ಅಸುರಿ ಆಂಗ್ಲ ಭಾಷೆ ಮತ್ತು ದೇವಭಾಷೆ ಸಂಸ್ಕ ತ ಇವುಗಳಿಗೆ ಎಲ್ಲಿ ಸ್ಥಾನ ನೀಡಬೇಕು...

ಅಸುರಿ ಆಂಗ್ಲ ಭಾಷೆ ಮತ್ತು ದೇವಭಾಷೆ ಸಂಸ್ಕ ತ ಇವುಗಳಿಗೆ 
ಎಲ್ಲಿ ಸ್ಥಾನ ನೀಡಬೇಕುಎಂಬುದನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ನಿರ್ಧರಿಸಬೇಕು!

ಕ್ರಿ.ಶ. ೨೦೧೧ ರ ಜನಗಣತಿಯು ಭಾರತದಾದ್ಯಂತ ಆರಂಭವಾಗಿದೆ. ಇದರಲ್ಲಿ ಭಾಷೆಯ ಅಂಶವನ್ನು ಗಾಂಭೀರ್ಯದಿಂದ ಗಮನದಲ್ಲಿಟ್ಟು ಕೊಂಡು ಪ್ರತಿಯೊಬ್ಬರು ತಮಗೆ ಬರುತ್ತಿರುವ ಮೂರು ಭಾಷೆಗಳನ್ನು ವಿಚಾರಪೂರ್ವಕವಾಗಿ ಆರಿಸಬೇಕು. - ಡಾ.ಮೇಘರಾಜ ಪರಾಡಕರ
೧.ಆಂಗ್ಲ ಭಾಷೆಯ ರೂಪದಲ್ಲಿ ಪಾರತಂತ್ರ್ಯದ ಸ್ಮೃತಿಯನ್ನು ಕಾಪಾಡುವ ಭಾಷಾಭಿಮಾನ ಶೂನ್ಯ ಭಾರತೀಯರು!
‘ಭಾರತದಲ್ಲಿ ಆಂಗ್ಲ ಭಾಷೆಯು ಎರಡನೇ ಕ್ರಮಾಂಕದ ಭಾಷೆಯಾಗಿದೆ. ಆಂಗ್ಲರು ಭಾರತದಿಂದ ಹೋಗಿ ೬೩ ವರ್ಷಗಳಾ ದರೂ ಅವರ ಒಡೆತನವು ಭಾಷೆಯ ರೂಪ ದಲ್ಲಿ ಭಾರತೀಯರಲ್ಲಿ ಇನ್ನೂ ಉಳಿದಿದೆ. ಭಾರತಕ್ಕೆ ಸಂಸ್ಕೃತ ಭಾಷೆಯಂತಹ ಮಾತೃ ಭಾಷೆಯಿರುವಾಗ ಹಾಗೂ ಆಂಗ್ಲಕ್ಕಿಂತ ಹೆಚ್ಚು ಸಮೃದ್ಧವಾದ ಪ್ರಾದೇಶಿಕ ಭಾಷೆಯಿರು ವಾಗ ಆಂಗ್ಲರ ಭಾಷೆಯು ಅದರ ಮೇಲೆ ತನ್ನ ವರ್ಚಸ್ಸು ಬೀರುವುದು, ಭಾರತೀಯ ರಲ್ಲಿ ಭಾಷ್ಟ್ರಾಭಿಮಾನ ಇಲ್ಲದಿರುವ ಪ್ರತೀಕವಾಗಿದೆ.


