‘ವೇಲೆಂಟೈನ್ ಡೇ’ಯ ಕುಸಂಸ್ಕೃತಿ ವಿರೋಧಿಸಿ ರಾಜ್ಯದ ವಿವಿಧೆಡೆಗಳಲ್ಲಿ ಜನಜಾಗೃತಿ ಅಭಿಯಾನ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ‘ವೇಲೆಂಟೈನ್ ಡೇ’ಯ ಕುಸಂಸ್ಕೃತಿಯ ದುಷ್ಪರಿಣಾಮಗಳ ಪ್ರಬೋಧನೆ ಮಾಡಲೆಂದು ಅನೇಕ ಉಪಕ್ರಮಗಳನ್ನು ನಡೆಸಲಾಗಿತ್ತು. ಎಲ್ಲ ಜಿಲ್ಲೆಗಳಲ್ಲಿನ ಶಾಲೆ-ಮಹಾವಿದ್ಯಾಲಯ, ಧಾರ್ಮಿಕ ಸಂಸ್ಥೆ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು ೪೦ ಸಾವಿರ ಪ್ರಬೋಧನಾತ್ಮಕ ಕರಪತ್ರವನ್ನು ವಿತರಿಸಲಾಯಿತು. ಸುಮಾರು ೨೦ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರವಚನ ನೀಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ‘ಫ್ಲೆಕ್ಸ್’ ಮತ್ತು ‘ಹೋರ್ಡಿಂಗ್’ ಹಾಕಲಾಯಿತು. ೧೫ ವರ್ತಮಾನ ಪತ್ರಿಕೆಗಳಲ್ಲಿ ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಪತ್ರಿಕೆಯವರು ಅದನ್ನು ಪ್ರಕಟಿಸಿದ್ದರು. ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಪ್ರತಿಕ್ರಿಯೆಗಳು
೧.ಉಡುಪಿಯ ‘ಯು ಚಾನೆಲ್’ ವಾಹಿನಿಯಲ್ಲಿ ಕರಪತ್ರ ಮತ್ತು ವಿದ್ಯಾರ್ಥಿಗಳಿಗೆ ಮಾಡಿದ ಪ್ರಬೋಧನೆಯ ಚಿತ್ರೀಕರಣವನ್ನು ಪ್ರಸಾರ ಮಾಡಲಾಯಿತು. ಕೆಲವು ಕರಪತ್ರಗಳನ್ನು ಸೂಚನಾಫಲಕದಲ್ಲಿ ಹಾಕಲಾಯಿತು.
೨.ಹಾಸನದಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಸ್ವಪ್ರೇರಣೆಯಿಂದ ಕರಪತ್ರಗಳನ್ನು ಕೇಳಿ ಪಡೆದುಕೊಂಡರು ಮತ್ತು ಶಾಲಾ-ಮಹಾವಿದ್ಯಾಲಯಗಳಲ್ಲಿ ಹಂಚಿದರು. ಕೆಲವು ರಿಕ್ಷಾ ಚಾಲಕರು ಇದರ ದೊಡ್ಡ ಜೆರಾಕ್ಸ್ ಪ್ರತಿಯನ್ನು ತೆಗೆದು ರಿಕ್ಷಾದ ಹಿಂದೆ ಅಂಟಿಸಿದರು.
೩.ಶಿವಮೊಗ್ಗದ ಮಹಾವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯರು ಕರಪತ್ರ ಹಂಚಲು ಅನುಮತಿ ನೀಡಿದ್ದರು. ಆದರೆ ಅಲ್ಲಿನ ಭದ್ರತಾ ಸಿಬ್ಬಂದಿಯು ಅದನ್ನು ವಿರೋಧಿಸಿದರು. ಮುಖ್ಯೋಪಾಧ್ಯಾಯರು ಅನುಮತಿ ನೀಡಿದ ಬಗ್ಗೆ ಹೇಳಿದರೂ ಕೇಳಲಿಲ್ಲ. ನಂತರ ಅಲ್ಲಿದ್ದ ಅಧ್ಯಾಪಕರಿಗೆ ಇದರ ಬಗ್ಗೆ ಕೇಳಿದಾಗ ‘ಅವರಿಗೆ ಯಾವುದೇ ಕರಪತ್ರ ವಿತರಿಸಲು ಬಿಡಬೇಡಿ’ ಎಂದು ಹೇಳಲಾಗಿತ್ತು ಎಂಬುದು ಗಮನಕ್ಕೆ ಬಂತು. ನಂತರ ಆ ಅಧ್ಯಾಪಕರು ಬಂದು ಹೇಳಿದ ನಂತರ ಸಮಿತಿಯ ಕಾರ್ಯಕರ್ತರಿಗೆ ಕರ ಪತ್ರವನ್ನು ಹಂಚಲು ಅನುಮತಿ ನೀಡಿದರು.
೪.ಕುಣಿಗಲ್‌ನ ಸ್ವಾಮಿ ಮಹಾ ವಿದ್ಯಾಲಯದಲ್ಲಿ ಪ್ರತೀ ೭ ತರಗತಿಗಳಲ್ಲಿ ‘ವೇಲೆಂಟೈನ್ ಡೇ’ಯ ದುಷ್ಪರಿಣಾಮದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
೫.ಬೆಂಗಳೂರಿನಲ್ಲಿ ೩ ಮಹಾ ವಿದ್ಯಾಲಯಗಳಲ್ಲಿ ಕರಪತ್ರಗಳನ್ನು ಹಂಚಲಾಯಿತು. ಇಲ್ಲಿ ಕೆಲವು ವಿದ್ಯಾರ್ಥಿಗಳಿಂದಷ್ಟೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಕೆಲವರು ಅದನ್ನು ಎಸೆದರು ಮತ್ತು ಕೆಲವರು ಹರಿದು ಬಿಸಾಡಿದರು. (ಪಾಶ್ಚಾತ್ಯರ ಗುಲಾಮಗಿರಿಯ ದುಷ್ಪರಿಣಾಮ! ಇದರಿಂದ ಧರ್ಮಶಿಕ್ಷಣ ನೀಡುವುದು ಎಷ್ಟು ಆವಶ್ಯಕವಿದೆಯೆಂದು ತಿಳಿಯಬಹುದು. -ಸಂಪಾದಕರು)
೬.ಹಳಿಯಾಳ ಮತ್ತು ಗದಗಿನಲ್ಲಿ ವಿದ್ಯಾರ್ಥಿಗಳು ‘ವೇಲೆಂಟೈನ್ ಡೇ’ಯನ್ನು ಪಾಪಕರ್ಮವೆನ್ನುತ್ತಾ ಖಂಡಿಸಿದರು.
೭.ಮಾನ್ವಿ, ರಾಯಚೂರಿನಲ್ಲಿ ಹೋರ್ಡಿಂಗ್ ಹಾಕಲು ಪೊಲೀಸರು ವಿರೋಧಿಸಿದರೂ ಅನುಮತಿ ಪತ್ರ ತೋರಿಸಿದ ನಂತರ ಅನುಮತಿ ದೊರೆಯಿತು.

No comments:

Post a Comment