ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು
ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ಉಪಚಾರಗಳಲ್ಲಿ ೯.ಗಂಧವನ್ನು ಹಚ್ಚುವುದು, ೧೦.ಹೂವುಗಳನ್ನು ಅರ್ಪಿಸುವುದು, ೧೧.ಧೂಪವನ್ನು ತೋರಿಸುವುದು, ೧೨.ದೀಪವನ್ನು ಬೆಳಗುವುದು, ೧೩.ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತಿದೆ. (ಮುಂದುವರಿದ ಭಾಗ)
ದೇವತೆಗಳಿಗೆ ಎಷ್ಟು ಊದು ಬತ್ತಿಗಳಿಂದ ಬೆಳಗಬೇಕು?: ವಿವಿಧ ವಿಚಾರಗಳಿಗನುಸಾರ ದೇವತೆಗಳಿಗೆ ಬೆಳಗಬೇಕಾದ ಊದುಬತ್ತಿಗಳ ಸಂಖ್ಯೆಯು ಬೇರೆ-ಬೇರೆಯಾಗಿರುತ್ತದೆ. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ, ಸಾಧನೆಯ ಮಾರ್ಗ, ಉಪಾಸನೆಯ ಉದ್ದೇಶ, ವ್ಯಕ್ತಿಯ ಭಾವ, ದೇವತೆಯ ಪ್ರಕಟ-ಅಪ್ರಕಟ ರೂಪ, ದೇವತೆಯ ತಾರಕ- ಮಾರಕ ರೂಪ ಇತ್ಯಾದಿ ವಿವಿಧ ಘಟಕಗಳಿಗನುಸಾರ ಊದುಬತ್ತಿಗಳ ಸಂಖ್ಯೆಯು ಬದಲಾಗುತ್ತದೆ. ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಪ್ರಕೃತಿಗಳಷ್ಟು ಸಾಧನೆಯ ಮಾರ್ಗಗಳು’ ಎಂಬುದು ಹಿಂದೂ ಧರ್ಮದ ಒಂದು ಮಹತ್ವದ ಸಿದ್ಧಾಂತವಾಗಿದೆ. ಈ ಸಿದ್ಧಾಂತಕ್ಕನುಸಾರ ಊದುಬತ್ತಿಗಳ ಸಂಖ್ಯೆಯು ಸಹ ಒಂದೇ ಆಗಿರದೇ ಬೇರೆ- ಬೇರೆಯಾಗಿರುತ್ತದೆ. ದೇವತೆಗಳಿಗೆ ಎಷ್ಟು ಊದುಬತ್ತಿಗಳಿಂದ ಬೆಳಗಬೇಕು ಎಂಬುದರ ಎರಡು ನಿಯಮಗಳನ್ನು ಮುಂದೆ ನೀಡಲಾಗಿದೆ.
ಸಾಮಾನ್ಯ ನಿಯಮ
ಟಿಪ್ಪಣಿ೧-‘ಎರಡು’ ದ್ವೈತದ ಪ್ರತೀಕವಾಗಿದೆ. ಕರ್ತವ್ಯವೆಂದು ಪೂಜೆ ಮುಂತಾದವುಗಳನ್ನು ಮಾಡುವ ಉಪಾಸಕನು ‘ದೇವರು ಮತ್ತು ತಾನು’ ಎಂಬ ದ್ವೈತದ ಸ್ಥಿತಿಯನ್ನು ಅನುಭವಿಸುತ್ತಿರುವುದರಿಂದ ಅವನು ಎರಡು ಊದುಬತ್ತಿಗಳಿಂದ ಬೆಳಗುವುದು ಯೋಗ್ಯವಾಗಿದೆ.
ಟಿಪ್ಪಣಿ೨-‘ಒಂದು’ ಅದ್ವೈತದ ಪ್ರತೀಕವಾಗಿದೆ. ಭಕ್ತಿಭಾವದಿಂದ ಉಪಾಸನೆಯನ್ನು ಮಾಡುವ ಸಾಧಕನು ನಿಧಾನವಾಗಿ ಅದ್ವೈತದೆಡೆಗೆ ಮಾರ್ಗಕ್ರಮಣವನ್ನು ಮಾಡುತ್ತಿರುತ್ತಾನೆ. ಇದರ ಪ್ರತೀಕವೆಂದು ಅವನು ಒಂದು ಊದುಬತ್ತಿಯಿಂದ ಬೆಳಗುವುದು ಯೋಗ್ಯವಾಗಿದೆ.
