ಸಂಘ ನೇತೃತ್ವದ ‘ಹನುಮತ್ ಶಕ್ತಿ ಜಾಗರಣ ಮಂಚ್’ನಿಂದ ಹಿಂದೂ ಜನಜಾಗೃತಿ ಸಮಿತಿಯ ....

ಸಂಘ ನೇತೃತ್ವದ ‘ಹನುಮತ್ ಶಕ್ತಿ ಜಾಗರಣ ಮಂಚ್’ನಿಂದ  
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ವಂಚನೆ ಹಾಗೂ ಅವಮಾನ!


ಹಿಂದೂ ಜನಜಾಗೃತಿ ಸಮಿತಿಯ ಪ್ರಸಾರಕಾರ್ಯಕ್ಕೆ ಅಡ್ಡಿ
ಸಂಘಪರಿವಾರದ ಪ್ರಮುಖರು ಈ ವಿಷಯವನ್ನು ಅಂತರ್ಮುಖರಾಗಿ ವಿಚಾರ ಮಾಡುವರೇ?
ಧರಣಗಾವ (ಮಹಾರಾಷ್ಟ್ರ) ಎಂಬಲ್ಲಿ ಸಂಘ ನೇತೃತ್ವದ ‘ಹನುಮತ್ ಶಕ್ತಿ ಜಾಗರಣ ಮಂಚ್’ ವತಿಯಿಂದ ಆಯೋಜಿಸಿದ್ದ ಸಭೆಗೆ ಕೇವಲ ೫೦೦ ಜನರು ಉಪಸ್ಥಿತರಿದ್ದರು ಹಾಗೂ ಇದೇ ಹಳ್ಳಿಯಲ್ಲಿ ಮಂಚ್‌ನ ಸಭೆಯಾದ ನಂತರ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ಧರ್ಮಜಾಗೃತಿ ಸಭೆಗೆ ೭ ಸಾವಿರ ಜನರು ಉಪಸ್ಥಿತರಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು; ಇದೆಲ್ಲ ಅದರ ಕಾರ್ಯಕರ್ತರು ಈಶ್ವರನ ಅಧಿಷ್ಠಾನದಿಂದ ಮಾಡಿದ ಪ್ರಸಾರದ ಹಾಗೂ ಧರ್ಮಾಭಿಮಾನಿ ಹಿಂದೂಗಳು ಸಮಿತಿಯ ಮೇಲಿಟ್ಟಿರುವ ವಿಶ್ವಾಸದ ಪರಿಣಾಮವಾಗಿದೆ. ಸಮಿತಿಯನ್ನು ವಿರೋಧಿಸುವುದಕ್ಕಿಂತ ಸಂಘಪರಿವಾರದ ಸಂಘಟನೆಗಳು ಈ ಸ್ಥಿತಿಯನ್ನು ಅಂತರ್ಮುಖರಾಗಿ ವಿಚಾರ ಮಾಡಬೇಕು. ಈ ಸಂಘಟನೆಗಳು ಇತರ ಹಿಂದುತ್ವವಾದಿ ಸಂಘಟನೆಗಳ ಕಾರ್ಯದಲ್ಲಿ ಅಡ್ಡಿಯುಂಟು ಮಾಡುವುದಕ್ಕಿಂತ ಅವರೊಂದಿಗೆ ಸೇರಿಕೊಂಡು ಕಾರ್ಯ ಮಾಡಿದರೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಸಹಾಯವಾಗುವುದು. ಸಂಘಪರಿವಾರದ ಹಿರಿಯ ನೇತಾರರು ಇದರ ಕುರಿತು ವಿಚಾರ ಮಾಡುವರೇ?-ಸಂಕಲನಕಾರರು


