ಎಸ್.ಎಸ್.ಆರ್.ಎಫ್.ನ ಸಾಧಕರಾದ ಶ್ರೀ.ಮಿಲುತಿನ್ ಫೆನಕ್ರಕಸ್ ಮತ್ತು ಸೌ.ಪಾವ್ಲಾ ಫೆನಕ್ರಕಸ್ ಇವರಿಬ್ಬರೂ ತಮ್ಮ ದೇಶಕ್ಕೆ ಹಿಂತಿರುಗುವವರಿದ್ದರು. ಆದುದರಿಂದ ಪುಷ್ಯ ಶುಕ್ಲ ಷಷ್ಠಿ, ಕಲಿಯುಗ ವರ್ಷ ೫೧೧೨ (೧೦.೧.೨೦೧೧) ರಂದು ವಿದೇಶದ ಎಲ್ಲ ಸಾಧಕರು (ಎಸ್.ಎಸ್. ಆರ್. ಎಫ್.ನ ಸಾಧಕರು) ಪ.ಪೂ. ಡಾಕ್ಟರರನ್ನು ಭೇಟಿಯಾದರು. ಆ ಸಮಯದಲ್ಲಿ ಅವರು ಮುಂದಿನಂತೆ ಮಾರ್ಗದರ್ಶನ ಮಾಡಿದರು.
೧. ಸಾಧಕರು ಇತರರ ಗುಣಗಳ ನಿರೀಕ್ಷಣೆ ಮಾಡಿ ಅವುಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ
ಪ.ಪೂ.ಡಾಕ್ಟರರು ಸಾಧಕರಿಗೆ, ‘ಶ್ರೀ.ಮಿಲುತಿನ್ ಮತ್ತು ಸೌ.ಪಾವ್ಲಾ ಇವರ ಯಾವ್ಯಾವ ಗುಣಗಳು ತಮ್ಮ ಗಮನಕ್ಕೆ ಬಂದವು’ ಎಂದು ವಿಚಾರಿಸಿದರು. ಸಾಧಕರು ಮುಂದಿನಂತೆ ಅವರ ಗುಣ ವೈಶಿಷ್ಟ್ಯಗಳನ್ನು ತಿಳಿಸಿದರು. ತತ್ಪರತೆ,
ಉತ್ತಮ ನಿರೀಕ್ಷಣಾಕ್ಷಮತೆ, ಕಲಿಯುವ ವೃತ್ತಿ, ಇತರರೊಂದಿಗೆ ಬೆರೆಯುವುದು, ಪ್ರೇಮಭಾವ ಇತ್ಯಾದಿ. ಆಗ ಪ.ಪೂ. ಡಾಕ್ಟರರು, ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿರುವ ನಿಮ್ಮಲ್ಲಿ ಈ ಗುಣಗಳ ಅಭಾವವಿರಲು ಕಾರಣವೇನು? ಸಾಧಕರನ್ನು ಬಿಡಿ, ನಿಮ್ಮಲ್ಲಿ ಸಾಮಾನ್ಯ ಮನುಷ್ಯರಲ್ಲಿರುವ ವ್ಯವಸ್ಥಿತತನದ ಗುಣಗಳೂ ಕಂಡು ಬರುತ್ತಿಲ್ಲ ಎಂದರು.
೨. ಸತತ ಕಲಿಯುವ ಭೂಮಿಕೆಯಲ್ಲಿರುವುದು ಅವಶ್ಯವಾಗಿದೆ ಮತ್ತು ಇತರರ ತಪ್ಪುಗಳನ್ನು ನಿರೀಕ್ಷಣೆ ಮಾಡಿ ಅವುಗಳನ್ನು ಅವರ ಗಮನಕ್ಕೆ ತಂದುಕೊಡುವುದರಿಂದ ಇತರರಿಗೆ ಸಹಾಯವಾಗುತ್ತದೆ ಅಲ್ಲದೇ ಇತರರ ಗುಣಗಳ ನಿರೀಕ್ಷಣೆ ಮಾಡಿದರೆ ನಮಗೂ ಸಹಾಯವಾಗುತ್ತದೆ.