(ಮಟ್ಟ ಮತ್ತು ಯೋಗಮಾರ್ಗಗಳಿಗನುಸಾರ ಊದುಬತ್ತಿಗಳನ್ನು ಹಚ್ಚುವ ಸಂಖ್ಯೆ ಮತ್ತು ಅದರ ವಿವಿಧ ಪರಿಣಾಮಗಳನ್ನು ವಿವರವಾಗಿ ಗ್ರಂಥದಲ್ಲಿ ಕೊಡಲಾಗಿದೆ.)
ಊದುಬತ್ತಿ ಮತ್ತು ಊದುಬತ್ತಿಯು ಉರಿದ ನಂತರ ನಿರ್ಮಾಣವಾಗುವ ಬೂದಿ: ಊದುಬತ್ತಿಯು ಉರಿದ ನಂತರ ನಿರ್ಮಾಣವಾಗುವ ಬೂದಿಯು ಸಾತ್ತ್ವಿಕ ಮತ್ತು ಗುಣಸಂಪನ್ನವಾಗಿರುತ್ತದೆ. ಸಾತ್ತ್ವಿಕತೆಯನ್ನು ಹೆಚ್ಚಿಸಲು ಹಾಗೂ ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ಇದನ್ನು ವಿಭೂತಿ ಅಥವಾ ಅಂಗಾರವೆಂದು ಉಪಯೋಗಿಸುತ್ತಾರೆ.
(ಊದುಬತ್ತಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸನಾತನವು ಪ್ರಕಾಶಿಸಿದ ‘ಪೂಜಾಸಾಮಗ್ರಿಗಳ ಮಹತ್ವ’ ಎಂಬ ಗ್ರಂಥದಲ್ಲಿ ಕೊಡಲಾಗಿದೆ.)
ವಿಭೂತಿಯ ಬಗ್ಗೆ ಬಂದಿರುವ ಅನುಭೂತಿ ಡಾ.ಜಯಂತ ಆಠವಲೆಯವರ ಭಾವಚಿತ್ರ ದೆಡೆಗೆ ನೋಡಿದಾಗ ‘ವಿಭೂತಿಯ ನೀರನ್ನು ಕುಡಿಯುತ್ತಾ ನಾಮಜಪ ಮಾಡು’ ಎಂಬ ಸಂಕೇತವು ಸಿಗುವುದು, ಆ ರೀತಿ ಮಾಡಿದಾಗ ಸ್ಫೂರ್ತಿಯು ಬಂದು ನಾಮಜಪವು ಒಳ್ಳೆಯ ರೀತಿಯಿಂದಾಗುವುದು: ೨೭.೧೧. ೨೦೦೩ರಂದು ನಾವು ಮೊದಲನೆಯ ಸಲ ಸಾಮೂಹಿಕ ನಾಮಜಪ ಮಾಡುತ್ತಿರುವುದರಿಂದ ನಮಗೆ ಸತತವಾಗಿ ನಾಲ್ಕು ಗಂಟೆಗಳ ಕಾಲ ಕುಳಿತುಕೊಂಡು ನಾಮಜಪ ಮಾಡಲು ಆಗಬಹುದೇನು ಎಂಬ ಸಂದೇಹವು ಬಂದಿತು, ಅದರಲ್ಲಿಯೂ ನನ್ನ ಪತ್ನಿಯು ಬೇರೆ ಒಂದು ವ್ರತವನ್ನು ಮಾಡುತ್ತಿದ್ದುದರಿಂದ ಅವಳಿಗೆ ಕಟ್ಟುನಿಟ್ಟಾದ ಉಪವಾಸವಿತ್ತು. ನಾವು ಪ.ಪೂ.ಡಾಕ್ಟರರಲ್ಲಿ (ಪ.ಪೂ.ಡಾ.ಆಠವಲೆ) ಮತ್ತು ದೇವತೆಗಳಲ್ಲಿ ಪ್ರಾರ್ಥನೆಯನ್ನು ಮಾಡಿ ನಾಮಜಪ ಮಾಡಲು ಪ್ರಾರಂಭಿಸಿದೆವು. ಸುಮಾರು ೧೫ ನಿಮಿಷ ನಾಮಜಪ ಮಾಡಿದ ಮೇಲೆ ನಮ್ಮ ಪ್ರಾಣಶಕ್ತಿಯು ಕಡಿಮೆಯಾಗತೊಡಗಿತು. ನಾನು ಪ.