ಎಸ್.ಎಸ್.ಆರ್.ಎಫ್. ಕಾರ್ಯಾಗಾರದಲ್ಲಿ ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು....

ಎಸ್.ಎಸ್.ಆರ್.ಎಫ್. ಕಾರ್ಯಾಗಾರದಲ್ಲಿ ಸನಾತನದ
 ಸಂತ ಪೂ. ರಾಜೇಂದ್ರ ಶಿಂದೆಯವರು ಮಾಡಿದ ಮಾರ್ಗದರ್ಶನ!

ಸನಾತನದ ರಾಮನಾಥಿ ಆಶ್ರಮದಲ್ಲಿ ಮಾರ್ಗಶಿರ ಕೃಷ್ಣ ಚತುರ್ದಶಿ, ಕಲಿಯುಗ ವರ್ಷ ೫೧೧೨ (೩.೧.೨೦೧೧) ರಂದು ಎಸ್.ಎಸ್.ಆರ್.ಎಫ್.ನ ವಿದೇಶಿ ಸಾಧಕರ ಕಾರ್ಯಾಗಾರವನ್ನು ಸನಾತನದ ಸಂತ ಪೂ. ರಾಜೇಂದ್ರ ಶಿಂದೆಯವರು ಉದ್ಘಾಟಿಸಿದರು. ಪೂ. ರಾಜೇಂದ್ರ ಶಿಂದೆ ಯವರು ಕಾರ್ಯಾಗಾರದ ಸಮಯದಲ್ಲಿ ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ.
೧. ತೊಂದರೆಯ ಬಗ್ಗೆ
೧ ಅ. ಪರಸ್ಪರರಿಗೆ ತೊಂದರೆಯ ಬಗ್ಗೆ ಹೇಳುವುದು : ಸಾಧಕರಿಗೆ ಆಧ್ಯಾತ್ಮಿಕ ತೊಂದರೆಯಾಗುತ್ತಿದ್ದಲ್ಲಿ ಅವರು ಪರಸ್ಪರರಿಗೆ ಹೇಳಬೇಕು.
೧ ಆ. ವ್ಯಷ್ಟಿ ಮತ್ತು ಸಮಷ್ಟಿ ಸ್ವರೂಪದ ತೊಂದರೆ
ಅ. ಅನೇಕ ಸಾಧಕರಿಗೆ ತೊಂದರೆಯಾಗುತ್ತಿದ್ದಲ್ಲಿ ಅದು ಸಮಷ್ಟಿಗೆ ಸಂಬಂಧಿತ ತೊಂದರೆಯಾಗಿರುತ್ತದೆ.

ಆ. ಯಾರಾದರೊಬ್ಬ ಸಾಧಕನಿಗೆ ತೊಂದರೆಯಾಗುತ್ತಿದ್ದಲ್ಲಿ ಅದು ವ್ಯಷ್ಟಿಗೆ ಸಂಬಂಧಿತ ತೊಂದರೆಯಾಗಿರುತ್ತದೆ. ಆದುದರಿಂದ ಆ ಸಾಧಕರು ಸ್ವತಃ ತನಗೆ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು.
೨. ಸೂಕ್ಷ ದಿಂದ ಅಧ್ಯಯನ ಮಾಡುವುದರ ಮಹತ್ವ ಮತ್ತು ಉಪಯೋಗ
ಈ ಸಮಯದಲ್ಲಿ ಪೂಜ್ಯ ರಾಜೇಂದ್ರ ದಾದಾರವರು, ಸೂಕ್ಷ್ಮದ ಅಧ್ಯಯನ ಮಾಡುವುದು ಮಹತ್ವದ್ದಾಗಿದೆ. ಏಕೆಂದರೆ ನಾವು ಪ್ರಚಾರಕ್ಕಾಗಿ ಹೋದಾಗ ನಮಗೆ ಇತರರ ಅಧ್ಯಯನ ಮಾಡಲು ಗೊತ್ತಾಗಬೇಕು. ಯಾರಾದರೊಬ್ಬ ವ್ಯಕ್ತಿಯನ್ನು ಪ್ರತ್ಯಕ್ಷ ನೋಡಿದಾಗ ಏನು ಅನಿಸುತ್ತದೆ ಮತ್ತು ಸೂಕ್ಷ್ಮದಿಂದ ಅಧ್ಯಯನ ಮಾಡಿದಾಗ ಏನು ಅನಿಸುತ್ತದೆ ಎಂಬುದರ ಅಧ್ಯಯನವು ಮಹತ್ವದ್ದಾಗಿರುತ್ತದೆ. ನಾವು ವಿದೇಶದ ಬಾಲಸಾಧಕಿ ಗಾರ್ಗಿಯನ್ನು ಅನೇಕ ವರ್ಷಗಳಿಂದ ನೋಡುತ್ತಿದ್ದರೂ ಸೂಕ್ಷ್ಮದಿಂದ ನೋಡಿದಾಗ ಅವಳ ಅನೇಕ ಗುಣಗಳು ಗಮನಕ್ಕೆ ಬಂದವು. ಹಾಗೆಯೇ ಅಧ್ಯಾತ್ಮ ಪ್ರಚಾರಕ್ಕಾಗಿ ಹೋದಾಗ ಸ್ವಂತದ ಬುದ್ಧಿಯನ್ನು ಉಪಯೋಗಿಸದೇ ಎದುರಿನ ವ್ಯಕ್ತಿಯತ್ತ ನೋಡಿ ಮತ್ತು ಸೂಕ್ಷ್ಮದಿಂದ ಏನು ಅನಿಸುತ್ತದೆ ಎಂಬುದರ ಕಡೆಗೆ ಗಮನ ನೀಡಿರಿ. ಇದರಿಂದ ಅವರಲ್ಲಿ ಅಧ್ಯಾತ್ಮದ ಆಸಕ್ತಿಯಿದೆಯೋ ಇಲ್ಲವೋ ಎಂದು ನಿರ್ಧರಿಸಿರಿ. ಹೀಗೆ ಮಾಡುವುದರಿಂದ ಪ್ರಚಾರ ಸೇವೆಯಲ್ಲಿನ ಬಹಳ ಸಮಯದ ಉಳಿತಾಯವಾಗುತ್ತದೆ.
೩. ತಪ್ಪುಗಳ ಬಗ್ಗೆ  ಮಾಡಿದ ಮಾರ್ಗದರ್ಶನ
ಅ. ನಮ್ಮಿಂದಾದ ಪ್ರತಿಯೊಂದು ತಪ್ಪಿಗೆ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು, ಆಗಲೇ ತಪ್ಪುಗಳಿಂದ ಸಾಧನೆಗಾಗುವ ಹಾನಿಯನ್ನು ತುಂಬಿಸಿಕೊಳ್ಳಬಹುದು.
ಆ. ನಮ್ಮಿಂದಾದ ಯಾವುದಾದರೊಂದು ತಪ್ಪು ನೆನಪಾಗುತ್ತಿಲ್ಲ ಎಂದಾದರೆ ಇತರರ ಹೇಳಿಕೆಯ ಮೇಲೆ ವಿಶ್ವಾಸವನ್ನಿರಿಸಿ ಅದನ್ನು ನಾವು ಯಾವುದೇ ನೆಪ ಹೇಳದೇ ಸ್ವೀಕರಿಸಬೇಕು. ಒಂದು ವೇಳೆ ಆ ತಪ್ಪು ನೆನಪಾಗುತ್ತಿಲ್ಲ ಎಂದಾದರೆ ಹೌದು, ಆ ತಪ್ಪು ನನ್ನಿಂದಾಗಿದೆ ಎಂದು ಹೇಳಿ ಅದು ಯಾಕಾಯಿತು ಎಂದು ಸಹ ಸ್ಪಷ್ಟವಾಗಿ ಹೇಳಿ ಮುಂದೆ ಹಾಗಾಗದಂತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಬೇಕು.