ಮೇಲಿನ ಪ್ರಶ್ನೆಗೆ ಉತ್ತರವೆಂದು ಸಾಧಕರು ತಮ್ಮಲ್ಲಿ ಕಲಿಯುವ ವೃತ್ತಿಯಿಲ್ಲವೆಂದು ಹೇಳಿದಾಗ ಪ.ಪೂ.ಡಾಕ್ಟರರು, ಉತ್ತರವು ಯೋಗ್ಯವಾಗಿದೆ. ಸಾಧಕರಲ್ಲಿ ಕಲಿಯುವ ವೃತ್ತಿಯಿಲ್ಲ. ಪ್ರತ್ಯಕ್ಷದಲ್ಲಿ ನಾವು ಇತರರ ಗುಣಗಳನ್ನು ಸತತವಾಗಿ ನಿರೀಕ್ಷಣೆ ಮಾಡುತ್ತಿರಬೇಕು. ಹಾಗೆಯೇ ಪ್ರಸಂಗಗಳಿಂದ ಮತ್ತು ಸಜೀವ ಹಾಗೂ ನಿರ್ಜೀವ ವಸ್ತುಗಳಿಂದ ಸತತ ಕಲಿಯುತ್ತಿರಬೇಕು. ನಾವು ಸತತ ಕಲಿಯುವ ಭೂಮಿಕೆಯಲ್ಲಿರಬೇಕು. ಸಾಧಕರು ತಮ್ಮ ಆತ್ಮನಿರೀಕ್ಷಣೆ ಮಾಡುವಲ್ಲಿ ಕಡಿಮೆ ಬೀಳುತ್ತಿದ್ದಾರೆ. ಇತರರ ತಪ್ಪುಗಳ ನಿರೀಕ್ಷಣೆ ಮಾಡಿ ಅವುಗಳನ್ನು ಅವರ ಗಮನಕ್ಕೆ ತಂದುಕೊಟ್ಟರೆ ಇತರರಿಗೆ ಸಹಾಯವಾಗುತ್ತದೆ. ಆದರೆ ಯಾವಾಗ ನಾವು ಇತರರ ಗುಣಗಳ ನಿರೀಕ್ಷಣೆಯನ್ನು ಮಾಡುತ್ತೇವೆಯೋ ಆಗ ನಮಗೆ ನಾವೇ ಸಹಾಯ ಮಾಡಿಕೊಳ್ಳುತ್ತೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.೩. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿರುವುದರಿಂದ ಸಾಧಕರು ಸತತ ಕಲಿಯುತ್ತಿರುವುದು ಅವಶ್ಯವಾಗಿದೆ ಮತ್ತು ಸಾಧಕರು ಕಲಿಸುವ ಭೂಮಿಕೆಯಲ್ಲಿದ್ದರೆ ಅವರ ಅಧೋಗತಿಯಾಗುತ್ತದೆ.
‘ನೀವು ಯಾವ ಸಾಧಕರಲ್ಲಿರುವ ಗುಣಗಳನ್ನು ನಿರೀಕ್ಷಣೆ ಮಾಡಿದಿರಿ’ ಎಂದು ಪ.ಪೂ.ಡಾಕ್ಟರರು ಕೇಳಿದಾಗ ಶ್ರೀ. ಮಿಲುತಿನ್ ಅವರು, ‘ನಾನು ಕು. ಯಾನಾ ಮತ್ತು ಸೌ.ಭಾವನಾ ಶಿಂದೆ ಇವರ ಗುಣಗಳ ನಿರೀಕ್ಷಣೆ ಮಾಡಿದೆ’ ಎಂದು ತಿಳಿಸಿದರು. ಅವರ ಈ ಕೃತಿಯನ್ನು ಪ್ರಶಂಸಿಸಿದ ಪ.ಪೂ.ಡಾಕ್ಟರರು 'ಇತರರ ಗುಣಗಳನ್ನು ನಿರೀಕ್ಷಣೆ ಮಾಡಿದರೆ ಸಾಧಕರಿಗೆ ಪರಸ್ಪರರಿಂದ ಕಲಿಯಲು ಸಾಧ್ಯವಾಗುತ್ತದೆ. ಇಂತಹ ವೃತ್ತಿಯಿಂದ ಸತತವಾಗಿ ಸಾಧನೆಯನ್ನು ಮಾಡುತ್ತಿರಬೇಕು. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ ಮತ್ತು ಸಾಧಕರು ಸತತ ಕಲಿಯುತ್ತಿರಬೇಕು. ಯಾವ ಕ್ಷಣದಲ್ಲಿ ಸಾಧಕರು ಕಲಿಸುವ ಭೂಮಿಕೆಗೆ ಹೋಗುತ್ತಾರೆಯೋ ಆ ಕ್ಷಣದಲ್ಲಿ ಅವರ ಅಧೋಗತಿಯಾಗಲು ಪ್ರಾರಂಭವಾಗುತ್ತದೆ’ ಎಂದು ಹೇಳಿದರು.