ಪೂ.ಡಾಕ್ಟರರ ಭಾವಚಿತ್ರದೆಡೆಗೆ ನೋಡಿದೆ. ಆಗ ‘ವಿಭೂತಿಯ ನೀರನ್ನು ಕುಡಿಯುತ್ತಾ ನಾಮಜಪ ಮಾಡಿ’ ಎಂಬ ಸಂಕೇತವು ದೊರಕಿತು. ಹಾಗೆ ಮಾಡಿದಾಗ ನಮಗೆ ಸ್ಫೂರ್ತಿಯು ಬಂದು ಒಳ್ಳೆಯ ರೀತಿಯಿಂದ ನಾಮಜಪವಾಯಿತು. ವಿಶೇಷವೇನೆಂದರೆ ವಿಭೂತಿಯ ನೀರು ಬಹಳ ಸಿಹಿಯಾಗಿತ್ತು. ನಾಮಜಪಕ್ಕೆ ಕುಳಿತುಕೊಳ್ಳುವ ಮೊದಲು ನನ್ನ ಹೊಟ್ಟೆ ನೋಯುತ್ತಿತ್ತು. ಅದು ಸಹ ನಾಮಜಪ ಮತ್ತು ತೀರ್ಥ ಸೇವನೆಯಿಂದ ನಿಂತಿತು. - ಶ್ರೀ.ಸಾವಳೋ ಮಡಗಾವಕರ, ವಾಸ್ಕೋ, ಗೋವಾ.
(ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಿತ್ತು. ಸಾಧಕರ ನಾಮಜಪದಿಂದ ನಿರ್ಮಾಣವಾದ ಸಾತ್ತ್ವಿಕ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ನಡುವಿನ ಯುದ್ಧಭೂಮಿಯೆಂದರೆ ಸಾಧಕರ ಶರೀರ. ಸಾತ್ತ್ವಿಕ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ನಡುವಿನ ಯುದ್ಧದ ಪರಿಣಾಮದಿಂದ ಸಾಧಕರ ಶರೀರದಲ್ಲಿನ ಪ್ರಾಣಶಕ್ತಿಯು ಕಡಿಮೆಯಾಗಿತ್ತು. ಕೆಟ್ಟ ಶಕ್ತಿಯ ತೊಂದರೆಯಿಂದಲೇ ಸಾಧಕನ ಹೊಟ್ಟೆ ನೋಯಿಸುತ್ತಿತ್ತು. ನಾಮಜಪ ಮತ್ತು ತೀರ್ಥಗಳಲ್ಲಿದ್ದ ಸಾತ್ತ್ವಿಕತೆಯಿಂದ ಕೆಟ್ಟ ಶಕ್ತಿಗಳ ತೊಂದರೆ ದೂರವಾಗಿ ಹೊಟ್ಟೆನೋವು ನಿಂತಿತು. - ಸಂಕಲನಕಾರರು)
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)
ಟಿಪ್ಪಣಿ೨-‘ಒಂದು’ ಅದ್ವೈತದ ಪ್ರತೀಕವಾಗಿದೆ. ಭಕ್ತಿಭಾವದಿಂದ ಉಪಾಸನೆಯನ್ನು ಮಾಡುವ ಸಾಧಕನು ನಿಧಾನವಾಗಿ ಅದ್ವೈತದೆಡೆಗೆ ಮಾರ್ಗಕ್ರಮಣವನ್ನು ಮಾಡುತ್ತಿರುತ್ತಾನೆ. ಇದರ ಪ್ರತೀಕವೆಂದು ಅವನು ಒಂದು ಊದುಬತ್ತಿಯಿಂದ ಬೆಳಗುವುದು ಯೋಗ್ಯವಾಗಿದೆ.