೨. ಜನಗಣತಿಗನುಸಾರ ಆಂಗ್ಲ ಮತ್ತು ಸಂಸ್ಕೃತ ಭಾಷೆಗಳ ಸ್ಥಿತಿ
ಕ್ರಿ.ಶ.೨೦೦೧ರ ಜನಗಣತಿಗನುಸಾರ ಭಾರತದಲ್ಲಿ ಆಂಗ್ಲ ಭಾಷೆಯು ಹಿಂದಿ ಭಾಷೆಯ ನಂತರ ಎರಡನೇ ಕ್ರಮಾಂಕದ ಭಾಷೆಯಾಗಿದೆ. ಆ ಸಮಯದಲ್ಲಿ ೧೨.೫ ಕೋಟಿ ಭಾರತೀಯರು ತಮಗೆ ಆಂಗ್ಲ ಭಾಷೆಯು ಬರುತ್ತದೆ ಎಂದು ನೋಂದಾಯಿಸಿದ್ದರು. ಈ ಸಂಖ್ಯೆಯು ಇಂಗ್ಲೆಂಡಿನ ಆಗಿನ ಜನಸಂಖ್ಯೆಗಿಂತ ಎರಡು ಪಟ್ಟಿಗಿಂತಲೂ ಹೆಚ್ಚಿತ್ತು. ಇದೇ ಜನಗಣತಿಯಲ್ಲಿ ಎಲ್ಲ ಭಾಷೆಯ ಜನನಿಯಾಗಿರುವ ಸಂಸ್ಕೃತ ಭಾಷೆಯನ್ನು ಅರಿತವರ ಸಂಖ್ಯೆಯು ಇಡೀ ಭಾರತದಲ್ಲಿ ಕೇವಲ ೧೪ ಸಾವಿರದ ೧೩೫ ರಷ್ಟೇ ಇತ್ತು.
೩.ಜನಗಣತಿಯಲ್ಲಿ ಆಂಗ್ಲ ಭಾಷೆಗೆ ಮೇಲಿನ ಸ್ಥಾನ ದೊರಕುವ ಕಾರಣಗಳು
ಅ.ಜನಗಣತಿಯಲ್ಲಿ ಒಟ್ಟು ಮೂರು ಭಾಷೆಗಳ ಬಗ್ಗೆ ಕೇಳಲಾಗುತ್ತದೆ. ಯಾರಾದ ರೊಬ್ಬರಿಗೆ ನಾಲ್ಕೂ ಭಾಷೆಗಳು ಬರುತ್ತಿ ದ್ದರೂ ಜನಗಣತಿಯಲ್ಲಿನ ಭಾಷೆಯನ್ನು ಆರಿಸುವ ಪರಿಣಾಮದ ಬಗ್ಗೆ ತಿಳುವಳಿಕೆ ಯಿಲ್ಲದಿರುವುದರಿಂದ ಆಂಗ್ಲ ಭಾಷೆಯನ್ನು ಈ ಮೂರು ಭಾಷೆಗಳಲ್ಲಿ ಸಮಾವೇಶ ಗೊಳಿಸುತ್ತಾರೆ.
ಆ.ಪ್ರಾದೇಶಿಕ ಭಾಷೆಯು ಆಯಾ ಪ್ರದೇಶಕ್ಕಷ್ಟೇ ಸೀಮಿತವಾಗಿರುವುದರಿಂದ ಭಾರತದ ಒಟ್ಟು ಜನಸಂಖ್ಯೆಯ ತುಲನೆ ಯಲ್ಲಿ ಆಯಾ ಪ್ರಾದೇಶಿಕ ಭಾಷೆ ಮಾತ ನಾಡುವವರ ಸಂಖ್ಯೆ ಕಡಿಮೆಯಾಗುತ್ತದೆ; ಆದರೆ ಸಂಪೂರ್ಣ ಭಾರತದ ಜನರು  ಮೂರು ಭಾಷೆಗಳಲ್ಲಿ ಆಂಗ್ಲ ಭಾಷೆಗೆ ಮಹತ್ವ ಕೊಟ್ಟಿದ್ದರಿಂದ ಆಂಗ್ಲ ಭಾಷೆ ಮಾತನಾಡು ವವರ ಸಂಖ್ಯೆಯು ಹೆಚ್ಚಾಗುತ್ತದೆ.