ಇ. ನಮಗೆ ಉನ್ನತಿಗಾಗಿ ಇದು ಅವಶ್ಯವಾಗಿರುತ್ತದೆ ಮತ್ತು ಇದರಿಂದಲೇ ಕಲಿಯಲು ಸಿಗುತ್ತದೆ.
ಈ. ಪ್ರತಿಯೊಬ್ಬರೂ ‘ನನ್ನಿಂದ ಸೇವೆಯನ್ನು ಮಾಡುತ್ತಿರುವಾಗ ಏಕೆ ತಪ್ಪಾಯಿತು’ ಎಂದು ಅಧ್ಯಯನ ಮಾಡಬೇಕು. ಯಾವುದಾದರೊಂದು ಸೇವೆಯು ಇಷ್ಟವಾಗುತ್ತಿಲ್ಲ ಎಂದು ಆ ತಪ್ಪಾಯಿತೋ ಅಥವಾ ಇತರ ಸೇವೆಗಳಿಗೆ ಪ್ರಾಧಾನ್ಯತೆ ನೀಡಿದುದರಿಂದ ಹೀಗಾಯಿತೋ ಎಂದು ಪರಿಶೀಲಿಸಬೇಕು.
ಉ. ಸಾಧಕರಿಗೆ ಯಾವುದಾದರೊಂದು ಸೇವೆಯನ್ನು ನೀಡುವಾಗ ‘ಈ ಸಾಧಕನು ಸಂಪೂರ್ಣ ಜವಾಬ್ದಾರಿ ವಹಿಸಿ ಆ ಸೇವೆಯನ್ನು ಪೂರ್ಣಗೊಳಿಸುವವನೇ ಇದ್ದಾನೆ’ ಎಂಬ ವಿಶ್ವಾಸವಿರಿಸಿ ಕೊಡಲಾಗುತ್ತದೆ. ಆದರೆ ಅದರಲ್ಲಿ ಬೇಜವಾಬ್ದಾರಿಯಿಂದ ನಾವು ತಪ್ಪು ಮಾಡತೊಡಗಿದರೆ ಆ ಸಾಧಕರ ವಿಷಯದಲ್ಲಿ ಪ್ರಮುಖರಿಗಿರುವ ವಿಶ್ವಾಸವು ಕಡಿಮೆಯಾಗುತ್ತದೆ. ಮುಂದಿನ ಬಾರಿ ಸೇವೆಯನ್ನು ನೀಡುವಾಗ ಈ ಸಾಧಕನಿಗೆ ಸೇವೆಯನ್ನು ನೀಡಬೇಕೋ ಬೇಡವೋ ಎಂಬ ವಿಷಯದಲ್ಲಿ ಪ್ರಮುಖ ಸೇವಕರು ವಿಚಾರ ಮಾಡುತ್ತಾರೆ. ಅನಂತರ ಆ ಸಾಧಕರ ಬದಲು ಇತರ ಸಾಧಕರಿಗೆ ಸೇವೆಯ ಅವಕಾಶವನ್ನು ನೀಡಲಾಗುತ್ತದೆ.
೪. ಆಶ್ರಮದಲ್ಲಿ ಅತ್ಯಧಿಕ ಪ್ರಾರ್ಥನೆಯನ್ನು ಮಾಡುತ್ತಾ ಸಾಧನೆಯನ್ನು ಮಾಡುವುದು ಅವಶ್ಯಕ !