(ಮಟ್ಟ ಮತ್ತು ಯೋಗಮಾರ್ಗಗಳಿಗನುಸಾರ ಊದುಬತ್ತಿಗಳನ್ನು ಹಚ್ಚುವ ಸಂಖ್ಯೆ ಮತ್ತು ಅದರ ವಿವಿಧ ಪರಿಣಾಮಗಳನ್ನು ವಿವರವಾಗಿ ಗ್ರಂಥದಲ್ಲಿ ಕೊಡಲಾಗಿದೆ.)
ಊದುಬತ್ತಿ ಮತ್ತು ಊದುಬತ್ತಿಯು ಉರಿದ ನಂತರ ನಿರ್ಮಾಣವಾಗುವ ಬೂದಿ: ಊದುಬತ್ತಿಯು ಉರಿದ ನಂತರ ನಿರ್ಮಾಣವಾಗುವ ಬೂದಿಯು ಸಾತ್ತ್ವಿಕ ಮತ್ತು ಗುಣಸಂಪನ್ನವಾಗಿರುತ್ತದೆ. ಸಾತ್ತ್ವಿಕತೆಯನ್ನು ಹೆಚ್ಚಿಸಲು ಹಾಗೂ ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ಇದನ್ನು ವಿಭೂತಿ ಅಥವಾ ಅಂಗಾರವೆಂದು ಉಪಯೋಗಿಸುತ್ತಾರೆ.
ಊದುಬತ್ತಿ ಮತ್ತು ಊದುಬತ್ತಿಯ ವಿಭೂತಿ ಇವುಗಳ ವ್ಯತ್ಯಾಸ
- ಈಶ್ವರ (ಕು.ಮಧುರಾ ಭೋಸಲೆ ಯವರ ಮಾಧ್ಯಮದಿಂದ ದೊರಕಿದ ಜ್ಞಾನ, ೨೯.೪.೨೦೦೫ ರಾತ್ರಿ ೮.೨೦ರಿಂದ ೮.೩೦)(ಊದುಬತ್ತಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸನಾತನವು ಪ್ರಕಾಶಿಸಿದ ‘ಪೂಜಾಸಾಮಗ್ರಿಗಳ ಮಹತ್ವ’ ಎಂಬ ಗ್ರಂಥದಲ್ಲಿ ಕೊಡಲಾಗಿದೆ.)
ವಿಭೂತಿಯ ಬಗ್ಗೆ ಬಂದಿರುವ ಅನುಭೂತಿ ಡಾ.ಜಯಂತ ಆಠವಲೆಯವರ ಭಾವಚಿತ್ರ ದೆಡೆಗೆ ನೋಡಿದಾಗ ‘ವಿಭೂತಿಯ ನೀರನ್ನು ಕುಡಿಯುತ್ತಾ ನಾಮಜಪ ಮಾಡು’ ಎಂಬ ಸಂಕೇತವು ಸಿಗುವುದು, ಆ ರೀತಿ ಮಾಡಿದಾಗ ಸ್ಫೂರ್ತಿಯು ಬಂದು ನಾಮಜಪವು ಒಳ್ಳೆಯ ರೀತಿಯಿಂದಾಗುವುದು: ೨೭.೧೧. ೨೦೦೩ರಂದು ನಾವು ಮೊದಲನೆಯ ಸಲ ಸಾಮೂಹಿಕ ನಾಮಜಪ ಮಾಡುತ್ತಿರುವುದರಿಂದ ನಮಗೆ ಸತತವಾಗಿ ನಾಲ್ಕು ಗಂಟೆಗಳ ಕಾಲ ಕುಳಿತುಕೊಂಡು ನಾಮಜಪ ಮಾಡಲು ಆಗಬಹುದೇನು ಎಂಬ ಸಂದೇಹವು ಬಂದಿತು, ಅದರಲ್ಲಿಯೂ ನನ್ನ ಪತ್ನಿಯು ಬೇರೆ ಒಂದು ವ್ರತವನ್ನು ಮಾಡುತ್ತಿದ್ದುದರಿಂದ ಅವಳಿಗೆ ಕಟ್ಟುನಿಟ್ಟಾದ ಉಪವಾಸವಿತ್ತು. ನಾವು ಪ.