ಎಸ್.ಎಸ್.ಆರ್.ಎಫ್. ಕಾರ್ಯಾಗಾರದಲ್ಲಿ ಸನಾತನದ ಸಂತ ಪೂ.ರಾಜೇಂದ್ರ ಶಿಂದೆಯವರು ಮಾಡಿದ ಮಾರ್ಗದರ್ಶನ!
ಸನಾತನದ ರಾಮನಾಥಿ ಆಶ್ರಮದಲ್ಲಿ ಮಾರ್ಗಶಿರ ಕೃಷ್ಣ ಚತುರ್ದಶಿ, ಕಲಿಯುಗ ವರ್ಷ ೫೧೧೨ (೩.೧.೨೦೧೧) ರಂದು ಎಸ್.ಎಸ್.ಆರ್.ಎಫ್.ನ ವಿದೇಶಿ ಸಾಧಕರ ಕಾರ್ಯಾಗಾರವನ್ನು ಸನಾತನದ ಸಂತ ಪೂ.ರಾಜೇಂದ್ರ ಶಿಂದೆಯವರು ಉದ್ಘಾಟಿಸಿದರು. ಪೂ.ರಾಜೇಂದ್ರ ಶಿಂದೆಯವರು ಕಾರ್ಯಾಗಾರದ ವೇಳೆ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ. (ಮುಂದುವರಿದ ಭಾಗ , ಕಳೆದ ಭಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: http://kannadasanatanprabhat.blogspot.com/2011/01/blog-post_8942.html )ನಕಾರಾತ್ಮಕ ವಿಚಾರಗಳನ್ನು ತಡೆಗಟ್ಟಲು ವಿವಿಧ ಸ್ತರಗಳಲ್ಲಿ ಪ್ರಯತ್ನಿಸುವುದು ಅವಶ್ಯಕ
ಓರ್ವ ಸಾಧಕಿಯು, ನಾನು ನಕಾರಾತ್ಮಕ ವಿಚಾರಗಳತ್ತ ಹೋಗುತ್ತೇನೆ ಎಂದು ಅನಿಸುತ್ತದೆ ಎಂದಳು. ಇಂತಹ ಸ್ಥಿತಿಯಲ್ಲಿ ಮುಂದಿನ ಪ್ರಯತ್ನಗಳನ್ನು ಮಾಡುವುದು ಅವಶ್ಯವಾಗಿದೆ.ಅ. ಸ್ವಯಂಸೂಚನೆ ಕೊಡುವುದು, ಆಧ್ಯಾತ್ಮಿಕ ಉಪಾಯಗಳನ್ನು ಹೆಚ್ಚಿಸುವುದು, ನಕಾರಾತ್ಮಕ ವಿಚಾರಗಳನ್ನು ತಡೆಗಟ್ಟುವಂತಹ ಸಕಾರಾತ್ಮಕ ವಿಚಾರಗಳನ್ನು ಬರೆಯುವುದು ಮತ್ತು ಇಂತಹ ಸಕಾರಾತ್ಮಕ ವಿಚಾರವನ್ನು ಸತತವಾಗಿ ಇಟ್ಟುಕೊಳ್ಳುವುದು ಇತ್ಯಾದಿ.
ಆ. ಯಾವ ವಿಚಾರವು ಸಾಧನೆಗೆ ವಿರುದ್ಧವಾಗಿದೆಯೋ ಅವು ನಕಾರಾತ್ಮಕವಾಗಿವೆ ಮತ್ತು ಆ ವಿಚಾರಗಳು ನನ್ನದಾಗಿರದೇ ಮಾಂತ್ರಿಕರದ್ದಾಗಿವೆ ಎಂದು ಸತತವಾಗಿ ಅರಿವಿಟ್ಟುಕೊಳ್ಳುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಅದರಲ್ಲಿ ಬಹಳ ಸಮಯ ವ್ಯರ್ಥವಾಗುತ್ತದೆ.
