ಸಾಧಕರಿಗೆ ಸೂಚನೆಗಳು
ಆಧ್ಯಾತ್ಮಿಕ ತೊಂದರೆಯಾಗುತ್ತಿರುವಾಗ ಸತತ ಸೂಕ್ಷ್ಮ-ವಿಭಾಗದ ಸಾಧಕರನ್ನು
ಕೇಳುವುದಕ್ಕಿಂತ ಪ.ಪೂ. ಡಾಕ್ಟರರು ಇದು ವರೆಗೆ ಕಲಿಸಿದ ಆಧ್ಯಾತ್ಮಿಕ ಉಪಾಯಗಳನ್ನು ಇನ್ನಷ್ಟು ಹೆಚ್ಚಿಸಿ!
‘ಕಾಲವು ಅತ್ಯಂತ ಪ್ರತಿಕೂಲವಾಗಿದೆ. ಕಾಲವನ್ನು ಎದುರಿಸಲು ಸಾಧನೆ ಹೆಚ್ಚಿಸುವುದು ಮಹತ್ವದ್ದಾಗಿದೆ. ಆಧ್ಯಾತ್ಮಿಕ ತೊಂದರೆಯಾಗುತ್ತಿರುವಾಗ ಅನೇಕ ಸಾಧಕರು ಪದೇ ಪದೇ ಸೂಕ್ಷ್ಮವಿಭಾಗದ ಸಾಧಕರಿಗೆ ದೂರವಾಣಿ ಕರೆ ಮಾಡಿ ಅಥವಾ ಅವರಿಗೆ ಸತತ ಕೇಳಿ ಅವರ ಸೇವೆಯ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಈಗ ನಿರ್ಗುಣ ಸ್ತರದ ಯುದ್ಧ ಆರಂಭವಾಗಿದ್ದರಿಂದ ಸಾಧಕರು ಸೂಕ್ಷ್ಮದಿಂದ ತಿಳಿಯುವುದಕ್ಕಿಂತಲೂ ಅವರು ಆಚೆಗೆ ಹೋಗಿದ್ದಾರೆ.
ಆದ್ದರಿಂದ ಸಾಧಕರು ತಮ್ಮತಮ್ಮ ಸ್ತರದಲ್ಲಿ ತಾವೇ ಆಧ್ಯಾತ್ಮಿಕ ತೊಂದರೆಯನ್ನು ಎದುರಿಸಲು ನಾಮಜಪ ಮತ್ತು ಪ್ರಾರ್ಥನೆಯ ಕಾಲಾವಧಿಯನ್ನು ಹೆಚ್ಚಿಸಬೇಕು. ಪ್ರಾರ್ಥನೆಯ ಸಂಖ್ಯೆಯನ್ನು ಹೆಚ್ಚಿಸಬೇಕು. ಅದರೊಂದಿಗೆ ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಕೇಳುವುದು; ಸನಾತನದ ಊದುಬತ್ತಿ, ಕರ್ಪೂರ, ಅತ್ತರ, ಪೆಟ್ಟಿಗೆ, ವಿಭೂತಿ ಇವುಗಳನ್ನು ಹೆಚ್ಚು ಹೆಚ್ಚು ಉಪಯೋಗಿಸುವುದು; ಸೂರ್ಯನ ಬಿಸಿಲಿನ ಉಪಾಯ, ನವದ್ವಾರಗಳ ಉಪಾಯ ಇತ್ಯಾದಿ ಉಪಾಯಗಳನ್ನೂ ಮಾಡಬೇಕು. ತೊಂದರೆಯು ಕೂಡಲೇ ಕಡಿಮೆಯಾಗುತ್ತದೆ ಎಂಬ ಅಪೇಕ್ಷೆ ಬೇಡ; ಆದರೆ ತೊಂದರೆಯಾಗುತ್ತಿರುವಾಗಲೂ ಸಾಧನೆ ಹೇಗಾಗಬಹುದು ಎಂಬುದರ ಕಡೆಗೆ ಹೆಚ್ಚು ಗಮನ ಕೊಡಬೇಕು; ಏಕೆಂದರೆ ಕಾಲವೇ ಪ್ರತಿಕೂಲವಿರುವುದರಿಂದ ಹಾಗೂ ರಾಷ್ಟ್ರ ಮತ್ತು ಧರ್ಮ ಸಂಕಟದಲ್ಲಿರುವುದರಿಂದ ಕಾಲ ಅನುಕೂಲವಾದ ನಂತರವೇ ನಮ್ಮೆಲ್ಲರ ತೊಂದರೆಯು