ಜೀವನವನ್ನು ಸನ್ಮಾರ್ಗಯುತ ಮತ್ತು ಆನಂದಮಯಗೊಳಿಸಲು ಸನಾತನದ ಗ್ರಂಥದ ಲಾಭ ಪಡೆದು ನೀವೂ ಧರ್ಮ ಶಿಕ್ಷಿತ ಮತ್ತು ಸಮಾಜದಲ್ಲಿನ ಇತರರೂ ಧರ್ಮಶಿಕ್ಷಿತರಾಗಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೇ ? ಇಂದು ರಾಷ್ಟ್ರ ಮತ್ತು ಧರ್ಮದ ದುಃಸ್ಥಿತಿಗೆ ಕಾರಣವೇನೆಂದರೆ ಹಿಂದೂಗಳಲ್ಲಿರುವ ಧರ್ಮಾಭಿಮಾನದ ಅಭಾವ ಮತ್ತು ಧರ್ಮಾಭಿಮಾನದ ಅಭಾವಕ್ಕೆ ಧರ್ಮಶಿಕ್ಷಣದ ಅಭಾವವೇ ಕಾರಣವಾಗಿದೆ ! ಈ ದುಃಸ್ಥಿತಿಯನ್ನು ದೂರಗೊಳಿಸಲು ಸನಾತನದ ಗ್ರಂಥದ ಪ್ರಸಾರ ಮಾಡುವುದು ದೊಡ್ಡ ಧರ್ಮಸೇವೆಯೇ ಆಗಿದೆ.
ಪ್ರಸಾರ ಮಾಡುವ ಕೆಲವು ಕೃತಿಗಳು -
* ಮನೆಗೆ ಬಂದು-ಹೋಗುವವರಿಗೆ ಸಹಜವಾಗಿ ಕಾಣಿಸುವಂತೆ (ಉದಾ. ‘ಟಿಪಾಯಿ’ ಮೇಲೆ, ‘ಶೋ-ಕೇಸ್’ನಲ್ಲಿ) ಗ್ರಂಥಗಳನ್ನಿಡಿ!
* ನೆಂಟರಿಷ್ಟರು, ಮಿತ್ರರು ಮುಂತಾದವರಿಗೆಲ್ಲ ಗ್ರಂಥದ ಮಹತ್ವ ಹೇಳಿ ಅವರಿಗೆ ಗ್ರಂಥ ಓದಲು ನೀಡಿ !
* ಉಡುಗೊರೆಯೆಂದು ‘ಶರ್ಟ್- ಪ್ಯಾಂಟ್’, ಸೀರೆಯಂತಹ ಮಾಯೆಯ ವಸ್ತುಗಳನ್ನು ನೀಡುವುದಕ್ಕಿಂತ ಜೀವನವನ್ನು ಸಾಧನಾಮಯಗೊಳಿಸುವ ಗ್ರಂಥವನ್ನು ಉಡುಗೊರೆಯೆಂದು ನೀಡಿ !
* ನಾಮಕರಣ-ವಿಧಿ, ಹುಟ್ಟುಹಬ್ಬ, ಉಪನಯನ, ವಿವಾಹ ಇಂತಹ ಸಮಾರಂಭಗಳಲ್ಲಿ ಒಂದು ಸಾತ್ತ್ವಿಕ ಉಡುಗೊರೆಯೆಂದು ಕಿರುಗ್ರಂಥ ಅಥವಾ ಗ್ರಂಥ ಹಂಚಿರಿ !
* ನೀವಿರುವ ಜಾಗದಲ್ಲಿನ ದೇವಸ್ಥಾನ, ಗ್ರಂಥಾಲಯಗಳಂತಹ ಸ್ಥಳಗಳಲ್ಲಿ ಗ್ರಂಥ ಇಡುವ ಬಗ್ಗೆ ಸಂಬಂಧಿತರಿಗೆ ಪ್ರಬೋಧನೆ ಮಾಡಿ !
* ಕಿರುಗ್ರಂಥ ಅಥವಾ ಗ್ರಂಥಕ್ಕಾಗಿ ಪ್ರಾಯೋಜಕರಾಗಿ ಅಥವಾ ಇತರರನ್ನು ಪ್ರಾಯೋಜಕರನ್ನಾಗಿಸಲು ಪ್ರವೃತ್ತಗೊಳಿಸಿ !
ಸಾಧಕರೇ, ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಿ!
ಸನಾತನಕ್ಕೆ ಭಾವೀ ಕಾಲದಲ್ಲಿ ನಲಂದಾ ಮತ್ತು ತಕ್ಷಶಿಲಾದಂತಹ ಭವ್ಯ ‘ಅಧ್ಯಾತ್ಮ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಲಿಕ್ಕಿದೆ. ಗ್ರಂಥಸಂಪತ್ತು ವಿಶ್ವವಿದ್ಯಾಲಯದ ಅಡಿಪಾಯವಾಗಿದೆ. ಈ ಧ್ಯೇಯಸಾಧನೆಗಾಗಿ ಸನಾತನದ ಸಾಧಕರು ತನುಮನ-ಧನದ ತ್ಯಾಗ ಮಾಡಿ ಗ್ರಂಥನಿರ್ಮಿತಿಗಾಗಿ ಕಾರ್ಯನಿರತರಾಗಿದ್ದಾರೆ. ಈ ಜ್ಞಾನಯಜ್ಞದಲ್ಲಿ ಆಹುತಿ ಸಮರ್ಪಿಸಿ ತಾವೂ ಈಶ್ವರೀ ಕೃಪೆಯನ್ನು ಸಂಪಾದಿಸಬಹುದು. ಇದಕ್ಕಾಗಿ ತಮ್ಮ ಇಚ್ಛೆ ಮತ್ತು ಕ್ಷಮತೆಗನುಸಾರ ಗ್ರಂಥ ಲೇಖನದ ಸಂಕಲನ, ಕರಡುಪ್ರತಿ ತಪಾಸಣೆ, ಭಾಷಾಂತರ ಇತ್ಯಾದಿ ಸೇವೆಗಳಲ್ಲಿ ತಾವೂ ಕೈಜೋಡಿಸಬಹುದು. ಸಂಪರ್ಕ : ೯೩೪೨೪೩೫೬೧೭
No comments:
Post a Comment