ಇ. ನಾಮಜಪ ಮತ್ತು ಆಧ್ಯಾತ್ಮಿಕ ಉಪಾಯಗಳ ಸಮಯವನ್ನು ಹೆಚ್ಚಿಸಬೇಕು. ಹಾಗೆಯೇ ಮಾಂತ್ರಿಕರು ಸಾಧಕರ ಯಾವುದಾದರೊಂದು ದೋಷ ಉದಾ. ತಪ್ಪು ಸ್ವೀಕರಿಸದಿರುವುದು ಎಂಬ ದೋಷವಿದ್ದಾಗ ಯಾರಾದರೂ ತಪ್ಪು ಹೇಳಿದಾಗ ಪಾತಾಳದಲ್ಲಿನ ಮಾಂತ್ರಿಕರು ನಕಾರಾತ್ಮಕ ವಿಚಾರವನ್ನು ಹೆಚ್ಚಿಸಿ ಸಾಧನೆಯಲ್ಲಿ ವ್ಯತ್ಯಯವನ್ನು ತರುವ ಸಾಧ್ಯತೆಯಿದೆ. ಅದಕ್ಕಾಗಿ ಮುಂದಿನ ಸ್ವಯಂಸೂಚನೆ ನೀಡಬೇಕು.
‘ಯಾವಾಗ ನನಗೆ ನಾನು ಸಾಧನೆಯಲ್ಲಿ ಕೆಳಗೆ ಬರುತ್ತಿದ್ದೇನೆ ಎಂದು ಅನಿಸುತ್ತದೆಯೋ ಆಗ ನನಗೆ ಇದು ನನ್ನ ವಿಚಾರವಲ್ಲ, ಮಾಂತ್ರಿಕರದ್ದಾಗಿದೆ ಮತ್ತು ಅದು ಆಧ್ಯಾತ್ಮಿಕ ತೊಂದರೆಯ ಲಕ್ಷಣವಾಗಿದೆ ಎಂದು ಅರಿವಾಗುವುದು ಮತ್ತು ನಾನು ಆ ವಿಚಾರವನ್ನು ಮನಸ್ಸಿನಿಂದ ತೆಗೆಯುವ ಬಗ್ಗೆ ಪ್ರಾರ್ಥನೆ ಮಾಡುವೆನು ಮತ್ತು ಕೂಡಲೇ ನಾಮಜಪವನ್ನು ಪ್ರಾರಂಭಿಸುವೆನು. ಮನಸ್ಸಿನಲ್ಲಿ ದೇಹದಲ್ಲಿ ಎಲ್ಲೆಡೆ ಸೂಕ್ಷ್ಮದಿಂದ ನಾಮಜಪವನ್ನು ತುಂಬಿಸುವೆನು ಮತ್ತು ನಕಾರಾತ್ಮಕ ವಿಚಾರವನ್ನು ಕಾಗದದ ಮೇಲೆ ಬರೆದು ಅದರ ಸುತ್ತಲೂ ಶ್ರೀಕೃಷ್ಣನ ನಾಮಜಪದ ಸಂರಕ್ಷಣಾ ಕವಚವನ್ನು ಮಾಡಿ ಆ ಕಾಗದವನ್ನು ಉಪಾಯದ ಪೆಟ್ಟಿಗೆಯಲ್ಲಿ ಇಡುವೆನು.’
ಈ. ಮನಸ್ಸಿನಲ್ಲಿ ‘ನಕಾರಾತ್ಮಕ ವಿಚಾರ ಬರುವುದು’ ಎಂಬ ದೋಷದ ಅಧ್ಯಯನ ಮಾಡಿರಿ.
ಓರ್ವ ಸಾಧಕಿಗೆ ಮನಸ್ಸಿನಲ್ಲಿ ಪದೇಪದೇ ಬರುತ್ತಿರುವ ನಕಾರಾತ್ಮಕ ವಿಚಾರಗಳಿಂದ ಅವಳ ಸಾಧನೆಯಲ್ಲಿ ಪರಿಣಾಮವಾಯಿತು.
೧. ತೀವ್ರ ಆಧ್ಯಾತ್ಮಿಕ ತೊಂದರೆಯಿದ್ದಲ್ಲಿ ಮನಸ್ಸಿನಲ್ಲಿ ಬಹಳ ನಕಾರಾತ್ಮಕ ವಿಚಾರಗಳು ಬರುತ್ತವೆ. ಈ ವಿಚಾರಗಳನ್ನು ಸ್ವಭಾವದೋಷ ತಖ್ತೆಯಲ್ಲಿ ಬರೆಯುವುದು ಎಂದರೆ ಸಮಯದ ಅಪವ್ಯಯವೆಂದಾಗುತ್ತದೆ.೨. ಸ್ವಭಾವದೋಷಗಳಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದಲ್ಲಿ ತಖ್ತೆಯಲ್ಲಿ ಬರೆಯುವುದು ಅವಶ್ಯಕವಾಗಿದೆ. ಅದಕ್ಕಾಗಿ ಇತರರ ಸಹಾಯವನ್ನು ಪಡೆಯಬೇಕು.
೩. ಆಧ್ಯಾತ್ಮಿಕ ಉಪಾಯಗಳನ್ನು ಮಾಡಿದ ನಂತರವೂ ಕೆಲವು ವಿಚಾರಗಳು ದೂರವಾಗುತ್ತಿಲ್ಲ ಎಂದಾದರೆ ಅವು ಸ್ವಭಾವ ದೋಷಗಳಿಂದ ಬರುತ್ತಿವೆಯೇ ಎಂದು ಅಧ್ಯಯನ ಮಾಡುವುದು ಅವಶ್ಯವಾಗಿರುತ್ತದೆ. ಉದಾ. ‘ತುಲನೆ ಮಾಡುವುದು’, ‘ಪೂರ್ವಗ್ರಹಪೀಡಿತ’ ಮುಂತಾದ ದೋಷಗಳಿಂದ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರಗಳು.
೪. ಕೆಲವು ಜನರಲ್ಲಿ ತೀವ್ರ ಸ್ವಭಾವ ದೋಷ ಇದ್ದಲ್ಲಿ ಅವರು ಮೊದಲು ಸಕಾರಾತ್ಮಕ ವಿಚಾರ ಮಾಡುವುದು ಅವಶ್ಯವಾಗಿದೆ. ಉದಾ.ಮಾಂತ್ರಿಕನು ನನ್ನನ್ನು ಎತ್ತರದ ಕಟ್ಟಡದಿಂದ ಕೆಳಗೆ ನೂಕುತ್ತಿದ್ದಾನೆ ಎಂಬ ವಿಚಾರ ಬರುತ್ತಿದ್ದಲ್ಲಿ ಅವನು ಬೇಕಾದರೆ ನೂಕಲಿ, ಶ್ರೀಕೃಷ್ಣನು ನನ್ನನ್ನು ತನ್ನ ಕೈಯಲ್ಲಿ ಹಿಡಿಯುವವನಿದ್ದಾನೆ ಎಂಬ ಸಕಾರಾತ್ಮಕ ವಿಚಾರ ಮಾಡಬೇಕು. ಈ ನಕಾರಾತ್ಮಕ ವಿಚಾರಗಳೊಂದಿಗೆ ಭಾವದ ಸ್ತರದಲ್ಲಿ ಹೋರಾಡಬೇಕು.
೫. ಸಾಧನೆಯ ಧ್ಯೇಯವೇ ಸಾಧಕ ರಿಗೆ ಸಾಧನೆಗಾಗಿ ಪ್ರಯತ್ನಿಸಲು ಪ್ರೇರಣೆ!: ಸಾಧಕರು ಸಾಧನೆಯಲ್ಲಿ ಧ್ಯೇಯವನ್ನು ನಿರ್ಧರಿಸುವುದು ಅವಶ್ಯವಾಗಿರುತ್ತದೆ ಮತ್ತು ಅದನ್ನು ನಿರ್ಧರಿಸುವಾಗ ಮುಂದಿನ ವಿಷಯಗಳನ್ನು ಗಮನದಲ್ಲಿರಿಸುವುದು ಅವಶ್ಯವಾಗಿದೆ.
ಅ. ದಿಕ್ಕಿಲ್ಲದ ಸಾಧನೆಯಿಂದ ದಾರಿ ತಪ್ಪುವ (ಪ್ರಗತಿ ಆಗದಿರುವ) ಸಾಧ್ಯತೆಯಿರುತ್ತದೆ.
ಆ. ಧ್ಯೇಯ ನಿರ್ಧರಿಸದ ವ್ಯಕ್ತಿಯು ಪ್ರಯತ್ನಗಳ ವಿಷಯದಲ್ಲಿ ನಿಷ್ಕ್ರಿಯನಾಗಿರುತ್ತಾನೆ. ಹಾಗೆಯೇ ಬರೀ ಚಿಕ್ಕದಾದ ಹಾಗೂ ಸಾಧಿಸಲು ಆಗುವಂತಹ ಧ್ಯೇಯವನ್ನು ತೆಗೆದುಕೊಂಡರೆ ಸಾಧಕರಿಗೆ ಅದರಿಂದ ಪ್ರಯತ್ನಿಸಲು ಪ್ರೇರಣೆಯು ಸಿಗುವುದಿಲ್ಲ.