ಧರಣಗಾವ (ಜಳಗಾವ ಜಿಲ್ಲೆ): ಇಲ್ಲಿ ಸಂಘಪರಿವಾರದ ವತಿಯಿಂದ ಆಯೋಜಿಸಲ್ಪಟ್ಟ ‘ಹನುಮತ್ ಶಕ್ತಿ ಜಾಗರಣ ಮಂಚ್’ದ ಹಿಂದೂ ಸಮ್ಮೇಳನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರನ್ನು ಕರೆದು ಕೊನೆಗಳಿಗೆಯಲ್ಲಿ ಭಾಷಣವನ್ನು ರದ್ದುಪಡಿಸಿದರು ಹಾಗೂ ಕಾರ್ಯಕ್ರಮದ ಕೊನೆಗೆ ಅಲ್ಲಿ ನಡೆಯುವ ಹಿಂದೂ ಧರ್ಮ ಜಾಗೃತಿ ಸಭೆಯ ಆಮಂತ್ರಣ ನೀಡಲು ಹೇಳಿ ಅದರ ಮೊದಲೇ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. (ಈ ರೀತಿ ಒಂದು ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರನ್ನು ಅವಮಾನಿಸುವುದು ಆ ಹಿಂದುತ್ವವಾದಿ ಸಂಘಟನೆಯದ್ದೇ ಅವಮಾನ ವಾಗಿದೆ! ‘ಅತಿಥಿ ದೇವೋ ಭವ|’ ಎಂಬ ಸಾಮಾನ್ಯ ಸಂಸ್ಕೃತಿಯನ್ನೂ ಪಾಲಿಸದ ಸಂಘಟನೆಗಳು ಹಿಂದುತ್ವದ ಕಾರ್ಯವನ್ನು ಹೇಗೆ ವಿಶ್ವವ್ಯಾಪಕಗೊಳಿಸುವುದು? - ಸಂಕಲನಕಾರರು) ಅಷ್ಟೇ ಅಲ್ಲ, ಅವರ ಕಾರ್ಯಕರ್ತರು ಈ ಸಮ್ಮೇಳನದ ಪ್ರಸಾರ ಮಾಡುವಾಗ ಹಾಗೂ ಸಮ್ಮೇಳನದ ದಿನದಂದು, ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಧರ್ಮಜಾಗೃತಿ ಸಭೆಯ ಪ್ರಸಾರದಲ್ಲಿ ಅಡ್ಡಿಪಡಿಸುತ್ತಿದ್ದರು. (ಒಂದು ಹಿಂದುತ್ವವಾದಿ ಸಂಘಟನೆಯು ಇನ್ನೊಂದು ಹಿಂದುತ್ವವಾದಿ ಸಂಘಟನೆಯ ಕಾರ್ಯದಲ್ಲಿ ಅಡ್ಡಿತಂದರೆ ಹಿಂದೂಗಳನ್ನು ಸಂಘಟಿಸುವ ಧ್ಯೇಯವನ್ನು ಸಾಧಿಸಲು ಹೇಗೆ ಸಾಧ್ಯ? ಸಂಘಪರಿವಾರದ ಇಂತಹ ವರ್ತನೆಯಿಂದಲೇ ಬಹಳಷ್ಟು ಹಿಂದೂ ಸಮಾಜವು ಈ ಸಂಘಟನೆಯ ಕಾರ್ಯದಿಂದ ದೂರ ಸರಿಯುತ್ತಿವೆ ಎಂಬುದನ್ನು ಪರಿವಾರದಲ್ಲಿನ ನೇತಾರರು ಅರಿತುಕೊಳ್ಳುವರೇ?-ಸಂಕಲನಕಾರರು)
ಪ್ರಸಾರ ಕಾರ್ಯದಲ್ಲಿ ಅಡ್ಡಿಯುಂಟು ಮಾಡುವುದು

