ಹಂಪೆಯ ಐತಿಹಾಸಿಕ ಸ್ಮಾರಕಗಳ ದುಃಸ್ಥಿತಿ


ಹಂಪೆ : ಸರಕಾರದ ನಿರ್ಲಕ್ಷ್ಯದಿಂದ ಇಲ್ಲಿಯ ಪ್ರಸಿದ್ಧ ಪ್ರಾಚೀನ ಪುರಾತನ ಸ್ಮಾರಕಗಳ ದುಃಸ್ಥಿತಿಗೊಳಗಾಗಿದೆ. ಕೆಲವು ತಿಂಗಳುಗಳ ಹಿಂದೆ ಮೈಸೂರಿನಿಂದ ಪ್ರವಾಸಿಗರನ್ನು ಕರೆ ತಂದ ಖಾಸಗಿ ಬಸ್ ಹಂಪೆಗೆ ಬರುತ್ತಿರುವಾಗ ವಿಜಯವಿಠ್ಠಲ ದೇವಸ್ಥಾನದ ರಸ್ತೆಯಲ್ಲಿರುವ ಶಂಕರಲಿಂಗ ಕೋಟೆಯ ಪ್ರವೇಶದ್ವಾರದಿಂದ ಸ್ಥಳೀಯರ ವಿರೋಧಕ್ಕೆ ಬಗ್ಗದೇ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದರಿಂದ ಐತಿಹಾಸಿಕ ಸ್ಮಾರಕಕ್ಕೆ ತೀವ್ರ ಧಕ್ಕೆಯಾಯಿತು. ಅದರಿಂದ ಈ ಪ್ರಾಚೀನ ಸ್ಮಾರಕವು ನಲುಗಿತು. ಇಂತಹ ಅನೇಕ ಘಟನೆಗಳು ಬಸ್ ಮಾಲೀಕ ಮತ್ತು ಚಾಲಕರಿಂದ ನಡೆಯುತ್ತಿದ್ದು ಅಲ್ಲಿನ ಸ್ಮಾರಕಗಳು ನಾಮಾವಶೇಷವಾಗುವ ಮಾರ್ಗದಲ್ಲಿವೆ. ರಾಜ್ಯ ಸರಕಾರದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಯವರಿಂದ ಈ ಸ್ಮಾರಕಗಳ ಬಗ್ಗೆ ದುರ್ಲಕ್ಷವಾಗುತ್ತಿದೆ ಎಂದು ನಾಗರಿಕರು ಟೀಕಿಸುತ್ತಿದ್ದಾರೆ. ಇಲ್ಲಿನ ಸ್ಮಾರಕ ಸಂರಕ್ಷಕರು, ಸಾರ್ವಜನಿಕರು ಮತ್ತು ಹಂಪೆ ಉಳಿಸಿ ಆಂದೋಲನ ಸಮಿತಿಯ ಸದಸ್ಯರು ಈ  ಸಮಸ್ಯೆಯ ಪರಿಹಾರಕ್ಕೆ ಗಮನ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ರೀತಿಯ ಅನಾಹುತಗಳು ನಡೆದಾಗ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಮಾರಕದ ಪುನರ್‌ನಿರ್ಮಾಣ ಮಾಡುವ ನೆಪದಲ್ಲಿ ಯಾವುದೇ ಕೆಲಸ ಮಾಡದೇ ಲಕ್ಷಾಂತರ ರೂಪಾಯಿಗಳ ಬಿಲ್‌ಗಳನ್ನು ಪಡೆದು ಸರಕಾರದ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಸಚಿವ ರೆಡ್ಡಿಯವರ ಉಸ್ತುವಾರಿಯಲ್ಲಿ ಹಂಪೆಯ ಐತಿಹಾಸಿಕ ಸ್ಮಾರಕಗಳು ‘ಯುನೆಸ್ಕೋ’ದ ನಾಮಾವಶೇಷವಾಗಿರುವ ಸ್ಮಾರಕಗಳ ಪಟ್ಟಿಯಲ್ಲಿ ದಾಖಲಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ನಡೆಯುತ್ತಿರುವಾಗ ರಾಜ್ಯದ ಇತರ ಸ್ಮಾರಕಗಳ ಸಂರಕ್ಷಣೆ ಬಗ್ಗೆ ನಮಗೆ ಸಾಕಷ್ಟು ಅನುಮಾನಗಳೇ ಆಗುತ್ತಿವೆ ಎಂದು ಹಂಪೆಯ ಬಗ್ಗೆ ಕಳಕಳಿಯುಳ್ಳ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹಂಪೆಯ ಹತ್ತಿರದ ವಿರುಪಾಪುರಗಡ್ಡೆಯಲ್ಲಿ ಅನೈತಿಕ ಚಟುವಟಿಕೆಗಳ ಹೆಚ್ಚಳ
ಹಂಪೆಯ ಹತ್ತಿರವಿರುವ ವಿರೂಪಾಪುರ ಗಡ್ಡೆಯಲ್ಲಿ ವಿದೇಶಿ ಪ್ರವಾಸಿಗರಿಗಾಗಿ ಅನಧಿಕೃತ ನಿವಾಸಿ ಮನೆಗಳನ್ನು (ರೆಸಾರ್ಟ್) ನಿರ್ಮಾಣ ಮಾಡಲಾಗಿದ್ದು ಅಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದೆ. ಮೂರು ತಿಂಗಳ ಹಿಂದೆ ಬಳ್ಳಾರಿಯ ವ್ಯವಸಾಯಿಕರು ಅನಧಿಕೃತವಾಗಿ ವಿದೇಶಿಯರಿಗಾಗಿ  ಸುಮಾರು ೩೦ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಹಂಪೆಯ ಅಧಿಕಾರಿಗಳು ಆಕ್ಷೇಪವೆತ್ತಿ ಇಲ್ಲಿ ಯಾವುದೇ ಹೊಸ ಕಟ್ಟಡ ಕಟ್ಟಬಾರದು ಎಂದು ಹೇಳಿದ್ದರು. ಸ್ಥಳೀಯ ವಿಶ್ವ ಪರಂಪರಾ ಪ್ರಾಧಿಕಾರ ಸಂಸ್ಥೆಯು ಇದರ ವಿರುದ್ಧ ನೇತೃತ್ವ ತೆಗೆದುಕೊಂಡು ಸಂಬಂಧಿತರಿಗೆ ಅನಿವಾಸಿ ಮನೆ (ರಿಸಾರ್ಟ್)ಗಳನ್ನು ತಕ್ಷಣ ಕೆಡಹಬೇಕೆಂದು ಸೂಚಿಸಿದ ನಂತರ ೨ ರೆಸಾರ್ಟ್‌ಗಳನ್ನು ನೆಲಕ್ಕುರುಳಿಸಲಾಯಿತು. ಈ ಕಟ್ಟಡಗಳನ್ನು ಸಂಪೂರ್ಣವಾಗಿ ಕೆಡಹಲಾಗುವುದು ಎಂದು ಪ್ರಾಧಿಕಾರದ ಪ್ರಾದೇಶಿಕ ಕಾರ್ಯಾಲಯವು ತಿಳಿಸಿದೆ. ಈ ವಾರ್ತೆಯನ್ನು ‘ಒನ್ ಇಂಡಿಯಾ’ ಸಂಕೇತಸ್ಥಳದಲ್ಲಿ ಪ್ರಕಟಿಸಲಾಗಿದೆ.

No comments:

Post a Comment