ಎನ್‌ಸಿಇಆರ್‌ಟಿ’ಯ ಪಠ್ಯಕ್ರಮದ ಬಗ್ಗೆ ಸರಕಾರದ ಕಿವಿಹಿಂಡಿದ ಹಿರಿಯ ಲೇಖಕ....

ಅತ್ಯಾಚಾರಿ ಸುಲ್ತಾನರನ್ನು ‘ರಾಷ್ಟ್ರವೀರ’ರೆಂದು ಗೌರವಿಸುವುದು ಸಮಾಜಹಿತ ವಿರೋಧಿ ! ‘ಎನ್‌ಸಿಇಆರ್‌ಟಿ’ಯ ಪಠ್ಯಕ್ರಮದ ಬಗ್ಗೆ ಸರಕಾರದ ಕಿವಿಹಿಂಡಿದ ಹಿರಿಯ ಲೇಖಕ ಡಾ. ಎಸ್.ಎಲ್. ಭೈರಪ್ಪ !

ಕನ್ನಡ ಭಾಷೆಯ ಖ್ಯಾತ ಹಾಗೂ ವಾಚಕಪ್ರಿಯ ಲೇಖಕರಾದ ಡಾ. ಎಸ್.ಎಲ್. ಭೈರಪ್ಪನವರು ಇಂದಿನ ತನಕ ಮತಾಂತರ, ಜಾತಿವ್ಯವಸ್ಥೆ, ಭಾರತದ ಇತಿಹಾಸ ಮುಂತಾದ ವಿವಿಧ ವಿಷಯಗಳ ಮೇಲೆ ಸಮಾಂತರವಾಗಿ ಹಾಗೂ ಪ್ರಾಮಾಣಿಕವಾಗಿ ಲೇಖನಗಳನ್ನು ಬರೆದಿದ್ದಾರೆ. ಇತಿಹಾಸವನ್ನು ತಿರುಚುವ ಹಾಗೂ ಹಿಂದೂ ಧರ್ಮವನ್ನು ಅವಮಾನಗೊಳಿಸುವುದಕ್ಕಾಗಿ ಪ್ರಯತ್ನಿಸುತ್ತಿರುವ ರಾಜಕಾರಣವನ್ನು ನೋಡುವಾಗ ಇಂತಹ ಹಿರಿಯ ಲೇಖಕರ ಅಭಿಪ್ರಾಯವನ್ನು ಕೇಳುವ ಅವಶ್ಯಕತೆಯಿದೆ ಹಾಗೂ ಕಾಲಕ್ಕನುಸಾರ ಅದು ಯೋಗ್ಯವಾಗಿದೆ. ಡಾ. ಭೈರಪ್ಪನವರು ಹೇಳಿದ ಕೆಲವು ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇವೆ. ಇದರಿಂದಾದರೂ ಪುರೋಗಾಮಿ ರಾಜಕಾರಣಿಗಳ ತಲೆಗೆ ಬೆಳಕು ಚೆಲ್ಲುವುದೋ ನೋಡೋಣ.
