ಗುಜರಾತಿನ ಡಾಂಗ ಎಂಬಲ್ಲಿನ ವನವಾಸಿ ಆಶ್ರಮದ ಸ್ವಾಮೀ ಅಸೀಮಾನಂದರ ತಪ್ಪೊಪ್ಪಿಗೆಯನ್ನು ತನಿಖಾ ದಳವು ನ್ಯಾಯಾಲಯದಲ್ಲಿ ಮಂಡಿಸುವ ಮೊದಲೇ ಪ್ರಸಾರಮಾಧ್ಯಮದವರು ಬಹಿರಂಗಪಡಿಸಿದ್ದಾರೆ. ಅದರಿಂದ ಸರಕಾರವು ಹಿಂದೂಗಳನ್ನು ಭಯೋತ್ಪಾದಕರೆಂದು ನಿರ್ಧರಿಸುವಲ್ಲಿ ಅಸೀಮ ಆನಂದವನ್ನು ಪಡೆಯುತ್ತಿದೆ; ಆದರೆ ಇಂದು ಸರಕಾರವು ಹಿಂದೂಗಳ ತೇಜೋವಧೆಯ ರಾಜಕಾರಣ ನಡೆಸುತ್ತಿರುವುದನ್ನು ನೋಡಿದರೆ ಈ ಆನಂದವು ವಿಕೃತವಾಗಿದೆ ಎಂದು ಹೇಳಬೇಕಾಗುತ್ತದೆ.
ಸ್ವಾಮಿಯವರ ತಪ್ಪೊಪ್ಪಿಗೆ !
ತನಿಖಾದಳದ ಹೇಳಿಕೆಯಂತೆ ಸಮಝೌತಾ ಎಕ್ಸಪ್ರೆಸ್ ಸ್ಫೋಟ ಪ್ರಕರಣದಲ್ಲಿ ಬಂಧನದಲ್ಲಿರುವ ಶೇಖ್ ಅಬ್ದುಲ್ ಖಾಲಿಂನೊಂದಿಗೆ ಸೆರೆಮನೆಯಲ್ಲಿ ಸ್ವಾಮಿಯವರ ಭೇಟಿಯಾಯಿತು. ಅವರ ಸಭ್ಯ ವರ್ತನೆ (?) ಮತ್ತು ಹಿಂಸೆಯ ಕಥೆ ಕೇಳಿ ಸ್ವಾಮಿಯವರ ಹೃದಯ ಪರಿವರ್ತನೆ ಆಯಿತು (?). ಅವರಿಗೆ ಅವನ ಹಿಂಸೆಗೆ ತಾವೇ ಕಾರಣವೆಂದೆನಿಸಿತು (?) ಮತ್ತು ಅವರು ನ್ಯಾಯಾಧೀಶರೆದುರು ತಪ್ಪೊಪ್ಪಿಗೆ ನೀಡಿದರು. ಅದರಲ್ಲಿ ಅವರು, ‘೨೦೦೫ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಂದ್ರೇಶ ಕುಮಾರ ಇವರು, ‘ಸ್ಫೋಟ ನಡೆಸುವ ಕೆಲಸ ನನ್ನದ್ದಲ್ಲ, ಸಂಘದ ಕೆಲವು ಪ್ರಚಾರಕರು ಮತ್ತು ಹಿಂದೂಗಳು ಸ್ಫೋಟವನ್ನು ನಡೆಸುವರು’ ಎಂದು ನಮ್ಮಲ್ಲಿ ಹೇಳಿದ್ದರು. ೨೦೦೬ ರಲ್ಲಿ ಸಮಝೌತಾ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ ನಡೆಸುವ ಸಂಚು ಹೂಡಲಾಯಿತು. ಆ ಸಂಚಿನಲ್ಲಿ ಇಂದ್ರೇಶ ಕುಮಾರ, ಸಾಧ್ವಿ ಪ್ರಜ್ಞಾ ಸಿಂಗ, ಸುನೀಲ ಜೋಶಿ ಮತ್ತು ನನ್ನ ಸಹಭಾಗವಿತ್ತು. ೨೦೦೭ ರ ಫೆಬ್ರವರಿ ೧೮ ರಂದು ಸ್ಫೋಟ ನಡೆಯಿತು.’ ಎಂದಿದ್ದಾರೆ. ಸ್ವಾಮಿಯವರ ನ್ಯಾಯವಾದಿಗಳು ತಪ್ಪೊಪ್ಪಿಗೆ ನೀಡಿದ್ದನ್ನು ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿನ ಸತ್ಯ- ಅಸತ್ಯವು ಇನ್ನೂ ಬಹಿರಂಗವಾಗಲಿದೆ; ಆದರೆ ‘ನಾಯಿಗೆ ಹುಚ್ಚು ಹಿಡಿದಿದೆಯೆಂದು ಹೇಳಿ ಮತ್ತು ಕೊಂದು ಹಾಕಿ’ ಎಂಬ ಆಂಗ್ಲರ ನೀತಿಯಂತೆ ನಡೆಯುವ ಇಂದಿನ ಆಡಳಿತಕ್ಕೆ ಇಂದು ‘ಕಾಮಾಲೆಯಾದವನಿಗೆ ಎಲ್ಲೆಡೆ ಹಳದಿ’ ಎಂಬಂತೆ ಆಗಿದೆ. ಪ್ರಸಾರಮಾಧ್ಯಮದಲ್ಲಿನ ರಾಜಕಾರಣಿಗಳ ಅಡಿಯಾಳುಗಳು ಸಂಘವನ್ನು ದೋಷಿಯೆಂದು ನಿರ್ಧರಿಸಿ ಸ್ವತಃ ಗಲ್ಲು ಶಿಕ್ಷೆ ನೀಡುವ ಪ್ರಕ್ರಿಯೆ ನಡೆಸಿವೆ.
