೧.ಹಚ್ಚಿಕೊಳ್ಳುವ ಪದ್ಧತಿ: ‘ಋಗ್ವೇದೀಯ ಬ್ರಹ್ಮಕರ್ಮದಲ್ಲಿ ಹೇಳಿರುವ ಭಸ್ಮಧಾರಣೆಯ ವಿಧಿಯ ಸಾರಾಂಶವು ಹೀಗಿದೆ - ಆಚಮನ ಮತ್ತು ಪ್ರಾಣಾಯಾಮವನ್ನು ಮಾಡಿ ಭಸ್ಮವನ್ನು ಎಡಗೈ ಅಂಗೈಯಲ್ಲಿ ತೆಗೆದುಕೊಂಡು ನೀರಿನಿಂದ ಸ್ವಲ್ಪ ನೆನೆಸಬೇಕು. ಆಮೇಲೆ ಅದನ್ನು ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಹಣೆಗೆ ಅಡ್ಡವಾಗಿ ಹಚ್ಚಿಕೊಳ್ಳಬೇಕು.
ನಂತರ ಮುಖ, ಹೃದಯ, ಕಂಠ, ನಾಭಿ, ಎರಡೂ ಭುಜಗಳು, ಎರಡೂ ಪಕ್ಕಗಳು, ಗುಪ್ತಾಂಗ ಮತ್ತು ಎರಡೂ ಕಾಲುಗಳಿಗೆ ಹಚ್ಚಿಕೊಳ್ಳಬೇಕು. ‘ಓಂ ಅಗ್ನಿರಿತಿ ಭಸ್ಮ, ವಾಯುರಿತಿ ಭಸ್ಮ’ ಇತ್ಯಾದಿ ಮಂತ್ರಗಳನ್ನು ಪಠಿಸುತ್ತಾ ಭಸ್ಮವನ್ನು ಹಚ್ಚಿಕೊಳ್ಳಬೇಕು. ಕೊನೆಗೆ ಭಸ್ಮವನ್ನು ಸಂಪೂರ್ಣ ಶರೀರಕ್ಕೆ ಹಚ್ಚಿಕೊಂಡು ಮೂರು ಬಾರಿ ಶಿವನ ಹೆಸರನ್ನು ಉಚ್ಚರಿಸಬೇಕು.’ತ್ರಿಪುಂಡ್ರವು ಹುಬ್ಬಿನ ಆಕಾರದ್ದಾಗಿರಬೇಕು. ಸಾಮಾನ್ಯವಾಗಿ ತ್ರಿಪುಂಡ್ರದ ಮಧ್ಯದಲ್ಲಿ ಭಸ್ಮದ ಒಂದು ಬಿಂದುವನ್ನೂ ಹಚ್ಚುತ್ತಾರೆ.
೨.ಮೂರು ಪಟ್ಟೆಗಳ ಭಾವಾರ್ಥ
ಅ.ಶಿವನ ಮೂರು ಕಣ್ಣುಗಳು
ಆ.ತ್ರಿಪುಂಡ್ರವೆಂದರೆ ಜ್ಞಾನ, ಪಾವಿತ್ರ್ಯ ಮತ್ತು ತಪ (ಯೋಗಸಾಧನೆ)
ಇ.ವಾಸುದೇವೋಪನಿಷತ್ತಿಗನುಸಾರ ತ್ರಿಪುಂಡ್ರ ಎಂದರೆ ತ್ರಿಮೂರ್ತಿಗಳು, ಮೂರು ವ್ಯಾಹತಿ (ಸಂಜೆಯ ಸಮಯದಲ್ಲಿ ಉಚ್ಚರಿಸುವ ವಿಶಿಷ್ಟ ಮಂತ್ರ) ಮತ್ತು ಮೂರು ಛಂದಸ್ಸುಗಳ ಪ್ರತೀಕವಾಗಿದೆ.
