ಕು.ಪ್ರಿಯಾಂಕಾ ಸ್ವಾಮಿ ಇವರು ಶೇ. ೬೦ರ ಮಟ್ಟ ತಲುಪಲು ಪ್ರಯತ್ನಿಸುತ್ತಿರುವ ಸಾಧಕರಿಗೆ ಮಾಡಿದ..

ಕು.ಪ್ರಿಯಾಂಕಾ ಸ್ವಾಮಿ ಇವರು ಶೇ. ೬೦ರ ಮಟ್ಟ ತಲುಪಲು ಪ್ರಯತ್ನಿಸುತ್ತಿರುವ 
ಸಾಧಕರಿಗೆ ಮಾಡಿದ ಮಾರ್ಗದರ್ಶನಾತ್ಮಕ ದೃಷ್ಟಿಕೋನ

ಕು.ಪ್ರಿಯಾಂಕಾ ಸ್ವಾಮಿಯವರು ದಿನಾಂಕ ೭.೧.೨೦೧೧ರಂದು ಮಂಗಳೂರಿನಲ್ಲಿ ಶೇ.೬೦ಮಟ್ಟಕ್ಕೆ ಪ್ರಯತ್ನಿಸುವ ಸಾಧಕರ ವ್ಯಷ್ಟಿ ವರದಿ ತೆಗೆದುಕೊಂಡರು. ನಂತರ ಅದಕ್ಕೆ ಅವರು ಯೋಗ್ಯ ದೃಷ್ಟಿಕೋನವನ್ನು ನೀಡಿ ಮಾರ್ಗದರ್ಶನ ಮಾಡಿದರು. ಆ ಮಾರ್ಗದರ್ಶನವು ಎಲ್ಲ ಸಾಧಕರಿಗೆ ಲಾಭವಾಗಲೆಂದು ಇಲ್ಲಿ ನೀಡುತ್ತಿದ್ದೇವೆ.
ವ್ಯಷ್ಟಿ ಸಾಧನೆಗಾಗಿ ನಿಯಮಿತ ಮಾಡುವ ಪ್ರಯತ್ನಗಳು
೧.ಸಾಧನೆಯ ವರದಿಯನ್ನು ನಿಯಮಿತವಾಗಿ ಮತ್ತು ಕಡ್ಡಾಯವಾಗಿ ಕೊಡಲೇಬೇಕು. ಅಡಚಣೆಗಳಿದ್ದಲ್ಲಿ ಅದನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.
೨.ದೊಡ್ಡ ದೊಡ್ಡ ಧ್ಯೇಯಗಳನ್ನು ಚಿಕ್ಕ ಚಿಕ್ಕ ಧ್ಯೇಯಗಳಾಗಿ ಪರಿವರ್ತಿಸಬೇಕು. ಉದಾ. ತಖ್ತೆಗಳನ್ನು ನಿಯಮಿತವಾಗಿ ಹಾಗೂ ತಪ್ಪಾದ ಕೂಡಲೇ ತುಂಬಿಸುವುದು, ನಾಮಜಪ ಹೆಚ್ಚಿಸುವುದು, ದೋಷ ನಿರ್ಮೂಲನೆಗಾಗಿ ಸಮಯಮಿತಿ ಹಾಕಿ ಪ್ರಯತ್ನಿಸುವುದು ಇತ್ಯಾದಿ.
೩.ನಮ್ಮಲ್ಲಿ ಯಾವ ಗುಣಗಳು ಕಡಿಮೆಯಿವೆ ಎಂದು ನೋಡಿ ಅದನ್ನು ಹೆಚ್ಚಿಸಿ ಕೊಳ್ಳಲು ಪ್ರಯತ್ನಿಸಬೇಕು.