ಬಟ್ಟೆಗಳಿಗೆ ಆವರಣ ಬರುವುದರಿಂದ ಏನಾಗುತ್ತದೆ ಮತ್ತು ಅದನ್ನು ತೆಗೆಯಲು ಎಷ್ಟು ಸಮಯ ತಗಲುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಅದರ ಅಧ್ಯಯನ ಮಾಡದಿದ್ದರೆ ಇಲ್ಲಿಂದ ವಾಪಾಸು ಹೋಗುವಾಗ ಬಟ್ಟೆಯ ಮೇಲಿನ ಆವರಣವನ್ನು ತೆಗೆದುಕೊಂಡು ಹೋಗುವ ಸಾಧ್ಯತೆಯಿದೆ. ಆಶ್ರಮದಲ್ಲಿ ಉಪಾಯಕ್ಕಾಗಿ ಇಟ್ಟಿರುವ ಬಟ್ಟೆಗಳು ತಾವಾಗಿ ಪ್ರಾರ್ಥನೆ ಮಾಡಲಾರವು. ಆದರೂ ಅವು ಆಶ್ರಮದಲ್ಲಿರುವ ಚೈತನ್ಯದಿಂದ ಶುದ್ಧವಾಗುತ್ತವೆ. ಹಾಗಾಗಿ ಸಾಧಕರು ಆಶ್ರಮದಲ್ಲಿ ಅತ್ಯಧಿಕ ಪ್ರಾರ್ಥನೆ ಮಾಡುತ್ತಾ ಸಾಧನೆ ಮಾಡಿದರೆ ಅವರಿಗೆ ಅದರಿಂದ ಬಹಳ ಲಾಭವಾಗುತ್ತದೆ.
೫. ಯಾರಾದರೊಬ್ಬರು ಸೇವೆಯನ್ನು ನೀಡಿದಾಗ ಆ ಸೇವೆಯು ನಮಗೆ ಸಂಬಂಧಿತವಾಗಿಲ್ಲದಿದ್ದರೆ ಸಕಾರಾತ್ಮಕ ವಿಚಾರವನ್ನು ಹೇಗಿಡಬೇಕು ?
ಅ. ಈಶ್ವರನು ನನಗೆ ಅವರ ಸೇವೆಯನ್ನು ಮಾಡುವ ಅವಕಾಶ ನೀಡಿದ್ದಾನೆ ಎಂಬ ಭಾವವಿಡಬೇಕು.
ಆ. ನೀಡಿದ ಸೇವೆಯು ನಮಗೆ ಹೊಂದಾಣಿಕೆಯಾಗುವಂತಿಲ್ಲ ಎಂದಾದರೆ ಅದರ ವಿಷಯದಲ್ಲಿ ಶಾಂತವಾಗಿ ಜವಾಬ್ದಾರಿಯಿರುವ ಸಾಧಕರಿಗೆ ತಿಳಿಸಬೇಕು.
ಇ. ಪೂರ್ವಗ್ರಹಪೀಡಿತರಾಗಿ ಸೇವೆಯನ್ನು ಹೇಳಿದ ಸಾಧಕರ ಬಗ್ಗೆ ಮನಸ್ಸಿನಲ್ಲಿ ಪ್ರತಿಕ್ರಿಯೆ ಬಂದಲ್ಲಿ ‘ಪೂರ್ವಗ್ರಹಪೀಡಿತ’ ದೋಷಕ್ಕೆ ಸ್ವಯಂಸೂಚನೆ ನೀಡಬೇಕು.
ಈ. ಸ್ವಯಂಸೂಚನೆಯಲ್ಲಿ ಯಾವ ಸಾಧಕರ ಬಗ್ಗೆ ಪೂರ್ವಗ್ರಹವಿದೆಯೋ ಅವರ ಒಳ್ಳೆಯ ಗುಣಗಳನ್ನು ಉಲ್ಲೇಖಿಸಬೇಕು.
ಉ. ಯಾವ ಸಾಧಕರ ಬಗ್ಗೆ ಪ್ರತಿಕ್ರಿಯೆ ಬರುತ್ತದೆಯೋ ಆ ಸಾಧಕರೊಂದಿಗೆ ಮಾತನಾಡಬೇಕು. ಇದರಿಂದ ಈ ಸಾಧಕರಿಗೂ ತಮ್ಮ ಯಾವ ಕೃತಿಯಿಂದ ಇತರರಿಗೆ ಪ್ರತಿಕ್ರಿಯೆಗಳು ಬರುತ್ತವೆ ಎಂಬುದು ಗಮನಕ್ಕೆ ಬರುತ್ತದೆ. ಮಾತನಾಡಿಕೊಳ್ಳುವುದರಿಂದ ಇಬ್ಬರಿಗೂ ಸಾಧನೆಯ ದೃಷ್ಟಿಯಿಂದ ಲಾಭವಾಗುತ್ತದೆ.
