ನಶೀಲರಾಗಿರಬೇಕು. ೪. ಅಹಂನ ಸ್ಥೂಲ ಮತ್ತು ಸೂಕ್ಷ್ಮ ಅಂಶಗಳು
೫.ಸೂಕ್ಷ್ಮ ಅಂಶಗಳನ್ನು ನಿರ್ಮೂಲನೆಗೊಳಿಸಲು ಸ್ವತಃ ಪ್ರಯತ್ನ ಮಾಡಬೇಕಾಗುವುದು
ನಮ್ಮ ಮುಖದಲ್ಲಿರುವ ಕಪ್ಪು ಕಲೆಯನ್ನು ಸ್ವತಃ ನೋಡಲಿಕ್ಕಾಗುವುದಿಲ್ಲ. ಅದಕ್ಕಾಗಿ ನಾವು ಕನ್ನಡಿಯ ಸಹಾಯ ಪಡೆಯಬೇಕಾಗುತ್ತದೆ, ಅದರಂತೆ ‘ಅಹಂ’ನ ಸ್ಥೂಲ ಅಂಶಗಳು ನಮಗೆ ತಿಳಿಯುತ್ತವೆ ಅಥವಾ ಇತರರು ನಮಗೆ ಸಹಾಯ ಮಾಡಬಹುದು; ಆದರೆ ಸೂಕ್ಷ್ಮ ಅಂಶಗಳ ಸಂದರ್ಭದಲ್ಲಿ ಹಾಗಿರುವುದಿಲ್ಲ. ನಮ್ಮ ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಇತರರು ಯಾರೂ ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ಷ್ಮ ಅಂಶಗಳು ಸಾಧನೆಗೆ ಹಾನಿಕರವಾಗಿವೆ. ೬.ಸೂಕ್ಷ್ಮ ಅಂಶಗಳ ಕೆಲವು ಉದಾಹರಣೆಗಳು
ಅ. ಯಾವುದೇ ಪ್ರಸಂಗದಲ್ಲಿ ಆಂತರಿಕ ಪ್ರತಿಕ್ರಿಯೆ ಬರುವುದು; ಆದರೆ ಅದು ಹೊರಗೆ ಕಾಣಿಸುವುದಿಲ್ಲಆ. ಇತರರನ್ನು ಪ್ರಶಂಸಿಸಿದಾಗ ತನಗೆ ಅವರ ಬಗ್ಗೆ ಮತ್ಸರವೆನಿಸುವುದು
ಇ. ತನಗೆ ಹೊಂದಾಣಿಕೆ ಆಗದಿರುವ ವರೊಂದಿಗೆ ಮಾತನಾಡಬಾರದೆಂದು ಅನಿಸುವುದು
ಈ. ಇತರರಿಗಿಂತ ತನಗೇನಾದರೂ ಒಳ್ಳೆಯದಾದಾಗ ತುಂಬ ನೆಮ್ಮದಿಯಾಗುವುದು, ಉದಾ.ಇತರರಿಗಿಂತ ತನಗೆ ಹೆಚ್ಚು ಸಂಬಳದ ನೌಕರಿ ದೊರೆಯುವುದು
ಉ. ಕಷ್ಟ ಕಾಲದಲ್ಲಿ ಇತರರ ಸಹಾಯ ಪಡೆದುಕೊಳ್ಳದಿರುವುದು; ಏಕೆಂದರೆ ಸಹಾಯ ಪಡೆಯುವುದರಿಂದ ತನ್ನ ಘನತೆಗೆ ಕಡಿಮೆಯೆನಿಸುವುದು
ಊ. ಎದುರಿನ ವ್ಯಕ್ತಿ ಏನಾದರೂ ವಿಷಯ ಹೇಳುತ್ತಿರುವಾಗ, ‘ಅದು ನನಗೆ ತಿಳಿದಿದೆ’, ಎಂದೆನಿಸಿ ಅದನ್ನು ಸರಿಯಾಗಿ ಗಮನಿಸದಿರುವುದು