ಧರಣಗಾವದಲ್ಲಿ ೨೫ ಡಿಸೆಂಬರ್ ೨೦೧೦ ರಂದು ಈ ಮಂಚ್‌ನ ವತಿಯಿಂದ ಒಂದು ‘ಹಿಂದೂ ಸಮ್ಮೇಳನ’ವನ್ನು ಆಯೋಜಿಸಲಾಗಿತ್ತು. ಇದೇ ಹಳ್ಳಿಯಲ್ಲಿ ೫ ಜನವರಿ ೨೦೧೧ ರಂದು ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಧರ್ಮಜಾಗೃತಿ ಸಭೆ’ಯನ್ನು ಆಯೋಜಿಸಲಾಗಿತ್ತು. ೨೫ ಡಿಸೆಂಬರ್ ೨೦೧೦ರ ಮೊದಲು ಎರಡೂ ಕಾರ್ಯಕ್ರಮಗಳ ಪ್ರಸಾರಕಾರ್ಯ ಆರಂಭವಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಪ್ರಸಾರದ ಕಾರ್ಯಪದ್ಧತಿಗನುಸಾರ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಹಾಗೂ ಪರಿಸರದ ಗ್ರಾಮೀಣ ಪ್ರದೇಶಗಳಿಗೆ ಬೆಳಗ್ಗೆ ಹೋಗಿ ಆ ದಿನ ಸಾಯಂಕಾಲ ಸಭೆಯನ್ನು ನಿಗದಿ ಪಡಿಸಿ ಬರುತ್ತಾರೆ. ಎರಡೂ ಹಿಂದುತ್ವವಾದಿ ಸಂಘಟನೆಗಳಾಗಿರುವುದರಿಂದ ಕಾರ್ಯಕ್ರಮದ ಸ್ವರೂಪವೂ ಒಂದೇ ರೀತಿ ಇರುವುದರಿಂದ ಹಳ್ಳಿಯಲ್ಲಿನ ಯುವಕರು ಗೊಂದಲದಲ್ಲಿದ್ದರು. ಮಂಚ್‌ನ ಕಾರ್ಯಕರ್ತರು ಅದರ ಲಾಭ ಪಡೆದು ಸಮಿತಿಯ ಕಾರ್ಯಕರ್ತರು ಬೆಳಗ್ಗೆ ನಿರ್ಧರಿಸಿ ಬಂದಿರುವ ಸ್ಥಳಕ್ಕೆ ಸಭೆಯ ಮೊದಲೇ ಹೋಗಿ “ನಾವು ಅವರ ಕಾರ್ಯಕರ್ತರೇ ಆಗಿ ದ್ದೇವೆ", ಎಂದು ಹೇಳಿ ಅವರ ಸಮ್ಮೇಳನದ ಆಮಂತ್ರಣ ಪತ್ರಿಕೆ ನೀಡಲು ಆರಂಭಿಸಿದರು ಹಾಗೂ “ಸಮಿತಿಯ ಕಾರ್ಯಕರ್ತರ ನಿವಾಸಸ್ಥಾನದಲ್ಲಿಯೇ ನಾವೂ ವಾಸಿಸುತ್ತೇವೆ" ಎಂದೂ ಆ ಮಂಚ್‌ನ ಕಾರ್ಯಕರ್ತರು ಸಭೆಯಲ್ಲಿ ಹೇಳಿದರು. (೭೫ ವರ್ಷಗಳಿಂದ ಕಾರ್ಯ ಮಾಡುವ ಸಂಘಟನೆಗೆ ಪ್ರಸಾರ ಮಾಡುವಾಗ ಸುಳ್ಳು ಹೇಳಿ ಚಿಕ್ಕದಾಗಿರುವ ಸಮಿತಿಯ ಹೆಸರಿನ ಆಧಾರ ತೆಗೆದುಕೊಳ್ಳಬೇಕಾಗುತ್ತದೆ, ಇದರಲ್ಲಿಯೇ ಸಮಿತಿಯ ಕಾರ್ಯದ ಯಶಸ್ಸು ಕಂಡು ಬರುತ್ತದೆ. - ಸಂಕಲನಕಾರರು)