ಇ. ಚಿಕ್ಕಂದಿನಿಂದಲೂ ನಾವು ಏನಾದರೊಂದು ಧ್ಯೇಯವನ್ನಿಟ್ಟುಕೊಂಡು ಪ್ರಯತ್ನ ಮಾಡುತ್ತಿರುತ್ತೇವೆ. ಆ ಧ್ಯೇಯಕ್ಕಾಗಿ ಸತತವಾಗಿ ನಮಗೆ ನಾನು ಮಾಡುತ್ತಿರುವುದು ಯೋಗ್ಯವೋ ಅಯೋಗ್ಯವೋ ಎಂಬುದರ ಅರಿವನ್ನು ಮಾಡಿಕೊಡುತ್ತಿರುತ್ತದೆ.
ಈ. ಧ್ಯೇಯ ನಿರ್ಧರಿಸಿ ಸಾಧನೆಯನ್ನು ಮಾಡಿದರೆ ಮತ್ತು ಆ ಸಂದರ್ಭದಲ್ಲಿ ಚಿಕ್ಕಚಿಕ್ಕ ಧ್ಯೇಯವನ್ನು ತೆಗೆದುಕೊಂಡು ಪ್ರಯತ್ನ ಮಾಡಿದರೆ ಸತತ ಏನಾದರೊಂದು ಮಾಡಲು ಪ್ರೇರಣೆ ಸಿಗುತ್ತಿರುತ್ತದೆ. ಧ್ಯೇಯವು ಎಷ್ಟು ಉಚ್ಚವಾಗಿರುತ್ತದೆಯೋ ಅಷ್ಟೇ ಹೆಚ್ಚು ಹೆಚ್ಚು ಪ್ರಯತ್ನಿಸುವ ಪ್ರೇರಣೆಯು ಅದರಿಂದ ಸಿಗುತ್ತಿರುತ್ತದೆ.
ಉ. ಅದೇರೀತಿ ನಮಗೆ ಒತ್ತಡವಾಗುವಂತಹ (ಭಾರವೆನಿಸುವ) ಮತ್ತು ನಮ್ಮ ಪ್ರಯತ್ನಗಳಿಗೆ ಅಡ್ಡಿಯಾಗುವಂತಹ ಧ್ಯೇಯವನ್ನು ಸಹ ನಿರ್ಧರಿಸಬಾರದು. ಅದು ನಮ್ಮ ಕ್ಷಮತೆಯ, ಹಿಡಿತಕ್ಕಿಂತ ಸ್ವಲ್ಪ ದೊಡ್ಡದಾಗಿ ರಬೇಕು. ಇದೇ ಅಂಶವು ಇತರ ಕಡೆಗಳಲ್ಲಿಯೂ ಉದಾ.ಸೇವೆಗಳಿಗೂ ಅನ್ವಯಿಸುತ್ತದೆ.
ನಾಮಜಪವನ್ನು ಸಂಖ್ಯಾತ್ಮಕ ಮತ್ತು ಗುಣಾತ್ಮಕವಾಗಿ ಹೇಗೆ ಹೆಚ್ಚಿಸ ಬೇಕು?
ಅ. ನಾಮಜಪದ ವಿಷಯದಲ್ಲಿ ಹೆಚ್ಚು ಹೆಚ್ಚು ಪ್ರೇಮ ಮತ್ತು ಭಕ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಯತ್ನಿಸಬೇಕುಆ. ಪ್ರಸ್ತುತ ನಾವು ಒಂದು ಜಾಗದಲ್ಲಿ ಕುಳಿತು ನಾಮಜಪಿಸುವುದಿಲ್ಲ. ಆಗ ಉಪಲಬ್ಧವಿರುವ ಎಲ್ಲ ಸಮಯವನ್ನು ನಾಮಜಪಕ್ಕಾಗಿ ಹೇಗೆ ಉಪಯೋಗಿಸಬಹುದು ಎಂದು ಪ್ರಯತ್ನಿಸುವುದು ಉದಾ. ಹಲ್ಲುಜ್ಜುವುದು ಇತ್ಯಾದಿ ವೈಯಕ್ತಿಕ ಕರ್ಮಗಳನ್ನು ಮಾಡುವಾಗ ನಾಮಜಪ ಮಾಡುವುದು, ಆಚೆ ಈಚೆ ಅಡ್ಡಾಡುವಾಗ ನಾಮಜಪ ಮಾಡುವುದು ಇತ್ಯಾದಿ.