೪. ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಆನಂದದಿಂದ ಸ್ವೀಕರಿಸಿ ಶ್ರೀ.ಸಿರಿಯಾಕ್ ಮತ್ತು ಸೌ.ಯೋಯಾ ಇವರಿಬ್ಬರೂ ಶೇ. ೬೨ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ
ಈ ಸತ್ಸಂಗದಲ್ಲಿ ಶ್ರೀ.ಸಿರಿಯಾಕ್ ಮತ್ತು ಸೌ.ಯೋಯಾ ವಾಲೆ ಇವರು ಗಣಕಯಂತ್ರದ ಮಹಾಜಾಲದ ತಂತ್ರಾಂಶದ ಮೂಲಕ (ಸ್ಕೈಪ್) ನೇರವಾಗಿ ಪಾಲ್ಗೊಂಡಿದ್ದರು. ಪ.ಪೂ.ಡಾಕ್ಟರರು ಅವರಿಗೆ ಶ್ರೀ. ಮಿಲುತಿನ್ ಮತ್ತು ಸೌ.ಪಾವ್ಲಾ ಇವರಲ್ಲಿರುವ ಗುಣಗಳ ಬಗ್ಗೆ ವಿಚಾರಿಸಿದಾಗ ಅವರು ಅದನ್ನು ಕೂಡಲೇ ತಿಳಿಸಿದರು. ಅನಂತರ ಪ.ಪೂ.ಡಾಕ್ಟರರು ಸೌ. ಯೋಯಾ ಮತ್ತು ಶ್ರೀ. ಸಿರಿಯಾಕ್ ಇವರು ಶೇ.೬೨ರಷ್ಟು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡಿದ್ದಾರೆಂದು ಘೋಷಿಸಿದರು. ಹಾಗೆಯೇ ಅವರು ಅವರ ಮುಂದಿನ ಗುಣವೈಶಿಷ್ಟ್ಯಗಳನ್ನು ಹೇಳಿದರು.
ಅ. ಸೌ. ಯೋಯಾ ಇವರು ಏನೇ ಹೇಳಿದರೂ ಅದನ್ನು ತಕ್ಷಣ ಕೃತಿಗೆ ತರುತ್ತಾರೆ.
ಆ. ಆಧ್ಯಾತ್ಮಿಕ ತೊಂದರೆಯಾಗುತ್ತಿರುವಾಗ ಅವರು ಕೂಡಲೇ ಉಪಾಯಗಳನ್ನು ಮಾಡುತ್ತಾರೆ.
ಇ. ಶ್ರೀ.ಸಿರಿಯಾಕ್ ಮತ್ತು ಸೌ. ಯೋಯಾ ಇವರ ಪ್ರಗತಿಯ ರಹಸ್ಯವೇನೆಂದರೆ ಅವರು ಜೀವನದಲ್ಲಿ ಬರುವ ಎಲ್ಲ ಪರಿಸ್ಥಿತಿಯನ್ನು (ಪ್ರತಿಕೂಲವೂ) ಆನಂದದಿಂದ ಸ್ವೀಕರಿಸುತ್ತಾರೆ.
