ಭಾಜಪದ ರಾಜ್ಯದಲ್ಲಿ ಅಭದ್ರ ಸ್ಥಿತಿಯಲ್ಲಿರುವ ಹಿಂದೂಗಳ ದೇವಸ್ಥಾನಗಳು

ರಾಮನಗರದ ಪ್ರಾಚೀನ ದೇವಸ್ಥಾನ ಹಿಂದೂದ್ವೇಷಿಗಳಿಂದ ಧ್ವಂಸ!

ಸನಾತನವು ೧೦ ವರ್ಷಗಳಿಂದ ಹೇಳುತ್ತಿದ್ದ ಕೆಟ್ಟ ಕಾಲ ಇಲ್ಲಿದೆ ನೋಡಿ
ಚೆನ್ನಪಟ್ಟಣ : ಚನ್ನಪಟ್ಟಣ ತಾಲೂಕಿನ ಇತಿಹಾಸ ಪ್ರಸಿದ್ದ ಹಾಗೂ ಕಣ್ವ ಮಹರ್ಷಿಗಳಿಂದ ನಿರ್ಮಿತವಾದ ಕೂರಣಗೆರೆ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯವನ್ನು ಅಜ್ಞಾತ ಹಿಂದೂದ್ವೇಷಿಗಳು ಧ್ವಂಸ ಮಾಡಿದ್ದಾರೆ. ಈ ದೇವಾಲಯದ ಮುಂಭಾಗದಲ್ಲಿದ್ದ ಶ್ರೀ ಲಕ್ಷಿ ನರಸಿಂಹ ಸ್ವಾಮಿ ವಿಗ್ರಹ ಮತ್ತು ಗೋಪುರದಲ್ಲಿ ನಿರ್ಮಿಸಲಾಗಿದ್ದ ವಿಗ್ರಹಗಳನ್ನು ಧ್ವಂಸಗೊಳಿಸಿ, ನುಚ್ಚುನೂರು ಮಾಡಿ ಮನಸೋಇಚ್ಚೆ ದೇವಾಲಯದ ಸುತ್ತ ಬಿಸಾಡಿರುವ ಘಟನೆ ಡಿಸೆಂಬರ್ ೨೭ ರ ರಾತ್ರಿ ನಡೆದಿದೆ. ಈ ಘಟನೆಯಾದ ಕೆಲವು ದಿನಗಳ ಹಿಂದೆ ಈ ಪರಿಸರದಲ್ಲಿ ಕಳ್ಳತನಗಳಾಗಿದ್ದವು ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ.
(ರಾಜ್ಯದ ಭಾಜಪ ಸರಕಾರ ಒಂದೆಡೆ ರಾಜ್ಯದ ೫ ಸಾವಿರ ದೇವಸ್ಥಾನಗಳನ್ನು ಅನಧಿಕೃತವೆಂದು ಬೀಳಿಸುತ್ತಿದ್ದರೆ ಇನ್ನೊಂದೆಡೆ ಹಿಂದೂದ್ವೇಷಿಗಳು ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದಾರೆ, ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದಾರೆ. ಒಟ್ಟಾರೆ ರಾಜ್ಯ ಸರಕಾರ ಮತ್ತು ಹಿಂದೂದ್ವೇಷಿಗಳು ಹಿಂದೂಗಳ ದೇವಸ್ಥಾನಗಳ ಮೇಲೆ ಒಟ್ಟಾಗಿ ಆಘಾತ ಮಾಡುತ್ತಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂಗಳು ಸಂಘಟಿತರಾಗಿ ರಾಷ್ಟ್ರ ಹಾಗೂ ಧರ್ಮಪ್ರೇಮಿ ರಾಜಕಾರಣಿಗಳನ್ನು ಅಧಿಕಾರದಲ್ಲಿ ಕೂಡಿಸದೇ ಬೇರೆ ಪರ್ಯಾಯವಿಲ್ಲ ! - ಸಂಪಾದಕರು)
ಈ ದೇವಾಲಯ ಬೆಟ್ಟದ ಮೇಲೆ ನಿರ್ಮಾಣವಾಗಿದ್ದು, ಕೂರಣಗೆರೆ ಗ್ರಾಮ ದಿಂದ ಸುಮಾರು ೪ ಕಿ.ಮೀ. ಗಳಿಗೂ ಹೆಚ್ಚು ದೂರದಲ್ಲಿದೆ. ಈ ದೇವಾಲಯವನ್ನು ಸುಮಾರು ೩೦ ವರ್ಷಗಳ ಹಿಂದೆ ಜೀರ್ಣೋದ್ಧಾರಗೊಳಿಸಿ, ಗೋಪುರ ನಿರ್ಮಾಣ ಮಾಡಲಾಗಿತ್ತು. ಹಿಂದೂದ್ವೇಷಿಗಳು ಗೋಪುರದ ಮೇಲ್ಬಾಗದಲ್ಲಿದ್ದ ಕಳಸವನ್ನೂ ಹಾನಿಗೊಳಿಸಿದ್ದು, ನರಸಿಂಹ ಸ್ವಾಮಿ ವಿಗ್ರಹದ ಅಕ್ಕಪಕ್ಕವಿದ್ದ ಶಂಖ, ಚಕ್ರ ಮತ್ತು ಗೋಪುರದ ಸುತ್ತಲೂ ಇದ್ದ ಗರುಡಪಕ್ಷಿಗಳು, ದಿಕ್ಪಾಲಕರ ವಿಗ್ರಹಗಳನ್ನು ಕಿತ್ತೆಸೆದಿರುವುದೂ ಅಲ್ಲದೆ, ಕಲ್ಲುಗಳಿಂದ ಅವುಗಳನ್ನು ಸಂಪೂರ್ಣವಾಗಿ ಜಜ್ಜಿ ನಾಶಗೊಳಿಸಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿದ್ದ ಸಣ್ಣ ಗುಡಿಯ ಬಳಿಯೂ ಸಹ ವಿಗ್ರಹವನ್ನು ವಿರೂಪಗೊಳಿಸಲಾಗಿದೆ. ಘಟನೆಯಾದ ನಂತರ ರಾಮನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕ, ತಹಶೀಲ್ದಾರರು ದೇವಸ್ಥಾನವನ್ನು  ಭೇಟಿಯಾಗಿ ಘಟನೆಯ ಸಮೀಕ್ಷೆ ನಡೆಸಿದರು.

No comments:

Post a Comment