ಇ. ಸೇವೆಯನ್ನು ಭಾವಪೂರ್ಣ ಹಾಗೂ ಪರಿಪೂರ್ಣ ಮಾಡುವವರ ನಾಮಜಪದ ಭಾರವನ್ನು ಈಶ್ವರನೇ ವಹಿಸುತ್ತಾನೆ: ನಾವು ಸೇವೆಯನ್ನು ಭಾವಪೂರ್ಣ ಹಾಗೂ ಪರಿಪೂರ್ಣ ಮಾಡುತ್ತಿರುವಾಗ ಈಶ್ವರನೇ ನಮ್ಮ ನಾಮಜಪದ ಭಾರವನ್ನು ವಹಿಸುತ್ತಾನೆ. ಇದರಲ್ಲಿ ಸಾಧಕರ ನಾಮಜಪವು ಸೂಕ್ಷ್ಮವಾಗುತ್ತದೆ ಮತ್ತು ಅವನಿಗೆ ಕ್ರಮೇಣ ತನ್ನಿಂದತಾನೇ ಒಳಗಿನಿಂದ ನಾಮಜಪ ಆಗಲು ಪ್ರಾರಂಭವಾಗುತ್ತದೆ. ಇದರಿಂದ ಎಲ್ಲ ಸಾಧಕರು ತಮ್ಮ ಸೇವೆಯನ್ನು ಇನ್ನೂ ಹೆಚ್ಚು ಭಾವಪೂರ್ಣ ಮತ್ತು ಪರಿಪೂರ್ಣಗೊಳಿಸಲು ಪ್ರಯತ್ನಿಸಬೇಕು.
ಯಾರಾದರೊಬ್ಬರ ಆಧ್ಯಾತ್ಮಿಕ ಮಟ್ಟವು ಅನೇಕ ಘಟಕಗಳ ಮೇಲೆ ಅವಲಂಬಿಸಿರುತ್ತದೆ
ಅ. ಮಟ್ಟವು ಹೆಚ್ಚಾಗಬೇಕಾದರೆ ಹೆಚ್ಚು ಹೆಚ್ಚು ವ್ಯಾಪಕರಾಗಬೇಕಾಗುತ್ತದೆ.ಆ. ಪ್ರಸಂಗಾನುಸಾರ ಶರಣಾಗತ ಭಾವವಿರಬೇಕು.
ಇ. ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವುದರಿಂದ ಗುರುಕೃಪೆ ಮತ್ತು ಆನಂದ ಲಭಿಸುತ್ತದೆ.
ಈ. ಧ್ಯೇಯವು ಸಾಧ್ಯವಾಗಲು ಸಾಧನೆಯ ಪ್ರತಿಯೊಂದು ಘಟಕದ ಮೇಲೆ ವಿಶೇಷ ಗಮನ ಹರಿಸುವುದು ಅವಶ್ಯವಾಗಿರುತ್ತದೆ.
ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಕಾಲಾನುಸಾರ ಮಹತ್ವದ ಅಂಶಗಳು
ಅ. ಅಧ್ಯಾತ್ಮದಲ್ಲಿ ಸತತವಾಗಿ ಪ್ರಯತ್ನ ಮಾಡುತ್ತಿರಬೇಕಾಗುತ್ತದೆ.ಆ. ಯಾರಾದರೊಬ್ಬರಿಗೆ ಪ್ರಯತ್ನಗಳನ್ನು ಹೇಗೆ ಪ್ರಾರಂಭಿಸಬೇಕು ಎಂದು ಗಮನಕ್ಕೆ ಬರುತ್ತಿಲ್ಲವೆಂದಾದರೆ ಆಗ ಅವನು ಭಾವಜಾಗೃತಿಯ ಕುರಿತಾಗಿ ಪ್ರಯತ್ನಗಳನ್ನು ಪ್ರಾರಂಭಿಸಬೇಕು.
ಇ. ಈಶ್ವರನಿಗೆ ನಮ್ಮ ಪ್ರಯತ್ನಗಳು ಬೇಕಾಗಿರುತ್ತವೆ. ಧ್ಯೇಯಪ್ರಾಪ್ತಿಗಾಗಿ ನಮ್ಮಿಂದ ಎಷ್ಟು ಪ್ರಯತ್ನಗಳಾಗುತ್ತವೆ ಎಂದು ಪ್ರತಿಯೊಬ್ಬರೂ ನೋಡಿಕೊಳ್ಳಬೇಕು.
ಈ. ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಬೇಕೆಂಬ ಇಚ್ಛೆಯಿರುವವರು ಅಷ್ಟಾಂಗ ಸಾಧನೆಗಾಗಿ ಪ್ರಯತ್ನ ಮಾಡುವುದು ಅವಶ್ಯವಾಗಿದೆ.