೪.ಸೂಚನೆಯನ್ನು ತಯಾರಿಸುವಾಗ ಪ್ರತಿ ೧೫ ದಿನಗಳಿಗೊಮ್ಮೆ ನಾವು ಬರೆದಂತಹ ಎಲ್ಲ ಸೂಚನೆಗಳನ್ನು ಬೇರೊಬ್ಬ ಸಾಧಕರಿಂದ ಒಂದು ಬಾರಿ ತಪಾಸಣೆ ಮಾಡಿಕೊಳ್ಳಬೇಕು. ಇನ್ನೂ ಉತ್ತಮ / ಯೋಗ್ಯವಾದ ಸೂಚನೆಗಳನ್ನು ಕೊಡಲು ಇತರ ಸಾಧಕರಿಂದ ಸಹಾಯ ಪಡೆಯಬೇಕು ಮತ್ತು ಅವರಿಗೆ ತೋರಿಸಬೇಕು.
ಪ್ರಯತ್ನದಲ್ಲಿ ಆನಂದ ಎಷ್ಟು ಸಿಗುತ್ತದೆಯೆಂದು ಅಧ್ಯಯನ ಮಾಡುವುದು
೧.ತಖ್ತೆಯನ್ನು ಬರೆಯುವಾಗ ಆನಂದ ಸಿಗುತ್ತದೆಯೇ?
೨.ಸೂಚನಾಸತ್ರಗಳು ಏಕಾಗ್ರತೆಯಿಂದ ಆಗುತ್ತದೆಯೇ?
೩.ಫಲನಿಷ್ಪತ್ತಿ ಹೆಚ್ಚಾಗುತ್ತಿದೆ ಎಂದು ಅನಿಸುತ್ತದೆಯೇ?
೪.ವ್ಯಷ್ಟಿ ಸಾಧನೆಗಾಗಿ ಏನೇನು ಪ್ರಯತ್ನ ಮಾಡುತ್ತೇವೆ?
ನಾವು ತಖ್ತೆಯನ್ನು ಮುಂದಿನ ಕಾರಣಗಳಿಗಾಗಿ ಬರೆಯಬೇಕು. ನಮ್ಮಲ್ಲಿ ನಮ್ಮ ಕುರಿತಾದ ನಿರೀಕ್ಷಣಾ ಕ್ಷಮತೆಯು ಹೆಚ್ಚಾಗಬೇಕು, ಕಲಿಯುವ ವೃತ್ತಿಯು ಬರಬೇಕು ಅಥವಾ ಹೆಚ್ಚಾಗಬೇಕು ಹಾಗೂ ಇತರರ ಗುಣಗಳು ನಮ್ಮಲ್ಲಿ ಬರಬೇಕು ಎಂಬುದಕ್ಕಾಗಿ ಬರೆಯಬೇಕು.
ಮಾಡುವವನು ಮಾಡಿಸುವವನು ಭಗವಂತನೇ ಆಗಿರುವುದು
ನಾವು ನಮ್ಮ ಮನಸ್ಸಿನ ದ್ವಾರಗಳನ್ನು ತೆರೆದರೆ ಈಶ್ವರನು ತನ್ನ ಎಲ್ಲ ದ್ವಾರಗಳನ್ನು ತೆರೆಯುತ್ತಾನೆ. ನಾವು ಒಂದು ಹೆಜ್ಜೆ ಇಟ್ಟರೆ ಈಶ್ವರನು ಹತ್ತು ಹೆಜ್ಜೆಯಿಡುತ್ತಾನೆ. ಹಾಗಾಗಿ ನಾವು ೨ಹೆಜ್ಜೆಗಳನ್ನು ಇಡೋಣ. ನಾನು ಮಾಡುತ್ತೇನೆ ಎಂದಾಗ ನನ್ನಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ, ಮಾಡುವುದು ಬೇಡ, ನಾಳೆ ಮಾಡೋಣ ಮುಂತಾದ ವಿಚಾರಗಳು ಬರುತ್ತವೆ. ಆದರೆ ಭಗವಂತನು ಮಾಡಿಸುತ್ತಾನೆ ಎಂಬ ಭಾವವಿರಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ. ಮನಸ್ಸಿನ ನಿರ್ಧಾರವೇ ನಮ್ಮನ್ನು ಭಗವಂತನ ಹತ್ತಿರ ಕೊಂಡೊಯ್ಯುತ್ತದೆ.