೫. ಸತತ ಕಲಿಯುತ್ತಿದ್ದರೆ ಈಶ್ವರನ ಕೃಪೆಯಾಗುತ್ತದೆ
ಪ.ಪೂ.ಡಾಕ್ಟರರು ಸಾಧಕರಿಗೆ, ‘ಹಿಂದಿನ ವರ್ಷದ ತುಲನೆಯಲ್ಲಿ ಈ ವರ್ಷ ಸಾಧಕರ ಮುಖಗಳು ಹೆಚ್ಚು ಆನಂದದಿಂದಿವೆ’ ಎಂದರು. ಅದಕ್ಕೆ ಕಾರಣವೇನೆಂದರೆ ಸಾಧಕರಲ್ಲಿ ಸ್ವಲ್ಪ ಮಟ್ಟಿಗೆ ಕಲಿಯುವ ವೃತ್ತಿಯು ನಿರ್ಮಾಣವಾಗಿದೆ. ಅನಂತರ ಅವರು, ಈಶ್ವರನು ಈ ಮೊದಲು ನಿಮ್ಮ ಮೇಲೆ ಕೃಪೆ ಮಾಡದಿರಲು ಕಾರಣವೇನೆಂದರೆ ಯಾವಾಗ ನಾವು ಹೊಸತೇನಾದರೂ ಕಲಿಯುತ್ತವೆಯೋ ಮತ್ತು ಅದಕ್ಕಾಗಿ ಪ್ರಯತ್ನಿಸುತ್ತೇವೆಯೋ ಆಗ ಈಶ್ವರನ ಕೃಪೆಯು ಸಿಗುತ್ತದೆ ಮತ್ತು ಯಾವಾಗ ನಾವು ಇತರರಿಂದ ಕಲಿಯುವುದನ್ನು ನಿಲ್ಲಿಸುತ್ತೇವೆಯೋ, ಆಗ ಈಶ್ವರನ ಕೃಪೆಯೂ ನಿಂತು ಹೋಗುತ್ತದೆ’ ಎಂದು ಹೇಳಿದರು.
೬.ಸಾಧಕರ ಸಂದೇಹ ನಿವಾರಣೆ
೬ಅ. ಸೂಕ್ಷ್ಮದ ಅಧ್ಯಯನದಲ್ಲಿ ಕೆಟ್ಟ ಶಕ್ತಿಗಳು ಅಡಚಣೆಗಳನ್ನು ನಿರ್ಮಿಸಿ ಸಾಧಕರು ತಪ್ಪು ಫಲಿತಾಂಶ ನೀಡಲು ಪ್ರಯತ್ನಿ ಸುತ್ತಿರುವುದರಿಂದ ಸೂಕ್ಷ್ಮದ ಅಧ್ಯಯನದ ಉತ್ತರಗಳನ್ನು ಸೂಕ್ಷ್ಮ ಅರಿಯುವ ಸಾಧಕ ರಿಂದ ಪರಿಶೀಲನೆ ಮಾಡಿಕೊಳ್ಳುವುದು ಅವಶ್ಯವಾಗಿರುತ್ತದೆ.
ಪ್ರಶ್ನೆ: ೨೦೦೮ ರಲ್ಲಿ ಅನೇಕ ಸಾಧಕರ ಸೂಕ್ಷ್ಮದ ಅಧ್ಯಯನ (ಪ್ರಯೋಗ) ಉತ್ತರಗಳು ಯೋಗ್ಯವಾಗಿರುತ್ತಿದ್ದವು. ಆದರೆ ಈ ಬಾರಿ ಎಲ್ಲರ ಉತ್ತರಗಳು ತಪ್ಪಾದವು. ಇದಕ್ಕೆ ಕಾರಣವೇನು?
ಪ.ಪೂ.ಡಾಕ್ಟರರು: ಕ್ರಿ.ಶ. ೨೦೧೨ರ ತನಕ ಕೆಟ್ಟ ಶಕ್ತಿಗಳು ತಮ್ಮ ಎಲ್ಲ ಶಕ್ತಿಯನ್ನು ಉಪಯೋಗಿಸುತ್ತವೆ. ಆದುದರಿಂದ ಸೂಕ್ಷ್ಮದ ಅಧ್ಯಯನದಲ್ಲಿ ಅವು ಅಡಚಣೆಗಳನ್ನು ನಿರ್ಮಿಸಿ ಆ ಸಾಧಕರಿಗೆ ತಪ್ಪು ಫಲಿತಾಂಶ ಹೇಳಲು ಪ್ರಯತ್ನಿಸುತ್ತವೆ. ಹಾಗಾಗಿ ಈ ಬಾರಿ ಉತ್ತರಗಳನ್ನು ಸೂಕ್ಷ್ಮವನ್ನು ಅರಿಯುವ ಸಾಧಕರಿಂದ ಪರಿಶೀಲಿಸಿಕೊಳ್ಳುವುದು ಯೋಗ್ಯವಾಗಿದೆ.
೬ಆ.ಸುಗಂಧವು ಸಗುಣ ತತ್ತ್ವದ ಮತ್ತು ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ.