ಊ. ಯಾರಾದರೊಬ್ಬ ಸಾಧಕರ ಬಗ್ಗೆ ಬಂದಂತಹ ಪ್ರತಿಕ್ರಿಯೆಯನ್ನು ಹೇಳುವಾಗ ಅವರನ್ನು ದೂರುವಂತೆ ಹೇಳಬಾರದು. ಪ್ರತಿಕ್ರಿಯೆ ಹೇಳುವಾಗಲೂ ನಾನು ನನ್ನ ದೋಷವನ್ನು ನಿವಾರಿಸಲು (ಹಾಗೂ ಸಮಸ್ಯೆ ಪರಿಹಾರವಾಗಬೇಕೆಂದು) ಅವರ ಸಹಾಯ ಪಡೆಯುತ್ತಿದ್ದೇನೆ ಎಂಬ ಭಾವವಿರಬೇಕು.
ಎ. ತಪ್ಪುಗಳ ಪರಿಪೂರ್ಣ ಅಧ್ಯಯನ ಮಾಡಬೇಕು ಮತ್ತು ಅದನ್ನು ಯೋಗ್ಯರೀತಿಯಲ್ಲಿ ಹೇಳಬೇಕು. ಅದರ ಹಿಂದೆ ಇತರರಿಗೂ ಅದು ಗೊತ್ತಾಗುತ್ತದೆ ಮತ್ತು ಅದರಲ್ಲಿ ಅವರ ಸಮಯವು ವ್ಯರ್ಥವಾಗುವುದಿಲ್ಲ.
೬. ಸ್ಕೈಪ್ ತಂತ್ರಾಂಶವನ್ನು ಉಪಯೋಗಿಸಿ ಎಸ್.ಎಸ್.ಆರ್.ಎಫ್.ನ ಮೂಲಕ ತೆಗೆದುಕೊಳ್ಳಲಾಗುವ ಸತ್ಸಂಗದ ಬಗ್ಗೆ ಮಾಡಿದ ಮಾರ್ಗದರ್ಶನ
ಅ. ಸತ್ಸಂಗದ ಸ್ತರವು ಹೇಗಿರಬೇಕು ಎಂದರೆ ಅಲ್ಲಿ ಭಾವ ಮತ್ತು ಚೈತನ್ಯ ಅನುಭವಿಸಲು ಆಗಬೇಕು.
ಆ. ನಮ್ಮ ಸಂಕೇತಸ್ಥಳಕ್ಕೆ ಪ್ರತಿತಿಂಗಳು ಒಂದು ಲಕ್ಷ ಜಿಜ್ಞಾಸುಗಳು ಭೇಟಿ ನೀಡುತ್ತಾರೆ. ಹಾಗಾಗಿ ನಮ್ಮ ಸತ್ಸಂಗವೂ ಹೆಚ್ಚು ಉತ್ತಮವಾಗಬೇಕು.
ಇ. ಸತ್ಸಂಗ ತೆಗೆದುಕೊಳ್ಳುವವರಲ್ಲಿರುವ ಕಲಿಯುವ ವೃತ್ತಿ ಮತ್ತು ಈಶ್ವರ ಪ್ರಾಪ್ತಿಯ ತಳಮಳದ ಮೇಲೆ ಸತ್ಸಂಗದ ಗುಣಮಟ್ಟವು ಅವಲಂಬಿಸಿಕೊಂಡಿರುತ್ತದೆ.
ಈ. ತನ್ನಲ್ಲಿ ಈಶ್ವರಪ್ರಾಪ್ತಿಯ ತಳಮಳ ಹೆಚ್ಚಾಗಬೇಕೆಂದು ಪ್ರಾರ್ಥನೆ ಮಾಡಬೇಕು.