ಇಂತಹ ಕೆಲವು ಘಟನೆಗಳು ಗಮನಕ್ಕೆ ಬಂದ ನಂತರ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ನಗರದಲ್ಲಿನ ಪ್ರಸಾರವನ್ನು ತಾತ್ಕಾಲಿಕವಾಗಿ ದುರ್ಲಕ್ಷಿಸಿ ಗ್ರಾಮೀಣ ಪ್ರದೇಶದಲ್ಲಿ ಪ್ರಸಾರವನ್ನು ಆರಂಭಿಸಿದರು ಹಾಗೂ ಅವರ ಕಾರ್ಯಕ್ರಮ ಮುಗಿದ ನಂತರ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯ ಪ್ರಸಾರವನ್ನು ಆರಂಭಿಸಿದರು. ಮಂಚ್‌ನ ಕಾರ್ಯಕರ್ತರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಸಲ್ಪಡುವ ಧರ್ಮಶಿಕ್ಷಣ ವರ್ಗದಲ್ಲಿನ ಕೆಲವು ಯುವಕರ ಮನೆಗೆ ಹೋಗಿ ‘ನಾವು ಸಮಿತಿಯವರೇ ಆಗಿದ್ದೇವೆ. ಸಮ್ಮೇಳನಕ್ಕೆ ಅಗತ್ಯವಾಗಿ ಬನ್ನಿರಿ’ ಎಂದು ಹೇಳಿ ಸಮಿತಿಯ ಕಾರ್ಯಕರ್ತರನ್ನು ಬೇರ್ಪಡಿಸಲು ಪ್ರಯತ್ನಿಸಿದರು. (ಹೀಗೆ ಮಾಡಿದರೆ ಹಿಂದೂ ಸಂಘಟನೆ ಬೆಳೆಯುವುದಿಲ್ಲ. ಬದಲಾಗಿ ಹಿಂದೂಗಳಲ್ಲಿ ಒಡಕುಂಟಾಗುವುದು. ಸಂಘಪರಿವಾರದ ಸಂಘಟನೆಗಳು ಈ ಹಿಂದೆಯೂ ವಿದರ್ಭದಲ್ಲಿ ಸನಾತನದ ಕಾರ್ಯವನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಸಂಘಪರಿವಾರ ಆಕಾಶ-ಪಾತಾಳ ಒಂದು ಮಾಡಿದರೂ ಈಶ್ವರನ ಅಧಿಷ್ಠಾನದಿಂದ ಸನಾತನದ ಕಾರ್ಯ ಎಲ್ಲ ಸ್ಥಳಗಳಲ್ಲಿ ರಭಸದಿಂದ ನಡೆದಿದೆ. -ಸಂಕಲನಕಾರರು)
ಸಮ್ಮೇಳನದಲ್ಲಿ ವಕ್ತಾರರೆಂದು ಕರೆದಿರುವ ನಿಯೋಜನೆಯನ್ನು ಕೊನೆಗಳಿಗೆಯಲ್ಲಿ ರದ್ದುಪಡಿಸುವುದು
ಇದೇ ಸಮ್ಮೇಳನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಓರ್ವ ಕಾರ್ಯಕರ್ತನನ್ನು ವಕ್ತಾರನೆಂದು ಮಾತನಾಡಲು ಆಮಂತ್ರಿಸಲಾಗಿತ್ತು. ಆದರೆ ಆಯೋಜಕರು ಪ್ರತ್ಯಕ್ಷದಲ್ಲಿ ಸಮ್ಮೇಳನದ ದಿನದಂದು ಬೆಳಗ್ಗೆ ‘ವಕ್ತಾರರ ಸಂಖ್ಯೆ ಹೆಚ್ಚು ಇರುವುದರಿಂದ ವಿಷಯವನ್ನು ಮಂಡಿಸಲು ಸಮಯ ನೀಡಲು ಸಾಧ್ಯವಾಗಲಿಕ್ಕಿಲ್ಲ; ಆದರೆ ಜನವರಿ ೫ ರಂದು ನಡೆಯುವ ಸಭೆಗೆ ಆಮಂತ್ರಣ ನೀಡಲಿಕ್ಕಾಗಿ ಎಲ್ಲ ವಕ್ತಾರರ ಭಾಷಣ ಮುಗಿದ ನಂತರ ೫ ನಿಮಿಷ ಸಮಯ ನೀಡೋಣ.’ ಎಂದು ಸಂದೇಶ ಕಳುಹಿಸಿದರು. ಆ ಪ್ರಕಾರ ಸಭೆಯ ಆಮಂತ್ರಣ ನೀಡಲಿಕ್ಕಾಗಿ ಸಮಿತಿಯ ಒಬ್ಬ ಕಾರ್ಯಕರ್ತನು ಅಲ್ಲಿ ನಿಂತಿದ್ದನು. ಸಭೆಯಲ್ಲಿನ ಎಲ್ಲ ವಕ್ತಾರರ ಭಾಷಣ ಮುಗಿದ ನಂತರ ಈ ಕಾರ್ಯಕರ್ತನು ಹೊರಗೆ ಕಾಯುತ್ತಿರುವಾಗಲೇ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು. ಅದು ಮುಗಿದ ನಂತರ ಕಾರ್ಯಕರ್ತನಿಗೆ ಮಾತನಾಡಲು ಕರೆದರು. ಅಷ್ಟರಲ್ಲಿ ಸಭಿಕರು ಎದ್ದು ಹೋಗಲಾರಂಭಿಸಿದ್ದರು. (ಯಾವ ಸಂಘಟನೆಗೆ ವ್ಯವಹಾರದಲ್ಲಿನ ಸಾಮಾನ್ಯ ನಿಯಮಗಳನ್ನೂ ಪಾಲಿಸಲು ಬರುವುದಿಲ್ಲವೋ ಅಂತಹ ಸಂಘಟನೆ ಹೇಗೆ ಹಿಂದೂ ಸಂಘಟನೆ ಮಾಡುವುದು ಮತ್ತು ಹಿಂದೂ ರಾಷ್ಟ್ರ ನಿರ್ಮಿಸುವುದು? - ಸಂಕಲನಕಾರರು)
ಈ ಸಮ್ಮೇಳನ ಮುಗಿದ ನಂತರ ಸಮಿತಿಯ ಹಿತಚಿಂತಕ ಯುವಕರು ಸಮಿತಿಯ ಕಾರ್ಯಕರ್ತರ ಹತ್ತಿರ ಬಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಈಗ ನಮ್ಮ ಸಭೆಯನ್ನು ವಿಜೃಂಭಣೆಯಿಂದ ಮಾಡಿ ತೋರಿಸಬೇಕು’, ಎಂದು ನಿಶ್ಚಯಿಸಿದರು. ಸಮ್ಮೇಳನದ ಆಯೋಜಕರು ಆ ಊರಿನ ಓರ್ವ ಪ್ರತಿಷ್ಠಿತ ವ್ಯಕ್ತಿಗೆ ಸಭೆಯಲ್ಲಿ ಉಪಸ್ಥಿತಿ ಕಡಿಮೆಯಿರಲು ಕಾರಣವೇನು ಎಂದು ಕೇಳಿದಾಗ ಅವರು “ಕೇವಲ ರಿಕ್ಷಾದಲ್ಲಿ ಬೊಬ್ಬೆ ಹೊಡೆದರೆ ಜನರು ಒಟ್ಟಾಗುವುದಿಲ್ಲ. ಸಮಿತಿಯವರನ್ನು ನೋಡಿ, ಅವರು ಮನೆಮನೆಗೆ ಹೋಗಿ ಕೈಮುಗಿದು ನಮ್ರತೆಯಿಂದ ಅವರ ಸಭೆಯ ಆಮಂತ್ರಣ ನೀಡುತ್ತಾರೆ. ಜನವರಿ ೫ ರಂದು ನೀವು ಬನ್ನಿ ಮತ್ತು ಅವರ ಆಯೋಜನೆಯನ್ನು ನೋಡಿ !" ಎಂದು ಹೇಳಿದರು. (ಸಮಾಜದಲ್ಲಿನ ಒಬ್ಬ ವ್ಯಕ್ತಿಗೆ ತಿಳಿಯುವ ವಿಷಯ ವಿಶ್ವವ್ಯಾಪಿ ಕಾರ್ಯ ಮಾಡುವ ಸಂಘ ಪರಿವಾರದವರಿಗೆ ತಿಳಿಯುವುದಿಲ್ಲವೆಂದರೆ, ಇದಕ್ಕಿಂತ ದುರ್ದೈವದ ವಿಷಯ ಇನ್ನೇನಿರಬಹುದು ? - ಸಂಪಾದಕರು)

No comments:

Post a Comment