ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಷ್ಟ್ರಧ್ವಜದ ಗೌರವ ಕಾಪಾಡಲು ಮನವಿ

ಶಿರಸಿ:  ಹಿಂದೂ ಜನಜಾಗೃತಿ ಸಮಿತಿಯು ಕಳೆದ ೮ ವರ್ಷಗಳಿಂದ ರಾಷ್ಟ್ರ ಧ್ವಜದ ಅವಮಾನವನ್ನು ತಡೆಯಲು ಮಾರ್ಗದಲ್ಲಿ ಬಿದ್ದಿರುವ ರಾಷ್ಟ್ರಧ್ವಜವನ್ನು ಒಟ್ಟು ಮಾಡುವುದು, ಅವುಗಳ ಅವಮಾನ ಮಾಡದಿರುವಂತೆ ಜನರಿಗೆ ಕರೆ ನೀಡುವುದು ಈ ರೀತಿ ಅನೇಕ ಮಾಧ್ಯಮಗಳಿಂದ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿದೆ. ಆದರೆ ಸರಕಾರದ ವತಿಯಿಂದ ರಾಷ್ಟ್ರ ಧ್ವಜದ ಅವಮಾನವನ್ನು ತಡೆಯುವುದಕ್ಕಾಗಿ ಯಾವುದೇ ಯೋಗ್ಯವಾದ ಕೃತಿ ಮಾಡುತ್ತಿರುವುದು ಕಂಡು ಬರುತ್ತಿಲ್ಲ. 
ಅದಕ್ಕಾಗಿ ಸಮಿತಿಯಿಂದ ದಿನಾಂಕ ೨೦.೧.೨೦೧೧ ರಂದು ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವುದಾಗಿ ಉಪಾಯುಕ್ತರಿಗೆ ಸಮಿತಿಯ ಕಾರ್ಯಕರ್ತರಾದ ಶ್ರೀ.ಅಶೋಕ ಕುಡಾಳಕರರು ಮನವಿಯನ್ನು ಸಲ್ಲಿಸಿದರು. ಈ ಸಮಯದಲ್ಲಿ ಸಮಿತಿಯ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಜರಂಗ ದಳ ಮತ್ತು ಅನೇಕ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು. ಒಟ್ಟು ೧೭ ಧರ್ಮಾಭಿಮಾನಿಗಳು ಹಾಗೂ ೫ ಜನ ಪತ್ರಕರ್ತರು ಉಪಸ್ಥಿತರಿದ್ದರು.

No comments:

Post a Comment