೪.ಹೆಚ್ಚುತ್ತಿರುವ ಆಂಗ್ಲ ಭಾಷೆಯ ಪ್ರಭಾವ ಮತ್ತು ಅದರ ಕಾರಣಗಳು
ಇಂದು ಆಂಗ್ಲ ಭಾಷೆಯ ಪ್ರಭಾವವು ಹೆಚ್ಚಾಗುತ್ತಿದೆ. ‘ಆಂಗ್ಲ ಭಾಷೆ ಬರುವು ದೆಂದರೆ ಪ್ರಗತಿ ಮತ್ತು ಅದು ಬರದಿರು ವುದೆಂದರೆ ಹಿಂದುಳಿದವರು’ ಎಂದು ಕೆಲವರು ತಿಳಿದುಕೊಂಡಿದ್ದಾರೆ. ತಮ್ಮ ಮಕ್ಕಳಿಗೆ ಮಾತೃಭಾಷೆ ಮಾತನಾಡಲು ಬರದಿದ್ದರೂ ಪಾಲಕರು ಅದನ್ನು ದುರ್ಲಕ್ಷಿ ಸುತ್ತಿದ್ದಾರೆ; ಆದರೆ ಅವನಿಗೆ ‘ಆಂಗ್ಲ ಭಾಷೆಯು ಬರಲೇಬೇಕು’ ಎಂದು ಅವರ ಆಗ್ರಹವಿರುತ್ತದೆ. ಜನರು ಕನ್ನಡ ಭಾಷೆ ಯಲ್ಲಿನ ಒಂದು ವಾಕ್ಯದಲ್ಲಿ ಅನೇಕ ಆಂಗ್ಲ ಶಬ್ದವನ್ನು ಉಪಯೋಗಿಸಿ ಮಾತನಾಡು ತ್ತಾರೆ ಎಂಬುದರ ಅನುಭವವು ಪದೇ ಪದೇ ಬರುತ್ತಿದೆ. ಇದಕ್ಕೆ ಸರಕಾರದ ಪ್ರಾದೇಶಿಕ ಭಾಷೆಯ ಬಗ್ಗೆ ದುರ್ಬಲ ಧೋರಣೆಯು ಕಾರಣವಾಗಿದ್ದರೂ, ಭಾರತೀಯರ ರಾಷ್ಟ್ರಾಭಿಮಾನದ ಕೊರತೆಯೇ ಅದರ ಮೂಲ ಕಾರಣವಾಗಿದೆ.
೫.ಭಾಷಾಭಿಮಾನಿ ನಾಗರಿಕರಲ್ಲಿಯೇ ಪ್ರಗತಿ ಹೊಂದಿದ ದೇಶಗಳ ರಹಸ್ಯ ಅಡಗಿರುವುದು
ಜಗತ್ತಿನ ಎಲ್ಲ ಮುಂದುವರಿದ ದೇಶಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಜಪಾನ, ಜರ್ಮನಿ, ಇಟಲಿ ಇಂತಹ ದೇಶಗಳಲ್ಲಿ ವೈಜ್ಞಾನಿಕ ಶೋಧಪ್ರಬಂಧಗಳನ್ನೂ ಅವರ ಮಾತೃ ಭಾಷೆಯಲ್ಲಿಯೇ ಮಂಡಿಸಲಾಗುತ್ತಿದೆ. ಪ್ರಗತಿ ಹೊಂದಿದ ದೇಶಗಳ ಪ್ರಗತಿಯ ರಹಸ್ಯವು ಅಲ್ಲಿನ ನಾಗರಿಕರಲ್ಲಿರುವ ಭಾಷಾಭಿಮಾನದಲ್ಲಡಗಿದೆ.