ಪ್ರಧಾನಮಂತ್ರಿಯವರು ಹೀಗೆ ವಿಚಾರ ಮಾಡುವರೇ ?
ಧರ್ಮಾಂಧರು ಸ್ಫೋಟ ನಡೆಸಿದ್ದು ಸಿದ್ಧವಾದ ನಂತರವೂ ದಿಗ್ವಿಜಯ ಸಿಂಗ (ಖಾನ) ಇವರಂತಹ ಆಡಳಿತಗಾರರು ಭಯೋತ್ಪಾದಕರ ಮನೆಗೆ ಹೋಗುತ್ತಾರೆ. ಸ್ಫೋಟಕ್ಕೆ ಧರ್ಮಾಂಧರಲ್ಲಿನ ಧಾರ್ಮಿಕ ನಿಷ್ಠೆಯಲ್ಲ, ಅವರ ನಿರುದ್ಯೋಗ, ಅನಕ್ಷರತೆ ಇತ್ಯಾದಿ ವಿಷಯಗಳು ಕಾರಣವಾಗಿವೆ ಎಂದು ಹೇಳುತ್ತಾ ಪ್ರಧಾನಮಂತ್ರಿಗಳು ಅವರಿಗೆ ಸಚ್ಚರ ವರದಿಯ ಮಾಧ್ಯಮದಿಂದ ಸೌಲಭ್ಯಗಳನ್ನು ಮಳೆ ಸುರಿಸುತ್ತಿದ್ದಾರೆ. ಪ್ರಧಾನಮಂತ್ರಿಯವರು ಸರ್ವಧರ್ಮ ಸಮಭಾವಿಯಾಗಿದ್ದರೆ ಅದೇ ಪ್ರಧಾನಮಂತ್ರಿಗಳು ಸ್ವಾಮಿಯವರ ಮಾನಸಿಕತೆ ಏಕೆ ಹಿಂಸಕವಾಯಿತು, ಎಂಬುದರ ವಿಚಾರ ಮಾಡಬೇಕು.
ಭಾಜಪ ಮತ್ತು ಸಂಘ
ಇವು ಹೇಳುವುದು ಯೋಗ್ಯವೇ ಆಗಿದೆ !
ಇವು ಹೇಳುವುದು ಯೋಗ್ಯವೇ ಆಗಿದೆ !
ತನಿಖಾದಳದವರ ಹೇಳಿಕೆಯಂತೆ ಒಬ್ಬನ ಹಿಂಸೆಯ ಬಗ್ಗೆ (ನೋಡಿ ಅಲ್ಲ, ಕೇವಲ) ಕೇಳಿ ಸ್ವಾಮಿಯ ಹೃದಯ ಪರಿವರ್ತನೆ (?) ಆಗುತ್ತಿದ್ದರೆ ಇಂತಹ ಕೋಮಲ ಹೃದಯದ ಸ್ವಾಮಿಯವರು ಈ ಮೊದಲು ಸ್ಫೋಟದಂತಹ ಹಿಂಸಕ ಮಾರ್ಗವನ್ನು ಏಕೆ ಸ್ವೀಕರಿಸಿದರು ? ಇಂದ್ರೇಶ ಕುಮಾರ ಇವರ ಬಂಧನಕ್ಕಾಗಿ ತನಿಖಾದಳ ಆಕಾಶಪಾತಾಳ ಒಂದು ಮಾಡುತ್ತಿವೆ; ಆದರೆ ಸ್ವಾಮಿಯವರು ಇಂದ್ರೇಶಕುಮಾರರು ಸ್ಫೋಟದಲ್ಲಿ ಸಹಭಾಗಿಯಾಗಿದ್ದಾರೆಂದು ಹೇಳಲಿಲ್ಲ. ಆದುದರಿಂದ ‘ಹಿಂದುತ್ವ, ಅಂದರೆ ರಾಷ್ಟ್ರೀಯ ವಿಚಾರಸರಣಿಯನ್ನು ದೋಷಿಯೆಂದು ನಿರ್ಧರಿಸಲು ಈ ತಪ್ಪೊಪ್ಪಿಗೆಯನ್ನು ಬಹಿರಂಗ ಪಡಿಸಿ ತಮ್ಮ ಆಡಳಿತ ನಡೆಸಿದ ಹಗರಣ ಮತ್ತು ಬೆಲೆಯೇರಿಕೆ ಯಿಂದ ಜನತೆಯ ಗಮನವನ್ನು ವಿಚಲಿತಗೊಳಿಸುವುದು ಈಗಿನ ಆಡಳಿತದ ಪ್ರಯತ್ನವಾಗಿದೆ’ ಎಂಬ ಭಾಜಪ ಮತ್ತು ಸಂಘದ ಹೇಳಿಕೆ ಯೋಗ್ಯವೇ ಆಗಿದೆ.
