ಹಿಂದೂಗಳೇ, ನಿಮಗೆ ಅನ್ಯಾಯ ಮಾಡುತ್ತಿರುವ ಆರಕ್ಷಕರ (ಪೊಲೀಸ್) ಪಟ್ಟಿ ತಯಾರಿಸಿ!

ಹಿಂದೂ ಧರ್ಮ ಮತ್ತು ರಾಷ್ಟ್ರ ಇವುಗಳ ಮೇಲೆ ಧರ್ಮದ್ರೋಹಿ ಮತ್ತು ಇತರ ಧರ್ಮದವರಿಂದ ನಿರಂತರ ಆಘಾತವಾಗುತ್ತಿದೆ. ಈ ಆಘಾತಗಳ ವಿರುದ್ಧ ಕೃತಿ ಮಾಡುವುದು ಆರಕ್ಷಕರ ಕರ್ತವ್ಯವಾಗಿದೆ; ಆದರೆ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಿ ರಾಷ್ಟ್ರಸೇವೆಯನ್ನು ಮಾಡುವುದಕ್ಕಿಂತ ಧರ್ಮ ಮತ್ತು ರಾಷ್ಟ್ರ ದ್ರೋಹಿಗಳಿಗೆ ಸಹಕರಿಸಿ ಹಿಂದೂ ಧರ್ಮ ಮತ್ತು ರಾಷ್ಟ್ರ ವಿರೋಧಿ ಭೂಮಿಕೆಯನ್ನು ತೆಗೆದುಕೊಳ್ಳುತ್ತಾರೆ. ಅವರು ಉದ್ದೇಶ ಪೂರ್ವಕವಾಗಿ ಹಿಂದೂ ಮತ್ತು ಹಿಂದುತ್ವವಾದಿಗಳ ಮೇಲೆಯೇ ಅನ್ಯಾಯ ಮಾಡುವುದು ಕಂಡುಬರುತ್ತಿದೆ. ಅವರ ಇಂತಹ ವರ್ತನೆಯು ಭಾಗ್ಯನಗರದ ನಿಜಾಮರಲ್ಲಿರುವ ರಝಾಕಾರೀ ಮತ್ತು ಔರಂಗಜೇಬನ ಸೈನ್ಯದ ಕ್ರೂರ ಧರ್ಮಾಂಧ ಸೈನಿಕರನ್ನೂ ನಾಚಿಸುವಂತಿದೆ. ಇಂತಹ ಪೊಲೀಸರು ರಾಷ್ಟ್ರಕ್ಕೆ ಕಳಂಕಪ್ರಾಯರಾಗಿದ್ದಾರೆ. ಆರಕ್ಷಕರ ಇಂತಹ ಅನ್ಯಾಯದ ಕೆಲವು ಉದಾಹರಣೆಗಳನ್ನು ಇಲ್ಲಿ ನೀಡುತ್ತಿದ್ದೇವೆ.
೧.ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಾಗುವ ಆಘಾತ ಉದಾ.ದೇವತೆಗಳ ನಾಟಕ, ಚಲನಚಿತ್ರ ಮತ್ತು ಚಿತ್ರಗಳ ಮಾಧ್ಯಮದಿಂದ ವಿಡಂಬನೆ, ದೇವಸ್ಥಾನಗಳಲ್ಲಿ ಕಳ್ಳತನ, ವಿವಿಧ ಮಾಧ್ಯಮಗಳಿಂದಾಗುತ್ತಿರುವ ರಾಷ್ಟ್ರ ಪುರುಷರ ವಿಡಂಬನೆ ಇತ್ಯಾದಿಗಳನ್ನು ತಡೆಗಟ್ಟಲು ಪೊಲೀಸರು ತಾವಾಗಿ ಏನೂ ಪ್ರಯತ್ನಿಸುವುದಿಲ್ಲ ಮತ್ತು ಯಾರು ಪ್ರಯತ್ನಿಸುತ್ತಾರೆಯೋ ಅವರಿಗೂ ತೊಂದರೆ ಕೊಡುತ್ತಾರೆ.