ಪ್ರಶ್ನೆ: ನಾನು ನಿಮ್ಮ (ಪ.ಪೂ. ಡಾಕ್ಟರರ) ಕೋಣೆಯ ಬಳಿಯ ಚಾವಡಿಯಿಂದ ಹೋಗುತ್ತಿರುವಾಗ ನನಗೆ ಮೊದಲು ಸುಗಂಧ ಬರುತ್ತದೆ ಮತ್ತು ನಂತರ ಟೊಳ್ಳಿ ನೊಳಗೆ ಹೋಗುತ್ತಿರುವಂತೆ ಅನಿಸುತ್ತದೆ ಅದಕ್ಕೆ ಕಾರಣವೇನು?
ಪ.ಪೂ.ಡಾಕ್ಟರರು: ಸುಗಂಧವು ಸಗುಣ ತತ್ತ್ವದ ಪ್ರತೀಕವಾಗಿದೆ ಮತ್ತು ಟೊಳ್ಳು ನಿರ್ಗುಣ ತತ್ತ್ವದ ಪ್ರತೀಕವಾಗಿದೆ. ಯಾವಾಗ ನಾವು ಎಲ್ಲ ವಿಷಯಗಳನ್ನು ವ್ಯವಸ್ಥಿತವಾಗಿ ಮಾಡುತ್ತೇವೆಯೋ ಆಗ ಅಲ್ಲಿಂದ ಸುಗಂಧವು ಪ್ರಕ್ಷೇಪಿತವಾಗಲು ಪ್ರಾರಂಭವಾಗುತ್ತದೆ. ಉದಾ.ಚೀಲದಲ್ಲಿ ಬಟ್ಟೆಗಳನ್ನು ವ್ಯವಸ್ಥಿತವಾಗಿಟ್ಟರೆ ಅದರಿಂದಲೂ ಸುಗಂಧ ಪ್ರಕ್ಷೇಪಿತವಾಗುತ್ತದೆ ಅಂದರೆ ಅಚ್ಚುಕಟ್ಟುತನವಿದ್ದಲ್ಲಿ ದೈವೀ ಸ್ಪಂದನಗಳು ಆಕರ್ಷಿತವಾಗುತ್ತವೆ ಮತ್ತು ಇಲ್ಲದಿದ್ದರೆ ಕೆಟ್ಟ ಸ್ಪಂದನಗಳು ಆಕರ್ಷಿತವಾಗುತ್ತವೆ. ಪ್ರಸ್ತುತ ಆಶ್ರಮದಲ್ಲಿ ಸಾಧಕ ರಿಗೆ ಎಲ್ಲೆಡೆಗಳಲ್ಲಿ ಸುಗಂಧ ಬರುವ ವಿಷಯದಲ್ಲಿ ಅನುಭೂತಿಗಳು ಬರುತ್ತಿವೆ.
೬ಇ. ಸಾಧಕಿಯ ಚಿಂತೆಯು ಅವ್ಯಕ್ತ ಸ್ತರದಲ್ಲಿರುವುದರಿಂದ ಮತ್ತು ಅವಳ ಮನಸ್ಸು ತನ್ನನ್ನು ನೋಯಿಸಿಕೊಳ್ಳಲು ಸಿದ್ಧವಿಲ್ಲದಿರುವುದು
ಪ್ರಶ್ನೆ : ನನಗೆ ನನ್ನ ತಪ್ಪುಗಳ ಬಗ್ಗೆ ಬಹಳ ಚಿಂತೆಯಾಗುವುದಿಲ್ಲ. ಅದಕ್ಕಾಗಿ ಏನು ಮಾಡಬೇಕು?
ಪ.ಪೂ.ಡಾಕ್ಟರರು ಈ ಪ್ರಶ್ನೆಗೆ ಉತ್ತರಿಸಲು ಸಾಧಕರಿಗೆ ಹೇಳಿದರು. ಅದಕ್ಕೆ ಇಬ್ಬರು ಸಾಧಕರು ಮುಂದಿನಂತೆ ಉತ್ತರಿಸಿದರು.
೧.ಓರ್ವ ಸಾಧಕ: ಸಾಧಕಿಗೆ ಚಿಂತೆಯೆನಿಸುತ್ತದೆ; ಆದರೆ ಅದು ಅವ್ಯಕ್ತಸ್ತರ ದಲ್ಲಿರುವ ಕಾರಣ ಅವಳಿಗೆ ಅರಿವಾಗುತ್ತಿಲ್ಲ.
