ಮಹಾಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಮತ್ತು ಶೇ. ೬೦ ಆಧ್ಯಾತ್ಮಿಕ ಮಟ್ಟವುಳ್ಳ ಕು. ಪ್ರಿಯಾಂಕಾ ಸ್ವಾಮಿ (ವಯಸ್ಸು ೨೧ ವರ್ಷ) ಇವರ ಬಗ್ಗೆ ಗುರುಕುಲದಲ್ಲಿನ ಸಾಧಕಿಯರಿಗೆ ಗಮನಕ್ಕೆ ಬಂದ ಗುಣ ವೈಶಿಷ್ಟ್ಯಗಳನ್ನು ಇಲ್ಲಿ ಕೊಡುತ್ತಿದ್ದೇವೆ.
(ಕಳೆದ ವಾರದ ಮುಂದುವರಿದ ಭಾಗ, ಕಳೆದ ವಾರದ ಭಾಗ :
http://kannadasanatanprabhat.blogspot.com/2011/01/blog-post_6154.html )
(ಕಳೆದ ವಾರದ ಮುಂದುವರಿದ ಭಾಗ, ಕಳೆದ ವಾರದ ಭಾಗ :
http://kannadasanatanprabhat.blogspot.com/2011/01/blog-post_6154.html )
ಪರಿಸ್ಥಿತಿಯನ್ನು ಸ್ವೀಕರಿಸುವುದು
‘ಅವಳು ಯಾವುದರ ಬಗ್ಗೆಯೂ ತಕರಾರು ಮಾಡುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಆನಂದದಿಂದ ಸ್ವೀಕರಿಸುತ್ತಾಳೆ. ಅದರಿಂದಾಗಿ ಯಾವುದೇ ಪರಿಸ್ಥಿತಿಯಲ್ಲಿ ಅವಳು ಆನಂದದಲ್ಲಿರುತ್ತಾಳೆ.’ - ಕು. ವೈಷ್ಣವಿ ಕೌಸ್ತುಭ ಯೇಳೆಗಾವಕರತಪ್ಪುಗಳನ್ನು ಸ್ವೀಕರಿಸುವುದು
‘ಪ್ರಿಯಾಂಕಾ ಅಕ್ಕಳು ಅಡುಗೆ ಮನೆಯಲ್ಲಿ ಸೇವೆಯನ್ನು ಮಾಡುವಾಗ ಅಡುಗೆ ಮನೆಯಲ್ಲಿನ ಸಾಧಕರು ಅವಳಿಗೆ ಅವಳ ತಪ್ಪುಗಳನ್ನು ಹೇಳುತ್ತಿದ್ದರು. ಆಗ ಅವಳು ಆ ತಪ್ಪುಗಳನ್ನು ತಕ್ಷಣ ಸ್ವೀಕರಿಸಿ ಅವುಗಳನ್ನು ಫಲಕದಲ್ಲಿ ಬರೆದು ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಿದ್ದಳು. ಹಾಗೆಯೇ ತತ್ಪರತೆಯಿಂದ ಆ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಳು.’ - ಕು. ಸಾಯಲಿ ಗಾಡಗೀಳ ಮತ್ತು ಕು. ವೈದೇಹಿ ಪಿಂಗಳೆತಪ್ಪುಗಳ ಬಗ್ಗೆ ಪಶ್ಚಾತ್ತಾಪವಾಗುವುದು : ‘ಒಂದು ದಿನ ರಾತ್ರಿ ನಿದ್ದೆಯಲ್ಲಿ ಅವಳಿಗೆ ಕನಸು ಬಿತ್ತು. ಅದರಲ್ಲಿ ಅವಳು ಸೇವೆಯನ್ನು ಮಾಡುವಾಗ ಅವಳಿಂದ ಯಾವುದೋ ತಪ್ಪು ಘಟಿಸಿತು. ಅವಳಿಗೆ ಅದರ ಬಗ್ಗೆಯೂ ತುಂಬ ದುಃಖವಾಯಿತು ಮತ್ತು ಅವಳು ಮಾರನೆಯ ದಿನ ತಕ್ಷಣ ಫಲಕದ ಮೇಲೆ ಅದನ್ನು ಬರೆದು ಪ್ರಾಯಶ್ಚಿತ್ತವನ್ನೂ ತೆಗೆದುಕೊಂಡಳು.’ - ಕು. ಯೋಗಿತಾ ಪಾಲನ (ಇದರಿಂದ ಕನಸಿನಲ್ಲಿ ಮಾಡಿದ ದಾನವನ್ನು ಪ್ರತ್ಯಕ್ಷದಲ್ಲಿ ನೀಡುವ ರಾಜಾ ಹರಿಶ್ಚಂದ್ರನ ನೆನಪಾಗುತ್ತದೆ. - ಸಂಕಲನಕಾರರು)
ತಪ್ಪುಗಳನ್ನು ಪ್ರೀತಿಯಿಂದ ಹೇಳುವುದು : ನನಗೆ ಅಡುಗೆ ಮನೆಯಲ್ಲಿ ಸೇವೆಯನ್ನು ಮಾಡಿ ಗೊತ್ತಿರಲಿಲ್ಲ. ಅದರಿಂದಾಗಿ ನನ್ನಿಂದ ಬಹಳ ತಪ್ಪುಗಳಾಗುತ್ತಿದ್ದವು. ಆಗ ಅವಳು ನನಗೆ ತಕ್ಷಣ ಆದರೆ ಪ್ರೀತಿಯಿಂದ ತಪ್ಪುಗಳನ್ನು ತೋರಿಸಿಕೊಡುತ್ತಿದ್ದಳು. ‘ಗುರುಕಾರ್ಯದಲ್ಲಿ ಹಾನಿಯಾಗ ಬಾರದು ಮತ್ತು ಹೊಸ ಸಾಧಕರ ಮನಸ್ಸಿಗೂ ನೋವಾಗಬಾರದು’ ಎಂಬ ಎರಡೂ ವಿಷಯಗಳನ್ನು ನೋಡಿ ಅವಳು ತಪ್ಪುಗಳನ್ನು ತೋರಿಸಿ ಕೊಡುತ್ತಿದ್ದಳು. ಒಂದು ವೇಳೆ ಒಳ್ಳೆಯ ಕೃತಿಯನ್ನು ಮಾಡಿದರೆ ಹೊಗಳುತ್ತಿದ್ದಳು. - ಕು. ಸಾಯಲಿ ವಾಘುದುಳೆ
ತತ್ವನಿಷ್ಠ : ‘ತಪ್ಪುಗಳನ್ನು ಹೇಳ ಬೇಕಾದರೆ ಅಥವಾ ಯಾವುದಾದರೊಂದು ಅಂಶವನ್ನು ಹೇಳಬೇಕಾದರೆ ಅವಳು ತತ್ವನಿಷ್ಠಳಾಗಿ ಹೇಳುತ್ತಾಳೆ. ತನ್ನದೇನಾದರೂ ತಪ್ಪಾಗಿದ್ದರೆ ತಕ್ಷಣ ಕ್ಷಮೆ ಕೇಳುತ್ತಾಳೆ.’ - ಕು. ವೈಷ್ಣವಿ ಜಾಧವ (ಘೊಂಗಾಣೆ)
ಸಮಷ್ಟಿಯನ್ನು ಸುಧಾರಿಸುವ ತಳಮಳ : ‘ಒಮ್ಮೆ ಅವಳಿಗೆ ಸ್ತ್ರೀಯರ ಸ್ನಾನ ಗೃಹವನ್ನು ಸ್ವಚ್ಛಗೊಳಿಸುವ ಸೇವೆಯಿತ್ತು. ಆ ಸೇವೆಯಾದ ನಂತರ ಅವಳು, ‘ಸ್ನಾನಗೃಹ ವನ್ನು ಸ್ವಚ್ಛಗೊಳಿಸುವಾಗ ‘ಕಮೋಡ್’ನ ಮೇಲೆ ಬಹಳ ಅಸ್ವಚ್ಛವಾಗಿರುತ್ತದೆ. ಪ್ರಮುಖ ಸಾಧಕರಿಗೆ ಹೇಳಬೇಕು’ ಎಂದು ಹೇಳಿದಳು. ಆಗ ನಾನು ಅವಳಿಗೆ ‘ನಾನು ಸ್ನಾನಗೃಹವನ್ನು ಸ್ವಚ್ಛಗೊಳಿಸಬೇಕಾದರೆ ಅದನ್ನೆಲ್ಲ ನೋಡುತ್ತಿರಲಿಲ್ಲ. ಕೇವಲ ಸೇವೆ ಮಾಡುತ್ತಿದ್ದೆ’ ಎಂದು ಹೇಳಿದೆ. ಆಗ ಅವಳು, ‘ನಾವು ಸ್ವಚ್ಛತೆಯನ್ನು ಖಂಡಿತವಾಗಿ ಮಾಡಬೇಕು; ಆದರೆ ಯಾರಿಂದ ಆ ತಪ್ಪಾಗುತ್ತಿದೆಯೋ ಅವರಿಗೆ ಅದರ ಅರಿವಾಗಬೇಕು. ನಾವು ಏನನ್ನೂ ಹೇಳದಿದ್ದರೆ ಅವರಿಗೆ ಅವರ ತಪ್ಪು ಎಂದಿಗೂ ಗಮನಕ್ಕೆ ಬರುವುದಿಲ್ಲ ಮತ್ತು ಅವರು ಸುಧಾರಿಸುವುದೂ ಇಲ್ಲ. ಅದರಿಂದಾಗಿ ಅವರ ಸಾಧನೆಯಾಗುವುದಿಲ್ಲ. ನಾವು ಅವರಿಗೆ ಸಹಾಯ ಮಾಡುವ ದೃಷ್ಟಿಯಿಂದ ಹೇಳಬೇಕು’ ಎಂದು ಹೇಳಿದಳು. ಆಗ ನನಗೆ ಅವಳ ವ್ಯಾಪಕ ವಿಚಾರ ಮತ್ತು ಸಮಷ್ಟಿಯನ್ನು ಸುಧಾರಿಸುವ ತಳಮಳವು ಕಂಡು ಬಂದಿತು.’ - ಕು. ಯೋಗಿತಾ ಪಾಲನ
ಇತರರನ್ನು ಅರಿತುಕೊಳ್ಳುವ ವೃತ್ತಿ : ‘ಗುರುಕುಲದಲ್ಲಿನ ಸಾಧಕಿಯರ ತಪ್ಪುಗಳ ಬಗ್ಗೆ ಹೇಳುವಾಗ ಅವಳು ನನಗೆ ಅನೇಕ ಬಾರಿ, ಅರೇ, ಅವರು ಇನ್ನೂ ಚಿಕ್ಕವರಲ್ಲವೇ !’ ಎಂದು ಹೇಳುತ್ತಿದ್ದಳು.
- ಶ್ರೀ. ಪ್ರತೀಕ ಜಾಧವ (ಘೊಂಗಾಣೆ)
ವ್ಯಷ್ಟಿ ಸಾಧನೆಯ ಗಾಂಭೀರ್ಯ : ‘ರಾತ್ರಿ ಎಷ್ಟೇ ತಡವಾದರೂ ಅವಳು ತಖ್ತೆಯನ್ನು ನಿಯಮಿತವಾಗಿ ಬರೆದೇ ಮಲಗುತ್ತಾಳೆ.’ - ಕು. ವೈದೇಹಿ ಪಿಂಗಳೆ
ಪ.ಪೂ. ಡಾಕ್ಟರರ ಹಂಬಲ ತೀವ್ರವಾಗುವುದು : ೧. ಅಕ್ಕ ಮೀರಜ ಆಶ್ರಮದಲ್ಲಿದ್ದಾಗ ಪ್ರತಿಯೊಂದು ಕ್ಷಣವೂ ಅವಳ ತಳಮಳವು ಕಂಡುಬರುತ್ತಿತ್ತು. ಅವಳ ಮನಸ್ಸಿಗೆ ರಾಮನಾಥಿ ಆಶ್ರಮ ಮತ್ತು ಪ.ಪೂ. ಡಾಕ್ಟರರ ಹಂಬಲ ಹುಟ್ಟಿಕೊಂಡಿತ್ತು. ಅದಕ್ಕಾಗಿ ಅವಳು ಸತತ ಧ್ಯಾನ ಮಂದಿರದಲ್ಲಿ ಹೋಗಿ ಅಥವಾ ಕೋಣೆಗೆ ಹೋಗಿ ಅಳುತ್ತಿದ್ದಳು. ದೇವರಿಗಾಗಿ ಅಳುವುದು, ಅವಳ ಉದಾಹರಣೆಯಿಂದ ನೋಡಲು ಸಿಕ್ಕಿತು. - ಕು. ವೈಷ್ಣವಿ ಜಾಧವ (ಘೊಂಗಾಣೆ)
೨. ‘ಆಗಾಗ ಅವಳ ಸಾಧನೆಯ ಪ್ರಯತ್ನವು ಕಡಿಮೆಯಾಗುತ್ತಿತ್ತು. ಆಗ ಅವಳು ಮಲಗುವ ಮೊದಲು ಆತ್ಮನಿವೇದನೆಯನ್ನು ಮಾಡಿ ಅಳುತ್ತಿದ್ದಳು.’ - ಕು. ಯೋಗಿತಾ ಪಾಲನ
ಶ್ರದ್ಧೆ : ೧. ಅಕ್ಕನಿಗೆ ಯಾವುದೇ ವಿಷಯದಲ್ಲಿ ಆಸಕ್ತಿಯಿರುವುದಿಲ್ಲ. ಅವಳು ಯಾವಾಗಲೂ, ದೇವರಿಗೆ ಅಪೇಕ್ಷಿತವಿರುವುದೇ ಆಗುವುದು ಎಂದು ಹೇಳುತ್ತಾಳೆ. ಇದರಿಂದ ಅವಳ ದೇವರ ಮೇಲಿನ ಶ್ರದ್ಧೆಯು ಗಮನಕ್ಕೆ ಬರುತ್ತದೆ. ಹೇ ಶ್ರೀಕೃಷ್ಣಾ, ನನಗೆ ನೀನು ಇಷ್ಟು ಒಳ್ಳೆಯ ಅಕ್ಕನನ್ನು ಕೊಟ್ಟಿದ್ದೀಯಾ, ಅದಕ್ಕಾಗಿ ನಾನು ನಿನ್ನ ಚರಣಗಳಲ್ಲಿ ಕೃತಜ್ಞಳಾಗಿದ್ದೇನೆ. ನನಗೆ ಅಕ್ಕನ ಲಾಭ ವನ್ನು ಮಾಡಿಕೊಳ್ಳಲು ನೀನೇ ಕಲಿಸಿಕೊಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !
- ಕು. ಶಾಯರಿ ಮರಾಠೆ
೨. ಏನೇ ಆದರೂ, ನಾವು ಎಲ್ಲೇ ಇದ್ದರೂ ಪ.ಪೂ. ಡಾಕ್ಟರರು ನಮ್ಮ ಸಾಧನೆಯನ್ನು ಮಾಡಿಸಿಕೊಳ್ಳುವರು, ಎನ್ನುವುದರ ಮೇಲೆ ಅವಳಿಗೆ ಅಪಾರ ಶ್ರದ್ಧೆಯಿದೆ. ಅವಳು ಪ.ಪೂ. ಡಾಕ್ಟರರ ಯಾವುದಾದರೊಂದು ಅಂಶವನ್ನು ಹೇಳುವಾಗ ಅವಳಿಗೆ ಪ.ಪೂ. ಡಾಕ್ಟರರ ಮೇಲಿರುವ ಅಪಾರ ಶ್ರದ್ಧೆಯು ಅರಿವಿಗೆ ಬರುತ್ತದೆ. - ಕು. ವೈಷ್ಣವಿ ಯೆಳೇಗಾವಕರ
ಭಾವ : ‘ಒಮ್ಮೆ ಊಟದಲ್ಲಿ ಮಾವಿನ ಹಣ್ಣುಗಳನ್ನು ಇಡಲಾಗಿತ್ತು. ಪ್ರಿಯಾಂಕಕ್ಕ ಒಂದು ಮಾವಿನಹಣ್ಣನ್ನು ತೆಗೆದುಕೊಂಡಳು. ಅದು ಬಹಳ ಹುಳಿಯಾಗಿತ್ತು. ಅಕ್ಕ ಇನ್ನೊಬ್ಬಳಿಗೆ ಕೇಳಿ ಆ ಮಾವಿನ ಹಣ್ಣನ್ನು ಕಸದ ಬುಟ್ಟಿಯಲ್ಲಿ ಹಾಕಿದಳು. ನಂತರ ಅವಳಿಗೆ ಅದರ ಬಗ್ಗೆ ಎಷ್ಟು ಕೆಟ್ಟದೆನಿಸಿತೆಂದರೆ, ಗುರುಗಳ ಪ್ರಸಾದವನ್ನು ನಾನು ಚೆಲ್ಲಿದೆನೆಂದು ಅವಳು ಅಳಲಾರಂಭಿಸಿದಳು. ನಂತರ ಅವಳು ಕಸದ ಬುಟ್ಟಿಯಿಂದ ಆ ಮಾವಿನ ಹಣ್ಣನ್ನು ತೆಗೆದಳು ಮತ್ತು ತೊಳೆದು ತಿಂದಳು. - ಕು. ವೈದೇಹಿ ಪಿಂಗಳೆ
ಕೃತಜ್ಞತಾಭಾವ : ‘ಅವಳೊಂದಿಗೆ ಪ.ಪೂ. ಡಾಕ್ಟರರು ಮಾತನಾಡುತ್ತಾರೆ, ಅವಳಿಗೆ ಕಾಣಿಸುತ್ತಾರೆ ಅಥವಾ ಪ್ರಸಾದವನ್ನು ಕೊಡುತ್ತಾರೆ, ಆಗ ಅವಳಿಗೆ ಬಹಳ ಆನಂದವಾಗುತ್ತದೆ. ಆಗ ಅವಳು ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾಳೆಂದರೆ, ಅದನ್ನು ಶಬ್ದಗಳಲ್ಲಿ ಹೇಳಲಾಗುವುದಿಲ್ಲ. ಅವಳ ಆನಂದ ಮತ್ತು ಕೃತಜ್ಞತಾಭಾವವನ್ನು ನೋಡಿಯೇ ನಮಗೆ ಬಹಳ ಆನಂದವಾಗುತ್ತಿತ್ತು. ಅವಳು ಯಾವ ಕೃತಜ್ಞತಾ ಭಾವದಲ್ಲಿ ಮಾತನಾಡುತ್ತಾಳೆಯೋ, ಅದನ್ನು ಕೇಳುತ್ತಲೇ ಇರಬೇಕೆನ್ನಿಸುತ್ತದೆ.
