ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ....

ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ

ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ ಉಪಚಾರಗಳಲ್ಲಿ ೯. ಗಂಧವನ್ನು ಹಚ್ಚುವುದು, ೧೦. ಹೂವುಗಳನ್ನು ಅರ್ಪಿಸುವುದು, ೧೧. ಧೂಪವನ್ನು ತೋರಿಸುವುದು, ೧೨. ದೀಪವನ್ನು ಬೆಳಗುವುದು, ೧೩. ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ. (ಮುಂದುವರಿದ ಭಾಗ )
(ಕಳೆದ ವಾರದ  ಭಾಗ : http://kannadasanatanprabhat.blogspot.com/2011/01/blog-post_6928.html )

೨ ಆ ೨ ಈ. ದೇವರ ಚರಣಗಳಲ್ಲಿ ಮತ್ತು ತಲೆಯ ಮೇಲೆ ಅರ್ಪಿಸಿದ ಹೂವುಗಳ ತುಲನೆ
ಇಂದು ಹೂವುಗಳನ್ನು ದೇವತೆಯ ಚರಣಗಳಲ್ಲಿ ಮತ್ತು ದೇವತೆಯ ತಲೆಯ ಮೇಲೆ ಅರ್ಪಿಸುವ ಎರಡು ಪದ್ಧತಿಗಳು ರೂಢಿಯಲ್ಲಿವೆ. ಚರಣಗಳಲ್ಲಿ ಹೂವುಗಳನ್ನು ಅರ್ಪಿಸುವುದರಿಂದ ದೇವತೆಯ ಬಗ್ಗೆ ಶರಣಾಗತ ಭಾವವು ನಿರ್ಮಾಣವಾಗಲು ಸಹಾಯವಾಗುತ್ತದೆ. ಶರಣಾಗತಭಾವವು ಪೂಜಕರ ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದ ಮಹತ್ವದ್ದಾಗಿರುವುದರಿಂದ ಸಾಮಾನ್ಯ ಪೂಜಕರು ಚರಣಗಳ ಮೇಲೆ ಹೂವುಗಳನ್ನು ಅರ್ಪಿಸುವುದು ಹೆಚ್ಚು ಯೋಗ್ಯವಾಗಿದೆ.
೨ ಆ ೨ ಉ. ದೇವರಿಗೆ ಮೊಗ್ಗು, ಒಣಗಿದ ಮತ್ತು ಗಿಡದಿಂದ ಉದುರಿ ಬಿದ್ದಿರುವ ಹೂವುಗಳನ್ನು ಏಕೆ ಅರ್ಪಿಸ ಬಾರದು ? (ಮೊಗ್ಗುಗಳಲ್ಲಿ ಹಾಗೂ ಒಣಗಿದ ಮತ್ತು ಗಿಡದಿಂದ ಉದುರಿ ಬಿದ್ದಿರುವ ಹೂವುಗಳಲ್ಲಿ ಚೈತನ್ಯದ ಪ್ರಮಾಣವು ಬಹಳ ಕಡಿಮೆಯಿರುವುದ ರಿಂದ ಅವುಗಳ ಮೇಲೆ ಕಪ್ಪು ಆವರಣವು ಬರುವ ಸಾಧ್ಯತೆಯಿರುತ್ತದೆ; ಆದುದರಿಂದ ಅವುಗಳನ್ನು ದೇವರಿಗೆ ಅರ್ಪಿಸಬಾರದು) :  ಮೊಗ್ಗುಗಳಲ್ಲಿ ಸುಗಂಧದ ಮತ್ತು ಬಣ್ಣದ ಕಣಗಳು ಅಪ್ರಕಟ ಸ್ಥಿತಿಯಲ್ಲಿರುತ್ತವೆ. ಮೊಗ್ಗುಗಳು ಹೂವುಗಳಲ್ಲಿ ರೂಪಾಂತರವಾಗುವಾಗ ಅವುಗಳಲ್ಲಿನ ರಜೋಕಣಗಳ ಚಲನವಲನವು ಹೆಚ್ಚಾಗುತ್ತದೆ. ಈ ಚಲನ ವಲನದಿಂದ ನಿರ್ಮಾಣವಾದ ಘರ್ಷಣಯುಕ್ತ ಉಷ್ಣಶಕ್ತಿಯ ಲಹರಿಗಳಿಂದ ಮೊಗ್ಗುಗಳು ಹೂವಿನಲ್ಲಿ ರೂಪಾಂತರವಾಗಲು