ಸಾಧ್ಯವಿದ್ದರೆ ಬೆಳಗ್ಗೆ ಸೂರ್ಯೋದಯದ ಮೊದಲು ಅಥವಾ ಬೇಗ ಎದ್ದು ಸಮಯ ಸಿಕ್ಕಿದಾಗ ವ್ಯಾಯಾಮ, ಯೋಗಾಸನ ಮಾಡಿದರೆ ಆಧ್ಯಾತ್ಮಿಕ ಉಪಾಯ ಮತ್ತು ನಾಮಜಪವಾಗುತ್ತದೆ. ಸಾಧ್ಯವಿರುವವರು ಮನೆಯ ಹೊರಗಿನ ಮುಕ್ತ ಸ್ಥಳದಲ್ಲಿ ವ್ಯಾಯಾಮ ಮಾಡಿದರೆ ಆಕಾಶತತ್ತ್ವದ ಉಪಾಯದ ಲಾಭವಾಗುತ್ತದೆ.
ವ್ಯಾಯಾಮದಿಂದ ದೇಹದ ಮೇಲಿರುವ ಕಪ್ಪು ಆವರಣ ಮತ್ತು ದೇಹದಲ್ಲಿರುವ ಕಪ್ಪು ಶಕ್ತಿಯು ವಿಘಟನೆಯಾಗುತ್ತದೆ. ಬೆಳಗ್ಗಿನ ಪ್ರಸನ್ನ ವಾತಾವರಣ ಮತ್ತು ಮುಕ್ತ ಗಾಳಿಯಿಂದ ಶಾರೀರಿಕ ದೃಷ್ಟಿಯಿಂದ ಸಕ್ಷಮ ಮತ್ತು ಮಾನಸಿಕ ದೃಷ್ಟಿಯಿಂದ ಉತ್ಸಾಹದಿಂದಿರಬಹುದು. ಅನೇಕ ಸಾಧಕರು ತಡರಾತ್ರಿಯ ವರೆಗೆ ಸೇವೆ ಮಾಡುವುದರಿಂದ ಬೆಳಗ್ಗೆ ಏಳಲು ತಡವಾಗುತ್ತದೆ. ಅವರು ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುವ ರೂಢಿ ಮಾಡಿಕೊಂಡು ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡಿದರೆ ಉಪಾಯವಾಗುತ್ತದೆ.
No comments:
Post a Comment