ಉ. ಸತ್ಸಂಗ ತೆಗೆದುಕೊಳ್ಳುವವರಿಗೆ ತಮ್ಮ ಮೇಲೆ ಗಮನ ಇರಬೇಕು. ವಿಷಯದ ಉತ್ತಮ ಅಧ್ಯಯನವಾಗಿದೆ, ವಿಷಯವನ್ನು ಚೆನ್ನಾಗಿ ಹೇಳುತ್ತೇನೆ ಎಂಬಂತಹ ಪ್ರಸಂಗಗಳಲ್ಲಿ ಅಹಂ ಹೆಚ್ಚಾಗುತ್ತಿದೆಯೋ ಅಥವಾ ಭಾವವೋ ಎಂದು ಅಧ್ಯಯನ ಮಾಡಬೇಕು.
ಊ. ಸತ್ಸಂಗ ತೆಗೆದುಕೊಳ್ಳುವ ಅವಕಾಶ ಸಿಕ್ಕಿರುವುದರಿಂದ ಸತ್ಸಂಗ ಸೇವಕರು ಈಶ್ವರನ ಚರಣಗಳಲ್ಲಿ ಸತತವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
೭. ದಿನವಿಡೀ ಎಷ್ಟು ಗಂಟೆ ಸಾಧನೆಯಾಯಿತು ಎಂಬುದರ ವರದಿ ತೆಗೆದುಕೊಳಬೇಕು
ಅ. ಸಾಧನೆ ಉತ್ತಮವಾಗುತ್ತಿದ್ದಲ್ಲಿ ಹೆಚ್ಚು ಸೇವೆಯಾಗುತ್ತದೆ : ಸಾಧನೆ ಹೆಚ್ಚಾದಂತೆ ಹೆಚ್ಚು ಪ್ರಮಾಣದಲ್ಲಿ ಸಮರ್ಪಣೆ ಯಾಗಬೇಕು (ಸೇವೆಗೆ ಅರ್ಪಿಸಿಕೊಳ್ಳಬೇಕು) ಎಂಬ ವಿಚಾರವು ಮನಸ್ಸಿಗೆ ಬರುತ್ತದೆ. ಇದರಿಂದ ದಿನವಿಡೀ ನಮ್ಮಿಂದ ಎಷ್ಟು ಗಂಟೆ ಸೇವೆಯಾಗುತ್ತದೆ ಎಂಬುದನ್ನು ಪಟ್ಟಿಯಲ್ಲಿ ನೋಂದಣಿ ಮಾಡಿಡುವುದು ಅವಶ್ಯವಾಗಿದೆ.
ಆ. ನಾವು ಯಾವ ವಿಷಯದಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಗುರುತಿಸುವುದು : ನಾವು ಯಾವ ವಿಷಯದಲ್ಲಿ ಕಡಿಮೆ ಬೀಳುತ್ತಿದ್ದೇವೆ ಎಂದು ಪರಿಶೀಲಿಸಬೇಕು. ಉದಾ. ನಾನು ದಿನವಿಡೀ ೮-೧೦ ಸಲ ಪ್ರಾರ್ಥನೆಯನ್ನು ಮಾಡುತ್ತೇನೆ ಆದರೆ ಈಗ ಕಡಿಮೆಪಕ್ಷ ೩೦ ಪ್ರಾರ್ಥನೆಯನ್ನಾದರೂ ಮಾಡಬೇಕು.
ಇ. ಸಮಯಮಿತಿ : ಪ್ರತಿಯೊಂದು ಸೇವೆಗೆ ಸಮಯಮಿತಿ ಹಾಕಿಕೊಳ್ಳಬೇಕು.
ಈ. ಸರ್ವಾಂಗೀಣ ಪ್ರಗತಿಯು ಅವಶ್ಯಕ : ಸರ್ವಾಂಗೀಣ ಪ್ರಯತ್ನವಾದರೆ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ. ಸಾಧನೆಗೆ ಸಂಬಂಧಿತ ಎಲ್ಲ ಘಟಕಗಳಲ್ಲಿ (ಅಷ್ಟಾಂಗ ಘಟಕಗಳಲ್ಲಿ) ವೃದ್ಧಿಯಾಗುತ್ತದೆಯೋ ಆಗ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗುತ್ತದೆ.