ಸಾಧಕರು ಈಶ್ವರಪ್ರಾಪ್ತಿಯ ತಳಮಳವನ್ನು ಹೆಚ್ಚಿಸುತ್ತಾ ತಾತ್ತ್ವಿಕ ಜ್ಞಾನ (ಮಾತು) ಮತ್ತು ಕೃತಿ (ಆಚರಣೆ) ಇವುಗಳ ನಡುವಿನ ಅಂತರವನ್ನು ನಾಶಗೊಳಿಸುವುದು ಮಹತ್ವದ್ದಾಗಿದೆ
ಆಧ್ಯಾತ್ಮಿಕ ಉನ್ನತಿಯಾಗಲು ಅನೇಕ ಗುಣಗಳ ಅವಶ್ಯಕತೆಯಿರುತ್ತದೆ. ಅವುಗಳಲ್ಲಿ ಮಹತ್ವದ ಗುಣವೇನೆಂದರೆ ಈಶ್ವರಪ್ರಾಪ್ತಿಯ ತಳಮಳ. ಯಾರಾದರೊಬ್ಬ ಸಾಧಕನಿಗೆ ಈಶ್ವರಪ್ರಾಪ್ತಿ ಯಾಗಬೇಕೆಂಬ ತಳಮಳ ಕಡಿಮೆಯಿದ್ದಲ್ಲಿ ಅವನಿಂದ ಸೇವೆಯಾಗುವುದಿಲ್ಲ, ಕೇವಲ ಕಾರ್ಯವಾಗುತ್ತದೆ. ಸಾಧನೆಯ ಎಲ್ಲ ಅಂಗಗಳು ಪರಸ್ಪರ ಜೋಡಿಸಲ್ಪಟ್ಟಿರುತ್ತವೆ. ಈಶ್ವರಪ್ರಾಪ್ತಿಯಾಗ ಬೇಕೆಂಬ ತಳಮಳ ಕಡಿಮೆಯಿದ್ದಲ್ಲಿ ಮುಂದಿನ ವಿಷಯಗಳತ್ತ ಗಮನಹರಿಸಬೇಕು.ಅ. ಸೇವೆಯನ್ನು ಮಾಡುತ್ತಿರುವಾಗ ನಾನು ಈಶ್ವರನ ಸೇವೆಯನ್ನು ಮಾಡುತ್ತಿದ್ದೇನೆ ಎಂಬ ಭಾವವಿರುತ್ತದೆಯೋ ಇಲ್ಲವೋ ಎಂಬುದರ ಕಡೆಗೆ ಗಮನ ವಿರುತ್ತದೆ.
ಆ. ಬುದ್ಧಿಯ ಅಡಚಣೆಯಿರುವುದರಿಂದ ಸಾಧನೆಯು ಕುಂಠಿತವಾಗುತ್ತದೆ.
ಇ. ಸಾಧನೆಗೆ ಸಂಬಂಧಿತ ಅನೇಕ ಅಂಶಗಳ ತಾತ್ತ್ವಿಕ ಮಾಹಿತಿಯಿರುತ್ತದೆ. ಆದರೆ ಪ್ರತ್ಯಕ್ಷ ಕೃತಿಯಲ್ಲಿ (ಆಚರಣೆಯಲ್ಲಿ) ತರಲು ವಿಫಲರಾಗುತ್ತೇವೆ. ತಾತ್ತ್ವಿಕ ಜ್ಞಾನ (ಮಾತು) ಮತ್ತು ಕೃತಿ (ಆಚರಣೆ) ಇವುಗಳ ನಡುವಿನ ಅಂತರವನ್ನು ದೂರಗೊಳಿಸಲು ಪ್ರಯತ್ನಿಸುತ್ತಿರಬೇಕಾಗುತ್ತದೆ. ವಿದೇಶದಲ್ಲಿರುವ ಸಾಧಕರಿಗೆ ಭಾರತದಲ್ಲಿರುವ ಸಾಧಕರಿಗಿಂತ ಸಾಧನೆಯ ಬಗ್ಗೆ ಹೆಚ್ಚಿನ ತಾತ್ತ್ವಿಕ ಮಾಹಿತಿಯಿದೆ. ಆದರೆ ಅದಕ್ಕೆ ಕೇವಲ ಶೇ.೨ರಷ್ಟೇ ಮಹತ್ವವಿದೆ. ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾಯೋಗಿಕ ಭಾಗಕ್ಕೆ (ತತ್ತ್ವವನ್ನು ಆಚರಣೆಗೆ ತರಲು) ಶೇ.೯೮ರಷ್ಟು ಮಹತ್ವವಿದೆ. ತಾತ್ತ್ವಿಕ ಜ್ಞಾನವು ಬುದ್ಧಿಯ ನಿಶ್ಚಯವಾಗುವುದರ ತನಕ ಮಾತ್ರ ಮಹತ್ವದ್ದಾಗಿರುತ್ತದೆ ಎಂಬುದನ್ನು ಗಮನದಲ್ಲಿರಿಸಬೇಕು.
ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ತಖ್ತೆಯ ಅಧ್ಯಯನ ಮಾಡುವುದು
ಅ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನದ ಆದರ್ಶ ಪ್ರಕ್ರಿಯೆ ನಡೆಸುವ ಸಾಧಕರ ಮಾರ್ಗದರ್ಶನ ಪಡೆದು ಕೊಳ್ಳಬೇಕು.
ಆ. ತಪ್ಪು ಘಟಿಸಿದೊಡನೆ ನೋಂದಣಿ ಮಾಡಿಡುವುದು ಅವಶ್ಯಕವಾಗಿದೆ: ತಪ್ಪುಗಳನ್ನು ಬರೆಯದಿರುವುದು ಗಂಭೀರ ವಿಷಯವಾಗಿದೆ. ತಪ್ಪಾದೊಡನೆ ಅದನ್ನು ಬರೆದಿಟ್ಟರೆ ಅಂತರ್ಮನಕ್ಕೆ ತಪ್ಪುಗಳ ಬಗ್ಗೆ ಕೂಡಲೇ ಎಚ್ಚರಿಕೆ ಮೂಡುತ್ತದೆ. ಹೀಗೆ ಮಾಡುವ ಸಾಧಕರ ಸ್ವಭಾವದೋಷಗಳು ಕಡಿಮೆ ಕಾಲಾವಧಿಯಲ್ಲಿ ನಾಶವಾಗುತ್ತವೆ. ಸತ್ಸಂಗ ಅಥವಾ ಸಭೆಗಳ ಸಮಯದಲ್ಲಿಯೂ ನಮ್ಮಿಂದಾದ ತಪ್ಪುಗಳನ್ನು ಕೂಡಲೇ ಬರೆಯಬೇಕು.
ಇ. ತಖ್ತೆಯನ್ನು ಬರೆಯುವಾಗ ಕೈ (ಶರೀರ) ಮನಸ್ಸು ಮತ್ತು ಬುದ್ಧಿ ಈ ಮೂರೂ ಪಾಲ್ಗೊಳ್ಳುವುದರಿಂದ ಅವುಗಳ ಸಾಧನೆಯಾಗುತ್ತದೆ.
ಈ. ಸ್ವಭಾವದೋಷ ನಿರ್ಮೂಲನ ಎಂದರೆ ಮಾನಸಿಕ ಒತ್ತಡದ ನಿರ್ಮೂಲನ!: ಸ್ವಭಾವದೋಷಗಳ ನೆನಪಾದೊಡನೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಯಾವುದಾದರೊಂದು ವಿಷಯವನ್ನು ನೆನಪಿಟ್ಟುಕೊಳ್ಳಲು ಇಂತಹ ಸ್ಥಿತಿಯಲ್ಲಿ ಮನಸ್ಸಿನ ಶಕ್ತಿ ಹೆಚ್ಚು ಖರ್ಚಾಗುತ್ತದೆ. ಒತ್ತಡದಿಂದ ಮನಸ್ಸಿನ ಶಕ್ತಿಯು ವ್ಯಯವಾಗುವ ವೇಗವು ಹೆಚ್ಚಾಗಿರುತ್ತದೆ.
ಆ. ತಪ್ಪು ಘಟಿಸಿದೊಡನೆ ನೋಂದಣಿ ಮಾಡಿಡುವುದು ಅವಶ್ಯಕವಾಗಿದೆ: ತಪ್ಪುಗಳನ್ನು ಬರೆಯದಿರುವುದು ಗಂಭೀರ ವಿಷಯವಾಗಿದೆ. ತಪ್ಪಾದೊಡನೆ ಅದನ್ನು ಬರೆದಿಟ್ಟರೆ ಅಂತರ್ಮನಕ್ಕೆ ತಪ್ಪುಗಳ ಬಗ್ಗೆ ಕೂಡಲೇ ಎಚ್ಚರಿಕೆ ಮೂಡುತ್ತದೆ. ಹೀಗೆ ಮಾಡುವ ಸಾಧಕರ ಸ್ವಭಾವದೋಷಗಳು ಕಡಿಮೆ ಕಾಲಾವಧಿಯಲ್ಲಿ ನಾಶವಾಗುತ್ತವೆ. ಸತ್ಸಂಗ ಅಥವಾ ಸಭೆಗಳ ಸಮಯದಲ್ಲಿಯೂ ನಮ್ಮಿಂದಾದ ತಪ್ಪುಗಳನ್ನು ಕೂಡಲೇ ಬರೆಯಬೇಕು.
