ಪಾಂಡವವಾಡಾದ ಸಂಘರ್ಷ!

ಇಷ್ಟು ವರ್ಷಗಳಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ಧರ್ಮಾಂಧರಿಂದಾಗುವ ಆಕ್ರಮಣಗಳ ವಿಷಯದಲ್ಲಿ ಹಿಂದುತ್ವವಾದಿ ಸಂಘಟನೆಗಳು ಏನು ಮಾಡಿದವು ?
‘ನಾವು ಕೆಲವು ಸಾಧಕರು ಜಳಗಾವ ಜಿಲ್ಲೆಯ ಎರಂಡೋಲ ತಾಲೂಕಿಗೆ ಹೋಗಿದ್ದೆವು. ಅಲ್ಲಿನ ಸಾಧಕರು ಪಾಂಡವವಾಡಾದ ವಿಷಯ ತಿಳಿಸಿದರು. ಕೌರವರು ಪಾಂಡವರನ್ನು ಬೆಂಕಿ ಹಚ್ಚಿ ಕೊಲ್ಲುವ ಪ್ರಯತ್ನಿಸಿದ ಮನೆಯೇ ಅರಗಿನ ಮನೆಗೆ. ಈ ಸ್ಥಳದಲ್ಲಿ ಪಾಂಡವರು ವಾಸಿಸುತ್ತಿದ್ದರು. ಅದರ ಬಗ್ಗೆ ಸಾಧಕರಿಂದ ತಿಳಿದುಕೊಂಡ ನಂತರ ಆ ವಾಸ್ತುವನ್ನು ನೋಡಬೇಕೆನ್ನುವ ಇಚ್ಛೆ ಯಾಯಿತು. ಅನಂತರ ಧರ್ಮಶಿಕ್ಷಣ ವರ್ಗಕ್ಕೆ ಬರುವ ಅಲ್ಲಿನ ಕೆಲವು ಸ್ಥಳೀಯರು ಹಾಗೂ ಕೆಲವು  ಸಾಧಕರು ಒಟ್ಟಾಗಿ ನಾವು ಪಾಂಡವವಾಡಾ ನೋಡಲು ಹೋದೆವು.
ಪಾಂಡವವಾಡಾದ ಮೇಲಾದ ಧರ್ಮಾಂಧರ ಆಕ್ರಮಣ !
ನಾವು ‘ನಾನು ತಿಳಿದುಕೊಂಡಿದ್ದ ಪಾಂಡವವಾಡಾದ ಪ್ರವೇಶದ್ವಾರಕ್ಕೆ ತಲುಪಿದಾಗ ಅದರ ಕಮಾನಿನ ಕಡೆಗೆ ನೋಡಿದಾಗ ಅಲ್ಲಿ ಚಂದ್ರ-ನಕ್ಷತ್ರ ಸಹಿತ ಉರ್ದು ಅಕ್ಷರಗಳನ್ನು ಕೊರೆದಿರುವುದು ಕಾಣಿಸಿತು.’ ಅದರ ಬಗ್ಗೆ ಸ್ಥಳೀಯರಿಗೆ ಕೇಳಿದಾಗ ಅದನ್ನು ಹತ್ತು ವರ್ಷಗಳ ಹಿಂದೆ ಕಟ್ಟಲಾಗಿದೆ ಎಂದು ತಿಳಿಯಿತು. ಪ್ರವೇಶದ್ವಾರದ ಒಂದು ಬದಿಯಲ್ಲಿ ಪುರಾತತ್ತ್ವ ಇಲಾಖೆಯ ಸಣ್ಣ ಫಲಕ ಕಾಣಿಸಿತು. ಸಂಜೆ ೬ ರ ನಂತರ ಈ ವಾಡಾವನ್ನು ನೋಡಲು ಒಳಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಯಿತು.
ಅನಂತರ ನಾವು ವಾಡಾದ ಒಳಗೆ ಹೋದೆವು. ಒಳಗೆ ಹೋಗಿ ನಾವು ವಾಡಾದ ಒಂದೊಂದೇ ಭಾಗವನ್ನು ನೋಡಲಾರಂಭಿ ಸಿದೆವು. ಇನ್ನೂ ಒಳಗೆ ಹೋದಾಗ ಅಲ್ಲಿ ಧಾರ್ಮಿಕ ಕಾರ್ಯಕ್ಕಾಗಿ ಸ್ಥಳ ಮಾಡಿಕೊಂಡಿದ್ದು ಕಾಣಿಸಿತು. ಅದರೊಂದಿಗೆ ಅಲ್ಲಿ ಎರಡು- ಮೂರು ಸಮಾಧಿಗಳೂ ಕಾಣಿಸಿದವು. ವಾಡಾದ ಒಳಗೆ ಕೆಲವು ಸ್ಥಳದಲ್ಲಿ ಇಟ್ಟಿಗೆಯ ಕೆಲಸ ಮಾಡಿರುವುದು ಅರಿವಾಯಿತು. ವಾಡಾದ ಒಳಭಾಗದ ಗೋಡೆಯಲ್ಲಿ ಹಾಗೂ ಕಂಬಗಳ ಮೇಲೆ ಇರುವ ಶಿಲ್ಪಕಲೆ ಗಳನ್ನು ಕೆಲವೊಂದು ಕಡೆ ಉದ್ದೇಶ ಪೂರ್ವಕವಾಗಿ ಯಾರೋ ಹಾಳು ಮಾಡಿದಂತೆ ಕಾಣಿಸುತ್ತಿತ್ತು.