ಇತಿಹಾಸವನ್ನು ತಿರುಚುವುದು ಬೌದ್ಧಿಕ ಅನೀತಿ
ಏನಾದರೊಂದು ಉದ್ದೇಶ ಇಟ್ಟುಕೊಂಡು ಇತಿಹಾಸವನ್ನು ಬರೆಯುವುದು ಇತಿಹಾಸದ ದುರುಪಯೋಗವೇ ಆಗಿದೆ. ಅಭಿಮಾನದ ದೃಷ್ಟಿಯಿಂದಲೇ ಇತಿಹಾಸವನ್ನು ನೋಡುವುದು, ನಿರ್ದಿಷ್ಟ ರಾಜಕೀಯ ಹಾಗೂ ಇತರ ವಿಚಾರಗಳ ಪುಷ್ಟೀಕರಣಕ್ಕಾಗಿ ಇತಿಹಾಸವನ್ನು ಬದಲಾಯಿಸುವುದು ಅಥವಾ ಇತಿಹಾಸವನ್ನು ತಿರುಚುವುದು ಇದನ್ನು ನಾನು ಬೌದ್ಧಿಕ ಅನೀತಿ ಎನ್ನುತ್ತೇನೆ. ಸಿದ್ಧಾಂತ, ಚಳುವಳಿ, ಆದರ್ಶ ಇತ್ಯಾದಿಗಳಿಂದ ತನ್ನನ್ನು ಬಿಡಿಸಿಕೊಂಡು ನಡೆದಿರುವ ಘಟನೆಗಳನ್ನು ನೋಡುವುದೆಂದರೆ ಇತಿಹಾಸವನ್ನು ಅರಿತುಕೊಳ್ಳುವುದು. ರಾಷ್ಟ್ರಿಯ ಶೈಕ್ಷಣಿಕ ಹಾಗೂ ಸಂಶೋಧನಾ ಪರಿಷತ್ತು (ಎನ್ ಸಿಇಆರ್‌ಟಿ) ಏಳನೆಯ ತರಗತಿಗಾಗಿ ತಯಾರಿಸಿದ ‘ಹಮಾರೆ ಅತೀತ’ ಎಂಬ ಇತಿಹಾಸದ ಹಿಂದಿ ಪುಸ್ತಕವನ್ನೇ ನೋಡಿ. ಶಿವಾಜಿ ಮಹಾರಾಜರು ಹಾಗೂ ರಾಣಾ ಪ್ರತಾಪ ಇವರ ವಿಷಯದಲ್ಲಿ ಈ ಪುಸ್ತಕದಲ್ಲಿ ಅನುಕ್ರಮವಾಗಿ ಮೂರು ಸಾಲು ಮತ್ತು ಶೂನ್ಯ ಸಾಲುಗಳಿವೆ. ಔರಂಗಜೇಬನ ಚಿತ್ರ ಇದೆ; ಆದರೆ ‘ಎನ್‌ಸಿಇಆರ್‌ಟಿ’ಗೆ ಶಿವಾಜಿ ಮಹಾರಾಜರ ಚಿತ್ರ ಸಿಗಲಿಲ್ಲ ! ದೆಹಲಿಯಲ್ಲಿನ ಒಂದು ಮಾರ್ಗಕ್ಕೆ ಔರಂಗಜೇಬ ಮತ್ತು ಇನ್ನೊಂದು ಮಾರ್ಗಕ್ಕೆ ಅಕ್ಬರ ಇವರ ಹೆಸರುಗಳಿವೆ; ಆದರೆ ಪ್ರಾತಃಸ್ಮರಣೀಯ ವ್ಯಕ್ತಿಗಳ ಹೆಸರುಗಳಲ್ಲಿ ಔರಂಗಜೇಬನ ಹೆಸರೂ ಇರಬೇಕೆಂದರೆ ಇದರ ಅರ್ಥವೇನು ? ಇದರಿಂದ ಸ್ವತಂತ್ರ ಭಾರತದ ಯಾವ ಭೂಮಿಕೆ ಸ್ಪಷ್ಟವಾಗುತ್ತದೆ ? ಇತಿಹಾಸ ಕಾಲದ ಎಲ್ಲ ವ್ಯಕ್ತಿಗಳನ್ನು ನಾವು ಸಮಾನ ದೃಷ್ಟಿಯಿಂದ ನೋಡುತ್ತೇವೆ. ನಾವು ಅದನ್ನು ಮತಪೆಟ್ಟಿಗೆಯ ಹಿಂದೆ ಅಡಗಿರುವ ಉದ್ದೇಶದಿಂದ ಸ್ವೀಕರಿಸಿದ್ದೇವೆಯೇ? ಔರಂಗಜೇಬನೊಬ್ಬ ಐತಿಹಾಸಿಕ ವಾಸ್ತವಿಕತೆಯಾಗಿದೆ. ಅವನನ್ನು ಇತಿಹಾಸದಿಂದ ಅಳಿಸಿ ಹಾಕಲು ನಮಗೆ ಸಾಧ್ಯವಿದ್ದರೆ, ಅವನ ಕುಕೃತ್ಯಗಳನ್ನು ಪಠ್ಯಕ್ರಮದಿಂದ ತೆಗೆದು ಹಾಕಲು ಸಾಧ್ಯವಿರಲಿಲ್ಲವೇ ? ಸುಲ್ತಾನ ಮತ್ತು ಬಾದಶಾಹರ ಅತ್ಯಂತ ಅತ್ಯಾಚಾರಗಳ ಪುರಾವೆಗಳು ದೊರಕಿರುವಾಗ ಅವರನ್ನು ‘ರಾಷ್ಟ್ರವೀರ’ರೆಂದು ಗೌರವಿಸುವುದು ನನಗೆ ಅತೀ ಅಪ್ರಾಮಾಣಿಕ ಹಾಗೂ ಸಮಾಜಹಿತ ವಿರೋಧಿ ಎಂದೆನಿಸುತ್ತದೆ.