೬.ಭಾರತಕ್ಕೆ ಗತವೈಭವ ಮರಳಿ ಪ್ರಾಪ್ತವಾಗಲು ಆಂಗ್ಲರ ಸ್ಥಾನವು ಕೆಳಗಿಳಿಯುವುದು ಆವಶ್ಯಕ
ನಾವು ಆಂಗ್ಲ ಭಾಷಾರೂಪಿ ದಾಸ್ಯತ್ವದ ಬಂಧನವನ್ನು ತೊಡೆದು ಹಾಕದೇ ನಮ್ಮಲ್ಲಿ ನಿಜವಾದ ಬೆಳವಣಿಗೆಯಾಗಲು ಸಾಧ್ಯವಿಲ್ಲ. ಇಂದು ವಿದೇಶಿಯರು ಸಂಸ್ಕೃತ ಭಾಷೆ ಯಲ್ಲಿರುವ ಜ್ಞಾನವನ್ನು ಅಧ್ಯಯನ  ಮಾಡುತ್ತಿದ್ದಾರೆ. ಜರ್ಮನಿಯಂತಹ ದೇಶಗಳಲ್ಲಿ ಕೆಲವೆಡೆ ಸಂಸ್ಕೃತ ಭಾಷೆಯನ್ನು ಪಠ್ಯಕ್ರಮದಲ್ಲಿ ಕಡ್ಡಾಯಗೊಳಿಸಲಾಗಿದೆ. ಕ್ರಿ.ಶ. ೨೦೦೧ರ ಜನಗಣತಿಯಲ್ಲಿ ಎರಡನೇ ಕ್ರಮಾಂಕದಲ್ಲಿರುವ ಆಂಗ್ಲ ಭಾಷೆಯು ಪ್ರಸಕ್ತ ಜನಗಣತಿಯಲ್ಲಿ ಮೊದಲನೇ ಕ್ರಮಾಂಕದಲ್ಲಿಯೂ ಬರಬಹುದು ಎಂಬಂತೆ ಸದ್ಯದ ಸ್ಥಿತಿಯಿದೆ. ಪರಕೀಯ ದಾಸ್ಯತ್ವದ ಪ್ರತೀಕವಾಗಿರುವ ಆಂಗ್ಲ ಭಾಷೆಯ ಸ್ಥಾನವು ಕೆಳಗಿಳಿಯುವುದು, ಭಾರತಕ್ಕೆ ಗತವೈಭವವನ್ನು ಪ್ರಾಪ್ತ ಮಾಡಿ ಕೊಡುವುದಕ್ಕಾಗಿ ಆವಶ್ಯಕವಾಗಿದೆ.
೭.ಭಾರತೀಯರಿಗೆ ಸಂಸ್ಕೃತ ಭಾಷೆಯು ತಿಳಿದಿಲ್ಲವೇ?
ಬಾಹ್ಯನೋಟಕ್ಕೆ ವಿಚಾರ ಮಾಡಿದರೆ ಕ್ರಿ.ಶ. ೨೦೦೧ರಲ್ಲಿ ‘ಕೇವಲ ೧೪ ಸಾವಿರ ೧೩೫ ಭಾರತೀಯರಿಗೆ ಸಂಸ್ಕೃತ ಭಾಷೆಯು ಗೊತ್ತಿದೆ’ ಎಂದರೆ ನಂಬಲಾರ್ಹವಲ್ಲ. ಭಾರತೀಯರಿಗೆ ‘ಸಂಸ್ಕೃತ ಗೊತ್ತಿಲ್ಲ’ ಎಂದೆನಿಸುವುದು ಮೂಲದಲ್ಲಿಯೇ ತಪ್ಪಾಗಿದೆ. ಯಾವುದೇ ಭಾರತೀಯ ಭಾಷೆಯನ್ನು ತೆಗೆದುಕೊಂಡರೂ ಅದರಲ್ಲಿನ ಶೇ.೫೦ ರಿಂದ ೮೦ರಷ್ಟು ಶಬ್ದಗಳು ಸಂಸ್ಕೃತ ಭಾಷೆಯದ್ದೇ ಆಗಿವೆ. ಇದರ ಅರ್ಥವೇನೆಂದರೆ ‘ಪ್ರತಿಯೊಬ್ಬ ಭಾರತೀಯನು ತನ್ನ ದೈನಂದಿನ ಜೀವನದಲ್ಲಿ ಶೇ.೫೦ರಿಂದ ೮೦ರಷ್ಟು ಸಂಸ್ಕೃತ ಶಬ್ದಗಳನ್ನು ಉಪಯೋಗಿಸುತ್ತಿದ್ದಾನೆ; ಆದರೆ ಇದು ಗೊತ್ತಿಲ್ಲದ್ದರಿಂದ ಬಹಳಷ್ಟು ಜನರಿಗೆ ಸಂಸ್ಕೃತ ಭಾಷೆಯು ತಮಗೆ ಬರುವುದಿಲ್ಲ’ ಎಂದು ಅನಿಸುತ್ತದೆ. ಯಾರಿಗಾದರೂ ಪ್ರಾದೇಶಿಕ ಭಾಷೆ ಬರುತ್ತಿದ್ದರೆ, ಅವರಿಗೆ ಸಂಸ್ಕೃತ ಭಾಷೆಯು ಸಹಜವಾಗಿ ಬರುತ್ತದೆ; ಏಕೆಂದರೆ ಸಂಸ್ಕೃತ ಭಾಷೆಯಿಂದಲೇ ಎಲ್ಲ ಭಾಷೆಗಳ ಉತ್ಪತ್ತಿಯಾಗಿವೆ. ಹಿಂದೂಗಳ ಎಲ್ಲ ಧಾರ್ಮಿಕ ವಿಧಿಗಳು ಸಂಸ್ಕೃತ ಭಾಷೆಯಿಂದಲೇ ನಡೆಯುತ್ತಿವೆ. ಆದುದರಿಂದ ಸಂಸ್ಕೃತವು ಮನೆಮನೆಗಳಲ್ಲಿ ಪ್ರಚಲಿತವಾದ ಭಾಷೆ ಯಾಗಿದೆ.