ಹಿಂದೂಗಳು ಧರ್ಮದ ಪಕ್ಷ ವಹಿಸುವುದು ಆವಶ್ಯಕ !
ಓರ್ವ ಧರ್ಮಾಂಧನ ಹಿಂಸೆಗಿಂತ ಹೆಚ್ಚು ಭಯಾನಕವಾದ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರಸಂಗಗಳನ್ನು ಸ್ವಾಮಿಯ ಸಹಿತ ಇತರ ಎಲ್ಲ ಹಿಂದೂಗಳು ನೋಡಿದ್ದಾರೆ. ಕಾಶ್ಮೀರದಲ್ಲಿ ೯೦ ಸಾವಿರ ಹಿಂದೂಗಳ ಹತ್ಯೆಯಾಯಿತು. ೪.೫ ಲಕ್ಷ ಹಿಂದೂಗಳು ನಿರಾಶ್ರಿತರಾದರು. ಈ ಅತ್ಯಾಚಾರಕ್ಕೆ ದೇಶದ ರಾಜಕಾರಣಿಗಳ ನಿಷ್ಕ್ರಿಯತೆಯೇ ಕಾರಣವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಧರ್ಮಾಂಧರ ಭಯೋತ್ಪಾದನೆಗೆ ರಾಜಕಾರಣಿಗಳು ನೀರು ಗೊಬ್ಬರ ಹಾಕಿದ್ದಾರೆ. ಇನ್ನೊಂದೆಂದರೆ ಇಂದಿನ ಆಡಳಿತವು ಸಾಧ್ವಿ ಪ್ರಜ್ಞಾ ಸಿಂಗರಿಗೆ ನೀಡುತ್ತಿದ್ದ ಹಿಂಸೆ ಪ್ರತಿಯೊಬ್ಬ ಹಿಂದೂವಿನಲ್ಲಿ ಆಕ್ರೋಶ ಮೂಡಿಸುವಂತಿದೆ. ಧರ್ಮಭ್ರಷ್ಟತೆಯ ಇಂತಹ ಅಮಾನುಷ ಹಿಂಸೆ ಇಂದಿನವರೆಗೆ ಯಾವುದೇ ಇತರ ಪಂಥೀಯರ ಪಾಲಿಗೆ ಬಂದಿಲ್ಲ. ಆದುದರಿಂದ ಆಡಳಿತ ಮತ್ತು ತನಿಖಾದಳವು ಸ್ವಾಮಿಯವರ ಹೃದಯ ಪರಿವರ್ತನೆ ಯಾಗಿದೆಯೆಂಬ ನೆಪ ಹೇಳದಿದ್ದರೆ ಉತ್ತಮ ! ಇಂದಿನ ಆಡಳಿತವು ಹಿಂದೂಗಳನ್ನು ಬಲಿಪಶು ಮಾಡಲು ಪ್ರಯತ್ನಿಸುತ್ತಿದೆ, ಇದೆಲ್ಲ ತಿಳಿಯದಿರಲು ಹಿಂದೂಗಳೇನು ಹಾಲು ಕುಡಿಯುವ ಮಕ್ಕಳಲ್ಲ. ಸಂತರು ಮತ್ತು ಅನೇಕ ದ್ರಷ್ಟಾರರು, ‘೨೦೧೨ ರಿಂದ ಧರ್ಮ-ಅಧರ್ಮದ ಹೋರಾಟ ನಡೆಯಲಿದೆ’ ಎಂದು ಹೇಳಿದ್ದಾರೆ. ಇಂದಿನ ಆಡಳಿತದ ‘ಹಾರಾಟ’ವು ಅದರ ನಿದರ್ಶಕವಾಗಿದ್ದು ಬೇಗನೇ ಈ ಆಡಳಿತರೂಪೀ ಅಧರ್ಮದ ಪರಾಜಯವಾಗಲಿದೆ. ಹಿಂದೂಗಳು ಈ ಹರಿಯುವ ಧರ್ಮಗಂಗೆಯಲ್ಲಿ ಧರ್ಮದ ಪರವಾಗಿದ್ದು ಸಂಘಟಿತರಾಗಬೇಕು ಮತ್ತು ಈಗಿನ ಜಾತ್ಯತೀತ ಆಡಳಿತವನ್ನು ನಾಶಗೊಳಿಸಲು ಪ್ರಯತ್ನಗಳನ್ನು ಪರಾಕಾಷ್ಠೆ ಮಾಡುವುದು ಅಷ್ಟೇ ಆವಶ್ಯಕವಾಗಿದೆ.

No comments:
Post a Comment