ಉ. ಭಾವವೃದ್ಧಿ : ಕಲಿಯುಗದಲ್ಲಿ ಗರಿಷ್ಟ ಶೇ. ೩೦ ರಷ್ಟು ಭಾವವೃದ್ಧಿಯಾಗಲು ಸಾಧ್ಯವಿದೆ. ಆದರೆ ಹೀಗಿದ್ದರೂ ಕೆಲವು ಸಾಧ ಕರ ವ್ಯಕ್ತಭಾವವು ಶೇ. ೫೦ ರ ತನಕ ಏರಿದೆ.
೮. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಹೆಚ್ಚು ಹೆಚ್ಚು ಸೇವೆಯನ್ನು ಮಾಡುವ ಸಾಧಕರ ಮೇಲೆ ಈಶ್ವರನ ಕೃಪೆಯೂ ಹೆಚ್ಚಾಗುವುದು, ಅನುಕೂಲ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸೇವೆಯನ್ನು ಮಾಡುವ ಸಾಧಕರು ಮತ್ತು ಅವರ ಮೇಲಾಗುವ ಗುರುಕೃಪೆಯ ಬಗ್ಗೆ ಪೂಜ್ಯ ರಾಜೇಂದ್ರ ದಾದಾರವರು ಮುಂದಿನ ಮಾರ್ಗದರ್ಶನ ಮಾಡಿದರು.
ಅ. ಪರಿಸ್ಥಿತಿ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸೇವೆಯ ಫಲವು ಹೆಚ್ಚಿರುತ್ತದೆ : ಸಾಧನೆ, ಸೇವೆ ಇವುಗಳಿಗಾಗಿ ಪ್ರತಿಯೊಂದು ಸ್ಥಳದಲ್ಲಿ ಬೇರೆಬೇರೆ ಪರಿಸ್ಥಿತಿಯಿರುತ್ತದೆ. ಸೇವೆಯ ಫಲವು ಸೇವೆಯು ಎಷ್ಟು ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾಡಲ್ಪ ಟ್ಟಿತು ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಏನಾದರೂ ಮಾಡಲು ಪ್ರಯತ್ನಿಸುವ ಸಾಧಕರಿಗೆ ಈಶ್ವರನಿಂದ ಹೆಚ್ಚು ಅಂಕಗಳು ಸಿಗುತ್ತವೆ. ಉದಾ. ಇಬ್ಬರು ಸಾಧಕರು ಎರಡೆರಡು ಗಂಟೆ ಸೇವೆಯನ್ನು ಮಾಡುತ್ತಿದ್ದಾರೆ. ಅವರಲ್ಲಿ ಯಾವ ಸಾಧಕರು ಹೆಚ್ಚು ಪ್ರತಿಕೂಲ ಪರಿಸ್ಥಿತಿಯಲ್ಲಿ ಎರಡು ಗಂಟೆ ಸೇವೆಯನ್ನು ಮಾಡುತ್ತಾನೆಯೋ ಅವನಿಗೆ ಈಶ್ವರನಿಂದ ಹೆಚ್ಚು ಅಂಕಗಳು ಸಿಗುತ್ತವೆ.
