ಕೆಲವರು ಸಾಧಕರಿಗೆ, ‘ಆಚಾರ ಧರ್ಮದ ಪಾಲನೆ ಮಾಡಿ, ಎಂದು ನೀವು ಇತರರಿಗೆ ಹೇಳುತ್ತೀರಿ, ಆದರೆ ನೀವು ಸ್ವತಃ ಧೋತರ-ಅಂಗಿ ಹಾಕಿಕೊಳ್ಳದೇ ಶರ್ಟ್- ಪ್ಯಾಂಟ್ ಏಕೆ ಹಾಕುತ್ತೀರಿ?’ ಎಂದು ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆಯ ಉತ್ತರವೆಂದರೆ, ಯಾರು ಏನೂ ಸಾಧನೆ ಮಾಡುವುದಿಲ್ಲವೋ ಅವರು ಮೊದಲನೇ ಹಂತವೆಂದು ಆಚಾರಧರ್ಮದ ಪಾಲನೆ ಮಾಡಬೇಕು. ಆಚಾರಧರ್ಮದ ಪಾಲನೆ ಮಾಡುವುದರಿಂದ ಸಾತ್ತ್ವಿಕತೆ ದೊರಕುತ್ತದೆ ಮತ್ತು ನಮ್ಮ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾದಾಗ ಮುಂದೆ ಅವನು ಸಾಧನೆ ಮಾಡುತ್ತಾನೆ.
ಅಂದರೆ ಆಚಾರಧರ್ಮವು ಸಾಧನೆಯ ಅಡಿಗಲ್ಲಾಗಿದೆ. ಒಮ್ಮೆ ವ್ಯಕ್ತಿಯು ಸಾಧನೆ ಮಾಡಿ ಪ್ರಗತಿ ಹೊಂದಲು ಪ್ರಾರಂಭಿದರೆ ಅವನಿಗೆ ಹೊರಗಿನ ವಿಷಯದ ಬಗ್ಗೆ ಯಾವುದೇ ಆಕರ್ಷಣೆಯಿರುವುದಿಲ್ಲ. ಆದುದರಿಂದ ಅವನಿಗೆ ಬಟ್ಟೆ-ಬರೆಗಳ ಬಗ್ಗೆ ಏನೂ ಆಕರ್ಷಣೆಯಿರುವುದಿಲ್ಲ. ಇದರಿಂದಾಗಿ ಅವನಿಗೆ ಬಟ್ಟೆ-ಬರೆಗಳ ಬಂಧನವಿರುವುದಿಲ್ಲ. ಅವನಿಗೆ ಸಾಧನೆಯ ಮೂಲಕ ಈಶ್ವರನಿಂದ ಚೈತನ್ಯವು ದೊರಕುತ್ತಲೇ ಇರುತ್ತದೆ. ಸಾಧನೆ ಮಾಡುವ ವ್ಯಕ್ತಿಯು ಇಷ್ಟವೆಂದು ಪ್ಯಾಂಟ್- ಶರ್ಟ್ ಧರಿಸದೇ ಅನುಕೂಲವಾಗಬೇಕೆಂದು ಧರಿಸುತ್ತಾನೆ. ಅದರಲ್ಲಿಯೂ ಸಾತ್ತ್ವಿಕವಾಗಿ ಕಾಣುವಂತಹ ಪ್ಯಾಂಟ್-ಶರ್ಟ್ ಧರಿಸುತ್ತಾನೆ. ಅವನು ಗಾಢ ಬಣ್ಣದ ಅಥವಾ ಪಟ್ಟೆಗಳ ಬಟ್ಟೆಯನ್ನು ಧರಿಸುವುದಿಲ್ಲ; ಏಕೆಂದರೆ ಅವನಿಗೆ ಸಾತ್ತ್ವಿಕತೆಯು ಇಷ್ಟವಾಗುತ್ತದೆ. ಇದು ಇತರ ಜನರ ಮತ್ತು ಸಾಧನೆ ಮಾಡುವವರ ಬಟ್ಟೆ-ಬರೆಗಳಲ್ಲಿ ಇರುವ ವ್ಯತ್ಯಾಸವಾಗಿದೆ. ಸಾಧನೆ ಮಾಡುವ ವ್ಯಕ್ತಿಯು ಅವಶ್ಯವಿರುವಲ್ಲಿ ಆಚಾರಧರ್ಮದ ಪಾಲನೆ ಮಾಡಿಯೇ ಮಾಡುತ್ತಾನೆ.
No comments:
Post a Comment