ಪ.ಪೂ. ಡಾಕ್ಟರರೇ, ನನ್ನಲ್ಲಿ ಯಾವುದೇ ಯೋಗ್ಯತೆಯಿಲ್ಲದಿರುವಾಗಲೂ ಈ ಮಹಾಲೋಕದ ಜೀವಗಳೊಂದಿಗೆ ಇರುವ ಅವಕಾಶವನ್ನು ನನಗೆ ಕೊಟ್ಟಿರುವಿರಿ, ಅದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದಷ್ಟೂ ಕಡಿಮೆಯೇ ಆಗಿದೆ. ಪ್ರಿಯಾಂಕಾಳಿಂದ ಕಲಿಯಲು ಸಿಕ್ಕಿದ ಅಂಶಗಳು ಆಚರಣೆಯಲ್ಲಿ ತರಲು ಸಾಧ್ಯವಾಗಲಿ, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.’ - ಕು. ಯೋಗಿತಾ ಪಾಲನ
ಸಾಧಕರೇ, ಯಾವುದಾದರೂ ಸಾಧಕರ ಗುಣವೈಶಿಷ್ಟ ಗಳನ್ನು ಓದಿದ
ನಂತರ ಅವುಗಳನ್ನು ರೂಢಿಸಿಕೊಂಡಾಗಲೇ, ಮುದ್ರಿಸಿದ್ದು ಸಾರ್ಥಕವಾಯಿತೆಂದು ಹೇಳಬಹುದು !
ಯಾವುದಾದರೂ ಸಾಧಕರ ಗುಣವೈಶಿಷ್ಟ್ಯಗಳು ಅಥವಾ ಆ ಸಾಧಕರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುದ್ರಿಸಲಾಗುತ್ತದೆ. ಅವುಗಳನ್ನು ಓದಿ ಸಾಧಕರು ಆ ಗುಣವೈಶಿಷ್ಟ್ಯ ಗಳಲ್ಲಿ ತಮ್ಮಲ್ಲಿ ಇಲ್ಲದವುಗಳನ್ನು ತಂದುಕೊಳ್ಳುವುದೇ ಇದನ್ನು ಮುದ್ರಿಸುವುದರ ಮೂಲ ಉದ್ದೇಶವಾಗಿರುತ್ತದೆ. ನಮಗೆ ಗುರುಗಳು ಪ್ರತಿಯೊಬ್ಬ ಸಾಧಕರ ಮಾಧ್ಯಮದಿಂದ ಈ ರೀತಿಯ ಪರೋಕ್ಷವಾಗಿ ಮಾರ್ಗದರ್ಶನವನ್ನು ಮಾಡುತ್ತಾರೆ. ಆದುದರಿಂದ ನಾವು ಪ್ರತಿಯೊಬ್ಬ ಸಾಧಕರನ್ನು ಗುಣ-ಗುರುಗಳನ್ನಾಗಿ ಮಾಡಿಕೊಳ್ಳಬಹುದು ಮತ್ತು ಅದರಿಂದ ಖಂಡಿತವಾಗಿಯೂ ನಮ್ಮ ಆಧ್ಯಾತ್ಮಿಕ ಪ್ರಗತಿಯಾಗುವುದು.

No comments:
Post a Comment