ದೇವಸ್ಥಾನ ಅನಧಿಕೃತಗೊಳಿಸಿ ಅವುಗಳನ್ನು ಬೀಳಿಸುವುದರ ವಿರುದ್ಧ ಪತ್ರಿಕಾಗೋಷ್ಠಿ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ
ಎಡದಿಂದ ಶ್ರೀ.ಅನಂತ ಕಾಮತ, ಶ್ರೀ.ರಮೇಶ ನಾಯಕ, ಶ್ರೀ.ರಮಾನಂದ ಗೌಡ, ಶ್ರೀ.ಬಿ. ರಾಮಭಟ್, ಶ್ರೀ.ಸುಧಾಕರ ಕಾಮತ
ಮಂಗಳೂರು : ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಸಾರ್ವಜನಿಕ ರಸ್ತೆ, ಉದ್ಯಾನ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾದ ಸಾವಿರಾರು ಧಾರ್ಮಿಕ ಕೇಂದ್ರಗಳನ್ನು ಅಧಿಕಾರಿಗಳು ತೆರವುಗೊಳಿಸುವ ಪ್ರಕ್ರಿಯೆಯನ್ನು ವಿರೋಧಿಸಿ ೨.೨.೨೦೧೧ ರಂದು ಹಿಂದೂ ಜನಜಾಗೃತಿ ಸಮಿತಿಯು ಪತ್ರಿಕಾಗೋಷ್ಠಿಯನ್ನು ಕರೆಯಿತು.
ಇದರಲ್ಲಿ ಬಜಪೆಯ ವಿಠೋಬಾ ರುಕುಮಾಯಿ ದೇವಸ್ಥಾನದ ಅಧ್ಯಕ್ಷ ಶ್ರೀ.ವಸಂತ ಕಾಮತ, ಕಾರ್ಯದರ್ಶಿ ಕೆ.ಎ. ಸುಧಾಕರ ಕಾಮತ ಹಾಗೂ ಕೋಶಾಧಿಕಾರಿ ಶ್ರೀ.ರಮೇಶ ಭಟ್, ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಇದರ ಕಾರ್ಯದರ್ಶಿ ಶ್ರೀ.ರಮಾನಂದ ಗೌಡ, ಕೋಶಾಧಿಕಾರಿ ಶ್ರೀ.ಅನಂತ ಕಾಮತ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ರಮೇಶ ನಾಯಕ ಹಾಗೂ ಶ್ರೀ.ಬಿ. ರಾಮ ಭಟ್ ಇವರು ಉಪಸ್ಥಿತರಿದ್ದರು. ಇದರಲ್ಲಿ ೮ ಪತ್ರಕರ್ತರು ಹಾಗೂ ೮ ವಾಹಿನಿಯವರು ಉಪಸ್ಥಿತರಿದ್ದರು.

No comments:

Post a Comment