ಧಾರವಾಡ: ಇಲ್ಲಿನ ನಾರಾಯಣಪುರ ಲಕ್ಷ್ಮೀ ದೇವಸ್ಥಾನದಲ್ಲಿ ಸಾಯಂಕಾಲ ೫ಗಂಟೆಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಮ ಕೃಷ್ಣ ಆಶ್ರಮದ ಪೂಜ್ಯ ವಿಜಯಾನಂದ ಸರಸ್ವತಿ ಇವರ ದಿವ್ಯ ಉಪಸ್ಥಿತಿ ಲಭಿಸಿತು. ಸುಮಾರು ೧೦೦ ಜನರು ಈ ಕಾರ್ಯಕ್ರಮದ ಲಾಭವನ್ನು ಪಡೆದರು. ಈ ಸಮಯದಲ್ಲಿ ವೇದಿಕೆಯ ಮೇಲೆ ಹಿಂದೂ ಜನಜಾಗೃತಿ ಸಮಿತಿಯ ಕು.ಸ್ಫೂರ್ತಿ ಬೆನಕನವಾರಿಯವರು ಉಪಸ್ಥಿತರಿದ್ದರು. ಪೂ.ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ‘ನಮ್ಮಲ್ಲಿ ಗುಲಾಮಗಿರಿ ಮಾನಸಿಕತೆ ಇರುವವರೆಗೆ ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತೇವೆ’ ಎಂದರು. ಅಲ್ಲದೇ ಉಡಿ ತುಂಬುವ ಕಾರ್ಯಕ್ರಮವಾಯಿತು.
No comments:
Post a Comment