ಹೌದು ! ನಾನು ಹಿಂದೂ ಎಂಬ ಬಗ್ಗೆ ನನಗೆ ಅಭಿಮಾನವಿದೆ
ಹೌದು ! ನನಗೆ ಹಿಂದೂ ಆಗಿರುವುದರ ಬಗ್ಗೆ ಅಭಿಮಾನವೆನಿಸುತ್ತದೆ; ಏಕೆಂದರೆ ಧರ್ಮದ ವಿಷಯದಲ್ಲಿ ಸ್ವತಂತ್ರವಾಗಿ ವಿಚಾರ ಮಾಡುವ ಹಾಗೂ ದೇವರನ್ನು ತಿರಸ್ಕರಿಸುವ ಅವಕಾಶವೂ ಕೇವಲ ಹಿಂದೂ ಧರ್ಮದಲ್ಲಿಯೇ ಇದೆ. ಹಿಂದೂ ಧರ್ಮವು ಎಂದೂ ತನ್ನ ಅಭಿಪ್ರಾಯವನ್ನು ಇತರರ ಮೇಲೆ ಹೇರಲಿಲ್ಲ. ಉದಾ. ವೇದಗಳ ಪ್ರಮಾಣವನ್ನು ನಂಬದಿರುವ ಚಾರ್ವಾಕರು ಅಥವಾ ಲೋಕಾಯತ ಪಂಥಕ್ಕೂ ಇಲ್ಲಿ ಸ್ವಾತಂತ್ರವಿತ್ತು. ಅವರನ್ನು ಸಜೀವ ಸುಟ್ಟು ಹಾಕಲಿಲ್ಲ. ಹಿಂದೂ ಧರ್ಮವು ಯಾವತ್ತೂ ಇತರ ಪಂಥದವರನ್ನು ಮತಾಂತರಿಸಲು  ಪ್ರಯತ್ನಿಸಲಿಲ್ಲ. ಸಾಮಾನ್ಯವಾಗಿ ಇತರರ ವೈವಿಧ್ಯಗಳಿಗೆ ಮನ್ನಣೆ ನೀಡುವ ಹಾಗೂ ಚರ್ಚಾತ್ಮಕವಾಗಿ ಮತ್ತು ಪಕ್ಷಪಾತವಿಲ್ಲದೆ ಜೀವನ ನಡೆಸುವ ಪರಂಪರೆಯನ್ನು ಸ್ಥಿರ ಪಡಿಸುವ ಮನೋವೃತ್ತಿ ಹಿಂದೂ ಧರ್ಮದವರದ್ದಾಗಿದೆ. ಸರಕಾರ ನಿಜವಾಗಿಯೂ ಪ್ರಜೆಗಳ ಧಾರ್ಮಿಕ ಸ್ವಾತಂತ್ರ ಕ್ಕೆ ಅಡ್ಡಬರಬಾರದು. ಅವರು ಧಾರ್ಮಿಕ ವಿಶ್ವಾಸವನ್ನು ‘ಮತಪೆಟ್ಟಿಗೆ’ಯೆಂದು ಉಪಯೋಗಿಸಿ ಅದನ್ನು ಪೋಷಿಸಬಾರದು. ನಿಜವಾದ ಧರ್ಮನಿರಪೇಕ್ಷತೆ ನಮ್ಮ ದೇಶದ ರಾಜಕಾರಣದಲ್ಲಿ ಸ್ವಾತಂತ್ರ ಬಂದ ನಂತರ ಎಂದೂ ಕಾಣಿಸಲಿಲ್ಲ.

No comments:

Post a Comment