ಅಭಿಷೇಕದ ಮಹತ್ವ


ಶಿವ-ಪಾರ್ವತಿಯರನ್ನು ‘ಜಗತಃ ಪಿತರೌ’ ಅಂದರೆ ಜಗತ್ತಿನ ‘ತಂದೆ-ತಾಯಿ’ ಎಂದು ಹೇಳಲಾಗಿದೆ. ಅಭಿಷೇಕ ಪಾತ್ರೆಯಿಂದ ಸತತವಾಗಿ ಬೀಳುವ ನೀರಿನ ಧಾರೆಯಿಂದ ಲಿಂಗ ಮತ್ತು ಪಾಣಿ ಪೀಠವು ಒದ್ದೆಯಾಗಿರುತ್ತದೆ. ಪಾಣಿಪೀಠವು ಯೋನಿಯ ಪ್ರತೀಕವಾಗಿದೆ. ಜಗನ್ಮಾತೆಯ ಯೋನಿ ಯಾವಾಗಲೂ ಒದ್ದೆಯಾಗಿರುವುದೆಂದರೆ, ಶಕ್ತಿಯು ಸತತ ಕಾರ್ಯನಿರತವಾಗಿರುವುದು. ಶಕ್ತಿಯು ಶಿವನನ್ನು ಕಾರ್ಯನಿರತಗೊಳಿಸುತ್ತದೆ. ಶಿವನು ಕಾರ್ಯ ನಿರತನಾಗುವುದೆಂದರೆ, ಶಿವನ ನಿರ್ಗುಣ ತತ್ತ್ವವನ್ನು ಸಗುಣ ತತ್ತ್ವದಲ್ಲಿ ಪ್ರಕಟಗೊಳಿಸುವುದು. ಹೀಗೆ ಅಭಿಷೇಕದಿಂದ ಪೂಜಕನಿಗೆ ಶಿವನ ಸಗುಣ ಲಹರಿಗಳ ಲಾಭವಾಗಲು ಸಹಾಯವಾಗುತ್ತದೆ.

No comments:

Post a Comment