ಕುಶಾಲನಗರದಲ್ಲಿ ಮಕರ ಸಂಕ್ರಾಂತಿ ಆಚರಣೆಯ ಮಹತ್ವದ ಕುರಿತು ಪ್ರಬೋಧನೆ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ
ಕುಶಾಲನಗರ (ಕೊಡಗು ಜಿಲ್ಲೆ) :  ೨೦೧೧ ರ ಜನವರಿ ೧೦ ರಂದು ಕುಶಾಲನಗರದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀ. ಸುಮನ ಪ್ರಸಾದ, ಶ್ರೀ. ಕೃಷ್ಣಮೂರ್ತಿ, ಶ್ರೀ. ಕಾ. ಪ. ಚಂದ್ರಶೇಖರ ಹಾಗೂ ಇತರ ಸಮಿತಿಯ ಕಾರ್ಯಕರ್ತರು ಅಲ್ಲಿನ ಸೋಮೇಶ್ವರ ದೇವಸ್ಥಾನದ ಸುತ್ತ ಮುತ್ತಲಿನ ಸುಮಾರು ೧೦೦ ಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ, ಮಕರ ಸಂಕ್ರಾಂತಿ ಆಚರಣೆಯ ಮಹತ್ವ ಕುರಿತಂತೆ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಸಂಜೆ ೭ ರಿಂದ ೮ ರವರೆಗೆ ನಡೆದ ಈ ಸಭೆಯಲ್ಲಿ ಸೌ. ಶರ್ಮಿಳಾ ಕೃಷ್ಣಮೂರ್ತಿ ಇವರು ಮಕರ ಸಂಕ್ರಾಂತಿ ಆಚರಣೆಯ ಮಹತ್ವದ ಕುರಿತು ಪ್ರವಚನ ನೀಡಿದರು. ಇದರಲ್ಲಿ ಸೋಮೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಸುಮಾರು ೩೦ ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

No comments:

Post a Comment