ಸ್ವಭಾವದೋಷಗಳ ಕುರಿತು
ಸ್ವಭಾವದೋಷದ ತಖ್ತೆಯನ್ನು ಬರೆಯುವುದು ಎಂದರೆ ದೋಷಗಳನ್ನು ಸೆರೆ ಮನೆಗೆ ತಳ್ಳಿದಂತೆ. ಅಲ್ಲಿ ಹೋದ ಮೇಲೆ ಕಠಿಣ ಶಿಕ್ಷೆಯಾಗಲೇಬೇಕು. ಅಂದರೆ ದೋಷಗಳ ನಿರ್ಮೂಲನೆ ಆಗಲೇಬೇಕು. ದೋಷಗಳ ನಿರ್ಮೂಲನಾ ಪ್ರಕ್ರಿಯೆಯು ಆನಂದದಿಂದಾಗಬೇಕು. ಒತ್ತಡ ನಿರ್ಮೂಲನೆಗಾಗಿ ಮಾಡುವ ಪ್ರಕ್ರಿಯೆಯಿಂದ ಒತ್ತಡ ಉಂಟಾಗಬಾರದು. ನಮಗೆ ಅನಗತ್ಯ ಒತ್ತಡ ಬಂದಾಗ ಅದಕ್ಕೆ ಕಾರಣವೇನು ? ಅದಕ್ಕೆ ದೋಷಗಳ ಪ್ರಕಟೀಕರಣವಾಗುವುದು, ಗುಣಗಳ ಕೊರತೆ, ಪರಿಸ್ಥಿತಿಯನ್ನು ಸ್ವೀಕರಿಸುವ ವೃತ್ತಿಯಿಲ್ಲದಿರುವುದು, ವರ್ತಮಾನ ಸ್ಥಿತಿಯಲ್ಲಿ ಇರದಿರುವುದು ಇಂತಹ ಅನೇಕ ಕಾರಣಗಳಿರುತ್ತವೆ.
ಸಾಧಕತ್ವವನ್ನು ಹೆಚ್ಚಿಸಲು ಪ್ರಯತ್ನ
ಚಿಕ್ಕ ಚಿಕ್ಕ ಕೃತಿಗಳಿಂದ ನಮ್ಮಲ್ಲಿ ಸಾಧಕತ್ವವನ್ನು ತರಲು ಪ್ರಯತ್ನಿಸಬೇಕು. ಉದಾಹರಣೆಗಾಗಿ ನಲ್ಲಿಯನ್ನು ಸರಿಯಾಗಿ ನಿಲ್ಲಿಸುವುದು, ತಟ್ಟೆಲೋಟಗಳನ್ನು ಸರಿಯಾಗಿಡುವುದು ಇತ್ಯಾದಿ. ಇಂತಹ ಚಿಕ್ಕ ಚಿಕ್ಕ ಕೃತಿಗಳಲ್ಲಿಯೂ ನಮ್ಮಲ್ಲಿ ಶಿಸ್ತು ಬರಬೇಕು. ಏಕೆಂದರೆ ಈಶ್ವರನು ಪರಿಪೂರ್ಣ ಅಂದರೆ ಸತ್ಯಂ ಶಿವಂ ಸುಂದರಂ ಆಗಿದ್ದಾನೆ. ಅವನಲ್ಲಿ ಯಾವುದೇ ಕೊರತೆಗಳಿಲ್ಲ. ತಪ್ಪುಗಳೇ ಇಲ್ಲ. ಉದಾ. ಸೀತಾಫಲದ ಹಣ್ಣು ಅದು ಯಾವ ಕಾಲದಲ್ಲಿ ಆದರೂ ಅದರ ರಚನೆಯು ಅದೇ ರೀತಿಯಾಗಿರುತ್ತದೆ. ಅಂದರೆ ಶೇ.