ಸಾಪ್ತಾಹಿಕ ಚಂದಾದಾರರನ್ನಾಗಿಸಲು ಸುರತ್ಕಲ್‌ನ ವನಜಾರವರು ಮಾಡಿದ ಪ್ರಶಂಸನೀಯ ಪ್ರಯತ್ನ

ಸನಾತನದ ಸಾಧಕಿ ವನಜಾರವರು ಬಂಟ್ವಾಳದ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಹೆಚ್ಚಿನ ಸಮಯ ಪ್ರಯಾಣ ಮತ್ತು ಕಛೇರಿ ಕೆಲಸಗಳಲ್ಲಿಯೇ ಕಳೆಯುತ್ತದೆ. ಅವರಿಗೆ ಸಮಷ್ಟಿ ಸಾಧನೆಯನ್ನು ಮಾಡಲು ಸಮಯ ಸಿಗುವುದಿಲ್ಲ. ಆದುದರಿಂದ ಅವರು ಪ.ಪೂ. ಗುರುದೇವರಲ್ಲಿ ಸಮಷ್ಟಿ ಸಾಧನೆಯನ್ನು ಹೇಗೆ ಮಾಡಬಹುದು ಎಂಬ ವಿಚಾರ ನೀವೇ ನನಗೆ ಕೊಟ್ಟು, ನನ್ನ ಕೈಯಿಂದ ನೀವೇ ಅದನ್ನು ಮಾಡಿಸಿಕೊಳ್ಳಿ ಎಂದು ತಳಮಳದಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಪ.ಪೂ.ಗುರುದೇವರ ಕೃಪೆಯಿಂದ ಅವರು ತಮ್ಮ ಸಂಪರ್ಕಕ್ಕೆ ಬರುವ ಹಲವು ಧರ್ಮಾಭಿಮಾನಿ ನ್ಯಾಯ ವಾದಿಗಳಿಂದ ಜಾಹೀರಾತು ಸಂಗ್ರಹದ ಸೇವೆ ಮತ್ತು ಸನಾತನ ಪ್ರಭಾತಕ್ಕೆ ಚಂದಾ ಮಾಡುವ ಸೇವೆಯನ್ನು ಮಾಡಿದರು.
ಸನಾತನ ಸಂಸ್ಥೆಯ ಮೇಲೆ ನಿರ್ಬಂಧದ ಕಾರ್ಮೋಡ ಕವಿದಿರುವಾಗ ನ್ಯಾಯವಾದಿಗಳನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡುವುದು ಮುಂತಾದ ಸೇವೆಗಳನ್ನು ಮಾಡಿದರು.
ಇತ್ತೀಚೆಗೆ ಮಹಾರಾಷ್ಟ್ರದ ಮಾಜಿ ಜಿಲ್ಲಾ ನ್ಯಾಯಾಧೀಶ ಶ್ರೀ.ಸುಧಾಕರ ಚಪಳಗಾವಕರ ಮತ್ತು ನಿವೃತ್ತ ನ್ಯಾಯಾಧೀಶರಾದ ಶ್ರೀ.ರಾಮದಾಸ ಕೇಸರಕರರವರ ಮಾರ್ಗದರ್ಶನದಲ್ಲಿ ನ್ಯಾಯವಾದಿಗಳಿಗಾಗಿ ಒಂದು ಕಾರ್ಯಕ್ರಮವನ್ನು ಆಯೋಜಿಸುವ ಸೇವೆ ಇವರಿಗೆ ದೊರಕಿತು. ಆ ಕಾರ್ಯ ಕ್ರಮದಲ್ಲಿ ೧೩ ನ್ಯಾಯವಾದಿಗಳು ಉಪಸ್ಥಿತರಿದ್ದರು. ಅಲ್ಲದೇ ರಾಷ್ಟ್ರ ಹಾಗೂ ಧರ್ಮ ಜಾಗೃತಿಯ ಕಾರ್ಯದಲ್ಲಿ ನ್ಯಾಯವಾದಿಗಳನ್ನು ಸೇರಿಸಿಕೊಳ್ಳುವ ತೀವ್ರ ತಳಮಳ ದಿಂದ ೧೬ನ್ಯಾಯವಾದಿಗಳಿಗೆ ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ಚಂದಾದಾರನ್ನಾಗಿಸಿ ಮಾಡಿಸಿದರು. (ವನಜಾರವರಲ್ಲಿರುವ ತಳಮಳದಿಂದಾಗಿ ಅವರಿಗೆ ಇದನ್ನೆಲ್ಲ ಮಾಡಲು ಸಾಧ್ಯವಾಯಿತು. ವನಜಾರವರ ತಳಮಳವು ಎಲ್ಲ ಸಾಧಕರಿಗೆ ಆದರ್ಶಪ್ರಾಯವಾಗಿದೆ. - ಸಂಕಲನಕಾರರು)

No comments:

Post a Comment