ದೇವಸ್ಥಾನ ಕೆಡಹುವುದರ ವಿರುದ್ಧ ಚಾಮರಾಜ ನಗರದಲ್ಲಿ ದೇವಸ್ಥಾನಗಳ ಮುಖ್ಯಸ್ಥರ ಸಭೆ


ಚಾಮರಾಜನಗರ : ದಿನಾಂಕ ೫.೨.೨೦೧೧ ರ ಶನಿವಾರದಂದು ಚಾಮರಾಜನಗರದಲ್ಲಿ ಧರ್ಮಾಭಿಮಾನಿಗಳ, ದೇವಸ್ಥಾನಗಳ ಮುಖ್ಯಸ್ಠರ ಸಭೆ ನಡೆಯಿತು. ಇಲ್ಲಿನ ಗ್ರಾಮದೇವತೆ ಶ್ರೀ ಮಾರಮ್ಮನ ದೇವಸ್ಠಾನದಲ್ಲಿ ಈ ಸಭೆಯು ನಡೆಯಿತು. ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕರಾದ ಶ್ರೀ. ಶಿವರಾಮರವರು ದೇವಸ್ಥಾನಗಳನ್ನು ತೆರವುಗೊಳಿಸುವುದರ ವಿರುದ್ಧ ವಿಚಾರಗಳನ್ನು ಮಂಡಿಸಿದರು. ಸರ್ವೋಚ್ಚ ನ್ಯಾಯಾಲಯದ ಆಜ್ಞೆ, ರಾಜ್ಯ ಸರ್ಕಾರದ ಅಫಿಡೆವಿಟ್, ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಸುತ್ತೋಲೆಯ ಮುಖ್ಯಾಂಶಗಳನ್ನು ಸಭೆಗೆ ತಿಳಿಸಿದರು ಮತ್ತು ದೇವಸ್ಥಾನಗಳನ್ನು ಅಧಿಕೃತಗೊಳಿಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ಉಪಸ್ಥಿತರಿಗೆ ಮಾಹಿತಿಗಳನ್ನು ನೀಡಿದರು. ಈ ಸಭೆಯಲ್ಲಿ ೩೦ಕ್ಕಿಂತಲೂ ಹೆಚ್ಚು ಧರ್ಮಾಭಿಮಾನಿಗಳು, ದೇವಸ್ಥಾನಗಳ ಪ್ರಮುಖರು, ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.



No comments:

Post a Comment