ಶಿವನ ಕೆಲವು ನಿತ್ಯದ ಉಪಾಸನೆಯ ಕೃತಿಗಳ ಬಗ್ಗೆ ಸನಾತನದ ಸಾಧಕರಿಗೆ...

ಶಿವನ ಕೆಲವು ನಿತ್ಯದ ಉಪಾಸನೆಯ ಕೃತಿಗಳ ಬಗ್ಗೆ ಸನಾತನದ ಸಾಧಕರಿಗೆ ಈಶ್ವರನ ಕೃಪೆಯಿಂದ ದೊರಕಿದ ವೈಶಿಷ್ಟ್ಯಪೂರ್ಣ ಜ್ಞಾನ!

ಪ್ರತಿಯೊಂದು ದೇವತೆಯ ವಿಶಿಷ್ಟ ಉಪಾಸನೆಯ ಶಾಸ್ತ್ರವಿದೆ, ಅಂದರೆ ಪ್ರತಿಯೊಂದು ದೇವತೆಯ ಉಪಾಸನೆಯಲ್ಲಿ ಪ್ರತಿಯೊಂದು ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಮಾಡುವುದರ ಹಿಂದೆ ಶಾಸ್ತ್ರವಿದೆ. ಇಂತಹ ಕೃತಿಗಳಿಂದ ಉಪಾಸಕನಿಗೆ ಆ ದೇವತೆಯ ತತ್ತ್ವದಿಂದ ಹೆಚ್ಚು ಲಾಭವಾಗುತ್ತದೆ. ಶಿವನ ನಿತ್ಯದ ಉಪಾಸನೆಯ ಕೆಲವೊಂದು ಕೃತಿಗಳನ್ನು ನಿರ್ದಿಷ್ಟವಾಗಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸನಾತನದ ಸಾಧಕರಿಗೆ ಈಶ್ವರನ ಕೃಪೆಯಿಂದ ದೊರಕಿದ ಜ್ಞಾನವನ್ನು ಮುಂದೆ ಕೋಷ್ಟಕದಲ್ಲಿ ಕೊಡಲಾಗಿದೆ. ಇಂತಹ ವಿವಿಧ ಕೃತಿಗಳ ಹಿಂದಿನ ಶಾಸ್ತ್ರವನ್ನು ಸನಾತನದ ಗ್ರಂಥ ಮಾಲಿಕೆ ‘ಧರ್ಮಶಾಸ್ತ್ರವು ಹೀಗೇಕೆ ಹೇಳುತ್ತದೆ’ ಇದರಲ್ಲಿ ಕೊಡಲಾಗಿದೆ.
ಟಿಪ್ಪಣಿ೧-ಮಹಾಶಿವರಾತ್ರಿಯನ್ನು ಹೊರತು ಪಡಿಸಿ ಇತರ ಪ್ರಸಂಗಗಳಲ್ಲಿ ಶಿವನಿಗೆ ಕೇದಗೆಯನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಶಿವನ ಉಪಾಸನೆಯಲ್ಲಿ ಕೇದಗೆಯ ಪರಿಮಳದ ಊದುಬತ್ತಿ ಮತ್ತು ಅತ್ತರನ್ನು ಉಪಯೋಗಿಸಬೇಕೆಂದು ಹೇಳಲಾಗಿದೆ. ಇದರ ಹಿಂದಿನ ಶಾಸ್ತ್ರೀಯ ಕಾರಣವು ಹೀಗಿದೆ - ಕೇದಗೆಯಲ್ಲಿ ಜ್ಞಾನಲಹರಿಗಳನ್ನು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುತ್ತದೆ. ಕೇದಗೆಯು ಜ್ಞಾನಶಕ್ತಿಯ ಸ್ತರದಲ್ಲಿ ಮಾರಕ ಕಾರ್ಯವನ್ನು ಮಾಡುವುದರಿಂದ ಅದಕ್ಕೆ ಸಂಪೂರ್ಣ ಲಯಕಾರಿ ಎಂದು ಹೇಳಲಾಗಿದೆ. ಪೂಜಾ ವಿಧಿಯು ಲಯಕಾರಿ ಶಕ್ತಿಗೆ ಸಂಬಂಧಿಸಿರುವುದಿಲ್ಲ. ಆದುದರಿಂದ ಶಿವನ ಪೂಜೆಯಲ್ಲಿ ಕೇದಗೆಯನ್ನು ಆದಷ್ಟು ಉಪಯೋಗಿಸುವುದಿಲ್ಲ, ಆದರೆ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಕೇದಗೆಯ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಈ ದೃಷ್ಟಿಯಿಂದ ಕೇದಗೆಯ ಪರಿಮಳದ ಊದುಬತ್ತಿ ಮತ್ತು ಅತ್ತರನ್ನು ಉಪಯೋಗಿಸಲು ಹೇಳಲಾಗಿದೆ. (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೯.೮.೨೦೦೫, ಬೆಳಗ್ಗೆ ೧೦.೪೪)

No comments:

Post a Comment