೧೦೦ರಷ್ಟು ಪರಿಪೂರ್ಣವಾಗಿರುತ್ತದೆ. ಏಕೆಂದರೆ ಅದು ಈಶ್ವರ ನಿರ್ಮಿತ ಕಾರ್ಯವಾಗಿದೆ. ಇನ್ನೊಂದು ಉದಾಹರಣೆಯೆಂದರೆ ಹೂವುಗಳು ನಗರದಲ್ಲಿ ಬೆಳೆಯಲಿ, ಕಾಡುಗಳಲ್ಲಿರಲಿ ಅವುಗಳ ಬಣ್ಣ, ರೂಪ ಎಲ್ಲವೂ ಒಂದೇ ರೀತಿಯಾಗಿರುತ್ತದೆ. ಯಾವುದೇ ರೀತಿಯಲ್ಲಿ ವ್ಯತ್ಯಾಸವಿರುವುದಿಲ್ಲ. ಯಾರಾದರೂ ನೋಡುತ್ತಿದ್ದಾರೆ ಅಥವಾ ನೋಡುತ್ತಿಲ್ಲ ಎಂದು ಅವು ಬೇರೆಬೇರೆಯಾಗಿರುವುದಿಲ್ಲ. ಅದೇ ರೀತಿ ನಾವು ಯಾರಾದರೂ ನೋಡುತ್ತಿರುವಾಗ ಒಳ್ಳೆಯ ಕೃತಿಯನ್ನು ಮಾಡುವುದು ಮತ್ತು ಯಾರೂ ನೋಡುತ್ತಿಲ್ಲ ಎಂದಾದರೆ ಮನಸ್ಸಿಗೆ ಬಂದಂತೆ ಕೃತಿ ಮಾಡುವುದು ಹೀಗೆ ಮಾಡಬಾರದು. ಯಾರು ನೋಡಿದರೂ ನೋಡದಿದ್ದರೂ ಈಶ್ವರನು ನಮ್ಮನ್ನು ಸತತವಾಗಿ ಗಮನಿಸುತ್ತಿರುತ್ತಾನೆ. ಅದಕ್ಕಾಗಿ ಪ್ರತಿಯೊಂದನ್ನು ವ್ಯವಸ್ಥಿತವಾಗಿಯೇ ಮಾಡಬೇಕು. ನಾವು ವ್ಯವಸ್ಥಿತವಾಗಿ ಮಾಡುತ್ತಿದ್ದರೆ ಇತರರು ನಮ್ಮಿಂದ ಕಲಿತುಕೊಳ್ಳುತ್ತಾರೆ. ಇತರರನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ. ನಮ್ಮನ್ನು ನಾವೇ ಬದಲಾಯಿಸಬೇಕು.
