ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜನವರಿ ೯ ರ ತಡರಾತ್ರಿ ನುಗ್ಗಿದ ಅಜ್ಞಾತ ಕಳ್ಳರು ಸುಮಾರು ೨೦ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಇದು ವರೆಗೆ ಯಾರನ್ನೂ ಬಂಧಿಸಿಲ್ಲ. (ಮಹಾರಾಷ್ಟ್ರ, ಗೋವಾ ಮತ್ತು ಈಗ ಕರ್ನಾಟಕ ರಾಜ್ಯದಲ್ಲಿಯೂ ದೇವಸ್ಥಾನಗಳ ಕಳ್ಳತನ ಹಾಗೂ ಮೂರ್ತಿ ಭಗ್ನದ ಘಟನೆಗಳು ನಡೆಯುತ್ತಿರುವಾಗ ಹಿಂದೂಗಳು ಅದರ ವಿರುದ್ಧ ಏನೂ ಕೃತಿ ಮಾಡುತ್ತಿಲ್ಲ. ಇಂತಹ ಘಟನೆಗಳು ಯಾವುದಾದರೊಂದು ಇಗರ್ಜಿ ಅಥವಾ ಮಸೀದಿಗಳಲ್ಲಿ ನಡೆಯುತ್ತಿದ್ದರೆ ಅವರು ಆಕಾಶ- ಪಾತಾಳ ಒಂದು ಮಾಡುತ್ತಿದ್ದರು ಎಂದು ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು ? - ಸಂಪಾದಕರು) ಕಳ್ಳರು ದೇವಾಲಯದ ತಗಡು ಛಾವಣಿಯ ಕಬ್ಬಿಣದ ನೆಟ್‌ನ್ನು ತೆಗೆದು ಒಳ ಪ್ರವೇಶಿಸಿ ಕಳವು ಮಾಡಿರಬಹುದೆಂದು ದೇವಾಲಯದ ಕಾವಲುಗಾರನು ಹೇಳಿದ್ದಾನೆ.
ಧರ್ಮಾಂಧ ಟಿಪ್ಪು ಸುಲ್ತಾನ ಮತ್ತು ಹೈದರಾಲಿಗಾಗಿ ದೇವಸ್ಥಾನದಲ್ಲಿ ಪ್ರತಿದಿನ ಪೂಜೆ!
ಹಿಂದೂಗಳ ಮೇಲೆ ದಾಳಿ ಮಾಡಿ ಅವರನ್ನು ಮತಾಂತರಿಸಿದ ಧರ್ಮಾಂಧ ಮತ್ತು ಆಕ್ರಮಣಕಾರಿ ಟಿಪ್ಪುಸುಲ್ತಾನ ಹಾಗೂ ಅವನ ತಂದೆ ಹೈದರಾಲಿಗೆ ಶ್ರದ್ಧಾಂಜಲಿ ಅರ್ಪಿಸಲು ಕಳೆದ ಅನೇಕ ವರ್ಷಗಳಿಂದ ಪ್ರತಿದಿನ ಸಾಯಂಕಾಲ ಕಮಲಶಿಲೆ ದೇವಸ್ಥಾನದಲ್ಲಿ ‘ಸಲಾಮ್ ಪೂಜೆಯನ್ನು’ ಮಾಡಲಾಗುತ್ತದೆ. (ಹಿಂದೂಗಳ ಮೇಲೆ ಆಕ್ರಮಣ ಮಾಡಿದ ಟಿಪ್ಪು ಸುಲ್ತಾನ ಮತ್ತು ಹೈದರಾಲಿಗಾಗಿ ಪ್ರತಿದಿನ ಪೂಜೆ ನಡೆಯುವ ದೇವಸ್ಥಾನದಲ್ಲಿ ಎಂದಾದರೂ ದೇವತೆಯ ತತ್ತ್ವ ಅಸ್ತಿತ್ವದಲ್ಲಿರುವುದೇ ? ಇಂತಹ ಪೂಜೆ ಅನೇಕ ವರ್ಷಗಳಿಂದ ನಡೆಯುತ್ತಿರುವಾಗ ಹಿಂದುತ್ವವಾದಿ ಪಕ್ಷ ಮತ್ತು ಸಂಘಟನೆಗಳು ಏಕೆ ಸುಮ್ಮನಿವೆ ? - ಸಂಪಾದಕರು)
No comments:
Post a Comment