ಉಜಿರೆಯಲ್ಲಿ ಹಿಂದೂ ಧರ್ಮಜಾಗೃತಿ ಸಭೆ!

ಸನಾತನ ನಿರ್ಮಿತ ಗ್ರಂಥ ಬಿಡುಗಡೆಗೊಳಿಸುತ್ತಿರುವ (ಎಡದಿಂದ) ಸೌ.ಸಂಗೀತಾ ಪ್ರಭು, ಕು.ಅಕ್ಷಯಾ ಗೋಖಲೆ ಹಾಗೂ ಶ್ರೀ.ರವೀಂದ್ರ ಕಾಮತ
ಉಜಿರೆ: ದಿನಾಂಕ ೨೯.೧.೨೦೧೧ ರಂದು ಇಲ್ಲಿನ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯ ವ್ಯಾಸಪೀಠದಲ್ಲಿ ಕಾರ್ಕಳದ ಹಿಂದೂ ಧರ್ಮಾಭಿಮಾನಿ ಕು.ಅಕ್ಷಯಾ ಗೋಖಲೆ,  ಸನಾತನ ಸಂಸ್ಥೆಯ ಸೌ.ಸಂಗೀತಾ ಪ್ರಭು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ರವೀಂದ್ರ ಕಾಮತ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ೧೩೦ ಕ್ಕೂ ಹೆಚ್ಚು ಹಿಂದೂ ಧರ್ಮಾಭಿಮಾನಿಗಳು ಪಾಲ್ಗೊಂಡು ಇದರ ಸಂಪೂರ್ಣ ಲಾಭ ಪಡೆದುಕೊಂಡರು.
ಈ ಸಭೆಯ ಮುಖ್ಯ ವಕ್ತಾರರಾದ ಕು.ಅಕ್ಷಯಾ ಗೋಖಲೆಯವರು ದೀಪ ಪ್ರಜ್ವಲನೆಯನ್ನು ಮಾಡಿದರು. ನಂತರ ಅವರು ಸನಾತನ ಸಂಸ್ಥೆಯ ‘ಅಗ್ನಿಹೋತ್ರ’ ಈ ಗ್ರಂಥವನ್ನು ಬಿಡುಗಡೆಗೊಳಿಸಿದರು.

No comments:

Post a Comment