ಪರೇಚ್ಛೆಯಿಂದ ವರ್ತಿಸುವುದು
ಪರೇಚ್ಛೆಯು ಕೂಡ ಸಾಧನೆಗೆ ಪೂರಕವಾಗಿರುವಂತಹದ್ದಾಗಿರಬೇಕು. ಸಾಧನೆಗೆ ಹಾನಿಯಾಗುವಂತಹ ಪರೇಚ್ಛೆಯನ್ನು ಮಾಡಬಾರದು. ಉದಾ. ಸೇವೆಗೆ ೨ಗಂಟೆ ಹೋಗುವುದು ಬೇಡ ಎಂದು ಮನೆಯವರು ಹೇಳಿದರೆ ಅದನ್ನು ಕೇಳಬಾರದು. ಏಕೆಂದರೆ ಇಂದು ಎರಡು ಗಂಟೆ ಎಂದು ಹೇಳುವವರು ನಾಳೆ ೫-೧೦ ಎಂದು ಕೊನೆಗೆ ಸೇವೆಗೆ ಬಿಡದಿರುವ ಸಾಧ್ಯತೆಯಿರುತ್ತದೆ. ಅಂತಹ ಸಮಯದಲ್ಲಿ ಈಶ್ವರನು ಕೊಟ್ಟ ಬುದ್ಧಿಯನ್ನು ಉಪಯೋಗಿಸಿ ೨ ಗಂಟೆ ಸೇವೆಗೆ ಹೋಗಲೇ ಬೇಕು. ಅಲ್ಪ ಹಾನಿಯಾಗುತ್ತಿದ್ದರೆ ಪರೇಚ್ಛೆಗೆ ಹೋಗಬಹುದು. ಆದರೆ ಸಾಧನೆಗೆ ಅಡ್ಡಿಯಾಗುತ್ತಿದ್ದಲ್ಲಿ ಬುದ್ಧಿಯ ಆಧಾರವನ್ನು ಪಡೆಯಬೇಕು. ಉದಾ. ಮನೆಯವರಿಗೆ ಇಷ್ಟವಿರುವುದನ್ನು ತಿನ್ನುವುದು ಇತ್ಯಾದಿ. ಆಗ ಪರೇಚ್ಛೆಯೆಂದು ವರ್ತಿಸಬಹುದು. ಎಲ್ಲೆಲ್ಲಿ ಪರೇಚ್ಛೆಗೆ ಹೋಗಬೇಕು ಎಂಬುದನ್ನು ಬುದ್ಧಿಯ ಆಧಾರ ಪಡೆದು ಸಾಧನೆಗೆ ಹಾನಿಯಾಗದ ರೀತಿಯಲ್ಲಿ ಮಾಡಬೇಕು. ಇಲ್ಲಿಯೂ ನಮ್ಮ ಪ್ರಾಧಾನ್ಯತೆಯು ಸಾಧನೆಯ ಕಡೆಗೇ ಇರಬೇಕು.       
 ಧ್ಯೇಯ ಇಟ್ಟುಕೊಳ್ಳುವುದರಿಂದ  ಆಗುವ ಲಾಭಗಳು
ಧ್ಯೇಯವು ವ್ಯಕ್ತಿಯನ್ನು ಕೃತಿ ಪ್ರವೃತ್ತಗೊಳಿಸುತ್ತದೆ. ಉತ್ಸಾಹ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಧ್ಯೇಯವು ಅನಿವಾರ್ಯವಾಗಿದೆ. ತಖ್ತೆಯನ್ನು ಬರೆಯುವಾಗ ಆನಂದ ಸಿಗಲಿಕ್ಕಾಗಿ ತಪ್ಪಾದ ತಕ್ಷಣ ಸೂಚನೆ ಸಹಿತ ಎಲ್ಲ ಕೋಷ್ಠಕಗಳನ್ನು ತುಂಬಿಸಬೇಕು. ಇದರಿಂದ ಅದರ ಕುರಿತಾದ ನಿರೀಕ್ಷಣೆಯು ಹೆಚ್ಚಾಗುತ್ತದೆ. ಸಮಯದ ಉಳಿತಾಯವಾಗುತ್ತದೆ. ಅದಕ್ಕಾಗಿ ಗಂಟೆಗೊಮ್ಮೆ ನಮ್ಮ ಸಾಧನೆಯ ವರದಿಯನ್ನು ನಾವೇ ತೆಗೆದುಕೊಳ್ಳಬೇಕು.
ಪ್ರೇಮಭಾವವನ್ನು ಹೇಗೆ ಹೆಚ್ಚಿಸಬೇಕು?
