ಕಾರ್ಕಳದಲ್ಲಿನ ಹಿಂದೂ ಧರ್ಮಜಾಗೃತಿ ಸಭೆ
ದೀಪ ಪ್ರಜ್ವಲನೆ ಮಾಡುತ್ತಿರುವ ಕು.ಅಕ್ಷಯ ಗೋಖಲೆ, ಶ್ರೀ.ರವೀಂದ್ರ ಕಾಮತ ಮತ್ತು ಸೌ.ವಂದನಾ ಕಾಮತ
ಕಾರ್ಕಳ: ‘ಇಂದು ದೇಶದಲ್ಲಿ ಗೋಹತ್ಯೆ ಮಾಡಿ ಅದನ್ನು ದೇವಸ್ಥಾನದ ಎದುರು ಎಸೆಯಲಾಗುತ್ತದೆ. ಆದರೂ ನಾವು ಹಿಂದೂಗಳು ಅದನ್ನು ಸಹಿಸುತ್ತಿದ್ದೇವೆ. ನಮ್ಮ ಸಹನಶೀಲತೆ ಪರೀಕ್ಷಿಸಬೇಡಿರಿ. ಹಿಂದೂಗಳ ಮೇಲೆ ಅತ್ಯಾಚಾರ ನಡೆಯುತ್ತಲೇ ಇದ್ದರೆ, ಹಿಂದೂಗಳು ಹನುಮಂತನ ಬಲ ತೋರಿಸುವೆವು’, ಎಂದು ಕು.ಅಕ್ಷಯ ಗೋಖಲೆಯವರು ಎಚ್ಚರಿಸಿದರು. ಇವರು ೧೩.೨.೨೦೧೧ ರಂದು ಹಿಂದೂ ಜನಜಾಗೃತಿ ಸಮಿತಿಯು ಶ್ರೀಆದಿಶಕ್ತಿ ವೀರಭದ್ರ ಸಭಾ ಭವನದಲ್ಲಿ ನಡೆಸಿದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ರವೀಂದ್ರ ಕಾಮತ ಹಾಗೂ ಸನಾತನ ಸಂಸ್ಥೆಯ ಸೌ.ವಂದನಾ ಕಾಮತ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಕು.ಗೋಖಲೆಯವರು ಮುಂದೆ ಮಾತನಾಡುತ್ತಾ, ‘ಧರ್ಮಾಂಧರು ‘ಲವ್ ಜಿಹಾದ್’ ಮೂಲಕ ಹಿಂದೂ ಯುವತಿಯರನ್ನು ಮೋಸಗೊಳಿಸುತ್ತಿದ್ದರೂ ಹಿಂದೂ ಯುವತಿಯರಿಗೆ ಅದು ತಿಳಿಯುವುದಿಲ್ಲ ಇದು ಲಜ್ಜಾಸ್ಪದವಾಗಿದೆ’ ಎಂದರು.

No comments:
Post a Comment