ಇಂದಿನ ಭಯೋತ್ಪಾದನೆಗೆ ಕಾಂಗ್ರೆಸ್ ಸರಕಾರದ ನಡವಳಿಕೆಯೇ ಕಾರಣ!
- ಶ್ರೀ ಸಿದ್ದಲಿಂಗ ಸ್ವಾಮೀಜಿ, ಕರುಣೇಶ್ವರ ಮಠ, ಅಂದೋಲಾ
- ಶ್ರೀ ಸಿದ್ದಲಿಂಗ ಸ್ವಾಮೀಜಿ, ಕರುಣೇಶ್ವರ ಮಠ, ಅಂದೋಲಾ
ರಾಯಚೂರಿನಲ್ಲಿ ೧೨೦೦ ಧರ್ಮಾಭಿಮಾನಿಗಳ ಉಪಸ್ಥಿತಿಯಲ್ಲಿ ನಡೆದ ಹಿಂದೂ ಧರ್ಮಜಾಗೃತಿ ಸಭೆ
(ಛಾಯಾಚಿತ್ರದಲ್ಲಿ ಎಡದಿಂದ) ಕು.ಸ್ಫೂರ್ತಿ ಬೆನಕನವಾರಿ, ಶ್ರೀಸಿದ್ದಲಿಂಗ ಸ್ವಾಮೀಜಿ, ಶ್ರೀ. ಮೋಹನ ಗೌಡ
ರಾಯಚೂರು: ‘ನಮ್ಮ ಈ ಭಾರತ ದೇಶದಲ್ಲಿ ದಿನಕ್ಕೆ ಸಾವಿರಾರು ಗೋಮಾತೆಗಳ ಮಾರಣ ಹೋಮವಾಗುತ್ತಿದೆ ಹಾಗೂ ಅದರ ಮಾಂಸ ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಇದರಿಂದ ನಮ್ಮ ಭಾರತದ ಋಷಿ ಮತ್ತು ಕೃಷಿ ಪರಂಪರೆಯು ನಷ್ಟವಾಗುತ್ತಿದೆ. ಇನ್ನೊಂದು ಕಡೆ ಭ್ರಷ್ಟಾಚಾರ ಹೆಚ್ಚುತ್ತಿದೆ ಮತ್ತು ಅದು ಇಂದು ಪ್ರಾರಂಭವಾದದ್ದಲ್ಲ, ನೆಹರು ಪ್ರಧಾನಿಯಾದ ಸಮಯದಿಂದಲೇ ಪ್ರಾರಂಭವಾಗಿದೆ’ ಎಂದು ಶ್ರೀ ಕರುಣೇಶ್ವರಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಯವರು ಖೇದ ವ್ಯಕ್ತಪಡಿಸಿದರು. ಇವರು ಹಿಂದೂ ಜನಜಾಗೃತಿ ಸಮಿತಿಯು ೧೩.೨.೨೦೧೧ರಂದು ಸಾಯಂಕಾಲ ೫.೦೦ಗಂಟೆಗೆ ರಾಯಚೂರಿನ ವಾಲಕಟ್ ಮೈದಾನದಲ್ಲಿ ಆಯೋಜಿಸಿದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಸ್ವಾಮೀಜಿಯವರು ಮುಂದೆ ಮಾತನಾಡುತ್ತಾ, ‘ಇಂದು ಒಲಿಂಪಿಕ್ಸನಲ್ಲಿ ಶ್ಯೂಟ್’ ಮಾಡಿದ ವ್ಯಕ್ತಿಗೆ ೩ಕೋಟಿ ರೂಪಾಯಿಗಳ ಬಹುಮಾನವನ್ನು ಕೊಡುತ್ತಾರೆ. ಅದೇ ಇವತ್ತು ಭಯೋತ್ಪಾದಕರ ಗುಂಡಿನಿಂದ ಸಾಯುವ ಸೈನಿಕ ಮತ್ತು ಪೊಲೀಸರಿಗೆ ೩ಲಕ್ಷ ರೂಪಾಯಿಗಳನ್ನು ಕೊಟ್ಟು ಕೈ ತೊಳೆದುಕೊಂಡಿರುವುದು ಖಂಡನೀಯ. ಹೀಗಾಗಿ ಭ್ರಷ್ಟಾಚಾರದಿಂದ ನಾವು ಮುಕ್ತರಾಗಬೇಕಾದರೆ ನಮ್ಮಲ್ಲಿರುವ ಭ್ರಷ್ಟ ರಾಜಕಾರಣಿಗಳನ್ನು ವಿದೇಶಕ್ಕೆ ರಫ್ತು ಮಾಡುವುದೊಂದೇ ಪರಿಹಾರ’ ಎಂದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಮೋಹನ ಗೌಡ, ಹಾಗೂ ಸನಾತನ ಸಂಸ್ಥೆಯ ಕು.ಸ್ಫೂರ್ತಿ ಬೆನಕನವಾರಿಯವರು ಉಪಸ್ಥಿತರಿದ್ದರು. ನಂತರ ಶ್ರೀ.ವೆಂಕಟರಮಣ ನಾಯ್ಕ ಇವರು ಸಮಿತಿಯ ವೈಶಿಷ್ಟ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದರು. ಈ ಸಭೆಯಲ್ಲಿ ೧೨೦೦ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದು ಸಭೆಯ ಲಾಭ ಪಡೆದುಕೊಂಡರು.
ಕೊನೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಸಕ್ರಿಯವಾಗಿ ಪಾಲ್ಗೊಂಡರು.
ಕೊನೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಸಕ್ರಿಯವಾಗಿ ಪಾಲ್ಗೊಂಡರು.
No comments:
Post a Comment