ಗಣರಾಜ್ಯೋತ್ಸವದಂದು ಪ್ಲಾಸ್ಟಿಕ್ ಧ್ವಜ ನಿಷೇಧಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ನೀಡಿದ ಮನವಿಗೆ ಸಂದ ಜಯ
ಹಿಂದೂ ಜನಜಾಗೃತಿ ಸಮಿತಿಯ ಯಶಸ್ಸು
ಹಿಂದೂ ಜನಜಾಗೃತಿ ಸಮಿತಿಯ ಯಶಸ್ಸು
ಹಳಿಯಾಳ: ೨೧.೧.೨೦೧೧ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜನವರಿ ೨೬ರಂದು ಪ್ಲಾಸ್ಟಿಕ್ ಧ್ವಜಗಳನ್ನು ಉಪಯೋಗಿಸುವುದನ್ನು ತಡೆಗಟ್ಟುವ ಕುರಿತು ತಹಶೀಲ್ದಾರರು, ಆರಕ್ಷಕ ಉಪ ನಿರೀಕ್ಷಕರು ಹಾಗೂ ವೃತ್ತ ನಿರೀಕ್ಷಕರಿಗೆ ಮನವಿಯನ್ನು ನೀಡಲಾಗಿತ್ತು. ಈ ಮನವಿಯಂತೆ ಹಳಿಯಾಳದ ತಹಶೀಲ್ದಾರರ, ಆರಕ್ಷಕ ಉಪನಿರೀಕ್ಷಕರ ಹಾಗೂ ವೃತ್ತ ನಿರೀಕ್ಷಕರ ವಿನಂತಿಯ ಮೇರೆಗೆ ಕಾರ್ಯಾಚರಣೆಯನ್ನು ಮಾಡಿ ಹಳಿಯಾಳದಲ್ಲಿ ಎಲ್ಲ ಅಂಗಡಿಗಳಿಗೆ ನೋಟಿಸ್ ನೀಡಿ ‘ಮೈಕ್ ಅನೌನ್ಸ್‌ಮೆಂಟ್’ ಮಾಡಿ ಪ್ಲಾಸ್ಟಿಕ್ ಧ್ವಜಗಳನ್ನು ಎಲ್ಲಿಯೂ ಉಪಯೋಗಿಸದಿರಲು ಜನರಲ್ಲಿ ವಿನಂತಿಸಿದರು. ಆದ್ದರಿಂದ ಹಳಿಯಾಳದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಧ್ವಜದ ಬಳಕೆಯಾಗಿಲ್ಲ. (ರಾಷ್ಟ್ರಧ್ವಜದ ಮಾನವನ್ನು ಕಾಪಾಡಲು ಕೃತಿಶೀಲರಾದ ಹಿಂದೂ ಜನಜಾಗೃತಿ ಸಮಿತಿಗೆ ಅಭಿನಂದನೆಗಳು! ಹಿಂದೂಗಳೇ, ಈ ಯಶಸ್ಸಿಗಾಗಿ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆ ವ್ಯಕ್ತ ಪಡಿಸಿರಿ! - ಸಂಪಾದಕರು)
No comments:
Post a Comment