ಸೂರ್ಯನ ಎಳೆಯ ಕಿರಣಗಳಿಂದ ಶರೀರದಲ್ಲಿ ನಿಷ್ಕ್ರಿಯ ರೂಪದಲ್ಲಿರುವ ‘ಡಿ’ ಜೀವಸತ್ತ್ವವು ಕ್ರಿಯಾಶೀಲ ರೂಪದಲ್ಲಿರುವ ‘ಡಿ’ ಜೀವಸತ್ತ್ವವಾಗಿ ರೂಪಾಂತರಗೊಳ್ಳುತ್ತದೆ. ಈ ‘ಡಿ’ ಜೀವಸತ್ತ್ವದಿಂದ ಆಹಾರದಲ್ಲಿನ ಕ್ಯಾಲ್ಸಿಯಂನ ಪೋಷಣೆಯು ಚೆನ್ನಾಗಿ ಆಗುತ್ತದೆ. ಅದರಂತೆ ಹಲ್ಲು ಮತ್ತು ಎಲುಬುಗಳು ಬಲಿಷ್ಠವಾಗುತ್ತವೆ. ಸೂರ್ಯನ ಎಳೆಯ ಕಿರಣಗಳಲ್ಲಿ ತೇಜತತ್ತ್ವವೂ ಇರುವುದರಿಂದ ಆಧ್ಯಾತ್ಮಿಕ ದೃಷ್ಟಿಯಿಂದಲೂ ಅದರ ಲಾಭವಾಗುತ್ತದೆ. ತೇಜತತ್ತ್ವದಿಂದ ಕಪ್ಪುಶಕ್ತಿಯ ಆವರಣವು ನಾಶವಾಗಿ ಉತ್ಸಾಹವು ಹೆಚ್ಚಾಗುತ್ತದೆ. ಆದುದರಿಂದ ಬೆಳಗ್ಗೆ ಸೂರ್ಯೋದಯದ ನಂತರ ಮುಂದಿನ ೨ ಗಂಟೆಗಳ ಸೂರ್ಯನ ಎಳೆಕಿರಣಗಳನ್ನು ಉಪಯೋಗಿಸಿಕೊಂಡರೆ ಲಾಭವಾಗುವುದು. ಆ ಎಳೆಯ ಬಿಸಿಲಿನಲ್ಲಿ ನಾಮಜಪ, ಸತ್ಸೇವೆ ಇತ್ಯಾದಿ ಏನೂ ಮಾಡಬಹುದು.
No comments:
Post a Comment