ಅರಬ್ ರಾಷ್ಟ್ರದ ಸಮಯಕ್ಕನುಸಾರ ಚಲಿಸುವ ಧರ್ಮಾಂಧರ ಧಾರ್ಮಿಕ ಕೇಂದ್ರದಲ್ಲಿನ ಗಡಿಯಾರಗಳು
ಧರ್ಮಾಂಧರ ಧಾರ್ಮಿಕಕೃತಿ ನಡೆಯುವ ಸ್ಥಳದಲ್ಲಿ ಎರಡು ಗಡಿಯಾರಗಳನ್ನು ಇಡಲಾಗಿತ್ತು. ನಾನು ಆಶ್ಚರ್ಯಚಕಿತಳಾಗಿ ಆ ಗಡಿಯಾರವನ್ನೇ ನೋಡುತ್ತಿದೆ. ಆಗ ಒಬ್ಬನು ಈ ಗಡಿಯಾರಗಳು ಭಾರತದ್ದಲ್ಲ ಅರಬ್‌ರಾಷ್ಟ್ರದ್ದಾಗಿವೆ ಮತ್ತು ಅಲ್ಲಿನ ಸಮಯ ಕ್ಕನುಸಾರ ಚಲಿಸುತ್ತವೆ ಎಂದು ಹೇಳಿದನು.
ಸತರ್ಕರಾಗಿರುವ ಧರ್ಮಾಂಧರು
ಅಲ್ಲಿನ ಧರ್ಮಶಿಕ್ಷಣ ವರ್ಗಕ್ಕೆ ಬರುವ ಸ್ಥಳೀಯರು ‘ಈ ವಾಸ್ತು ಹಿಂದೂಗಳದ್ದೋ ಧರ್ಮಾಂಧರದ್ದೋ’ ಎನ್ನುವ ವಿಷಯದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ ಎಂದು ಹೇಳಿದರು. ಆಗ ಅಲ್ಲಿನ ಸ್ಥಿತಿಯನ್ನು ನೋಡಿ ಮನಸ್ಸಿಗೆ ಸ್ವಲ್ಪ ದುಃಖ ವಾಯಿತು. ನಮ್ಮಲ್ಲಿ ಈ ವಿಷಯದಲ್ಲಿ ಚರ್ಚೆ ನಡೆಯುತ್ತಿರುವಾಗ ಒಬ್ಬ ಧರ್ಮಾಂಧ ಮುದುಕನು ನಮ್ಮ ಪಕ್ಕಕ್ಕೆ ಬಂದು ನಿಂತು ಕೊಂಡು ‘ನಾವು ಏನು ಮಾತನಾಡುತ್ತಿದ್ದೇವೆ’, ಎಂದು ಕೇಳಲಾರಂಭಿಸಿದನು.
ಈ ದೇಶ ಹಿಂದೂಗಳದ್ದೋ ಧರ್ಮಾಂಧರದ್ದೋ ?
