ಉಡುಪಿಯ ‘ಯು ಚಾನಲ್’ನ ಪ್ರವಕ್ತಕರಾದ ಶ್ರೀ.ಪ್ರಸಾದ ರಾವ ಇವರು ಉತ್ತಮ ಧರ್ಮಾಭಿಮಾನಿಯಾಗಿದ್ದಾರೆ. ಇವರಿಗೆ ಸನಾತನ ಸಂಸ್ಥೆಯ ಮೇಲೆ ಅಪಾರ ಗೌರವವಿದೆ. ಸ್ವತಃ ಅವರೇ ನಮ್ಮನ್ನು ಸಂಪರ್ಕಿಸಿ ನಿಮ್ಮ ಯಾವುದಾದರೂ ಧ್ವನಿಚಿತ್ರಮುದ್ರಿಕೆ ಇದ್ದರೆ ನಾವು ಪ್ರಸಾರ ಮಾಡುತ್ತೇವೆ ಎಂದು ತಿಳಿಸಿದರು. ಈ ಮೊದಲು ಇವರು ಸಂಸ್ಥೆಯ ಪ್ರಾಸಂಗಿಕ ಧ್ವನಿಚಿತ್ರ ಪ್ರದರ್ಶನವನ್ನು ತಮ್ಮ ವಾಹಿನಿಯಲ್ಲಿ ಮಾಡಿದ್ದಾರೆ. ಅವರ ಇಚ್ಛೆಯಂತೆ ಶ್ರೀಯುತ ವಿನಯ ಪಾನವಳಕರರವರ ಸಂದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಸಂಸ್ಥೆಯ ವತಿಯಿಂದ ಗಣೇಶ ಚತುರ್ಥಿಯ ಲೈವ್ ಇನ್ ಕಾರ್ಯಕ್ರಮವನ್ನು ಮಾಡಿ ಸಮಾಜದ ಜನರ ಸಂದೇಹ ನಿವಾರಣೆಯನ್ನು ಮಾಡುವ ಮೂಲಕ ಸಹಕರಿಸಿದ್ದಾರೆ.
ಧರ್ಮಜಾಗೃತಿಯ ಕಾರ್ಯವಾದ ದೇವಸ್ಥಾನ ಸರಕಾರೀಕರಣದ ಬಗ್ಗೆಯೂ ಅವರ ವಾಹಿನಿಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇವರು ತಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಸುಮಾರು ೧೦ಲಕ್ಷ ಕರಾವಳಿಯ ಜನರಿಗೆ ಬೆಳಗ್ಗೆ ೬.೦೦ರಿಂದ ೬.೩೦ರ ತನಕ ಧರ್ಮಶಿಕ್ಷಣವನ್ನು ನೀಡುವಂತಹ ಶ್ರೇಷ್ಠ, ಪವಿತ್ರ ಧರ್ಮಕಾರ್ಯದಲ್ಲಿ ಮಹತ್ವದ ಪಾತ್ರವನ್ನು ಮಾಡುತ್ತಿದ್ದರೂ ಇದು ನಮ್ಮ ಅಳಿಲು ಸೇವೆ ಮತ್ತು ಧರ್ಮ ಕರ್ತವ್ಯವೆಂದು ವಿನಮ್ರವಾಗಿ ಹೇಳುತ್ತಾರೆ. ಮುಂದೆಯೂ ನಮ್ಮನ್ನು ಈ ವಾಹಿನಿಯ ಮೂಲಕ ಧರ್ಮಕಾರ್ಯಕ್ಕಾಗಿ ಉಪಯೋಗಿಸಿಕೊಳ್ಳಿ ಎಂದು ಹೇಳಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಮಾಧ್ಯಮ ವರ್ಗಕ್ಕೆ ಅತೀ ಉತ್ತಮ ಉದಾಹರಣೆ ಎಂದರೆ ಶ್ರೀ.ಪ್ರಸಾದ ರಾವರವರು. ಇಂತಹ ಧರ್ಮಾಭಿಮಾನಿಗಳಿಂದಲೇ ಧರ್ಮ ಕಾರ್ಯವಾಗಿ ಹಿಂದೂ ರಾಷ್ಟ್ರ ನಿರ್ಮಾಣವಾಗಲಿ ಎಂದು ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥಿಸುತ್ತೇವೆ. - ಸೌ.ಶೋಭಾ (ಇತರ ವಾಹಿನಿಯವರು ಶ್ರೀ.ಪ್ರಸಾದ ರಾವರವರ ಆದರ್ಶವನ್ನಿಟ್ಟುಕೊಂಡು ಧರ್ಮಶಿಕ್ಷಣ ನೀಡುವಲ್ಲಿ ಕಾರ್ಯಪ್ರವೃತ್ತರಾಗುವರೇ? - ಸಂಪಾದಕರು)

No comments:
Post a Comment