ಪ್ರಾರಂಭವಾಗುತ್ತವೆ; ಇದರಿಂದ ಹೂವುಗಳಲ್ಲಿರುವ ಬಣ್ಣದ ಮತ್ತು ಸುಗಂಧದ ಕಣಗಳು ಕಾರ್ಯನಿರತವಾಗುತ್ತವೆ. ರಜೋಕಣಗಳ ಚಲನವಲನದಿಂದಾಗಿ ಸುಗಂಧದ ಮತ್ತು ಬಣ್ಣದ ಕಣಗಳಿಂದ ವಾತಾವರಣದಲ್ಲಿ ಪ್ರಕ್ಷೇಪಿತವಾಗುವ ಲಹರಿಗಳಿಂದ ಆಯಾ ದೇವತೆಗಳ ತತ್ತ್ವವು ಬ್ರಹ್ಮಾಂಡದಿಂದ ಹೂವುಗಳ ಕಡೆಗೆ ಆಕರ್ಷಿತವಾಗಲು ಪ್ರಾರಂಭವಾಗುತ್ತದೆ. ಈ ರೀತಿ ಚೈತನ್ಯದಿಂದ ತುಂಬಿ ಅರಳಿದ ಹೂವುಗಳನ್ನು ದೇವತೆಗಳಿಗೆ ಅರ್ಪಿಸಿದರೆ ದೇವತೆಗಳು ಪ್ರಸನ್ನರಾಗಿ ಜೀವಕ್ಕೆ ಚೈತನ್ಯವನ್ನು ಕೊಡುತ್ತಾರೆ. ಇದಕ್ಕೆ ವಿರುದ್ಧವಾಗಿ ಯಾವಾಗ ಹೂವುಗಳು ಒಣಗುತ್ತವೆಯೋ ಆಗ ಅವುಗಳ ರಜೋ ಕಣಗಳ ಚಲನವಲನವು ಕಡಿಮೆಯಾಗುವುದರಿಂದ ಅವುಗಳಲ್ಲಿರುವ ಜೀವಂತಿಕೆಯು ನಾಶವಾಗಲು ಪ್ರಾರಂಭವಾಗಿರುತ್ತದೆ; ಇದರಿಂದ ಅವುಗಳಲ್ಲಿರುವ ಸುಗಂಧದ ಮತ್ತು ಬಣ್ಣದ ಕಣಗಳ ಕಾರ್ಯ ಕ್ಷಮತೆಯು ಕಡಿಮೆಯಾಗಿ ಅವು ಮೃತವಾಗುತ್ತವೆ. ಒಣಗಿದ ಹಾಗೂ ಗಿಡದಿಂದ ಉದುರಿ ಬಿದ್ದಿರುವ ಹೂವುಗಳಲ್ಲಿ ಮತ್ತು ಮೊಗ್ಗುಗಳಲ್ಲಿ ಬಣ್ಣದ ಮತ್ತು ಸುಗಂಧದ ಕಣಗಳ ಕಾರ್ಯಕ್ಷಮತೆಯು ಕಡಿಮೆಯಾಗಿರುವುದರಿಂದ ಅವು ಬ್ರಹ್ಮಾಂಡದಲ್ಲಿನ ಆಯಾ ದೇವತೆಯ ಚೈತನ್ಯಲಹರಿಗಳನ್ನು ಆಕರ್ಷಿಸಿಕೊಳ್ಳುವುದಿಲ್ಲ. ಇದರಿಂದ ಅವುಗಳ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಮತ್ತು ಕಪ್ಪು ಆವರಣವು ಬರುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇಂತಹ ಚೈತನ್ಯ ರಹಿತ ಹೂವುಗಳನ್ನು ದೇವರಿಗೆ ಅರ್ಪಿಸಿದರೆ ಜೀವಕ್ಕೆ ಚೈತನ್ಯದ ಲಾಭವಾಗುವುದಿಲ್ಲ. ಆದುದರಿಂದ ಮೊಗ್ಗು, ಒಣಗಿದ ಮತ್ತು ಗಿಡದಿಂದ ಉದುರಿ ಬಿದ್ದಿರುವ ಹೂವುಗಳನ್ನು ದೇವರಿಗೆ ಅರ್ಪಿಸಬಾರದು. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೧.೫.೨೦೦೫, ಮಧ್ಯಾಹ್ನ ೨.೦೩)
೨ ಆ ೩. ಶಿವಲಿಂಗದ ಮೇಲೆ ಅರ್ಪಿಸಿದ ಎಲೆ, ಹೂವು, ನೀರು ಮುಂತಾದವುಗಳನ್ನು ಸ್ವೀಕರಿಸಬಾರದು, ಆದರೆ ಅವುಗಳನ್ನು ಸಾಲಿಗ್ರಾಮಕ್ಕೆ ಸ್ಪರ್ಶಿಸಿದರೆ ಅವು ಸೇವನೆಗೆ ಯೋಗ್ಯ ವಾಗುತ್ತವೆ
ಅಗ್ರಾಹ್ಯಂ ಶಿವನಿರ್ಮಾಲ್ಯಂ ಪತ್ರಂ ಪುಷ್ಪಂ ಫಲಂ ಜಲಮ್ |