ಕಡಿಮೆಯಾಗುತ್ತದೆ; ಆದರೆ ಸಮಷ್ಟಿ ಪ್ರಾರಬ್ಧದ ಒಂದು ಭಾಗವೆಂದು ತೊಂದರೆಯನ್ನು ಅನುಭವಿಸುವಾಗ ಸತತ ಸಕಾರಾತ್ಮಕ ದೃಷ್ಟಿಕೋನವನ್ನಿಟ್ಟುಕೊಂಡು ಆನಂದದಲ್ಲಿದ್ದರೆ ಈ ಕಾಲವು ಸಾಧನೆಗೂ ಸಂಧಿ ಕಾಲವಾಗಿರುವುದರಿಂದ ನಮ್ಮ ಆಧ್ಯಾತ್ಮಿಕ ಉನ್ನತಿ ಶೀಘ್ರಗತಿಯಲ್ಲಾಗುತ್ತದೆ. ಶ್ರೀರಾಮ- ಶ್ರೀಕೃಷ್ಣರನ್ನೂ ಬಿಡದ ಅಸುರರ ಎದುರು ನಮ್ಮಂತಹ ಸಾಮಾನ್ಯ ಸಾಧಕರ ವ್ಯಥೆಯೇನಿರಬಹುದು? ಎಂದು ವ್ಯಾಪಕ ವಿಚಾರ ಮಾಡಿ ಸಮಷ್ಟಿಭೋಗವನ್ನು ಭೋಗಿಸಲು ಸಿದ್ಧರಾಗಿ ಮತ್ತು ತೊಂದರೆಯಲ್ಲಿಯೂ ಶ್ರೀಕೃಷ್ಣನ ಕೃಪೆಯನ್ನು ಸಂಪಾದಿಸಲು ಪ್ರಯತ್ನಶೀಲರಾಗಿ. ಸಂಪತ್ಕಾಲದಲ್ಲಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿದರೆ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗುತ್ತಿರುತ್ತವೆ. ಆದರೆ ಈಗ ಕಾಲವೇ ಭೀಕರವಾಗಿರುವುದರಿಂದ ಕೇವಲ ಹೊಸ ಹೊಸ ಉಪಾಯಗಳನ್ನು ಹುಡುಕುವುದಕ್ಕಿಂತ ಪ.ಪೂ.ಡಾಕ್ಟರರು ಕಲಿಸಿದ ಉಪಾಯಗಳನ್ನು ಮಾಡುತ್ತಿರುವಾಗ ಅವುಗಳ ಕಾಲಾವಧಿಯನ್ನು ಹೆಚ್ಚಿಸುವುದು ಹಾಗೂ ಮತ್ತೆ ಮತ್ತೆ ಅವೇ ಉಪಾಯಗಳನ್ನು ಮಾಡಿ ತನ್ನನ್ನು ಭೀಕರ ಕಾಲದಲ್ಲಿ ತೊಂದರೆಯಲ್ಲಿಯೂ ಕಾಪಾಡಿಕೊಳ್ಳುವುದು, ಇಷ್ಟೇ ಪ್ರಯತ್ನಿಸುವುದು ನಮ್ಮ ಕೈಯಲ್ಲಿದೆ. ಹೀಗಿರುವಾಗ ಪದೇಪದೇ ಸೂಕ್ಷ್ಮ- ವಿಭಾಗಕ್ಕೆ ಕೇಳಿ ಅವರ ಹಾಗೂ ನಮ್ಮ ಸಾಧನೆಯ ಅಮೂಲ್ಯ ಸಮಯ ವ್ಯರ್ಥಗೊಳಿಸಬೇಡಿ! ಕಾಲದ ಮೇಲೆ ಜಯಗಳಿಸಲು ನಮ್ಮ ಮುಂದಿರುವ ಏಕೈಕ ಉತ್ತರ ವೆಂದರೆ ‘ಆಧ್ಯಾತ್ಮಿಕ ಉಪಾಯಗಳ ಅವಧಿಗಳನ್ನು ಹೆಚ್ಚಿಸುವುದು!’ - ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ (ಮಾಘ ಕೃಷ್ಣ ೧, ಕಲಿಯುಗ ವರ್ಷ ೫೧೧೨ (೧೯.೨.೨೦೧೧))
No comments:
Post a Comment