ಇ. ತಖ್ತೆಯನ್ನು ಬರೆಯುವಾಗ ಕೈ (ಶರೀರ) ಮನಸ್ಸು ಮತ್ತು ಬುದ್ಧಿ ಈ ಮೂರೂ ಪಾಲ್ಗೊಳ್ಳುವುದರಿಂದ ಅವುಗಳ ಸಾಧನೆಯಾಗುತ್ತದೆ.
ಈ. ಸ್ವಭಾವದೋಷ ನಿರ್ಮೂಲನ ಎಂದರೆ ಮಾನಸಿಕ ಒತ್ತಡದ ನಿರ್ಮೂಲನ!: ಸ್ವಭಾವದೋಷಗಳ ನೆನಪಾದೊಡನೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಯಾವುದಾದರೊಂದು ವಿಷಯವನ್ನು ನೆನಪಿಟ್ಟುಕೊಳ್ಳಲು ಇಂತಹ ಸ್ಥಿತಿಯಲ್ಲಿ ಮನಸ್ಸಿನ ಶಕ್ತಿ ಹೆಚ್ಚು ಖರ್ಚಾಗುತ್ತದೆ. ಒತ್ತಡದಿಂದ ಮನಸ್ಸಿನ ಶಕ್ತಿಯು ವ್ಯಯವಾಗುವ ವೇಗವು ಹೆಚ್ಚಾಗಿರುತ್ತದೆ.
ಉ. ಮನಸ್ಸಿನ ಶಕ್ತಿಯನ್ನು ಉಳಿತಾಯ ಮಾಡಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನದ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಮಾಡುವುದು ಅವಶ್ಯಕ : ಎರಡು ಗಂಟೆಗಳ ಶಾರೀರಿಕ ಸೇವೆ ಮತ್ತು ೫ ನಿಮಿಷಗಳ ಅನಗತ್ಯ ವಿಚಾರ ಇವುಗಳಿಗಾಗಿ ಖರ್ಚಾಗುವ ಶಕ್ತಿಯು ಸಮಾನವಾಗಿರುತ್ತದೆ. ವಿಶ್ರಾಂತಿಯಿಂದ ಶಾರೀರಿಕ ಆಯಾಸ ದೂರವಾಗುತ್ತದೆ. ಆದರೆ ಮನಸ್ಸಿನ ವಿಷಯದಲ್ಲಿ ಹಾಗಿರುವುದಿಲ್ಲ. ಪದೇಪದೇ ಅನಗತ್ಯ ವಿಚಾರ ಮಾಡುವುದ ರಿಂದ ನಮ್ಮ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ ಹಾಗೂ ಮನಸ್ಸಿನ ರಜ-ತಮವೂ ಹೆಚ್ಚಾಗುತ್ತದೆ. ಇದರಿಂದ ಸಾಧನೆಯನ್ನು ಮಾಡಿ ನಮ್ಮಲ್ಲಿ ಹೆಚ್ಚಿಸಿಕೊಂಡ ಸತ್ತ್ವಗುಣವು ಕಡಿಮೆಯಾಗುತ್ತದೆ. ಅನಂತರ ಮನಸ್ಸನ್ನು ಏಕಾಗ್ರಗೊಳಿಸಲು ಕಠಿಣವಾಗುತ್ತದೆ. ಪರಿಣಾಮವಾಗಿ ಆಯಾಸವಾಗುವುದು, ನಿದ್ರೆ ಮುಂತಾದ ತೊಂದರೆಗಳಾಗುತ್ತವೆ. ಹಾಗಾಗಿ ಮನಸ್ಸಿನ ಶಕ್ತಿಯನ್ನು ಉಳಿಸಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ಇನ್ನೂ ಹೆಚ್ಚು ಕಟ್ಟುನಿಟ್ಟಾಗಿ ಮತ್ತು ಆಗಿಂದಾಗ ಬರೆಯಲೇಬೇಕು. ಇಲ್ಲವಾದರೆ ಶಕ್ತಿ ಸಿಗುವ ಬದಲು ಕಳೆದು ಹೋಗುತ್ತದೆ. (ಮುಂದುವರಿಯುವುದು)
No comments:
Post a Comment