ನಾವು ಪ್ರವೇಶದ್ವಾರದ ಮೂಲಕ ಆ ವಾಸ್ತುವಿನ ಒಳಗೆ ಹೋಗಿದ್ದೆವು; ಆದರೆ ಆ ವ್ಯಕ್ತಿ ಹಿಂದಿನ ಬಾಗಿಲಿನಿಂದ ಪ್ರವೇಶಿಸಿದ್ದನು. ನಾನು ಅದರ ಬಗ್ಗೆ ಒಬ್ಬನಿಗೆ ಕೇಳಿದಾಗ, ಅವನು ‘ಹಿಂದೂಗಳಿಗೆ ಈ ವಾಸ್ತುವನ್ನು ನೋಡಲು ಸಾಯಂಕಾಲ ೬ ಗಂಟೆಯ ತನಕ ಸಮಯ ನಿರ್ಧರಿಸಲಾಗಿದೆ ಹಾಗೂ ಧರ್ಮಾಂಧರು ಮಾತ್ರ ಹಿಂದಿನ ಬಾಗಿಲಿನಿಂದ ಯಾವಾಗಲೂ ಬರಬಹುದು’ ಎಂದು ಹೇಳಿದನು. ಅವರಿಗಾಗಿ ಬೇರೆಯೇ ಬಾಗಿಲು ಮಾಡಿದ್ದಾರೆ. ಇದನ್ನು ಕೇಳಿದಾಗ, ‘ಇಂದು ಹಿಂದೂ ಬಹುಸಂಖ್ಯಾತ ದೇಶದಲ್ಲಿ ಹಿಂದೂಗಳ ವಾಸ್ತುಗಳಿಗೆ ಹೀಗೆ ಆಕ್ರಮಣ ಆಗುತ್ತದೆ ಹಾಗೂ ಹಿಂದೂಗಳಿಗೆ ತಮ್ಮ ಸ್ಥಳವನ್ನು ತಮ್ಮದೆಂದು ಸಿದ್ಧಪಡಿಸುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದೆನಿಸಿತು. ಶ್ರೀರಾಮನ ಜನ್ಮ ಭೂಮಿಯಿಂದ ಹಿಡಿದು ಪ್ರತಿಯೊಂದು ವಾಸ್ತುವಿಗಾಗಿ ಹಿಂದೂಗಳು ಎಷ್ಟು ಸಂಘರ್ಷ ಮಾಡಬೇಕಾಗುತ್ತದೆ. ನಾವು ನಿಜವಾಗಿಯೂ ಯಾವ ರಾಷ್ಟ್ರದಲ್ಲಿದ್ದೇವೆ ಹಿಂದೂಗಳದ್ದೋ ಧರ್ಮಾಂಧರದ್ದೋ?’ ಈ ಸ್ಥಿತಿಯನ್ನು ನೋಡಿ ಮನಸ್ಸಿನಲ್ಲಿ ರೋಷ ನಿರ್ಮಾಣವಾಗಿ ‘ದೇವರೇ, ನೀನೇ ಈಗ ಈ ಸ್ಥಿತಿಯನ್ನು ಬದಲಾಯಿಸು’ ಎಂದು ಶ್ರೀಕೃಷ್ಣನಿಗೆ ಪ್ರಾರ್ಥನೆಯಾಯಿತು. - ಸೌ. ಶ್ರದ್ಧಾ
ಜಳಗಾವ ‘ಖಾನದೇಶ’ ಅಲ್ಲ, ಜಳಗಾವ ‘ಕಾನ್ಹಾದೇಶ’ !
‘ಜಳಗಾವ ಜಿಲ್ಲೆಯ ಸಾಧಕರ ಭೇಟಿಗಾಗಿ ಹೋಗಿರುವಾಗ ಆ ಜಿಲ್ಲೆಯ ಬೇರೆ ಬೇರೆ ಕೇಂದ್ರಗಳಲ್ಲಿರುವ ಸಾಧಕರನ್ನು ಭೇಟಿ ಮಾಡಿದೆನು. ಆಗ ಅಲ್ಲಿನ ಸಾಧಕರೊಂದಿಗೆ ಮಾತನಾಡುತ್ತಿರುವಾಗ ಜಳಗಾವ ಜಿಲ್ಲೆಯ ವಿಷಯದಲ್ಲಿ ಮಾಹಿತಿ ಸಿಕ್ಕಿತು. ಜಳಗಾವ ಜಿಲ್ಲೆ ‘ಖಾನದೇಶ’ ಎಂದು ಪ್ರಸಿದ್ಧಿಯಾಗಿದೆ. ಆದರೆ ಅದು ಮೂಲತಃ ದ್ವಾಪರಯುಗದಲ್ಲಿ ಶ್ರೀಕೃಷ್ಣನು ದ್ರೌಪದಿಗೆ ಉಡುಗೊರೆಯೆಂದು ನೀಡಿದ ಭೂಮಿಯಾಗಿದೆ. ಆ ಕಾಲದಲ್ಲಿ ಆ ಭೂಮಿ ‘ಕಾನ್ಹಾದೇಶ’ವೆಂದು ಪ್ರಸಿದ್ಧಿಯಾಗಿತ್ತು. ಧರ್ಮಾಂಧರ ಆಕ್ರಮಣದ ನಂತರ ಈ ಕಾನ್ಹಾದೇಶವು ಖಾನದೇಶವೆಂದು ರೂಪಾಂತರವಾಯಿತು.’ - ಸೌ. ಶ್ರದ್ಧಾ

No comments:

Post a Comment