ಮುಂದಿನ ಹಂತದಲ್ಲಿ ಪ್ರೇಮಭಾವವನ್ನು ಹೆಚ್ಚಿಸಿಕೊಳ್ಳಬೇಕು. ಪ್ರೇಮಭಾವ + ಶಿಸ್ತು = ಸಾಧಕತ್ವ ಎಂಬ ಸಮೀಕರಣ ಮಾಡಬಹುದು. ಈ ಪ್ರೇಮಭಾವವು ಹೇಗಿರಬೇಕು? ಇತರ ಸಾಧಕರ ಬಗ್ಗೆ ಯಾವುದೇ ರೀತಿಯ ಪೂರ್ವಗ್ರಹ, ಪ್ರತಿಕ್ರಿಯೆ ತರದೇ ಸತತವಾಗಿ ಪ್ರೀತಿಯೇ ಅನಿಸಬೇಕು. ಏಕೆಂದರೆ ಅವರು ಈಶ್ವರ ಪ್ರಾಪ್ತಿಗಾಗಿ ಸಾಧನೆಯನ್ನು ಮಾಡುತ್ತಿರುತ್ತಾರೆ. ಮುಂದಿನ ಹಂತದಲ್ಲಿ ಕಾರ್ಯಕರ್ತರೊಂದಿಗೆ ಪ್ರೀತಿ ಬೆಳೆಸಬೇಕು. ಏಕೆಂದರೆ ಅವರು ಕಡಿಮೆಪಕ್ಷ ರಾಷ್ಟ್ರ ಧರ್ಮಕ್ಕೆ ಸಂಬಂಧಿತ ಕಾರ್ಯವನ್ನಾದರೂ ಮಾಡುತ್ತಿರುತ್ತಾರೆ. ಅದರ ಮುಂದಿನ ಹಂತದಲ್ಲಿ ಸೇವೆಯನ್ನು ಮಾಡದಿರುವವರ ಬಗ್ಗೆಯೂ ಪ್ರೀತಿಯೆನಿಸಬೇಕು ಏಕೆಂದರೆ ಹಿಂದೊಂದು ದಿನ ಅವರು ಸೇವೆಯನ್ನು ಮಾಡುತ್ತಿದ್ದರು ಎಂಬ ವಿಚಾರದಿಂದ ಅವರ ಬಗ್ಗೆ ಪ್ರೀತಿ ಎನಿಸಬೇಕು. ಮುಂದೆ ಇತರ ಸಂಪ್ರದಾಯದವರ ಬಗ್ಗೆಯೂ ಪ್ರೀತಿಯೆನಿಸಬೇಕು. ಏಕೆಂದರೆ ಅವರು ದೇವರಲ್ಲಿ ನಂಬಿಕೆಯನ್ನಾದರೂ ಇಟ್ಟಿರುತ್ತಾರೆ. ಮುಂದೆ ಇಡೀ ಸಮಾಜದ ಹಿಂದೂಗಳನ್ನು ಪ್ರೀತಿಸಬೇಕು. ಏಕೆಂದರೆ ಅವರೆಲ್ಲರೂ ಹಿಂದೂಗಳಾಗಿದ್ದಾರೆ. ಅದಕ್ಕಿಂತಲೂ ಮುಂದೆ ಧರ್ಮವಿರೋಧಿಗಳನ್ನೂ ಪ್ರೀತಿಸಬೇಕು. ಏಕೆಂದರೆ ಅವರಿಂದಾಗಿ ನಮಗೆ ಧರ್ಮಕಾರ್ಯ ಮಾಡಲು ಸಾಧ್ಯವಾಗುತ್ತಿದೆ.