೮. ಭಾರತೀಯರೇ, ನಿಮಗೆ ಸಂಸ್ಕೃತ ಗೊತ್ತಿದೆ ಎಂಬುದನ್ನು ಗಮನದಲ್ಲಿಡಿ!
ಹೀಗಿದ್ದರೂ ಕೇವಲ ಅಜ್ಞಾನದಿಂದ ಸಂಸ್ಕೃತ ಭಾಷೆಗೆ ಜನಗಣತಿಯಲ್ಲಿ ಸ್ಥಾನ ನೀಡಲಾಗುತ್ತಿಲ್ಲ. ಕ್ರಿ.ಶ.೨೦೧೧ರ ಜನಗಣತಿಯು ಭಾರತದಾದ್ಯಂತ ಆರಂಭವಾಗಿದೆ. ಅದರಲ್ಲಿ ನಾಗರಿಕರಿಗೆ ‘ಮಾತೃ ಭಾಷೆಯೊಂದಿಗೆ ಅವರಿಗೆ ಬರುವ ಮೂರು ಭಾಷೆಗಳು ಯಾವುವು’ ಎಂದು ಕೇಳಲಾಗುತ್ತಿದೆ. ನಾಲ್ಕನೆಯ ಭಾಷೆಯು ಬರುತ್ತಿದ್ದರೂ ಅದನ್ನು ಪರಿಗಣಿಸುವುದಿಲ್ಲ. ಪ್ರಾಧಾನ್ಯತೆಗನುಸಾರ ಮಾತೃಭಾಷೆ, ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಹೀಗೆ ವರ್ಗೀಕರಿಸಲಾಗಿದೆ. ಈ ಮೂರರಲ್ಲಿ ಯಾವುದಾದರೊಂದು ಸ್ಥಳಗಳಲ್ಲಿ ಭಾಷೆಯೊಂದು ಬಂದರೆ ‘ಆ ಭಾಷೆ ಗೊತ್ತಿರುವವರು’ ಎಂದು ನಮ್ಮ ನೋಂದಣಿಯಾಗಿರುತ್ತದೆ. ಪ್ರತಿಯೊಬ್ಬರ ಮಾತೃಭಾಷೆಯು ನಿರ್ಧರಿತ ವಾಗಿರುತ್ತದೆ. ರಾಷ್ಟ್ರಭಾಷೆಯಾದ ಹಿಂದಿಯು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ‘ನಮಗೆ ಬರುವ ಮೂರನೇ ಭಾಷೆಯು ಯಾವುದು’ ಎಂದು ಪ್ರತಿಯೊಬ್ಬರು ವಿವೇಕ ಬುದ್ಧಿಯನ್ನು ಜಾಗೃತವಾಗಿಟ್ಟು ವಿಚಾರ ಮಾಡಬೇಕು. ಭಾರತದ ಭವಿಷ್ಯದ ವಿಚಾರ ಮಾಡಿದಾಗ ಆಸುರಿ ಆಂಗ್ಲ ಭಾಷೆ ಮತ್ತು ದೇವಭಾಷೆಗೆ ಎಲ್ಲಿ ಸ್ಥಾನ ನೀಡಬೇಕು ಎಂದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ನಿರ್ಧರಿಸಬೇಕು.’ - ಸಂಕಲನಕಾರರು: ಡಾ.ಮೇಘರಾಜ ಪರಾಡಕರ

No comments:

Post a Comment