ಆ. ಭಾರತ ಮತ್ತು ವಿದೇಶಗಳಲ್ಲಿ ಪ್ರಸಾರಕಾರ್ಯ ಮತ್ತು ಸಾಧನೆ ಮತ್ತು ಅವುಗಳ ಫಲ : ಭಾರತದಲ್ಲಿ ಪ್ರಚಾರ ಕಾರ್ಯ ಮಾಡುವುದಕ್ಕಿಂತ ವಿದೇಶದಲ್ಲಿ ಪ್ರಚಾರಕಾರ್ಯ ಮಾಡುವ ಸಾಧಕರ ಮೇಲೆ ಈಶ್ವರನು ಹೆಚ್ಚು ಕೃಪೆಯನ್ನು ತೋರುತ್ತಾನೆ. ವಿದೇಶದಲ್ಲಿ ನಮಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಪ್ರಚಾರದ ತೀವ್ರ ತಳಮಳ ಇದ್ದಲ್ಲಿ ಈಶ್ವರನು ಹೆಚ್ಚು ಕೃಪೆ ತೋರುತ್ತಾನೆ. ಬೇರೆಬೇರೆ ದೇಶಗಳಲ್ಲಿ ಪ್ರಚಾರ ಕಾರ್ಯ ಮಾಡುವವರ ಮೇಲೆ ಕೃಪೆಯಾಗುವ ಅಂಕಿಅಂಶವೂ ಪ್ರತಿಕೂಲತೆಗನುಸಾರವಾಗಿ ಬದಲಾಗುತ್ತದೆ.
೯. ಕ್ಷಮತೆ ಮತ್ತು ಗುಣಕ್ಕನುಸಾರ ಸೇವೆಯು ವಿಭಿನ್ನವಾಗಿದ್ದರೂ ಎಲ್ಲರೂ ಭಾವವೃದ್ಧಿ ಮತ್ತು ಅಹಂ ನಿರ್ಮೂಲನೆ ಮಾಡಬೇಕು !
ಮೊದಲು ಕೆಲವು ಸಾಧಕರು ಪ್ರಚಾರ ಜವಾಬ್ದಾರಿಯನ್ನು ನೋಡುತ್ತಿದ್ದರು. ಈಗ ಅವರು ಸಾಧಕರ ಆಯೋಜನೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಸಾಧನೆಯ ಬಗ್ಗೆ ಮುಂದಿನ ಸಕಾರಾತ್ಮಕ ವಿಚಾರವನ್ನು ಇಟ್ಟುಕೊಳ್ಳಬೇಕು.
ಅ. ಈಗ ಸೇವೆಯ ಸ್ವರೂಪವು ಬದಲಾಗಿದೆ. ನನ್ನ ಸಾಧನೆಯಾಗುತ್ತಿಲ್ಲ ಎಂಬ ವಿಚಾರ ಮಾಡಬಾರದು.
ಆ. ಕ್ಷಮತೆಗನುಸಾರ ಸೇವೆಯನ್ನು ಮಾಡಬೇಕು. ಕೆಲವರಲ್ಲಿ ನೇತೃತ್ವ ಗುಣವಿದ್ದಲ್ಲಿ ಅವರು ಸಾಧಕರ ಕ್ಷಮತೆಗನುಸಾರ ಅವರ ಸೇವೆಯ ಆಯೋಜನೆ ಮಾಡಬೇಕು.
ಇ. ಸಾಧಕರಲ್ಲಿ ಗುಣ ಮತ್ತು ಕ್ಷಮತೆಯಿರುತ್ತದೆ. ಆದರೆ ಅವರು ಅದನ್ನು ಉಪಯೋಗಿಸದಿದ್ದರೆ ಈಶ್ವರನಿಂದ ಸಿಗುವ ಅಂಕ(ಕೃಪೆ)ವನ್ನು ಕಳೆದುಕೊಳ್ಳುತ್ತಾರೆ.
ಈ. ಆದರೆ ಮೇಲಿನ ಅಂಶಗಳು, ಭಾವ ವೃದ್ಧಿ, ಅಹಂನಿರ್ಮೂಲನೆ, ಮತ್ತು ತಳಮಳಕ್ಕೆ ಅನ್ವಯಿಸುವುದಿಲ್ಲ. ಯಾರು ಯಾವ ಮಟ್ಟ ದವರಾಗಿದ್ದರೂ ಭಾವವೃದ್ಧಿ ಮತ್ತು ಅಹಂ ನಿರ್ಮೂಲನೆ ಮಾಡುವುದು ಹಾಗೂ ತಳಮಳ ಹೆಚ್ಚಿಸುವುದು ಅವಶ್ಯಕ ವಾಗಿದೆ.       (ಮುಂದುವರಿಯುವುದು)

No comments:

Post a Comment