‘ಆಲಸ್ಯ’ ಇದು ಧ್ಯೇಯ ಸಾಧನೆಯ ಶತ್ರು
ಆಲಸ್ಯದ ಬಗ್ಗೆ ೨೪ ಗಂಟೆಗಳ ಕಾಲ ಸತರ್ಕರಾಗಿರಬೇಕು. ಏಕೆಂದರೆ ಆಲಸ್ಯದಿಂದ ನಮಗೆ ಅಪರಿಮಿತ ಹಾನಿಯಾಗುತ್ತದೆ. ಆಲಸ್ಯದಿಂದ ವಿದ್ಯೆಯು ಪ್ರಾಪ್ತವಾಗುವುದಿಲ್ಲ. ವಿದ್ಯೆಯಿಲ್ಲದಿದ್ದರೆ ಧನ ಪ್ರಾಪ್ತಿಯಾಗುವುದಿಲ್ಲ, ಧನ ಪ್ರಾಪ್ತಿಯಾಗದಿದ್ದರೆ ಮಿತ್ರರಿರುವುದಿಲ್ಲ, ಮಿತ್ರರಿಲ್ಲದಿದ್ದರೆ ಸುಖ ಸಿಗುವುದಿಲ್ಲ. ಹಾಗಾಗಿ ಆಲಸ್ಯವೆಂಬ ಮಹಾ ದೋಷವನ್ನು ಮೊದಲು ನಿವಾರಿಸಿಕೊಳ್ಳಬೇಕು. ಅದಕ್ಕಾಗಿ ಎಷ್ಟು ಸಮಯ ಹೋದರೂ ತೊಂದರೆಯಿಲ್ಲ. ೬ ತಿಂಗಳು ತಗಲಿದರೂ ದೋಷ ನಿವಾರಣೆಯಾದರೆ ಪ್ರಗತಿಯು ಬೇಗನೇ ಆಗುತ್ತದೆ. ಅದಕ್ಕಾಗಿ ನಿಷ್ಕಾಮವಾಗಿ ಪ್ರಯತ್ನಿಸಬೇಕು.
ಪ್ರಗತಿಯಾಗದಿರಲು ಕಾರಣವೇನು?
ನಮ್ಮ ಪ್ರಗತಿಯಾಗದಿರಲು ನಾವೇ ಕಾರಣವಾಗಿದ್ದೇವೆ. ಹಾಗಾಗಿ ಪ್ರಗತಿ ಯಾಗಲು ಸಹ ನಾವೇ ಪ್ರಯತ್ನಿಸಬೇಕು. ನಮಗೆ ಹಸಿವಾದರೆ ನಾವೇ ತಿನ್ನಬೇಕಾಗುತ್ತದೆ. ಇತರರು ಪಂಚಭಕ್ಷಪಕ್ವಾನ್ನಗಳನ್ನು ಎದುರಿನಲ್ಲಿ ತಂದಿಟ್ಟರೂ ತಿನ್ನುವ ಕೃತಿಯನ್ನು ನಾವೇ ಮಾಡಬೇಕಾಗುತ್ತದೆ. ಅಷ್ಟಾಂಗ ಸಾಧನೆಯೆಂದರೆ ಪಂಚಭಕ್ಷಪಕ್ವಾನ್ನದ ತಟ್ಟೆಯಾಗಿದೆ. ನಾವೇ ಅದರಿಂದ ತೆಗೆದು ತಿನ್ನಬೇಕು. ನಮ್ಮಲ್ಲಿರುವ ಕ್ಷಮತೆಯನ್ನು ವಿಕಾಸ ಮಾಡಿಕೊಳ್ಳಬೇಕು. ಅದು ಸಾಧನೆಯಿಂದಲೇ ಸಾಧ್ಯವಾಗುತ್ತದೆ. ಅಷ್ಟಾಂಗ ಸಾಧನೆಯು ನಮ್ಮಲ್ಲಿ ವೃತ್ತಿಯಾಗುವ ತನಕ ಹೋರಾಡಲೇಬೇಕು. ಓರ್ವ ಗೃಹಿಣಿಗೆ ಅಡಿಗೆ ಮಾಡುವಾಗ ಉಪ್ಪು, ಖಾರ, ವಸ್ತುಗಳು ಎಲ್ಲ ಎಲ್ಲಿದೆ ಎಂದು ಗೊತ್ತಿರುತ್ತದೆ. ಸ್ವಾಧಿಷ್ಠವಾಗಿ ಅಡುಗೆಯನ್ನೂ ತಯಾರಿಸುತ್ತಾಳೆ. ಆದರೆ ಅದಕ್ಕೆ ಉಪ್ಪೇ ಹಾಕದಿದ್ದರೆ ಹೇಗಾಗುತ್ತದೆ? ಅದೇರೀತಿ ಅಷ್ಟಾಂಗ ಸಾಧನೆಯ ಏಳು ಅಂಶಗಳಿಗಾಗಿ ಪ್ರಯತ್ನಿಸಿ ಒಂದು ಅಂಗಕ್ಕಾಗಿ ಪ್ರಯತ್ನಿಸದೇ ಇದ್ದಲ್ಲಿ ಎಲ್ಲವೂ ವ್ಯರ್ಥವಾಗುತ್ತದೆ. ಅಂದರೆ ಏಳು ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೂ ಎಂಟನೆಯ ವಿಷಯದಲ್ಲಿ ಅನುತ್ತೀರ್ಣರಾದರೆ ಮುಂದಿನ ತರಗತಿಗೆ ಹೋಗಲು ಆಗುವುದಿಲ್ಲ.