ಎ. ಇತರರಿಗೆ ಸತತ ಸಲಹೆ ನೀಡುವುದು
ಏ. ಸತತ ಇತರರ ತಪ್ಪಿನ ಬಗ್ಗೆ ವಿಚಾರ ಅಥವಾ ಚಿಂತನೆ ಮಾಡುವುದು
೭. ಅಹಂನ ಹಾನಿಕರ ಅಂಶವನ್ನು ನಾಶಗೊಳಿಸಲು ಮಾಡಬೇಕಾದ ಪ್ರಯತ್ನ
ಅ. ನಾವು ಪ್ರಾಮಾಣಿಕವಾಗಿ ದೇವರಲ್ಲಿ ಪ್ರಾರ್ಥನೆ ಮಾಡಬೇಕು; ಏಕೆಂದರೆ ಇಂತಹ ಅಂಶಗಳನ್ನು ದೇವರು ಮಾತ್ರ ನಾಶಗೊಳಿಸಲು ಸಾಧ್ಯ.ಆ. ಇಂತಹ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡುವುದು ಹಾಗೂ ಅವುಗಳನ್ನು ಪುಸ್ತಕದಲ್ಲಿ ಬರೆಯುವುದು. ಅದು ಪುನರಾವರ್ತನೆಯಾಗಬಾರದೆಂದು ಉಪಾಯಯೋಜನೆ ಮಾಡುವುದು.
ಈ. ‘ಪ್ರೇಮಭಾವ’ ಹೆಚ್ಚಿಸಲು ಪ್ರಯತ್ನಿಸಬೇಕು.
ಉ. ಸೂಕ್ಷ್ಮ ಅಂಶಗಳಲ್ಲಿ ಕೆಟ್ಟಶಕ್ತಿಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಆದ್ದರಿಂದ ನಿಯಮಿತವಾಗಿ ಉಪಾಯ ಮಾಡುವುದು ಅಥವಾ ಇಂತಹ ಅಂಶಗಳು ಅರಿವಾದರೆ ಉಪಾಯಕ್ಕಾಗಿ ಹೆಚ್ಚು ಪ್ರಯತ್ನಿಸುವುದು ಮುಂತಾದ ಕೃತಿ ಮಾಡಬೇಕು.
ಪ್ರಾರ್ಥನೆ: ‘ಪ.ಪೂ. ಡಾಕ್ಟರರೇ, ನಮ್ಮಲ್ಲಿ ಯೋಗ್ಯತೆಯಿಲ್ಲದಿರುವಾಗಲೂ ನೀವು ನಮಗೆ ಅನೇಕ ವಿಷಯಗಳನ್ನು ಸೂಚಿಸುತ್ತೀರಿ. ನೀವು ಸೂಚಿಸಿದ ವಿಷಯಗಳನ್ನು ಆಚರಣೆಯಲ್ಲಿ ತರಲು ನಮ್ಮೆಲ್ಲರಿಗೂ ಸಾಧ್ಯವಾಗಲಿ. ನಾವು ಪ್ರತಿಯೊಂದು ವಿಷಯದಲ್ಲೂ ಅಸಮರ್ಥರಾಗಿದ್ದೇವೆ. ಅದಕ್ಕಾಗಿ ನೀವೇ ನಮಗೆ ಶಕ್ತಿ ನೀಡಿರಿ ಹಾಗೂ ನಮ್ಮಿಂದ ನಿಮ್ಮ ಅಪೇಕ್ಷೆಯಂತೆ ಸಾಧನೆ ಮಾಡಿಸಿಕೊಳ್ಳಿರಿ.’-ಸೌ.ಪೂಜಾ (ಅಧಿಕ ವೈಶಾಖ ಕೃ.ದ್ವಾದಶಿ, ಷಷ್ಠಿ, ಕಲಿಯುಗ ವರ್ಷ ೫೧೧೨ (೧೯.೫. ೨೦೧೦), ಬೆಳಗ್ಗೆ ೭.೩೦)

No comments:
Post a Comment