ಪೂ.ಡಾಕ್ಟರರಲ್ಲಿ (ಪ.ಪೂ.ಡಾ.ಆಠವಲೆ) ಮತ್ತು ದೇವತೆಗಳಲ್ಲಿ ಪ್ರಾರ್ಥನೆಯನ್ನು ಮಾಡಿ ನಾಮಜಪ ಮಾಡಲು ಪ್ರಾರಂಭಿಸಿದೆವು. ಸುಮಾರು ೧೫ ನಿಮಿಷ ನಾಮಜಪ ಮಾಡಿದ ಮೇಲೆ ನಮ್ಮ ಪ್ರಾಣಶಕ್ತಿಯು ಕಡಿಮೆಯಾಗತೊಡಗಿತು. ನಾನು ಪ.ಪೂ.ಡಾಕ್ಟರರ ಭಾವಚಿತ್ರದೆಡೆಗೆ ನೋಡಿದೆ. ಆಗ ‘ವಿಭೂತಿಯ ನೀರನ್ನು ಕುಡಿಯುತ್ತಾ ನಾಮಜಪ ಮಾಡಿ’ ಎಂಬ ಸಂಕೇತವು ದೊರಕಿತು. ಹಾಗೆ ಮಾಡಿದಾಗ ನಮಗೆ ಸ್ಫೂರ್ತಿಯು ಬಂದು ಒಳ್ಳೆಯ ರೀತಿಯಿಂದ ನಾಮಜಪವಾಯಿತು. ವಿಶೇಷವೇನೆಂದರೆ ವಿಭೂತಿಯ ನೀರು ಬಹಳ ಸಿಹಿಯಾಗಿತ್ತು. ನಾಮಜಪಕ್ಕೆ ಕುಳಿತುಕೊಳ್ಳುವ ಮೊದಲು ನನ್ನ ಹೊಟ್ಟೆ ನೋಯುತ್ತಿತ್ತು. ಅದು ಸಹ ನಾಮಜಪ ಮತ್ತು ತೀರ್ಥ ಸೇವನೆಯಿಂದ ನಿಂತಿತು. - ಶ್ರೀ.ಸಾವಳೋ ಮಡಗಾವಕರ, ವಾಸ್ಕೋ, ಗೋವಾ.
(ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಿತ್ತು. ಸಾಧಕರ ನಾಮಜಪದಿಂದ ನಿರ್ಮಾಣವಾದ ಸಾತ್ತ್ವಿಕ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ನಡುವಿನ ಯುದ್ಧಭೂಮಿಯೆಂದರೆ ಸಾಧಕರ ಶರೀರ. ಸಾತ್ತ್ವಿಕ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ನಡುವಿನ ಯುದ್ಧದ ಪರಿಣಾಮದಿಂದ ಸಾಧಕರ ಶರೀರದಲ್ಲಿನ ಪ್ರಾಣಶಕ್ತಿಯು ಕಡಿಮೆಯಾಗಿತ್ತು. ಕೆಟ್ಟ ಶಕ್ತಿಯ ತೊಂದರೆಯಿಂದಲೇ ಸಾಧಕನ ಹೊಟ್ಟೆ ನೋಯಿಸುತ್ತಿತ್ತು. ನಾಮಜಪ ಮತ್ತು ತೀರ್ಥಗಳಲ್ಲಿದ್ದ ಸಾತ್ತ್ವಿಕತೆಯಿಂದ ಕೆಟ್ಟ ಶಕ್ತಿಗಳ ತೊಂದರೆ ದೂರವಾಗಿ ಹೊಟ್ಟೆನೋವು ನಿಂತಿತು. - ಸಂಕಲನಕಾರರು)
(ಆಧಾರ: ಸನಾತನ ಸಂಸ್ಥೆಯ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)
No comments:
Post a Comment