ಅದೇರೀತಿ ಅಷ್ಟಾಂಗ ಸಾಧನೆಯಲ್ಲಿ ಯಾವುದಾದರೂ ಒಂದು ಭಾಗ ಉಳಿದರೂ ನಮ್ಮಿಂದ ಪರಿಪೂರ್ಣ ಸಾಧನೆ ಯಾಗುವುದಿಲ್ಲ. ನಾವು ಈ  ಪರೀಕ್ಷೆಯಲ್ಲಿ ಅತ್ಯುತ್ತಮ (ದರ್ಜೆಯಲ್ಲಿ) ಉತ್ತೀರ್ಣರಾಗ ಬೇಕಾದರೆ ಗುಣಸಂವರ್ಧನೆಗೂ ಪ್ರಯತ್ನಿಸಬೇಕು. ಅದಕ್ಕೂ ಸೂಚನೆಯನ್ನು ಕೊಡ ಬೇಕು. ಹಾಗಾಗಿ ನಾವು ಕೆಳಗಿನ ಅಂಶಗಳನ್ನು ಕಡ್ಡಾಯವಾಗಿ ಮಾಡೋಣ.
೧.ಸೂಚನೆ/ತಖ್ತೆಗಳನ್ನು ೧೫ ದಿನಗಳಿಗೊಮ್ಮೆ ಸ್ವತಃ ಅಥವಾ ಇತರರಿಗೆ ತೋರಿಸಿ ತಪಾಸಣೆ ಮಾಡಿಕೊಳ್ಳುವುದು.
೨.೨ ದೋಷಗಳಿಗೆ, ಒಂದು ಅಹಂಗೆ ಹಾಗೂ ಒಂದು ಗುಣ ಸಂವರ್ಧನೆಗೆ ಸೂಚನೆಯನ್ನು ಪ್ರತಿದಿನ ಕೊಡಬೇಕು.
೩.ಸತತವಾಗಿ ಪರೇಚ್ಛೆಗೆ ಹೋಗಲು ಕಲಿಯಬೇಕು.
೪.ದೊಡ್ಡ ಧ್ಯೇಯಗಳನ್ನು ಚಿಕ್ಕ ಧ್ಯೇಯಗಳಾಗಿ ಪರಿವರ್ತಿಸಬೇಕು.
೫.ರಾತ್ರಿ ತಖ್ತೆಯನ್ನು ಬರೆಯಬಾರದು. ತಪ್ಪುಗಳಾದ ತಕ್ಷಣ ಬರೆಯಬೇಕು.
೬.ಪ್ರೇಮಭಾವ ಹೆಚ್ಚಿಸಲು, ಸಾಧಕತ್ವ ತಂದುಕೊಳ್ಳಲು ಹಾಗೂ ಆಲಸ್ಯದ ಕಡೆಗೆ ಸತರ್ಕರಾಗಿ ಗಮನ ಹರಿಸಬೇಕು.
- ಕು.ಪ್ರಿಯಾಂಕಾ ಸ್ವಾಮಿ

No comments:

Post a Comment