೨.ಧರ್ಮದ್ರೋಹಿಗಳಿಂದ ಹಾಗೂ ಇತರ ಪಂಥದವರಿಂದ ಹಿಂದೂಗಳ ಮೇಲಾಗುವ ಅನ್ಯಾಯ ಇತ್ಯಾದಿಗಳ ಬಗ್ಗೆ ಹಿಂದೂಗಳ ದೂರುಗಳನ್ನು ದಾಖಲಿಸದೇ ಅದರ ಬಗ್ಗೆ ಆರಕ್ಷಕರು ಅವರನ್ನೇ ಬೆದರಿಸುತ್ತಾರೆ ಮತ್ತು ಕೆಲವೊಮ್ಮೆ ಅವರನ್ನು ಹೊಡೆದು ಬಡಿದು ಸುಳ್ಳು ದೂರುಗಳನ್ನು ದಾಖಲಿಸುತ್ತಾರೆ.
೩.ಬಹಳಷ್ಟು ಸಲ ಹಿಂದೂಗಳ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡುವುದಿಲ್ಲ ಮತ್ತು ಅನುಮತಿ ನೀಡಿದರೂ ಅನೇಕ ನಿಬಂಧನೆಗಳನ್ನು ಹಾಕುತ್ತಾರೆ.
೪.ಆರಕ್ಷಕರು ಹಿಂದೂಗಳ ಧಾರ್ಮಿಕ ಶ್ರದ್ಧೆಗಳ ಮೇಲೆ ಆಘಾತ ಮಾಡುವ ಧರ್ಮಾಂಧರಿಗೆ ಮನೋರೋಗಿ ಎನ್ನುತ್ತಾರೆ.
೫.ದಂಗೆ ಮಾಡುವವರನ್ನು ಮುಕ್ತವಾಗಿ ಬಿಡುತ್ತಾರೆ ಮತ್ತು ನಿರಪರಾಧಿ ಹಿಂದೂಗಳನ್ನು ಸೆರೆಮನೆಗೆ ಅಟ್ಟಿ ಅವರನ್ನು ಅಮಾನುಷವಾಗಿ ಪೀಡಿಸುತ್ತಾರೆ.
೬.ಹಿಂದೂಗಳಿಗೆ ತೊಂದರೆ ನೀಡುವ ಧರ್ಮಾಂಧರನ್ನು ಮುಕ್ತವಾಗಿ ಬಿಡುತ್ತಾರೆ ಮತ್ತು ತೊಂದರೆಗೊಳಗಾದ ಹಿಂದೂಗಳ ಬಗ್ಗೆಯೇ ವಿಚಾರಣೆ ನಡೆಸುತ್ತಾರೆ.

ಹಿಂದೂಗಳೇ, ಇಂತಹ ರಾಷ್ಟ್ರ ಮತ್ತು ಧರ್ಮದ್ರೋಹಿ ಕೃತಿಗಳನ್ನು ಮಾಡುವ ಆರಕ್ಷಕರ ಹೆಸರು, ಹುದ್ದೆ, ಧರ್ಮದ್ರೋಹಿ ಕೃತ್ಯಗಳ ಸ್ವರೂಪ, ವರ್ಷ ಇತ್ಯಾದಿಗಳ ಪಟ್ಟಿಯನ್ನು ತಯಾರಿಸಿ. ಈಶ್ವರೀ ರಾಜ್ಯದಲ್ಲಿ ಇಂತಹ ಹಿಂದೂದ್ರೋಹಿ ಆರಕ್ಷಕರ ಮೇಲೆ ಕ್ರಮಕೈಗೊಂಡು ಅವರಿಗೆ ಕಠೋರ ಸಾಧನೆ ಮಾಡುವ ಶಿಕ್ಷೆ ನೀಡೋಣ!                           

No comments:

Post a Comment