೨.ಇನ್ನೊಬ್ಬ ಸಾಧಕ: ಸಾಧಕಿಗೆ ಅಂತರ್ಮನದಲ್ಲಿ ಚಿಂತೆಯಾಗುತ್ತಿದೆ. ಆದರೆ ಅವಳ ಮನಸ್ಸು ಈ ಸಂವೇದನೆಗಳನ್ನು ಒತ್ತಿ ಹಿಡಿಯುತ್ತದೆ. ಅದಕ್ಕೆ ಕಾರಣ ವೇನೆಂದರೆ ಅವಳ ಮನಸ್ಸು ತನ್ನನ್ನು ನೋಯಿಸಿಕೊಳ್ಳಲು ಇಚ್ಛಿಸುವುದಿಲ್ಲ.
ಪ.ಪೂ.ಡಾಕ್ಟರರು ಈ ಉತ್ತರಗಳು ಯೋಗ್ಯವಾಗಿವೆ ಎಂದು ಹೇಳಿದರು.
೬ಈ. ಸಾತ್ತ್ವಿಕತೆಯಿಲ್ಲದ ವ್ಯಕ್ತಿಗಳಿಗೆ ಮಾಂತ್ರಿಕರು ಮತ್ತು ಸಾತ್ತ್ವಿಕವಾಗಿರುವವರಿಗೆ ಈಶ್ವರನು ಸಹಾಯ ಮಾಡುತ್ತಿರುವುದು
ಪ್ರಶ್ನೆ: ಒಂದು ಹಸ್ತಲಿಖಿತದ ಮೇಲೆ ಪ.ಪೂ. ಡಾಕ್ಟರರು, ‘ಮಾಂತ್ರಿಕರು ಹೆಚ್ಚಾಗಿ ಎಲ್ಲರಿಗೂ ಸಹಾಯ ಮಾಡುತ್ತಾರೆ ’ ಎಂದು ಬರೆದಿದೆ. ಅದನ್ನು ಯಾವ ಸಂದರ್ಭದಲ್ಲಿ ಬರೆಯಲಾಗಿದೆ?
ಪ.ಪೂ.ಡಾಕ್ಟರರು: ಮಾಂತ್ರಿಕರು ಹೆಚ್ಚಾಗಿ ಜನರಿಗೆ ಸಹಾಯ ಮಾಡುತ್ತಾರೆ. ಏಕೆಂದರೆ ಅವರೆಲ್ಲ ಈಗ ಮಾಂತ್ರಿಕರ ಗುಂಪಿನವರಾಗಿದ್ದಾರೆ. (ಅಂದರೆ ಅವರು ಇಂದು ಸಾತ್ತ್ವಿಕರಾಗಿಲ್ಲ ಅಥವಾ ಧರ್ಮಪಾಲನೆ ಮಾಡುತ್ತಿಲ್ಲ.) ಅವರ ಸಹಾಯ ದಿಂದ ಜನರು ಕೆಟ್ಟತನದಿಂದ ಅತೀ ಕೆಟ್ಟ ವೃತ್ತಿಗೆ ಹೋಗುತ್ತಾರೆ. ಆದರೆ ಈಶ್ವರನು ಸಹ ಸಾತ್ತ್ವಿಕ ಜನರಿಗೆ ಸಹಾಯ ಮಾಡುತ್ತಾನೆ.
೬ಉ. ನಿರ್ವಿಚಾರ ಅವಸ್ಥೆ ಅಂದರೆ ‘ಅರಿವು ರಹಿತ ಅವಸ್ಥೆ’
ಪ್ರಶ್ನೆ : ದೈನಿಕ ‘ಸನಾತನ ಪ್ರಭಾತ’ದಲ್ಲಿ ಒಮ್ಮೆ (ಕ್ರಿ.ಶ.೨೦೦೭ರಲ್ಲಿ) ಸಾಧಕರು ಅರಿವುರಹಿತ ಅವಸ್ಥೆಯಲ್ಲಿರುತ್ತಾರೆ ಎಂದು ಬರೆದಿತ್ತು. ಅದು ಯಾವ ರೀತಿಯ ಅವಸ್ಥೆ?