ಶಾಲಗ್ರಾಮಶಿಲಾಸ್ಪರ್ಶಾತ್ಸರ್ವಂ ಯಾತಿ ಪವಿತ್ರತಾಮ್ ||
ಅಗ್ರಾಹ್ಯಂ ಶಿವನೈವೇದ್ಯಂ ಪತ್ರಂ ಪುಷ್ಪಂ ಫಲಂ ಜಲಮ್ ||
ಶಾಲಗ್ರಾಮಶಿಲಾಸಂಗಾತ್ಸರ್ವಂ ಯಾತಿ ಪವಿತ್ರತಾಮ್ ||
ಅಭಕ್ಷ ಂ ಶಿವನಿರ್ಮಾಲ್ಯಂ ಪತ್ರಂ ಪುಷ್ಪಂ ಫಲಂ ಜಲಮ್ |
ಶಾಲಗ್ರಾಮಶಿಲಾಯೋಗಾತ್ ಪಾವನಂ ತದ್ ಭವೇತ್ ಸದಾ || - ನಾರದಪುರಾಣ, ಪೂರ್ವ. ೬೭.೧೨೩-೧೨೪, ಶಿವಪುರಾಣ,    ವಿ. ೨೨.೧೯ ಮತ್ತು ವರಾಹಪುರಾಣ ೧೮೬.೫೨-೫೩
ಅರ್ಥ : ಶಿವನಿಗೆ ಅರ್ಪಿಸಿದ ಎಲೆ, ಹೂವು, ಹಣ್ಣು, ನೀರು ಮತ್ತು ನೈವೇದ್ಯವನ್ನು ಸ್ವೀಕರಿಸಬಾರದು, ಅದರಂತೆಯೇ ಶಿವಲಿಂಗದ ಮೇಲಿನ ನಿರ್ಮಾಲ್ಯವನ್ನೂ ಸ್ವೀಕರಿಸಬಾರದು, ಆದರೆ ಅವುಗಳನ್ನು ಸಾಲಿಗ್ರಾಮಕ್ಕೆ ಸ್ಪರ್ಶಿಸಿದರೆ ಅವು ಪವಿತ್ರವಾಗುತ್ತವೆ.
ವಿವರಣೆ : ಶಿವಲಿಂಗವು ಅಪ್ರಕಟ ಘನೀಕೃತ ಶಕ್ತಿಯ ಪ್ರತೀಕವಾಗಿರುವುದರಿಂದ ಶಿವಲಿಂಗಕ್ಕೆ ಅರ್ಪಿಸಿದ ಎಲೆ, ಹೂವು, ನೀರು ಮುಂತಾದವುಗಳನ್ನು ಸ್ವೀಕರಿಸಿದರೆ ಸಾಮಾನ್ಯ ಜನರಿಗೆ ಸಹಿಸಲಾಗುವುದಿಲ್ಲ. ಶಿವಲಿಂಗದಲ್ಲಿ ಘನೀಕೃತ ಅಪ್ರಕಟ ಶಕ್ತಿಯಿ ರುವುದರಿಂದ ಶಿವಲಿಂಗದ ಮೇಲೆ ಅರ್ಪಿಸಿದ ವಸ್ತುಗಳನ್ನು ಸ್ವೀಕರಿಸಿದರೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಉದಾ. ಶರೀರ ನಡುಗುವುದು ಅಥವಾ ಜಡವಾಗುವುದು, ಕೈಕಾಲು ಜೋಮುಗಟ್ಟುವುದು ಇತ್ಯಾದಿ. ಸಾಲಿಗ್ರಾಮವು ಅಪ್ರಕಟ ಶಕ್ತಿಯನ್ನು ಪ್ರವಾಹೀ ಶಕ್ತಿಯಲ್ಲಿ ಅಂದರೆ ಸಗುಣ ಶಕ್ತಿಯಲ್ಲಿ ರೂಪಾಂತರಿಸುತ್ತದೆ, ಆದುದರಿಂದ ಅದರ ಸ್ಪರ್ಶದಿಂದ ಮೇಲಿನ ವಸ್ತುಗಳ ಘನೀಕೃತ ಅಪ್ರಕಟ ಶಕ್ತಿಯು ಸಗುಣ ಶಕ್ತಿಯಲ್ಲಿ ರೂಪಾಂತರವಾಗುತ್ತದೆ. ಸಾಮಾನ್ಯ ಜನರು ಈ ಶಕ್ತಿಯನ್ನು ಸಹಿಸಬಲ್ಲರು. ಆದುದರಿಂದ ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ಸಾಲಿಗ್ರಾಮಕ್ಕೆ ಸ್ಪರ್ಶಿಸಿದರೆ ಅವು ಸೇವನೆಗೆ ಯೋಗ್ಯವಾಗುತ್ತವೆ ಎಂದು ಹೇಳಲಾಗಿದೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೯.೬.೨೦೦೭, ಮಧ್ಯಾಹ್ನ ೧೨.೨೮)
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ’)

No comments:

Post a Comment