ಕಿತ್ತೂರು ರಾಣಿ ಚೆನ್ನಮ್ಮನ ಸ್ಮೃತಿದಿನ ಆಚರಣೆ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ

ಭದ್ರಾವತಿ: ೨.೨.೨೦೧೧ ರಂದು ಇಲ್ಲಿನ ನಗರದಲ್ಲಿ ತರುಣ ಭಾರತಿ ಶಾಲೆಯ ಸಭಾಗೃಹದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಸ್ಮೃತಿದಿನವನ್ನು ಆಚರಿಸಲಾಯಿತು. ಇದರಲ್ಲಿ ತರುಣ ಭಾರತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸೌ.ಶಶಿರೇಖಾ ಮೂರ್ತಿ, ಸಮಾಜಸೇವಕಿ ಸೌ. ಹೇಮಾವತಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕು.ನಾಗಮಣಿಯವರು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ವನಿತೆಯರ ಕಾರ್ಯದ ಬಗ್ಗೆ ಮನಮುಟ್ಟುವಂತೆ ಹೇಳಿದರು. ಈ ಕಾರ್ಯಕ್ರಮದಲ್ಲಿ ೫೨ ಮಂದಿ ಉಪಸ್ಥಿತರಿದ್ದರು. ಇದರಲ್ಲಿ ಮಹಿಳೆಯರೇ ೪೬ ಮಂದಿ ಬಂದಿರುವುದು ವಿಶೇಷವಾಗಿತ್ತು. ಈ ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯ ರಿಂದ ಉತ್ತಮ ಬೆಂಬಲ ದೊರೆಯಿತು.
ಶಿವಮೊಗ್ಗ : ೩.೨.೨೦೧೧ ರಂದು ಶಿವಮೊಗ್ಗದ ವಿನೋಬನಗರ, ಡಿ.ವಿ.ಎಸ್. ಶಾಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಸ್ಮೃತಿದಿನದ ಬಗ್ಗೆ ಪ್ರೌಢಶಾಲೆಯ ಮಕ್ಕಳಿಗೆ ತಿಳಿಸಲಾಯಿತು. ಮೊದಲಿಗೆ ಸಮಿತಿಯ ಕಾರ್ಯಕರ್ತರಾದ ಕು. ಸೌಮ್ಯ ರವರು ಕಿತ್ತೂರು ರಾಣಿ ಚೆನ್ನಮ್ಮನ ದೇಶ ಭಕ್ತಿಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ನಂತರ ಕು.ನಾಗಮಣಿಯವರು ಯುವ ಪೀಳಿಗೆಯು ಅಧೋಗತಿಯಾಗುವ ಕಾರಣ ಮತ್ತು ಸಮಿತಿ ಕಾರ್ಯದ ಬಗ್ಗೆ ತಿಳಿಸಿದರು. ಒಟ್ಟು ೧೮೦ ಮಕ್ಕಳು ಭಾಗವಹಿಸಿದ್ದರು.

No comments:

Post a Comment