ಪ.ಪೂ.ಡಾಕ್ಟರರು: ನಿರ್ವಿಚಾರ ಅವಸ್ಥೆ ಎಂದರೆ ‘ಅರಿವು ರಹಿತ ಅವಸ್ಥೆ’.
೬ಊ. ಕಲಿಯುತ್ತಿರುವ ಶಾಲೆಯನ್ನೇ ಗುರುಕುಲವೆಂದು ತಿಳಿದು ಸಾಧನೆ ಮಾಡಿದರೆ ಉನ್ನತಿಯು ಸಾಧ್ಯವಾಗುತ್ತದೆ
ಮಹಾಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬಾಲಸಾಧಕಿ ಕು. ಯಾನಾ ಇವಳ ಪ್ರಶ್ನೆ: ನಾನು ಇಲ್ಲಿ ಗುರುಕುಲಕ್ಕೆ ಬರುವುದು ಯೋಗ್ಯವಾಗಿದೆಯೋ ಅಥವಾ ನಾನು ಏನು ಮಾಡಬೇಕು?
ಪ.ಪೂ.ಡಾಕ್ಟರರು: ನೀನು ಭಾವದ ಸ್ತರದಲ್ಲಿ ಪ್ರಯತ್ನಿಸಬಹುದು. ಯಾವ ಶಾಲೆಯಲ್ಲಿ ನೀನು ಕಲಿಯುತ್ತಿರುವೆಯೋ ಅದನ್ನೇ ಗುರುಕುಲ ಎಂದು ತಿಳಿದು ಸಾಧನೆಯನ್ನು ಮಾಡು. ಅಲ್ಲಿಯೂ ನಿನ್ನ ಪ್ರಗತಿಯಾಗಲಿದೆ.
೬ಎ. ಸ್ವತಃ ನಿರ್ಧರಿಸುವುದಕ್ಕಿಂತ ಹೆಚ್ಚು ಉನ್ನತರಾಗಿರುವ ಸಾಧಕರಲ್ಲಿ ವಿಚಾರಿಸುವುದು ಯೋಗ್ಯವಾಗಿದೆ.
ಪ್ರಶ್ನೆ: ನಾನು ತಪ್ಪುಗಳನ್ನು ಸ್ವೀಕರಿಸುವುದಿಲ್ಲ. ಜವಾಬ್ದಾರಿಯಿರುವ ಸಾಧಕರು ನನ್ನ ಪ್ರಯತ್ನಗಳ ಬಗ್ಗೆ ಪ್ರಶಂಸಿಸಿದರು. ಹಾಗೆಯೇ ಹಿಂದಿನ ಭೇಟಿಯಲ್ಲಿ ನನಗೆ ಹೆಚ್ಚಿನ ಸೇವೆಯನ್ನು ಕೊಡಲು ಹೇಳಿದ್ದೀರಿ. ಆದರೆ ನಾನು ಪ್ರಶಂಸೆಗೆ ಪಾತ್ರನಲ್ಲ ಎಂದು ನನಗೆ ಅನಿಸುತ್ತದೆ.
ಪ.ಪೂ.ಡಾಕ್ಟರರು: ನೀವು ನಿಮ್ಮ ವಿಷಯದಲ್ಲಿ ಮಾಡುತ್ತಿರುವ ವಿಚಾರವು ನಿಮ್ಮ ಅಭಿಪ್ರಾಯವಾಗಿದೆ. ಯಾರಾದರೊಬ್ಬ ಸಾಧಕರು ತನ್ನ ವಿಷಯದಲ್ಲಿ ಏನೂ ನಿರ್ಧರಿಸಲಾರರು. ನಮಗಿಂತ ಹೆಚ್ಚು ಉನ್ನತ ಸಾಧಕರಿಗೆ ನಮ್ಮ ಬಗ್ಗೆ ಹೆಚ್ಚು ಗೊತ್ತಿರುವುದರಿಂದ ಅವರಲ್ಲಿ ವಿಚಾರಿಸಿಕೊಳ್ಳುವುದು ಯೋಗ್ಯವಾಗಿದೆ.
೬ಏ. ಭಾವ ಹೆಚ್ಚಾದರೆ ಅಹಂ ಭಾವವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.
