ತುಮಕೂರಿನ ಕುಪ್ಪೂರು ಮಠದಲ್ಲಿ ಆಭರಣಗಳ ಕಳವು

ತುಮಕೂರು : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸುಪ್ರಸಿದ್ಧ ಕ್ಷೇತ್ರ ಕುಪ್ಪೂರು ಶ್ರೀ ಮರುಳ ಸಿದ್ಧೇಶ್ವರ ಮಠದ ದೇವಸ್ಥಾನದಲ್ಲಿ ೧೫ ಕಿಲೋಗ್ರಾಂ ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. (ರಾಜ್ಯದಲ್ಲಿ ಭಾಜಪ ಸರಕಾರ ಹಿಂದೂಗಳ ದೇವಸ್ಥಾನಗಳನ್ನು ಅನಧಿಕೃತವೆಂದು ನಿರ್ಧರಿಸಿ ಧ್ವಂಸಗೊಳಿಸುತ್ತಿರುವ ಬೆನ್ನಲ್ಲೇ ಈಗ ದೇವಸ್ಥಾನಗಳಲ್ಲಿ ಕಳ್ಳತನದ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಕವಡೆಕಾಸಿನಷ್ಟು ಬೆಲೆ ನೀಡದ ಇಂತಹ ಧರ್ಮ ದ್ರೋಹಿ ರಾಜಕಾರಣಿಗಳನ್ನು ಕೆಳಗಿಳಿಸಿ ರಾಷ್ಟ್ರ ಹಾಗೂ ಧರ್ಮದ ಏಳ್ಗೆ ಬಯಸುವ ರಾಜಕಾರಣಿಗಳನ್ನು ಅಧಿಕಾರದ ಗದ್ದುಗೆಯ ಮೇಲೇರಿಸದೇ ಪರ್ಯಾಯವಿಲ್ಲ ! - ಸಂಪಾದಕರು)
ಮರುಳ ಸಿದ್ಧೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ೫ ಕಿಲೋ ತೂಕದ ಶ್ರೀ ಮರುಳ ಸಿದ್ದೇಶ್ವರರ ಮುಖಪದ್ಮ ನಾಗಾಭರಣ ಸಮೇತ ಒಂದು ಕಿಲೋ ತೂಕದ ೩ ಜೊತೆ ಪಾದುಕೆ, ಕಲಶ, ಪಂಚಾರತಿ, ಬೆಳ್ಳಿಯ ನಾಣ್ಯಗಳು, ಬೆಳ್ಳಿಯ ರುದ್ರದೇವರು, ಗಣಪತಿ ವಿಗ್ರಹ ಸೇರಿದಂತೆ ೩ ವಿಗ್ರಹ, ಆರತಿ ತಟ್ಟೆ, ಬೆಳ್ಳಿಯ ೧೨ ಬಿಲ್ವಪತ್ರೆ, ಬೆಳ್ಳಿಯ ಸಾಮಗ್ರಿಗಳು ಮತ್ತು ೨ ಕಾಣಿಕೆ ಹುಂಡಿಗಳನ್ನು ದೋಚಿದ್ದಾರೆ. (ಇಷ್ಟು ದೊಡ್ಡ ಪ್ರಮಾಣದಲ್ಲಿ ಕಳ್ಳತನಗಳಾಗುತ್ತಿರುವಾಗ ಅದನ್ನು ತಡೆಯದ ಹಿಂದೂಗಳ ಮೇಲೆ ದೇವರು ಏಕೆ ಕೃಪೆ ತೋರಿಸಬೇಕು ? - ಸಂಪಾದಕರು)
ಕಳ್ಳರು ಮಠದ ಕಟ್ಟಡದಲ್ಲಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮೇಲ್ಛಾವಣಿಯ ಹಂಚನ್ನು ತೆಗೆದು ಕೆಳಗೆ ಇಳಿದಿದ್ದಾರೆ. ಅವರು ಮಠದಲ್ಲಿನ ಕೋಣೆಯಲ್ಲಿ ಮಲಗಿದ ವ್ಯಕ್ತಿಗಳು ಹೊರಗೆ ಬರ ಬಾರದೆಂದು ಆ ಕೋಣೆಯ ಹೊರಗಿನ ಬಾಗಿಲಿಗೆ ಚಿಲಕವನ್ನು ಹಾಕಿದ್ದಾರೆ. ನಂತರ ಗರ್ಭಗುಡಿಯ ಬಾಗಿಲು ಒಡೆದು ಬೆಳ್ಳಿಯ ಆಭರಣಗಳನ್ನು ಕದ್ದಿದ್ದಾರೆ. ಈ ಘಟನೆಯ ನಂತರ ಅಲ್ಲಿ ಪೊಲೀಸರು ಶ್ವಾನದಳದೊಂದಿಗೆ ಬಂದು ತನಿಖೆ ನಡೆಸಿದರು.
ಈ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ದೇವಸ್ಥಾನದ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿಯ ಪಂಚಮುಖಿ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ ಅದರಂತೆ ಸೊರಲ ಮಾವು, ತಮ್ಮಡಿಹಳ್ಳಿ ಇತ್ಯಾದಿ ಸೇರಿ ಅನೇಕ ಸ್ಥಳದ ದೇವಸ್ಥಾನಗಳಲ್ಲಿ ಕಳ್ಳತನವಾಗಿದೆ.

No comments:

Post a Comment