೩.ಭಸ್ಮವನ್ನು ಯಾರು ಹಚ್ಚಿಕೊಳ್ಳಬೇಕು?: ಶ್ರಾದ್ಧ, ಯಜ್ಞ, ಹೋಮ, ದೇವರ ಪೂಜೆ ಮತ್ತು ವೈಶ್ವದೇವದಂತಹ ಕೃತಿಗಳನ್ನು ಮಾಡುವುದಕ್ಕಿಂತ ಮೊದಲು ಬ್ರಾಹ್ಮಣರು ಭಸ್ಮವನ್ನು ಹಚ್ಚಿಕೊಳ್ಳಬೇಕು. ಬ್ರಾಹ್ಮಣರೊಂದಿಗೆ ಇತರ ವರ್ಣದವರಿಗೂ ಭಸ್ಮವನ್ನು ಹಚ್ಚಿಕೊಳ್ಳುವ ಅಧಿಕಾರವಿದೆ. ಇದರೊಂದಿಗೆ ಬ್ರಹ್ಮಚಾರಿ, ಗೃಹಸ್ಥಾಶ್ರಮಿ, ವಾನಪ್ರಸ್ಥಾಶ್ರಮಿ ಮತ್ತು ಸಂನ್ಯಾಸಿ ಇವರೂ ಭಸ್ಮವನ್ನು ಹಚ್ಚಿಕೊಳ್ಳಬೇಕು.
೪.ಭಸ್ಮದ ಇತರ ಉಪಯೋಗಗಳು
೧.‘ಭಸ್ಮವು ಬ್ರಹ್ಮವಿದ್ಯೆಯ ಪ್ರಾಪ್ತಿಗಾಗಿಯೂ ಸಹಾಯಕವಾಗಿದೆ ಎಂದು ಜಾಬಾಲ ಶ್ರುತಿಯಲ್ಲಿ ಹೇಳಲಾಗಿದೆ.
೨.ಭಸ್ಮಕ್ಕೆ ‘ವಿಭೂತಿ’ ಎಂಬ ಇನ್ನೊಂದು ಶಬ್ದವಿದೆ. ವಿಭೂತಿಯನ್ನು ಮಂತ್ರ-ತಂತ್ರ, ಮಾಟ ಮುಂತಾದ ವಿಷಯಗಳಲ್ಲಿ ದಿಗ್ಬಂಧನಕ್ಕಾಗಿ ಅಥವಾ ಆತ್ಮರಕ್ಷಣೆಗಾಗಿ ಉಪಯೋಗಿಸುತ್ತಾರೆ.
೩.ವಿಭೂತಿಯನ್ನು ಮಂತ್ರಿಸಿ ಅದನ್ನು ಮಕ್ಕಳ ಅಥವಾ ರೋಗಿಗಳ ಹಣೆಗೆ ಹಚ್ಚುತ್ತಾರೆ.
೪.ಆಯುರ್ವೇದದಲ್ಲಿ ಲೋಹ, ಚಿನ್ನ, ಮುತ್ತು, ವಜ್ರ ಮುಂತಾದ ವಿವಿಧ ವಸ್ತುಗಳ ಭಸ್ಮವನ್ನು ಔಷಧಿಯೆಂದು ಉಪಯೋಗಿಸುತ್ತಾರೆ. ಅವು ಅತ್ಯಂತ ಗುಣಕಾರಿಯಾಗಿರುತ್ತವೆ.’
೫.ವಿಭೂತಿಯು ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಿಸುತ್ತದೆ, ಆದುದರಿಂದ ಕೆಟ್ಟ ಶಕ್ತಿಗಳ ತೊಂದರೆಯಿರುವ ಸ್ಥಳದಲ್ಲಿ ಅದನ್ನು ಊದುತ್ತಾರೆ, ಹಾಗೆಯೇ ಅದನ್ನು ತೊಂದರೆಯಿರುವ ವ್ಯಕ್ತಿಗಳಿಗೆ ಹಚ್ಚುತ್ತಾರೆ.
No comments:
Post a Comment