ಪ್ರಶ್ನೆ: ಪೂಜ್ಯ ರಾಜೇಂದ್ರದಾದಾರವರ ಅಸ್ತಿತ್ವದಿಂದ ಎಲ್ಲ ಸಾಧಕರ ಅಹಂ ಭಾವವು ಶೇ. ೧ರಷ್ಟು ಕಡಿಮೆಯಾಯಿತು. ಇದು ನಿಜವೇ?
ಪ.ಪೂ.ಡಾಕ್ಟರರು: ಯಾವಾಗ ನಮ್ಮ ಭಾವವು ಹೆಚ್ಚಾಗುತ್ತದೆಯೋ ಆಗ ನಮ್ಮ ಅಹಂ ತಾತ್ಕಾಲಿಕವಾಗಿ ಕಡಿಮೆ ಯಾಗುತ್ತದೆ. ಕಾರ್ಯಾಗಾರದ ಸತ್ರಗಳಲ್ಲಿ ಸಾಧಕರ ಭಾವ ಹೆಚ್ಚಾಗುತ್ತದೆ ಮತ್ತು ಅದರಿಂದ ಅವರ ಅಹಂಭಾವ ಕಡಿಮೆಯಾಗುತ್ತದೆ.
೭.ಪ್ರಾರ್ಥನೆ
ಹೇ ಗುರುಮಾತೆಯೇ, (ಪ.ಪೂ. ಡಾಕ್ಟರ) ತಾವು ಅನಾರೋಗ್ಯದಿಂದಿದ್ದರೂ ನಮಗೆ ಅಮೂಲ್ಯ ಮಾರ್ಗದರ್ಶನ ಮತ್ತು ಅಮೂಲ್ಯವಾದ ಸಮಯವನ್ನು ನೀಡಿದಿರಿ. ನಾವು ಹೃದಯಾಂತರಾಳದಿಂದ ಕೃತಜ್ಞತೆ ಯನ್ನು ವ್ಯಕ್ತಪಡಿಸುತ್ತಿದ್ದೇವೆ ಮತ್ತು ನಾವು ತಮ್ಮ ಪವಿತ್ರ ಚರಣಗಳಲ್ಲಿ ನತಮಸ್ತಕರಾಗುತ್ತೇವೆ. ದಯಮಾಡಿ ನಮ್ಮ ಮೇಲೆ ಕೃಪೆತೋರಿ. ತಾವು ನೀಡಿದಂತಹ ಮಾರ್ಗದರ್ಶನವನ್ನು ತಮಗೆ ಅಪೇಕ್ಷಿತ ರೀತಿಯಲ್ಲಿ ಆಚರಣೆಗೆ ತರಲು ಸಹಾಯ ಮಾಡಿರಿ. ತಮಗೆ ಅಪೇಕ್ಷಿತವಿರುವ ಸಾಧನೆ ನಮ್ಮಿಂದ ಆಗದ ಬಗ್ಗೆ ಕ್ಷಮಿಸಿರಿ. - ಸೌ. ಸಂಪದಾ.
ಸನಾತನದ ಮಾರ್ಗದರ್ಶನದಂತೆ ಸಾಧನೆ ಮಾಡಿ ಅನೇಕರು ರಾಷ್ಟ್ರ ಮತ್ತು ಧರ್ಮಗಳ ಕಾರ್ಯಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಸನಾತನವು ನಾಗರಿಕರಲ್ಲಿ ರಾಷ್ಟ್ರ ಮತ್ತು ಧರ್ಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಅದರಿಂದ ಜಾಗೃತವಾದ ಸಮಾಜವು ಭ್ರಷ್ಟ, ರಾಷ್ಟ್ರ ಮತ್ತು ಧರ್ಮ ದ್ರೋಹಿ ಕೃತಿಗಳಿಗಾಗಿ ರಾಜಕಾರಣಿಗಳನ್ನು ಗಡಿಪಾರು ಮಾಡಬಹುದೆಂದು ಅವರಿಗೆ ಹೆದರಿಕೆಯಾಗುತ್ತಿರುವುದರಿಂದ ಅವರು ‘ನಾಯಿಗೆ ಹುಚ್ಚು ಹಿಡಿದಿದೆ ಎಂದು ನಿರ್ಧರಿಸಿ ಮತ್ತು ಅದನ್ನು ಸಾಯಿಸಿ’ ಎಂಬ ನೀತಿಯಂತೆ ಸನಾತನವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ.
No comments:
Post a Comment